STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಶೈಲಪುತ್ರಿ ದೇವಿಗೆ ನಮನ

ಶೈಲಪುತ್ರಿ ದೇವಿಗೆ ನಮನ

1 min
309

ಶ್ವೇತವರ್ಣದ ತಿಳಿಗಂಪು

ಮನಸಿನಾಳದ ಒಳಕಂಪು

ಕಂಗಳಿಗೆ ನೆಮ್ಮದಿ ಕೇಂದ್ರವು

ಪರಿಶುದ್ಧತೆಯ ಆಗರದ ಸ್ಥಾನವು

ನವರಾತ್ರಿಯ ಶುಭಾರಂಭವು

ಶಾಂತಿ,ಪ್ರೀತಿಗಳ ಸಂಕೇತವು

"ಶೈಲಪುತ್ರಿದೇವಿ" ಆರಾಧನೆಯು

ಶುಭಮಂಗಳದ ಆರತಿಯು

ಪವಿತ್ರತೆಯ ಆಗರವು

ಜೀವನದ ಸುಖ ದುಃಖಗಳು

ಮಂಜಿನಂತೆ ಕರಗುತಿರಲು

ದೈವ ಸಂಕಲ್ಪದ ಕರೆಯೋಲೆಯು

ನವರಾತ್ರಿಯು ಸಂಭ್ರಮವು

ದಶದಿಕ್ಕುಗಳಲಿ ಮೊಳಗುತಿದೆ

ಶತ್ರು ನಾಶದ ರಣಕಹಳೆಯು

ವಿಜಯದ ವೀರ ಪತಾಕೆಯು

ಮೊಳಗಲಿ ಅನುದಿನವು

ಕರುನಾಡ ಕರಳುಗೀತೆಗಳು

ದಸರೆಯ ಹಬ್ಬದಾಚರಣೆಗೆ

ಮುನ್ನುಡಿ ಬರೆದ ಶ್ವೇತವರ್ಣವು

ನವರಾತ್ರಿಯ ಮೊದಲ ದಿನವು

ಶುಭವಾಗಲಿ ಶಾಂತಿ ಸಂದೇಶವು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics