Ashwini Desai

Classics Inspirational Children

4  

Ashwini Desai

Classics Inspirational Children

ನನ್ನ ಆಯ್ಕೆ

ನನ್ನ ಆಯ್ಕೆ

3 mins
441


ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರು. ಮದುವೆಯಾಗಿ ಹಲವು ವರ್ಷಗಳ ನಂತರ ನಾನು ಹುಟ್ಟಿದೆ. ಆದ ಕಾರಣ ನಾನು ಅಂದ್ರೆ ಅವರಿಬ್ಬರಿಗೂ ತುಂಬಾ ಪ್ರೀತಿ. ಪ್ರತಿ ವಿಷಯದಲ್ಲಿಯೂ ಸಾವಿರ ಪಟ್ಟು ಯೋಚಿಸಿ ನಿರ್ಧಾರ ಮಾಡೋರು. ಉದಾಹರಣೆಗೆ ನಂಗೆ ಯಾವುದಾದರೂ ಆಟಿಕೆ ತಗೋಬೇಕು ಅಂದ್ರೆ, ಆ ಆಟಿಕೆ ಇಂದ ನಂಗೆ ಯಾವುದೇ ರೀತಿ ಇಂಜುರಿ ಆಗದು ಎಂಬ ಖಾತ್ರಿ ಸಿಕ್ಕಾಗ ಮಾತ್ರ ಆ ಆಟಿಕೆ ಮನೆ ಬಾಗಿಲು ತಲುಪ್ತಾ ಇತ್ತು. ನಂಗೆ ಎಷ್ಟೇ ಇಷ್ಟ ಆದ್ರೂ ಅದನ್ನ ಕೊಳ್ಳೋಕೆ ಆಗ್ಟ್ ಇರ್ಲಿಲ್ಲ. ಟಾಯ್ ಸ್ವಲ್ಪ ಹಾರ್ಡ್ ಇದ್ದರೂ, ಚೂಪಾಗಿ ಇದ್ದರೂ ಅದು ನನಗೆ ಬೇಕು ಅಂತ ರಚ್ಚೆ ಹಿಡಿದರೂ ತಾಗೋತಾ ಇರಲಿಲ್ಲ. ನನ್ನನ್ನ ತುಂಬಾ ಪ್ರೊಟೆಕ್ಟ್ ಮಾಡ್ತಾ ಇದ್ರು. ನಂಗೆ ಇದು ಅಭ್ಯಾಸ ಆಗಿ ಹೋಗಿತ್ತು. ಹಾಗಾಗಿ ನನ್ನಲ್ಲಿ. ನನ್ನ ಅಭಿಪ್ರಾಯ,ಸ್ವಂತ ಆಲೋಚನೆ, ಅಗತ್ಯ ಯಾವುದು ಇರಲಿಲ್ಲ. ನಾನು ಉಪಯೋಗಿಸುವ ಸೋಪು ಶಾಂಪೂ ಬ್ರಷ್ ಎಲ್ಲವೂ ಅವರ ಆಯ್ಕೆಗಳೇ. ಹಾಗಾಗಿ ನನಗಿದು ಅಭ್ಯಾಸ ಆಗಿತ್ತು.


ಇಬ್ಬರಿಗೂ ಸಮಯಾನೆ ಸಾಕಾಗ್ತಾ ಇರ್ಲಿಲ್ಲ. ಬೆಳಗ್ಗೆ ಮನೆ ಬಿಟ್ರೆ ಅದ್ಯಾವಾಗಲೋ ಮನೆ ತಲುಪೋರು. ನನ್ನ ನೋಡಿಕೊಳ್ಳೋಕೆ ಆಯಾ ಇದ್ಲು. ನನ್ನ ಬೇಕು ಬೇಡ, ಊಟ ನಿದ್ದೆ ಎಲ್ಲಾ ಅವಳೇ ಮಾಡೋಳು. ಅಲ್ಲಿ ಕರ್ತವ್ಯ ಇತ್ತು. ಆದರೆ ತಾಯಿಯ ಮಮತೆ????? ನನಗೆ ಆಗ ಅದರ ಬಗ್ಗೆ ಅರಿವು ಇರಲಿಲ್ಲ. ಈಗ ನೆನಪಾದರೆ, ಎಲ್ಲಾ ತಂದೆ ತಾಯಿಯರು ಹೀಗೆಯೇ, ಎಂದು ನನ್ನ ಮನ ತೀರ್ಮಾನಿಸಿ ಒಂದು ಹಂತಕ್ಕೆ ಹೊಂದಿಕೊಂಡು ಬಿಟ್ಟಿತ್ತು.


