Bhavani Kempaiah

Drama Romance Action

4  

Bhavani Kempaiah

Drama Romance Action

ಬಂಧಿಸಲು ನಿಂತು ಬಂಧಿಯಾದೆ.....

ಬಂಧಿಸಲು ನಿಂತು ಬಂಧಿಯಾದೆ.....

8 mins
829


   

ಅಮ್ಮ!!!....

ಸುತ್ತಲೂ ತಿರುಗಿ ನೋಡಿದವನಿಗೆ ತಾನು ಒಂದು ಕೋಣೆಯಲ್ಲಿ ಮಲಗಿದ್ದೇನೆ ಎಂಬುದು ಅರಿವಾಯಿತು.


"ಅರೆ ನಾನು ಇಲ್ಲಿಗೆ ಹೇಗೆ ಬಂದೆ ? ಯಾರ ಮನೆ ಇದು , ನೋಡುದ್ರೆ ಸಿಟಿ ತರ ಇಲ್ವಲ್ಲ ,ಯಾವುದೋ ಕಾಡು ಪ್ರದೇಶ ತರ ಇದೆ , ಇಲ್ಲಿಗೆ ಹೇಗೆ ಬರೋಕೆ ಸಾಧ್ಯ, ನಾನು ನಿನ್ನೆ ಓಡಿಸುತ್ತಿದ್ದ ಬೈಕ್ ಟೈರ್ ಪೊಲೀಸ್ ಬುಲ್ಲೆಟ್ ಇಂದ ಪಂಚರ್ ಆಯ್ತು , ತಪ್ಪಿ ನೀರಿಗೆ ಬಿದ್ದೆ ಆಮೇಲೆ ???"

ಏಳಲು ಹೊರಟವನಿಗೆ ತನ್ನ ಮೈಯಲ್ಲಿ ಮೂರು ಬುಲೆಟ್ ಹೊಕ್ಕಿದ್ದ ನೋವು ನೆನಪಾಯಿತು.


"ಹಲೋ ಯಾರಾದ್ರು ಇದ್ದೀರಾ ?ನನ್ನ ಯಾರು ಇಲ್ಲಿಗೆ ಕರ್ಕೊಂಡು ಬಂದಿದ್ದು??ಯಾರಾದ್ರೂ ಮಾತಾಡಿ ??

ಚೆ !!ಎಲ್ಲಿಗೆ ಬಂದೆ ನಾನು ".

ಯಾರಾದ್ರೂ ಬರೋತನಕ ನನ್ನ ಪರಿಚಯ ಮಾಡ್ಕೋತೀನಿ ,ನನ್ನ ಹೆಸರು ದೃವ ವರ್ಮಾ , ಇವಾಗ ನಾನು ಇಲ್ಲಿ ಯಾಕೆ ಇದ್ದೀನಿ ಅಂತಾನ , ಪೊಲೀಸ್ ಅಂತ ಕೇಳಿಸಕೊಂಡ ಮೇಲೆ ಅರ್ಥ ಆಗಿರಬೇಕಲ್ವಾ ? ಹೌದು ನಾನೊಬ್ಬ ಕೊಲೆಗಾರ !!

ಒಬ್ಬರಲ್ಲ ಇಬ್ಬರು ಪ್ರಮುಖ ವ್ಯಕ್ತಿಗಳನ್ನ ಕೊಂದೆ , ಅದಿಕ್ಕೆ ಪೊಲೀಸ್ ಅವ್ರು ನನ್ನ ಹಿಂದೆ ಬಿದ್ದಿದ್ದಾರೆ.ಜೊತೆಗೆ ಸೈಕೋ ಅನ್ನೋ ಪಟ್ಟ!!

ಕಾರಣ ....ಹೇಳೋಕೆ ಮನಸ್ಸಿಲ್ಲ .

ಕೊಲೆಗಾರ ಅಂದ್ರೆ ನಾನು ಹುಟ್ಟ ರೌಡಿ ಅಂತ ಅಲ್ಲ,ಸಾಮಾನ್ಯ ಡಿಗ್ರಿ ಮುಗಿಸಿ ,

ಹೊರರಾಜ್ಯದಲ್ಲಿ ಒಂದು ಕಂಪೆನಿಲಿ ಕೆಲಸ ಮಾಡ್ತಿದ್ದೆ.

ಅಪ್ಪ ಮಿನಿಸ್ಟರ್ ಮನೆಯಲ್ಲಿ ಪಿಎ ಆಗಿ ಕೆಲಸ ಮಾಡ್ತಿದ್ರು.. ಆದ್ರೆ ನನಿಗೆ ನನ್ನ ಸ್ವಂತ ದುಡಿಮೆ ಬೇಕು ಎಂಬ ಆಸೆ ಇತ್ತು.. ಅದಿಕ್ಕೆ ಕುಟುಂಬದಿಂದ ದೂರ ಇದ್ದು ಕೆಲಸ ಮಾಡ್ತಿದ್ದೆ....


"ಓಹ್ ನಿಮಗೆ ಎಚ್ಚರ ಆಯ್ತಾ??ಪರ್ವಾಗಿಲ್ವೇ ನಾನು ನೀವು ಇನ್ನು ಒಂದು ಮೂರು ದಿನ ಏಳೋಲ್ಲ ಅನ್ಕೊಂಡಿದ್ದೆ ".

ನಗುಮುಖದಿ ಕೈ ಕಟ್ಟಿ ಎದುರು ನಿಂತಳು ದುಂಡು ಮುಖ ಚೆಲುವೆ.


" ಯಾರ್ ಯಾರ್ ನೀನು ,,, "ಸಿಕ್ಕಿದ್ದನ್ನು ಕೈಗೆ ಹಿಡಿದು ಹೊಡೆಯಲು ಯತ್ನಿಸಿದ ದೃವ.


