Ashwini Desai

Abstract Action Crime

3.6  

Ashwini Desai

Abstract Action Crime

ವಿಕೃತ

ವಿಕೃತ

2 mins
388


ಶರಣ್ಯ ತುಂಟು ಹುಡುಗಿ. ಪಟ ಪಟ ಅಂತ ಅರಳು ಹುರಿದಂತೆ ಮಾತನಾಡುವ ಮುಗ್ಧ ಮನಸ್ಸಿನ ಸುಕೋಮಲೆ. ಅಪ್ಪ ಅಮ್ಮನ ಪ್ರೀತಿಯ ಏಕ ಮಾತ್ರ ಪುತ್ರಿ. ಆನ್ಯ ಅವಳ ಪ್ರಾಣ ಸ್ನೇಹಿತೆ. ಹುಟ್ಟಿನಿಂದಲೂ ಇಬ್ಬರೂ ಜೊತೆಗೆ ಆಡಿ ಬೆಳೆದವರು. ಎರೆಡೂ ಮನೆಯಲ್ಲಿ ಇಬ್ಬರೂ ಮಕ್ಕಳೇ. ಯಾವುದೇ ಬೇದ ಭಾವ ಇಲ್ಲದೇ ಎರೆಡೂ ಮನೆಯಲ್ಲೂ ಒಟ್ಟಿಗೆ ಬೆಳೆದವರು. 10 ವರ್ಷ ತುಂಬಿದ ಶರಣ್ಯ ಳ ತುಂಟಾಟ ಅತೀ ಎನಿಸುವಷ್ಟು. ಆದರೆ ಅದರಲ್ಲೇ ಖುಷಿ ಕಾಣುವ ಮನೆಯವರು. ಆನ್ಯ ಮಿತ ಭಾಷಿ. ಇಬ್ಬರದ್ದೂ ತದ್ವಿರುದ್ದ ಸ್ವಭಾವ ಆದರೂ ಇಬ್ಬರ ಅನ್ಯೂನ್ಯತೆಗೆ ಸರಿ ಸಾಟಿ ಇಲ್ಲ. 


ಆನ್ಯಾ ಳ 10ನೇ ವರ್ಷದ ಹುಟ್ಟಿದ ಹಬ್ಬ ಅವಳ ಅಜ್ಜಿ ಮನೆಯಲ್ಲಿ ಮಾಡುವ ತಯಾರಿ ನಡೆದಿರುತ್ತದೆ. ಶರಣ್ಯ ಳ ಮನೆಯವರೂ ಆಮಂತ್ರಿತರು. ಆದರೆ ಶರಣ್ಯ ಳ ತಂದೆಗೆ ಯಾವುದೋ ತುರ್ತು ಕೆಲಸದ ಕಾರಣ ಹೋಗಲು ಆಗದು. ಹಾಗೇ ಪತಿಯೊಬ್ಬರನ್ನೆ ಬಿಟ್ಟು ಹೋಗಲು ಸಾಧ್ವಿ ಪತ್ನಿಯೂ ತಯಾರಿಲ್ಲ. ಇದು ಶರಣ್ಯ ಳ ನಿರಾಸೆಗೆ ಕಾರಣ. ಆದರೆ ಮಗಳ ಮನ ಅರಿತ ಹೆತ್ತವರೂ ಮಗಳನ್ನು ನೆರೆಮನೆಯ ಆನ್ಯ ಳ ತಂದೆ ಯೊಡನೆ ಕಳಿಸಿ ಕೊಡುತ್ತಾರೆ. ಗೆಳತಿಯ ಸಂಭ್ರಮವನ್ನು ಸಡಗರವನ್ನು ಕಣ್ತುಂಬಿಕೊಳ್ಳುವ ಮಹದಾಸೆಯಿಂದ ತಂದೆಯ ಸಮಾನರಾದ ಗೆಳತಿಯ ತಂದೆಯೊಡನೆ ಪ್ರಯಾಣ ಬೆಳೆಸಿದ ಶರಣ್ಯ.


2 ದಿನ ಕಳೆದರೂ ಮರಳಿ ಬಾರದ ಮಗಳ ದಾರಿ ಕಾದ ಹೆತ್ತವರಿಗೆ ಏನೋ ಒಂದು ರೀತಿಯ ಸಂಕಟ. ಕಾರಣ ತಿಳಿಯದು. ಮೊದಲ ಬಾರಿ ಮಗಳು ತಮ್ಮನ್ನು ಬಿಟ್ಟು ದೂರ ಪ್ರಯಾಣ ಮಾಡಿದ್ದರ ಪರಿಣಾಮ ಎಂದು ಸಮಾಧಾನ ಮಾಡಿಕೊಂಡರೂ ಹೆತ್ತೊಡಲಿನ ಸಂಕಟ ವಿಪರೀತ. 