ನನಗೆ 10 ವರ್ಷ ಇದ್ದಾಗ ನಮ್ಮ ತಂದೆಗೆ ಬೇರೆಡೆಗೆ ವರ್ಗ ಆಯಿತು. Request ಮಾಡಿಕೊಂಡು ಅದೇ ಊರಿಗೆ ವರ್ಗ ಮಾಡಿಸಿಕೊಂಡರು. ನಾವೆಲ್ಲಾ ಒಟ್ಟಿಗೆ ಹೊಸ ಜಾಗಕ್ಕೆ ಪಯಣ ಬೆಳೆಸಬೇಕು ಅಂದ್ರೆ ಅದು ಚಿಕ್ಕ ಊರು, ಎಜುಕೇಷನ್ ಸಾರಿ ಹೋಗಲ್ಲ ಅಂತ ನನ್ನನ್ನ residential ಶಾಲೆಗೆ ಸೇರ್ಸಿದ್ರು. 


ಹುಟ್ಟಿದಾಗಿನಿಂದ ಅಪ್ಪ ಅಮ್ಮನ ಸುಪರ್ದಿಯಲ್ಲಿ, ಅವರ ನೆರಳಲ್ಲೇ ಬೆಳೆದ ನನಗೆ ಹಾಸ್ಟೆಲ್ ಜೀವನ ಮೋಸ ಮೊದಲು ಕಷ್ಟ ಅನ್ನಿಸ್ತು. ಆದರೆ ಕ್ರಮೇಣ ಮನೆ ವಾತಾವರಣಕ್ಕೂ ಹಾಸ್ಟೆಲ್ ವಾತಾವರಣಕ್ಕೂ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಹಾಗಾಗಿ ನಾನು ಆರಾಮಾಗಿ ಹೊಂದಿಕೊಂಡೇ.


ತಿಂಗಳಿಗೆ ಒಮ್ಮೆ ಪಾಲಕರ ಮೀಟಿಂಗ್ ಗೆ ಬಿಡುವಿದ್ದರೆ ಪಪ್ಪ ಇಲ್ಲ ಅಮ್ಮಾ ಬರ್ತಾ ಇದ್ರು. ಕೆಲವೊಮ್ಮೆ ರಜೆ ಇಲ್ಲ ಅಂತ ಬರ್ತಾನೂ ಇರ್ಲಿಲ್ಲ. ನಂಗೆ ಯಾವುದೇ ವ್ಯತ್ಯಾಸ ಅಂತಾನೆ ಅನ್ನಿಸ್ತಾ ಇರ್ಲಿಲ್ಲ. ಆದ್ರೆ ಬೇರೆ ಮಕ್ಕಳ ತಂದೆ ತಾಯಿ ಒಟ್ಟಿಗೆ ಬಂದು ತಮ್ಮ ಮಕ್ಕಳನ್ನು ಮುದ್ದು ಮಾಡಿ ಅವರೊಟ್ಟಿಗೆ ಸಮಯ ಕಳಿಯೋದು ನೋಡಿ ನಂಗೆ ಮೋದ ಮೊದಲು ಆಶ್ಚರ್ಯ ಆಗ್ತಾ ಇತ್ತು. ಆಮೇಲೆ ಬೇಸರ ಅನ್ನಿಸ್ತಾ ಇತ್ತು. ಹೀಗೆ ನನ್ನ ಹೈಸ್ಕೂಲ್ ವಿಧ್ಯಾಭ್ಯಾಸ ಕೂಡಾ ಮುಗೀತು. ತಂದೆ ತಾಯಿ ನೋಡ್ಬೇಕು, ಅವರಲ್ಲಿ ಹೋಗ್ಬೇಕು ಅನ್ನೋ ಯಾವ ಹಂಬಲವೂ ನನಗೆ ಇರ್ಲಿಲ್ಲ.