"ಒಪ್ಸ್ ಒಪ್ಸ್,,ಕೂಲ್ ಕೂಲ್ ಸರ್,,ಅಲ್ಲ ರಿ ಜೀವ ಕಾಪಾಡಿದ್ದಕ್ಕೆ ಥ್ಯಾಂಕ್ಸ್ ಹೇಳೋ ಬದಲು ನನಿಗೆ ಹೊಡೆಯೋಕೆ ಬರ್ತೀರಲ್ರಿ ನಿಮ್ಗೆನಾದ್ರು ಹುಚ್ಚಾ ?

ಮೈ ತುಂಬ ಬ್ಯಾಂಡೇಜ್ ಹಾಕೊಂಡಿದ್ರು ಸ್ಟಂಟ್ ಮಾಡೋಕೆ ಹೋಗ್ತೀರಾ , ಸುಮ್ನೆ ರೆಸ್ಟ್ ಮಾಡ್ರಿ ರಿ."

ಮೆಲ್ಲಗೆ ಗದರಿದಳು.


" ಏಯ್ ಯಾರು ನೀನು ಹೇಳ್ತೀಯೋ ಇಲ್ಲ ಇಲ್ಲೇ ನಿನ್ನನ್ನ ಸಾಯಿಸಲಾ "ಏಳಲು ಪ್ರಯತ್ನಿಸಿದನು.


"ಒಂದು ಸಾರಿ ಹೇಳುದ್ರೆ ಅರ್ಥ ಆಗಲ್ವಾ ನಿಮ್ಗೆ,,ಇರಿ ಒಂದು ಇಂಜೆಕ್ಷನ್ ಕೊಟ್ರೆ ತೆಪ್ಪಗೆ ಬಿದ್ಕೋತೀರ ,ಈಗಲೇ ಕೊಡ್ತೀನಿ "


"ನೋ !!ನೋ!!ಡೋಂಟ್ ಡು ದಟ್ , ಪ್ಲೀಸ್".


" ಹಾಗೆ ಬನ್ನಿ ದಾರಿಗೆ ."


" ನನ್ನ ಹೊಗೋಕೆ ಬಿಡು , ನಾನು ಇಲ್ಲಿದ್ರೆ ನಿನಗೆ ತೊಂದ್ರೆ,ಜೊತೆಗೆ ನಾನು ಸರಿಯಿಲ್ಲ , ".


" ಓಹ್ ಅಷ್ಟೊಂದು ಬಿಲ್ಡಪ್ ಕೊಡಬೇಡ್ರಿ , ತಾವು ಇನ್ನು ಪೇಶಂಟ್ , ಎದ್ದು ಓಡಾಡೋಕೆ ಇನ್ನು ಒಂದು ಮೂರು ನಾಲ್ಕು ದಿನ ಆದ್ರು ಬೇಕು ,ಅಲ್ಲಿವರಿಗೂ ಸುಮ್ನೆ ಇರಿ,ಅಮೇಲೇ ನೀವು ಒಳ್ಳೆಯವರೋ ಕೆಟ್ಟವರೊ ಅನ್ನೋ ಸರ್ಟಿಫಿಕೇಟ್ ನಾನು ಕೊಡ್ತೀನಿ ,


ಇರಿ ಹಸಿವಾಗಿರ್ಬೇಕು ನಾನು ಹೋಗಿ ತಿನ್ನೋಕೆ ತರ್ತೀನಿ"


" ಒಯ್ ನಿಲ್ಲು ಮೊದಲು ನಾನು ಎಲ್ಲಿದ್ದೀನಿ ಅಂತ ಹೇಳು , ಮತ್ತೆ ನಾನು ನಿನಗೆ ಎಲ್ಲಿ ಸಿಕ್ಕಿದೆ?? "

ಆಕೆ ಏನು ಉತ್ತರಿಸದೆ ಹಾಗೆ ಹೋದಳು.


" ಏಯ್ ಹುಡ್ಗಿ ನಿನ್ನನ್ನೇ ಕೇಳ್ತಿರೋದು ಏನು ಹಾಗೆ ಹೋಗ್ತಿದ್ದೀಯ . "

ಯೋಚನೆ ಮುಂದುವರೆಯಿತು.


ಯೋಚನೆಯನ್ನು ಮರೆಸಲು ಆ ಹುಡುಗಿ ಊಟದ ತಟ್ಟೆಯೊಂದಿಗೆ ಬಂದು ಕೂತಳು.

ಮತ್ತೆ ದೃವನೆ ಮಾತು ಪ್ರಾರಂಭಿಸಿದನು.


" ನಿನ್ನೇ ಕೇಳ್ತಿರೋದು ನಾನು ನಿನಗೆ ನೆನ್ನೆ ಎಲ್ಲಿ ಸಿಕ್ಕಿದೆ ಅಂತ?."

ಆ ಹುಡುಗಿ ಜೋರಾಗಿ ನಕ್ಕಳು.


" ಅಲ್ಲ ರಿ ನೆನ್ನೆನ? ನೀವು ನನಿಗೆ ಸಿಕ್ಕಿ ಆಗ್ಲೇ ಎರಡು ದಿನ ಆಯ್ತು , ಒಳ್ಳೆ ಕುಂಬಕರ್ಣ ತರ ನಿದ್ದೆ ಹೊಡೆದು ಇವತ್ತು ಎದ್ದು , ನನ್ನೇ ಪ್ರಶ್ನೆ ಮಾಡ್ತಿದ್ದೀರ.

ಎರಡು ದಿನದ ಹಿಂದೆ ನದಿಯಲ್ಲಿ ಫಿಶಿಂಗ್ ಮಾಡ್ಬೇಕಾದ್ರೆ ಸಿಕ್ಕಿದ್ರಿ , ನೋಡುದ್ರೆ ಇರೋ ಬರೋ ಬುಲೆಟ್ಸ್ ಎಲ್ಲ ಮೈಯಲ್ಲಿ ತುಂಬ್ಕೊಂಡು ಈಗಲೋ ಆಗಲೋ ಅಂತ ಇದ್ರಿ,ಹೋಗ್ಲಿ ಪಾಪ ಅಂತ ಕಾಪಾಡಿದೆ ಅಷ್ಟೇ, ಬಾರಿ ಗಟ್ಟಿ ಇದ್ದೀರಾ ನೀವು ಇಷ್ಟು ಏಟಾದ್ರು ಬೇಗ ರಿಕವರ್ ಆದ್ರಿ , ಗ್ರೇಟ್ !!"


