ಹಾಂಟೆಡ್ ಬ್ರಿಜ್
ಹಾಂಟೆಡ್ ಬ್ರಿಜ್
ನನ್ನ ಸ್ನೇಹಿತರೊಬ್ಬರು ರಿಕ್ಷಾ ಡ್ರೈವರ್ಗಾದ ಅನುಭವವಿದು. ನಮ್ಮೂರಲ್ಲಿ ಒಂದು ಬ್ರಿಜ್ ಇದೆ. ಆ ಬ್ರಿಜ್ನಿಂದ ಎಷ್ಟೋ ಜನ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಅಲ್ಲಿ ಪ್ರೇತಾತ್ಮಗಳ ಸಂಚಾರವಿದೆ ಎಂದು ಜನರು ಹೇಳುತ್ತಿದ್ದರು, ಇಂದಿಗೂ ಹೇಳುತ್ತಾರೆ. ರಾತ್ರಿ ಹೊತ್ತಿನಲ್ಲಿ ಅಲ್ಲಿ ಯಾರೂ ಓಡಾಡಬಾರದು ಎಂದು ಜನರು ಹೇಳುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಅಲ್ಲಿ ಯಾರಾದರೂ ಲಿಫ್ಟ್ ಕೇಳಿದರೆ ನೀಡಬಾರದು. ಸುಮ್ಮನೆ ಗಾಡಿ ಓಡಿಸಿ ಅಲ್ಲಿಂದ ಪರಾರಿಯಾಗಬೇಕು ಎಂದು ಹೇಳುತ್ತಿದ್ದರು. ಇನ್ನು ಕೆಲವರಿಗೆ ಅಲ್ಲಿಂದ ಗಾಡಿ ಓಡಿಸಿಕೊಂಡು ಹೋಗುವಾಗ ಯಾರ್ಯಾರೋ ಅಡ್ಡ ಬಂದಂತೆ ಅನುಭವವಾಗಿದೆಯಂತೆ.
ಹೀಗಿರೋ ಆ ಹಾಂಟೆಡ್ ಬ್ರಿಜ್ನ ರಸ್ತೆಯಲ್ಲಿ ನನ್ನ ಸ್ನೇಹಿತರು ರಾತ್ರಿ 12 ಮುಕ್ಕಲಾರ ಹೊತ್ತಿಗೆ ಆ ಬ್ರಿಜ್ನಿಂದ ರಿಕ್ಷಾದಲ್ಲಿ ಬರುತ್ತಿದ್ದರಂತೆ . ಆವಾಗ ದೂರದಲ್ಲಿ ಯಾವುದೋ ಒಂದು ಹೆಂಗಸು ಮಗುವನ್ನು ಎತ್ತಿಕೊಂಡು ಅವರ ರಿಕ್ಷಾವನ್ನು ಬ್ರಿಜ್ ಮಧ್ಯದಲ್ಲಿ ನಿಲ್ಲಿಸಿದರಂತೆ. ನನ್ನ ಸ್ನೇಹಿತರು ರಿಕ್ಷಾ ನಿಲ್ಲಿಸಿದಾಗ ಮಗುವನ್ನೆತ್ತಿಕೊಂಡ ಆ ಹೆಂಗಸು ರಿಕ್ಷಾ ಏರಿ ಒಳಗೆ ಕುಳಿತುಕೊಂಡರಂತೆ ಆದರೆ ಏನೂ ಮಾತಾಡಲಿಲ್ಲ. ನನ್ನ ಸ್ನೇಹಿತರು ಸ್ವಲ್ಪ ದೂರ ರಿಕ್ಷಾ ನಡೆಸಿ ಆ ಹೆಂಗಸಿಗೆ ಎಲ್ಲಿಗೆ ಹೋಗಬೇಕು ಮೇಡಂ ಎಂದು ಕೇಳಿದರಂತೆ . ಆದರೆ ಹಿಂದೆಯಿಂದ ಯಾವುದೇ ಉತ್ತರವಿಲ್ಲ!!! ಇನ್ನೊಂದು ಬಾರಿ ಎಲ್ಲಿಗೆ ಹೋಗಬೇಕು ಮೇಡಂ ಎಂದು ಕೇಳಿದಾಗ
ಲೂ ಆ ಹೆಂಗಸಿನಿಂದ ಯಾವುದೇ ಉತ್ತರ ಬಾರದಿದ್ದಾಗ ಹಿಂದೆಯಿಂದ ಏನೋ ತಿನ್ನುತಿರುವಂತೆ ಸದ್ದು ಕೇಳಿಸಿ ಅವರು ರಿಕ್ಷಾದ ಕನ್ನಡಿಯನ್ನು ನೋಡಿದರಂತೆ!!!!