ಮಗಳೊಂದಿಗೆ ಮಾತನಾಡಿ ಸಮಾಧಾನ ಮಾಡಿಕೊಳ್ಳುವ ಮಹದಾಸೆ ಇಂದ ಆನ್ಯ ಳ ತಾಯಿಗೆ ಕರೆ ಮಾಡಿ ಮಾತಾಡಿ ಮಗಳ ಬಗ್ಗೆ ವಿಚಾರಿಸಿದ ತಾಯಿ ಕ್ಷಣದಲ್ಲಿ ಕುಸಿದರು. ಶರಣ್ಯ ಆನ್ಯ ತಂದೆಯೊಟ್ಟಿಗೆ ಹೊರಟ ಸುದ್ದಿ ತಿಳಿಸಿ ಗೊಳಿಟ್ಟರು. ಆದರೆ ಅವರದ್ದು ಒಂದೇ ಉತ್ತರ ಶರಣ್ಯ ಇಲ್ಲಿ ಬಂದಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ದೂರು ದಾಖಲಿಸಿದರು. ಸಂಜೆ ಪೊಲೀಸರಿಂದ ಕರೆ ಬಂದಿತು. ಊರ ಹೊರ ವಲಯದಲ್ಲಿ ಬಾಲಕಿಯೊಬ್ಬಳ ಮೃತ್ ದೇಹ ಸಿಕ್ಕಿದೆ. ಬಂದು ಪರಿಶೀಲಿಸಿ ಹೋಗಿ ಎಂದು. ಅಳುತ್ತಾ ಪೊಲೀಸರು ಕೊಟ್ಟ ವಿಳಾಸಕ್ಕೆ ಹೋದ ದಂಪತಿಗಳಿಬ್ಬರ ಆಕ್ರಂದನ ಮುಗಿಲು ಮುಟ್ಟಿತ್ತು.


ಪೊಲೀಸರ ವಿಚಾರಣೆ ಯಿಂದ ಹೊರ ಬಿದ್ದ ಸಂಗತಿ, ಮನೆ ಯಿಂದ ಜೊತೆಗೆ ಕರೆದೊಯ್ದ ಆನ್ಯ ತಂದೆಗೆ ಒಂದು ಕ್ಷಣ ಮೈ ತುಂಬಿಕೊಂಡು ಬೆಳೆಯುತ್ತಿದ್ದ ಶರಣ್ಯ ಮೇಲೆ ಮೋಹಿತನಾಗಿ, ಸಂಜೆವರೆಗೂ ಸುತ್ತಾಡಿ ಕತ್ತಲಾಗುತ್ತಿದ್ದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮುಗ್ಧ ಮಗುವನ್ನು ಅನುಭವಿಸಲು ನೋಡಿದ್ದಾನೆ. ಮಗು ಹೆದರಿ ಕಾಮುಕನ ಕಾಮದಾಟಕ್ಕೆ ಸ್ಪಂದಿಸದೇ ಇದ್ದಾಗ ಬಲಾತ್ಕಾರ ಮಾಡಿದ್ದಾನೆ. ಮೃಗದ ಕೈಗೆ ಸಿಕ್ಕ ಮರಿ ಜಿಂಕೆ ಹಠಾತ್ತನೆ ನಡೆದ ದಾಳಿಗೆ ಕಂಪಿಸಿ ಮರುಟಿ ಹೋಗಿದೆ. 


ಏರಿದ ನಶೆ ಇಳಿದಾಗ ಆದ ಅವಾಂತರದ ನೆನಪಾಗಿ ಹೆದರಿ ಮೃತ ದೇಹವನ್ನು ಪಕ್ಕದ ಕೆರೆಗೆ ಎಸೆದು ಏನೂ ನಡೆದೇ ಇಲ್ಲ ಎಂಬಂತೆ ಊರಿಗೆ ಹೋಗಿ ಮಗಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. 


ಮಗಳ ವಯಸ್ಸಿನ ಮುಗ್ದ ಜೀವ ಮೊಗ್ಗು ಹೂವಾಗಿ ಅರಳುವ ಮುನ್ನವೇ ಗಿಡುಗನ ಕೈಗೆ ಸಿಕ್ಕು ಬಾಡಿ ಹೋಯಿತು. ಒಬ್ಬಳೇ ಮಗಳ ಮೇಲೆ ಪ್ರಾಣವೇ ಇಟ್ಟಂತ ಆ ತಂದೆ ತಾಯಿಯರ ದುಃಖ ಕಲ್ಪಿಸಲೂ ಅಸಾಧ್ಯ. ನೆರೆಹೊರೆಯವರನ್ನು ನಂಬಿದ್ದೇ ಅವರಿಗೆ ಮುಳುವಾಯಿತು


ಮುಕ್ತಾಯ.....



Rate this content
Log in

Similar kannada story from Abstract