" ನಿಮ್ಮ ಹೆಸರು ??".


" ನನ್ನ ಹೆಸರು ಸಿಹಿ ಅಂತ , ನರ್ಸ್ ಟ್ರೈನಿಂಗ್ ಮುಗಿಸಿದ್ದೀನಿ , ಅದಿಕ್ಕೆ ನೋಡಿ ನಿಮ್ಗೆ ಟ್ರೀಟ್ ಮಾಡೋಕೆ ಸುಲಭ ಆಗಿದ್ದು, ಇಲ್ಲಾಂದ್ರೆ ನಿಮ್ಮನ್ನ ಕಾಪಾಡೋಕೆ ಯಾರ ಕೈಲು ಸಾಧ್ಯ ಆಗ್ತಿರಲಿಲ್ಲ.ಎಲ್ಲ ನಿಮ್ಮ ಪುಣ್ಯ ಅಂತ ತಿಳಿರಿ.ನಿಮ್ಮ ಕೈಯಲ್ಲಿ ಕಷ್ಟ ಆಗಬಹುದು ಇರಿ ನಾನೇ ತಿನ್ನಿಸ್ತೀನಿ"

ನಗುಮುಖದೊಂದಿಗೆ ಸಿಹಿ ಪ್ರತಿಯೊಂದು ತುತ್ತನ್ನು ತಿನ್ನಿಸಿದಳು.ದೃವನಿಗೆ ಆಕೆಯ ಮೇಲೆ ತಿಳಿಯದ ನವಿರಾದ ಭಾವ ಮೂಡಿತು.

ಟ್ಯಾಬ್ಲೆಟ್ಸ್ ಕೊಟ್ಟು ಮಲಗಿಸಿದಳು.


ತಿಂದ ನಿಮಿಷಕ್ಕೆ ದೃವನಿಗೆ ನಿದ್ದೆ ಹತ್ತಿ ಹಾಗೆ ನಿದಿರೆಗೆ ಶರಣಾದನು.


ಹೊರಗೆ ಬಂದ ಸಿಹಿಗೆ ಫೋನ್ ವೈಬ್ರೆಟ್ ಆಗಿದ್ದು ತಿಳಿಯಿತು.ಒಮ್ಮೆ ದೃವನ ರೂಮಿಗೆ ಬಂದು ಸೂಕ್ಷ್ಮವಾಗಿ ಅವನನ್ನು ಗಮನಿಸಿ , ಆತ ಮಲಗಿದ್ದಾನೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಹೊರಬಂದಳು. ಮನೆಯಿಂದ ಸ್ವಲ್ಪ ದೂರ ಬಂದು ಕರೆ ಮಾಡಿದ್ದ ವ್ಯಕ್ತಿಗೆ ಹಿಂದಿರುಗಿ ಕರೆ ಮಾಡಿದಳು.


"ಹಲೋ ಸರ್ , ಅವನಿಗೆ ಎಚ್ಚರ ಆಗಿದೆ .ಸ್ವಲ್ಪ ಹುಚ್ಚುನ ತರ ಆಡಿದ , ಆದರೂ ನಾನು ಸಂಭಾಳಿಸಿದೆ , ನಿಜ ಹೇಳಿ ಸರ್ ಆ ಕೊಲೆಗಾರ ಇವನೇನಾ ?..."

ಆ ಕಡೆಯಿಂದ " ಯಾಕೆ ಮಿಸ್ ತಾರವರ್ಷಿಣಿ , ಯಾಕೆ ಈ ದೌಟ್ ನಿಮಗೆ ????".


" ಯಾಕೋ ಗೊತ್ತಿಲ್ಲ ಸರ್ , ಅವನ ಮುಖ ಭಾವ ನೋಡಿದರೆ ನನಿಗೆ ಅವ ಅಷ್ಟು ಕ್ರೂರಿ ಅಂತ ಖಂಡಿತ ಅನಿಸ್ತಿಲ್ಲ. ಸಮ್ ಥಿಂಗ್ ಈಸ್ ರಾಂಗ್ , ದಯವಿಟ್ಟು ಇನ್ನೊಂದು ಸಾರಿ ಚೆಕ್ ಮಾಡಿ ಹೇಳಿ, ಎನ್ಕೌಂಟರ್ ಅನ್ನೋದು ತುಂಬಾ ದೊಡ್ಡ ಶಿಕ್ಷೆ ಅಂತ ಅನ್ನಿಸೋಕೆ ಶುರು ಆಗಿದೆ,ಪ್ಲೀಸ್ ಸರ್ ಒಮ್ಮೆ ಚೆಕ್ ಮಾಡಿ ."


" ಶಟಪ್ ತಾರಾ ಒಬ್ಬ ಐಪಿಎಸ್ ಅಧಿಕಾರಿಯಾಗಿ ನೀವು ಹೀಗೆ ಹೇಳೋದು ಎಷ್ಟು ಸರಿ ಹೇಳಿ,ಅವನು ಶೂಟ್ ಮಾಡಿರೋ ಲೈವ್ ಫೂಟೇಜ್ ನೀವೇ ಕಣ್ಣಾರೆ ನೋಡಿದ್ದೀರಾ ಆದ್ರು ಈ ತರ ಹೇಳೋದು ಅಂದ್ರೆ ನಿಮ್ಮ ಪ್ರೊಫೆಷನ್ಗೆ ಅವಮಾನ , ನಾನು ನಿಮಗೋಸ್ಕರ ಎಷ್ಟು ರಿಸ್ಕ್ ತೊಗೊಂಡಿದೀನಿ ಗೊತ್ತಾ , ಆ ದೃವ ನಿನಗೆ ಇನ್ನು ಸಿಕ್ಕಿಲ್ಲ , ನಮ್ಮ ಟ್ರೂಪ್ ಅವನನ್ನ ಕಾಡಲ್ಲಿ ಹುಡುಕುತ್ತಾ ಇದ್ದೀವಿ ಅಂತ ಡೈಲಿ ರಿಪೋರ್ಟ್ ಮಾಡೋದೇ ಆಯ್ತು ,