ಆಗ ಅವರು ನೋಡಿದ ದೃಶ್ಯ ಕಂಡು ಅವರ ಹೃದಯವೇ ಎದೆಯಿಂದ ಹೊರಬಂದಷ್ಟು ಭಯವಾಗಿ ಕಣ್ಣು ಅಗಲವಾಗಿ ಮೈಯೆಲ್ಲಾ ಬೆವೆತು ನಡುಗಲು ಶುರುಮಾಡಿದರಂತೆ. ಹಿಂದೆ ಒಂದು ವಿಕಾರವಾದ ಮುಖದ ಹೆಂಗಸು ರಕ್ತ ಮಾಂಸ ಒಸರಿಕೊಂಡು ಕೈಯಲ್ಲಿ ಎತ್ತುಕೊಂಡಿದ್ದ ಮಗುವಿನ ಮಾಂಸವನ್ನು ತಿನ್ನುತ್ತಿದ್ದಳಂತೆ. ನನ್ನ ಸ್ನೇಹಿತರಿಗೆ ದಿಕ್ಕು ತೋಚದಂತಾಗಿ ರಿಕ್ಷಾವನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ದುರ್ಗಾ ಗುಡಿಯತ್ತ ಹೈ ಸ್ಪೀಡಿನಲ್ಲಿ ಓಡಿಸಿದರಂತೆ. ಆ ಗುಡಿ ಹತ್ತಿರವಾದಾಗ ಒಮ್ಮೆಲೇ ಮತ್ತೆ ಕನ್ನಡಿಯಲ್ಲಿ ನೋಡಿದಾಗ ಆ ಹೆಂಗಸೂ ಮಗುವೂ ಮಾಯವಾಗಿದ್ದರಂತೆ!!! ಅವರು ಭಯದಲ್ಲಿ ಆ ರಾತ್ರಿ ಪೂರ್ತಿ ದುರ್ಗಾ ಗುಡಿಯಲ್ಲೇ ತಂಗಿ ಮರುದಿನ ಮನೆಗೆ ಹೋದರಂತೆ. ಹಾಗೆ ಮನೆಗೆ ಹೋದವರಿಗೆ ಭಯದಲ್ಲಿ ಜೋರು ಚಳಿ ಜ್ವರ ಬಂದಿತ್ತು. ಇಂದಿಗೂ ಈ ಘಟನೆ ಬಗ್ಗೆ ನಮ್ಮಿಡಿ ಊರಿನಲ್ಲಿ ಮಾತಾಡಿಕೊಳ್ಳುತ್ತಾರೆ. ಅಂದಿನಿಂದ ತಡರಾತ್ರಿ ಅಲ್ಲಿಂದ ವಾಹನಗಳು ಬರುವುದಿಲ್ಲ. ಒಂದು ವೇಳೆ ಬಂದರೂ ಕೂಡ ಕಂಡ ಕಂಡ ದಾರಿಹೋಕರಿಗೆ ಆ ಬ್ರಿಜ್ ಬಳಿ ಲಿಫ್ಟ್ ನೀಡಲು ಈಗಲೂ ಜನ ಭಯಪಡುತ್ತಾರೆ. ನನಗಂತೂ ಈ ಕಥೆ ಕೇಳಿ ರಾತ್ರಿಯೆಲ್ಲಾ ನಿದ್ದೆ ಬಂದಿರಲಿಲ್ಲ!!!