********


PUC ಗೆ ಹಾಸ್ಟೆಲ್ ಬೇಡ, ಪಿಜಿ ಲಿ ಇರ್ತೀನಿ ಅಂದೆ. ಸರಿ ಅಂದು ಕಾಲೇಜಿಗೆ ಒದಾಡೋಕೆ ಬೈಕ್ ಕೊಡ್ಸಿದ್ರು. ಕರ್ಚು ಮಾಡೋಕೆ ಕ್ರೆಡಿಟ್ ಕಾರ್ಡ್ ಕೊಟ್ರು. ಅಲ್ಲಿಗೆ ಅವರ ಕರ್ತವ್ಯ ಮುಗೀತು.


ಒಂಟಿ ಆದ ಜೀವನಕ್ಕೆ ಸ್ನೇಹಿತರ ಹಿಂಡೇ ಜೊತೆ ಆಯ್ತು. ನನ್ನ ಐಷಾರಾಮಿ ಜೀವನ ವಿಧಾನ ಎಗ್ಗಿಲ್ಲದ ಖರ್ಚು ನನಗೆ ಹಲವಾರು ಸ್ನೇಹಿತರನ್ನು ಕೊಟ್ಟಿತು. ಎಲ್ಲರೊಟ್ಟಿಗೆ ಸೇರಿ ಕಾಲೇಜಿನಲ್ಲಿ ಕಲೆತದ್ದಕ್ಕಿಂತ ಹೊರಗೆ ಕಲಿತ ಅಭ್ಯಾಸಗಳೇ ಹೆಚ್ಚು. ಪಬ್ಬು, ಡಿಸ್ಕೊ, ಕ್ಲಬ್ ಎಂದು ನಾವು ಹೋಗದ ಜಾಗಗಳಿಲ್ಲ. ನನಗಿದು ಹೊಸ ಪ್ರಪಂಚ ಹಾಗೂ ಹೊಸ ಅನುಭವ. ನನ್ನ ಜೀವನದಲ್ಲಿ ಎಂದೂ ಕಾಣದ ಖುಷಿ ನಾನು ಈಗ ಅನುಭವಿಸುತ್ತಿದ್ದೇನೆ ಎಂಬ ಭಾವ.


ಎಷ್ಟೇ ಖರ್ಚು ಮಾಡಿದರೂ ಲೆಕ್ಕ ಕೇಳದ ಹೆತ್ತವರು ನನ್ನ ಮೇಲೆ ಇಟ್ಟಿದ್ದ ನಂಬಿಕೆ ನಾನು ಉಳಿಸಿಕೊಳ್ಳಲಿಲ್ಲ. ಅವರು ಕೊಟ್ಟ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಂಡೆ. ಎಲ್ಲಾ ದುಶ್ಚಟಗಳನ್ನು ಕಲಿತೆ. ಅಪ್ಪ ಅಮ್ಮನ ಪ್ರೀತಿ ಉಸಿರು ಕಟ್ಟಿದಂತೆ ಆಗ್ತಾ ಇತ್ತು. ಕುಡಿಯೋದು, ಸಿಗರೇಟ್ ಸೇದೋದು ನನ್ನ ದಿನಚರಿ.


ಗೆಳೆಯರ ಸಹವಾಸದಿಂದ ಡ್ರಗ್ಸ್ ಕೂಡ ನನ್ನ ಸಂಗಾತಿ ಆಯಿತು. ಎರೆಡು ವರ್ಷದಲ್ಲಿ ಭೂಮಿ ಮೇಲೆ ಇರೋ ಎಲ್ಲಾ ತರದ ಕೆಟ್ಟ ಪದಾರ್ಥಗಳು ನನ್ನ ದೇಹ ಸೇರಿದ್ದವು. ಮೊದಲಿಗೆ ಮಸ್ತಿಗೆ ಅಂತ ಶುರು ಆಗಿದ್ದು ಕ್ರಮೇಣ ಜೀವನದ ಭಾಗವೇ ಆಯ್ತು.