ನನಿಗೆ ಒಂದು ವಿಷಯ ಅರ್ಥ ಆಗ್ತಿಲ್ಲ, ನೀನು ಯಾಕೆ ಅವನ ಬಗ್ಗೆ ಇಷ್ಟೊಂದು ಫೇವರ್ ಮಾಡ್ತಿದ್ಯ ಅಂತ , ಅವನು ಎಂತ ಕ್ರಿಮಿನಲ್ ಅಂದ್ರೆ ಮುಂದೆ ನಿನನ್ನು ಕೋಲೆ ಮಾಡೋಕೆ ಹೇಸೊಲ್ಲ , ಅವನು ಕೊಂದಿರೋದು ಬೇರೆ ಯಾರನ್ನು ಅಲ್ಲ , ಸ್ವಂತ ನಿನ್ನ ತಂದೆ ಮತ್ತೆ ಅಣ್ಣನ್ನ ನೆನಪಿರಲಿ ,

ನಿಮ್ಮ ತಂದೆ ಈ ಸಮಾಜದಲ್ಲಿ ಎಷ್ಟು ದೊಡ್ಡ ಗಣ್ಯ ವ್ಯಕ್ತಿ ,ನಿಷ್ಠಾವಂತ ರಾಜಕಾರಣಿ ಅಂತ ಗೊತ್ತು ತಾನೇ , ಇನ್ನು ನಿನ್ನ ಅಣ್ಣ ಮುಂಬರುವ ಚುನಾವಣೆಯ ಸ್ಪರ್ಧಿ ಆಗಿದ್ದ , ಎನು ಮಾಡಿದ್ರು ಆ ದೃವನಿಗೆ ಇಬ್ಬರು , ಅದು ಕೊಲೆ ಮಾಡುವಷ್ಟು , ನಾನು ಇನ್ನು ಏನು ಮಾಡೋ ಸ್ಥಿತಿಯಲ್ಲಿ ಇಲ್ಲ , ಇನ್ನು ಹತ್ತು ದಿನ ಟೈಮ್ ಇದೆ ಅಷ್ಟೇ ನಿನಗೆ , ಅಷ್ಟರಲ್ಲಿ ಅವನ ಬಾಡಿ ಪೋಲೀಸ್ಗೆ ಸಿಗಬೇಕು , ನೀನು ಮಾಡ್ತೀಯ ಅನ್ನೋ ನಂಬಿಕೆಯಿಂದ ನಿನಗೆ ಈ ಕೇಸ್ ಕೊಟ್ಟಿರೋದು ,ಯೋಚನೆ ಮಾಡು ."ಎಂದು ಆ ವ್ಯಕ್ತಿ ಕರೆ ಕಟ್ ಮಾಡಿದ.

ಯೋಚನೆಗೆ ಬಿದ್ದಳು ತಾರಾ.


"ನೆವರ್ ಮೈಂಡ್ , ನಾನು ಕಾನೂನು ಸೇವಕಿ ..ಅಷ್ಟೇ ನನ್ನ ಕೆಲಸ , ಇವನ ಕತೆ ಮುಗಿಸಬೇಕು , ಇಲ್ಲ ಅಂದ್ರೆ ಇವನಿಂದ ಇನ್ನು ಎಷ್ಟು ಜೀವಗಳು ಬಲಿಯಾಗುತ್ತೋ ಗೊತ್ತಿಲ್ಲ.ಮೂರ್ತಿ ಸರ್ ಹೇಳಿದ್ದೆ ಸರಿ , ಇವನಿಗೆ ಸಾವೆ ಶಿಕ್ಷೆ.ಬಟ್ ಅವನು ಯಾಕೆ ಹೀಗೆ ಮಾಡಿದ ಅನ್ನೋ ಕಾರಣ ಆದ್ರು ಸಿಗಬೇಕಲ್ಲ ನನಗೆ???.ನೋಡುವ ಇನ್ನು ಒಂದು ವಾರ ಇಲ್ಲೇ ಇರ್ತಾನಲ್ಲ , ಅದೇನು ಮಾಡ್ತಾನೋ ."

ಹೀಗೆ ದಿನಗಳು ಉರುಳಿದವು....


ದೃವ ನಿಧಾನವಾಗಿ ಗಾಯಗಳಿಂದ ಚೇತರಿಸಿಕೊಂಡನು. ಈ ಎಲ್ಲ ಕ್ರೆಡಿಟ್ ನಮ್ಮ ಸಿಹಿ ಉರುಫ್ ತಾರಾಗೆ ಸೇರಿದ್ದು.ಆತನಿಗೆ ಸರಿಯಾದ ಸಮಯದಲ್ಲಿ ಮಾತ್ರೆ ಮತ್ತು ಊಟ ಕೊಟ್ಟು ಪೋಷಿಸುತ್ತಿದ್ದಳು.

ದೃವನಿಗೆ ಒಮ್ಮೊಮ್ಮೆ ತಾರಾಳ ನಡವಳಿಕೆಯಲ್ಲಿ ಸಂದೇಹ ಬಂದರೂ ತೋರ್ಪಡಿಸದೆ ಸುಮ್ಮನಿದ್ದನು.

ಹಲವಾರು ಬಾರಿ ಆಕೆ ಅವನ ಈ ಸ್ಥಿತಿಯ ಕಾರಣವನ್ನು ತಿಳಿಯಲು ಪ್ರಯತ್ನ ಪಟ್ಟರೂ ದೃವನ ಬುದ್ಧಿವಂತಿಕೆ ಆಕೆಯ ಪ್ರಯತ್ನವನ್ನು ಸೋಲಿಸುತ್ತಿತ್ತು.ತನ್ನ ಮೇಲೆ ದೃವನಿಗೆ ಹೆಚ್ಚು ನಂಬಿಕೆ ಬಂದರೆ ಒಳಿತಾಗುವುದು ಎಂದು ತಾರಾ ಒಂದು ಯೋಜನೆಯನ್ನು ಮಾಡಿದಳು.ಆದರೆ ಆಕೆಗೂ ತಿಳಿಯದ ವಿಷಯ ದೃವ ಅದಾಗಲೇ ತಾರಾಳ ಮನಸ್ಸಿಗೆ ಸೋತಿದ್ದನೆಂದು..

ಹೀಗೆ ಒಮ್ಮೆ ಕಾಡಿನ ಅತೀ ಆಳವಾದ ನದಿಗೆ ದೃವನೊಂದಿಗೆ ಹೋದ ತಾರಾ..ಆತನಿಗೆ ಈಜು ಬರದು ಎಂದು ಖಚಿತಪಡಿಸಿಕೊಂಡು ಮೆಲ್ಲಗೆ ಆತನನ್ನು ನೀರಿಗೆ ತಳ್ಳಿಬಿಟ್ಟಳು.ಆಯಾ ತಪ್ಪಿ ಬೀಳಬೇಕಾದ ದೃವನ ಎಚ್ಚೆತ್ತು ನಿಂತನು.ಅದರ ಬದಲಾಗಿ ತಾರಾಳೆ ಬಿದ್ದಳು.ತನಗೆ ಈಜು ಬಂದರೂ ದೃವನ ಮನದಲ್ಲಿ ತನ್ನ ಸ್ಥಾನದ ಕುರಿತು ತಿಳಿಯುವ ಸಲುವಾಗಿ ಈಜು ಬಾರದಂತೆ ನಟಿಸಿದಳು.ದೃವ ಅದಾಗಲೇ ನೀರಿಗೆ ಧುಮುಕಿ ಕಾಪಾಡಲು ಯತ್ನಿಸುತ್ತಿದ್ದನು.ಕೊನೆಗೆ ಆತನೇ ಮುಳುಗುವ ಪರಿ ಬಂದರು ಹೇಗಾದರೂ ತಾರಾಳನ್ನು ಕಾಪಾಡಬೇಕೆಂಬ ಆತನ ಮುಖಭಾವ ನೋಡಿ ಮೊದಲ ಬಾರಿ ಮನಸೋತಳು.ಆತನ ಕಣ್ಣೀರು ಅವಳ ಮನ ತಣಿಸಿತು..ಕೊನೆಗೆ ತಾರಾಳೆ ಪ್ರಯಾಸದಿಂದ ಆತನನ್ನು ದಡ ಸೇರಿಸಿ ಕೂತಳು.ದೃವ ತಕ್ಷಣ ಆಕೆಯನ್ನು ತಬ್ಬಿ ಅತ್ತುಬಿಟ್ಟನು." ನಿನಗೇನು ಆಗಿಲ್ಲ ಅಲ್ವಾ..ಯಾಕೋ ಗೊತ್ತಿಲ್ಲ ಸಿಹಿ ನಿನಗೆ ತೊಂದ್ರೆ ಆಗಿದ್ದು ನೋಡಿ ಜೀವ ಹೋದಂಗೆ ಆಯ್ತು ನನಿಗೆ..." ಎಂದನು. ಇಷ್ಟು ಸಾಕಾಗಿತ್ತು ಖಾಕಿ ಹೆಣ್ಣಿನ ಮನ ಕದಲಿಸಲು..ಆತನಿಂದ ಬಿಡಿಸಿಕೊಂಡು ಓಡಿಬಿಟ್ಟಳು ಹುಡುಗಿ..ರಾತ್ರಿ ಇಬ್ಬರಲ್ಲೂ ಮಾತಿಲ್ಲ..


ಆದರೆ ಇಬ್ಬರ ನಡುವಲ್ಲಿ ಅವರಿಗೆ ಅರಿಯದ ನವಿರಾದ ಪ್ರೀತಿ ಮೂಡಿತ್ತು.ದೃವನಿಗೆ ತನ್ನ ಈಗಿನ ಪರಿಸ್ಥಿತಿ ಆ ಭಾವವನ್ನು ತಡೆದಿದ್ದರೆ ತಾರಾಳಿಗೆ ತನ್ನ ಕರ್ತವ್ಯ ಆಕೆಯನ್ನು ಹಿಡಿದಿತ್ತು.

ಆದರೂ ಕೊನೆಗೆ ಪ್ರೀತಿ ಎಂಬ ಮಾಯೇ ಗೆದ್ದ ಪ್ರೇಮಿಗಳು ತಮ್ಮ ಪ್ರೀತಿಯನ್ನು ಒಪ್ಪಿಕೊಂಡರು.ಅವರವರ ಹಿನ್ನಲೆಯನ್ನು ಮರೆಮಾಚಿ..ದೃವನ ಪ್ರೀತಿಯಲ್ಲಿ ಮಿಂದ ತಾರಾ ಆತನನ್ನು ಕೊಲ್ಲುವ ವಿಚಾರವನ್ನು ಸಂಪೂರ್ಣವಾಗಿ ಮರೆತ್ತಿದ್ದಳು.ಬಿಟ್ಟಿರಲಾಗದಷ್ಟು ಪ್ರೀತಿ ಬೆಳೆಯಿತು..

ಮತ್ತೊಮ್ಮೆ ಎಚ್ಚರಿಕೆಯ ಗಂಟೆಯಂತೆ ಆಫೀಸರ್ ಕಾಲ್ ಬರುವವರೆಗೂ.............

ದೃವ ಮಲಗಿದ್ದಾಗ ಒಬ್ಬಳೇ ಎದ್ದು ಕಾಲ್ ಸ್ವೀಕರಿಸಿದಳು. ಆ ಕಡೆಯಿಂದ ಬರಿ ಬೈಗುಳಗಳೇ..