******

ನನಗೀಗ 20 ವರ್ಷ ವಯಸ್ಸು. ಕಳಿತ ಚಟಗಳನ್ನು ಬಿಡಲು ಮನಸ್ಸು ಮಾಡಿ ತಪ್ಪು ತಿದ್ದಿಕೊಳ್ಳಲು ರೀ ಹಾಬ್ಬಿಟೇಷನ್ ಸೆಂಟರ್ ಗೆ ಸೇರಿದ್ದೀನಿ. ನಾನೇನೋ ಬಿಡೋ ತೀರ್ಮಾನ ಮಾಡಿದೆ. ಆದರೆ ಸಮಯ ಮೀರಿ ಹೋಗಿದೆ. ನನ್ನ ದೇಹ ಹಲುವಾರು ಅಂಗ ವೈಫಲ್ಯತೆ ಇಂದ ಬಳಲುತ್ತಿದೆ. ಡಾಕ್ಟರ್ ಇನ್ನು ಹೆಚ್ಚು ದಿನ ನಾನು ಬದುಕಿರಲ್ಲ ಎಂದು ಹೇಳಿದ್ದಾರೆ.


ಅಪ್ಪ ಅಮ್ಮ ಇಬ್ಬರೂ ತಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ನನ್ನೊಂದಿಗೆ ಸಮಯ ಕಳೆಯುತ್ತಾ ಇದ್ದಾರೆ. ನನ್ನ ಕಾಳಜಿ ಮಾಡ್ತಾರೆ, ಪ್ರೀತಿ ಮಾಡ್ತಾರೆ, ಅಮ್ಮ ನನಗೆ ದಿನ ಕೈ ತುತ್ತು ಕೊಡ್ತಾರೆ. ಅಪ್ಪ ತಮಾಷೆ ಮಾಡಿ ಕೆಟ್ಟ ಕೆಟ್ಟ ಜೋಕ್ಸ್ ಹೇಳಿ ನನ್ನ ನಗಿಸೋಕೆ ಟ್ರೈ ಮಾಡ್ತಾರೆ. ಅವರ ಜೋಕ್ಸ್ ಗೆ ನಗು ಬರದೇ ಇದ್ದರೂ ಅವರಿಗೆ ಬೇಸರ ಆಗಬಾರದು, ಅವರ ಆಸಕ್ತಿ ಕುಗ್ಗಬಾರದು ಎಂದು ನಗ್ತೀನಿ.


ಈಗ ನನ್ನದು ಒಂದು ಫ್ಯಾಮಿಲಿ. ಆದರೆ ನಾನು ಇನ್ನು ಸ್ವಲ್ಪ ದಿನ ಮಾತ್ರ ಇರುವ ಅತಿಥಿ. ನನ್ನ ಬಾಲ್ಯ ಮರಳಿ ಬಾರದು. ಆದರೆ ನಾನು ಆಗ ಕಳೆದುಕೊಂಡ ಪ್ರೀತಿ ನನಗೆ ಈಗ ಸಿಗ್ತಾ ಇದೇ. ಆದ್ರೆ ಅನುಭವಿಸೋಕೆ ಸಮಯ ಇಲ್ಲ.


ಇಲ್ಲಿ 


ಮಕ್ಕಳಿಗೆ ಆಸ್ತಿ ಮಾಡೋ ತಂದೆ ತಾಯಿ ತಪ್ಪಾ???


ಅವರ ಪ್ರೀತಿಯನ್ನು ಹಿಂಸೆ ಎಂದು ಭಾವಿಸಿ ಅವರು ಕೊಟ್ಟ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಂಡ ನನ್ನ ತಪ್ಪಾ?


ಬದಲಾದ ಬದುಕನ್ನು ಅನುಭವಿಸಲು ಅವಕಾಶ ಕೊಡದ ದೇವರ ತಪ್ಪಾ??


ನನ್ನಂತೆ ಸಾಕಷ್ಟು ಜನ ಇದ್ದೀರಿ. ಇನ್ನಾದರೂ ಎಚ್ಚೆತ್ತು, ದೇವರು ಕೊಟ್ಟ ಬದುಕನ್ನು ಒಳ್ಳೆಯ ರೀತಿ ಅನುಭವಿಸೋಣ. ಸಮಯ ಮೀರಿ ಕಾಲನ ಕರೆ ಬರುವ ಮುನ್ನ ಎಚ್ಛೆತ್ತುಕೊಳ್ಳೋಣ. ನಾ ಹಿಡಿದ ಹಾದಿಯನ್ನು ಯಾರೂ ತುಳಿಯಬೇಡಿ.



Rate this content
Log in

Similar kannada story from Classics