" ವಾಟ್ ದ ಹೆಲ್ ಯು ಆರ್ ಡುಯಿಂಗ್ ಮಿಸ್ ತಾರಾ..ಯಾಕ್ರೀ ಲೋಕೇಷನ್ ಆಫ್ ಮಾಡಿದ್ದೀರಾ.. ಎಲ್ರಿ ಇದ್ದೀರಾ..ಹೈಯರ್ ಆಫೀಸರ್ಸ್ಗೆ ಸುಳ್ಳು ಹೇಳಿ ಹೇಳಿ ಸಾಕಾಯ್ತು ನನಿಗೆ..ಜಸ್ಟ್ ಶೂಟ್ ಹಿಂ ..ಇನ್ನು ಏನ್ರಿ ಮೀನಾ ಮೇಷ ನಿಮ್ದು.."


" ಸರ್ ಪ್ಲೀಸ್...ಐ ಕ್ಯಾಂಟ್ ಕಿಲ್ ಹಿಂ..ಅವನ ತಪ್ಪಿಲ್ಲ ಸರ್..ಪ್ಲೀಸ್..ಹೇಗಾದ್ರು ಕೇಸ್ ಕ್ಲೋಸ್ ಆಗೋ ತರ ಮಾಡಿ ಸರ್.."ಗೋಗರೆದಳು.


" ವಾಟ್..ರಿ ಏನ್ರಿ ಹೇಳ್ತಿದ್ದೀರಾ..ತಲೆ ಸರಿಯಿದ್ಯ..ಏನು..ಪ್ರೀತಿನಾ..ಆಗ್ಲೇ ಕರ್ತವ್ಯ ಎಲ್ಲ ಮರೆತುಬಿಟ್ರಾ..ಯು ಆರ್ ಅನ್ ಫಿಟ್ ಟು ಬಿ ಇನ್ ದ ದೀಪಾರ್ಟ್ಮೆಂಟ್..ನಿಮ್ಮಂತ ಮಗಳಿಗೆ ಜನ್ಮ ಕೊಟ್ಟ ನಿಮ್ಮ ತಂದೆಯ ಜನ್ಮ ಸಾರ್ಥಕವಾಯ್ತು ನೋಡಿ..ನಿಮ್ಮ ಒಡಹುಟ್ಟಿದ ಅಣ್ಣ...ನಾಚಿಕೆ ಆಗ್ಬೇಕು ನಿಮ್ಗೆ..ನೋಡಿ ನೀವು ಹಿಡ್ಕೊಳ್ಳಿಲ್ಲ ಅಂದ್ರು ನಾನು ಬೆರೆಯವರನ್ನ ನಿಮ್ಮ ಪ್ಲೇಸ್ ಗೆ ಅಪಾಯಿಂಟ್ ಮಾಡ್ಬೇಕಾಗುತ್ತೆ...ಕೊನೆಗೂ ತೋರ್ಸ್ಬಿಟ್ರಿ ಅಲ್ಲ..ನಿಮ್ಮಂತವರಿಗೆ ಯಾಕ್ರಿ ಬೇಕಿತ್ತು..ಯುನಿಫಾರ್ಮ್.."


ತಾರಾ ನಿರುತ್ತರಳಾದಳು..ಕೊನೆಗೂ ಏನೋ ನಿರ್ಧರಿಸಿದವಳಂತೆ " ಸರ್ ಗೀವ್ ಮಿ ಟು ದೇಸ್..ಐ ವಿಲ್ ಕಂಪ್ಲೀಟ್ ದ ಮಿಷನ್ .." ಎಂದು ಫೋನಿಟ್ಟಳು. ಮೂರ್ತಿಯವರು ಏನೋ

ಸರಿಯಿಲ್ಲವೆಂದು ಮತ್ತೊಬ್ಬರಿಗೆ ಕಾಲ್ ಮಾಡಿ ಕೆಲವು ವಿಷಯ ತಿಳಿಸಿದನು. ಹಾಗೂ ತಿಳಿದು ಶಾಕಾದನು..

ಏನೋ ಸದ್ದಾಯಿತು ಎಂದು ಹಿಂದುರುಗಿ ನೋಡಿದಾಗ ಕಾಡು ಬೆಕ್ಕೊಂದು ಅತ್ತ ಓಡಿತು.ಎಚ್ಚೆತ್ತವಳು ವಾಪಸ್ಸು ದೃವನಲ್ಲಿ ಬಂದು ಕೂತಳು.

ಹಾಯಾಗಿ ಚೂರು ಕಲ್ಮಶವಿಲ್ಲದೆ ಮಲಗಿದ್ದ ಮೊಗವನ್ನು ಹೇಗೆ ಶಿಕ್ಷಿಸಲಿ ಎಂದು ಕಣ್ಣೀರಿಟ್ಟಳು..ದಿನವೂ ಲವಲವಿಕೆಯಿಂದ ಇದ್ದ ತನ್ನ ಹುಡುಗಿ ಮಂಕಾಗಿರುವುದನ್ನು ಗಮನಿಸಿ..ದೃವ ವಿಷಯ ಕೇಳಿದರು..ತಾರಾ ಸುಮ್ಮನಾದಳು.

ಮೂರ್ತಿಯವರು ಕೊಟ್ಟ ಸಮಯ ಸಮೀಪಿಸುತ್ತಿದ್ದಂತೆ ತಾರಾಳ ಮಾನಸಿಕ ಒತ್ತಡ ಹೆಚ್ಚಾಯಿತು.ಕಾಪಾಡಿದ ಕೈಯಿಂದಲೇ ಅವನನ್ನು ಕಳೆದುಕೊಳ್ಳಬೇಕೋ ಅಥವಾ ಪ್ರೀತಿಸಬೇಕೋ ಆಕೆಗೆ ತಿಳಿಯದ ವಿಷಯವಾಗಿತ್ತು.


ಬುದ್ಧಿ ಆತ ಕೊಲೆಗಾರ , ಸಮಾಜ ಘಾತುಕ , ತನ್ನ ತಂದೆ ಹಾಗೂ ಅಣ್ಣನನ್ನು ಕೊಂದವನು ಎಂದು ಹೇಳಿ ಎಚ್ಚರಿಸುತ್ತಿದ್ದರೂ , ಮನಸ್ಸು ಅದನ್ನು ತಳ್ಳಿ ಹಾಕಿತು.

ಇಷ್ಟು ದಿನ ಜೊತೆಯಿದ್ದರು ದೃವ ತನ್ನೊಂದಿಗೆ ಎಂದು ಅಸಭ್ಯವಾಗಿ ವರ್ತಿಸಿಲ್ಲ. ಪ್ರತಿ ಮಾತಲ್ಲೂ ಹಿಡಿತ.

ಕಲ್ಲು ಮನಸ್ಸನ್ನು ಕರಗಿಸುವ ಪ್ರೀತಿ..ಎಲ್ಲವೂ ಆಕೆಯನ್ನು ಹಿಂಸಿಸುತ್ತಿತ್ತು..

ನಾಳೆ ಎನ್ಕೌಂಟರ್ ಮಾಡುವೆ ಎನ್ನುವ ಸಂದೇಶ ಕಳಿಸಿ ನದಿಯ ದಡದಲ್ಲಿ ಬಂದು ಕೂತಳು.ದೃವನು ಕೂಡ ಆಕೆಯನ್ನು ಹುಡುಕಿ ಪಕ್ಕದಲ್ಲೇ ಬಂದು ಕೂತನು. ಇಬ್ಬರ ದೃಷ್ಟಿ ನದಿಯಲ್ಲಿ ಕಾಣುತ್ತಿದ್ದ ಚಂದ್ರನ ಬಿಂಬದ ಮೇಲೆ ಇತ್ತು..


ಆ ಕಡು ಮೌನವನ್ನು ದೃವ ತನ್ನ ಮಾತಿನಿಂದ ಸಡಿಲಿಸಿದನು...


" ನಾನು ಆಪರಾಧಿಯಲ್ಲ ಮಿಸ್ ತಾರವರ್ಷಿಣಿ ಐಪಿಎಸ್..ಸಾಮಾನ್ಯ ಮನುಷ್ಯ..ನಾನು ..ನನ್ನ ತಂದೆ ತಾಯಿ..ಮುದ್ದು ತಂಗಿ ಇಷ್ಟೇ ನನ್ನ ಪ್ರಪಂಚ..ಅವರಿಗಾಗಿ ಹಗಲು ರಾತ್ರಿ ದೂರ ಇದ್ದು ದುಡಿತಿದ್ದೆ..ಆದ್ರೆ ಒಂದು ದಿನ ನಿನ್ನ ತಂಗಿ ಕಾಣೆಯಾಗಿದ್ದಾಳೆ ಅಂತ ಸುದ್ದಿ ಬಂದಾಗ ಒಂದೇ ಉಸಿರಿಗೆ ಓಡೀ ಹೋದೇ..ಆದ್ರೆ ಕಾಣೆಯಾಗಿ ಎರಡು ದಿನ ಆದ್ಮೇಲೆ ಸಿಕ್ಕುದ್ಲು ನಮ್ಮನೆ ಪಕ್ಕದ ಮೋರಿಯಲ್ಲಿ ಹೆಣವಾಗಿ..ಹೇಗಿರುತ್ತೆ ಒಮ್ಮೆ ಯೋಚನೆ ಮಾಡು..(ಆತನ ತಂಗಿಯ ಫೋಟೋವನ್ನು ಅವಳ ಕೈಗಿಟ್ಟನು..) ಇಷ್ಟು ಮುದ್ದಾಗಿದ್ಲು..ಆದ್ರೆ ಸಿಕ್ದಾಗ ಹೇಗಿದ್ಲು ಗೊತ್ತಾ..(ಅತ್ತನು)ಅವಳ ಸ್ಥಿತಿ ನೋಡಿ ಅಮ್ಮ ಅವಳ ಜೊತೆನೆ ಹೋಗ್ಬಿಟ್ರು..ಇಬ್ಬರ ಸಾವು ನನ್ನ ..ನಮ್ಮ ಅಪ್ಪನ್ನ ತುಂಬಾ ಹಿಂಸಿಸಿತು..ಆದ್ರೆ ನನಿಗೆ ಅರ್ಥ ಆಗದ ವಿಷಯ ಪ್ಲೋಲಿಸ್ ಸ್ಟೇಶನ್ಗೆ ಈ ಕೇಸ್ ಹೋಗಲೇ ಇಲ್ಲ..ಅಪ್ಪ ನಿಮ್ಮ ತಂದೆಗೆ ಪಿಎ ಆಗಿ ವರ್ಕ್ ಮಾಡ್ತಿದ್ರು..ನಿಂಗೆ ಗೊತ್ತಿರಲ್ಲ ಬಿಡು ಯಾಕಂದ್ರೆ ನೀನು ದೂರ ಇದ್ದು ಓದಿದ್ದು ಅಲ್ವಾ..ನಿನಿಗೆ ಇನ್ನೊಂದು ವಿಷಯ ಗೊತ್ತಲ್ವಾ..ಆ ಪಿಎ ಕೂಡ ಅದೇ ದಿನ ಸತ್ತಿದ್ದು ಅಂತ..ಹೌದು ನಮ್ಮ ತಂದೆ ಕೂಡ ಅವತ್ತೇ ಸಾವಿನಪ್ಪಿದ್ರು..ಆದ್ರೆ ಅದು ಕೊಲೆಯಲ್ಲ ..ನಿಮ್ಮ ತಂದೆಗೆ ಹಾಗೂ ಅಣ್ಣನಿಗೆ ನಾನು ಶೂಟ್ ಮಾಡಿದ ಗನ್ನಿನಿಂದ ಅವ್ರೇ ಶೂಟ್ ಮಾಡ್ಕೊಂಡ್ರು..ಯಾಕೆ ಗೊತ್ತಾ..ನನ್ನ ತಂದೆ ನಿಮ್ಮ ತಂದೆ ಜೊತೆ ಸೇರಿ ಬಡ ಹೆಣ್ಣು ಮಕ್ಕಳ ಸಾಗಾಣಿಕೆಯ ವ್ಯವಹಾರ ನಡಿಸ್ತಿದ್ರು..ಅವ್ರಿಗೆ ಗೊತ್ತಿರಲಿಲ್ಲ ಅನ್ಸುತ್ತೆ ಒಂದು ದಿನ ಅವರ ಮಗಳೇ ಅಲ್ಲಿ ಸಿಕ್ಕಿ ಹಾಕಿಕೊಳ್ತಿದ್ಲು ಅಂತ..ಅದರ ಅರಿವಾಗಿ ಅವ್ರೇ ಆತ್ಮಹತ್ಯೆ ಮಾಡ್ಕೊಂಡ್ರು..ನನ್ನ ಕಣ್ಮುಂದೆನೆ..ಇನ್ನು ನಿಮ್ಮ ಅಣ್ಣ ಸಾಗಿಸುವ ಕೆಲಸ ಮಾಡ್ಬೇಕಾದ್ರೆ ನನ್ನ ತಂಗಿನ ಮೊಹಿಸಿ ಹಾಳ್ ಮಾಡ್ಬಿಟ್ಟ..ಇಂತಹ ಸಮಾಜ ಹುಳುಗಳು ನನಿಗೆ ಬೇಡ ಅನ್ಸುದ್ರು..ನನ್ನ ತಂಗಿಗೆ ಆದ ಹಾಗೆ ಇನ್ನು ಮುಂದೆ ಯಾರಿಗೂ ಆಗ್ಬಾರ್ದು ಅಂತ ಹಾಗೆ ಮಾಡ್ಬೇಕಾಯ್ತು..ಅಷ್ಟೇ..ಆದ್ರೆ ಅದಿಕ್ಕೆ ನನಿಗೆ ಸಿಕ್ಕಿದ್ದು ಸೈಕೋ..ಹುಚ್ಚ ಅನ್ನೋ ಪಟ್ಟ..ನಾನು ಅವತ್ತು ತಪ್ಪಿಸಿಕೊಂಡು ಬಂದಿದ್ದು ಉಳಿದ ಹೆಣ್ಣು ಮಕ್ಕಳನ್ನು ಕಾಪಾಡೋಕ್ಕೆ..ಅದರಲ್ಲಿ ನಾನು ಗೆದ್ದೆ ಕೂಡ..ಆದ್ರೆ ಪೊಲೀಸ್ ಕೈಗೆ ಸಿಕ್ಕಿ ಬಿದ್ದೆ..ಸತ್ತರು ಸರಿ ಇವರ ಕೈಗೆ ಸಿಗ್ಬಾರ್ದು ಅಂತ ನೀರಿಗೆ ಬಿದ್ದೆ..ನಿನ್ನ ಕೈಗೆ ಸಿಕ್ಕೇ ಅಷ್ಟೇ...ಇದೆ ನನ್ನ ಜೀವನದ ಕಹಿ ಸತ್ಯ..ಕಾನೂನಿನ ಪ್ರಕಾರ ನಾನು ಮಾಡಿದ್ದು ತಪ್ಪಿರಬಹುದು..ಆದ್ರೆ ನನ್ನ ಮನಸ್ಸಿಗಲ್ಲ..ಈಗ್ಲೂ ಅದ್ರ ಬಗ್ಗೆ ನನಿಗೆ ಹೆಮ್ಮೆ ..ಆ ಹೆಮ್ಮೆಯಿಂದಾನೆ ನಾಳೆ ನಿನ್ನ ಕೈಯಾರೆ ನಾನು ಸಾಯ್ತಿನಿ..ಹೆಮ್ಮೆಗಿಂತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾಯಿರೋ ನಿನ್ನ ತೋಳಿನಲ್ಲೇ ಜೀವ ಬಿಡೋದು ಹೆಚ್ಚು ಖುಷಿ ನನಿಗೆ. ಆದ್ರೆ ನಾನು ಮಾಡಿದ ತಪ್ಪು ನೀನು ಮಾಡ್ಬೇಡ..ನಿನ್ನ ಫೋಟೋನ ಅವತ್ತೇ ನಿಮ್ಮ ಮನೆಯಲ್ಲಿ ನೋಡಿದ್ದೆ..ತುಂಬಾ ಇಷ್ಟ ಆಗಿದ್ದೆ..ಅಂತದ್ರಲ್ಲಿ ನಿನ್ನ ಇಲ್ಲಿ ಮೊದಲ ಬಾರಿ ನೋಡೇ ಮನ ಸೋತಿದ್ದೆ..ಲವ್ ಯು ಕಣೋ.."

ಕಣ್ಣೊರಿಸಿಕೊಂಡು ಅಲ್ಲಿಂದ ಎದ್ದು ಹೋದನು.


ಅವನು ಹೋದ ದಾರಿಯನ್ನೇ ದಿಟ್ಟಿಸುತ್ತಿದ್ದ ತಾರಾಳ ದುಃಖದ ಕಟ್ಟೆ ಒಡೆಯಿತು..ಎಷ್ಟು ಹೊತ್ತು ಅತ್ತಳೋ ಆಕೆಗೆ ತಿಳಿಯದು..ಆ ರಾತ್ರಿ ಎರಡು ಜೀವಗಳಿಗೆ ಜಾಗರಣೆಯಾಯಿತು....ಆದರೆ ಬೆಳಗಿನ ಜಾವ ಮೂರ್ತಿ ಸರ್ ಅವರಿಂದ ಬಂದ ಸಂದೇಶ ಆಕೆಯ ಮನವನ್ನು ಪ್ರಸನ್ನ ಗೊಳಿಸಿತು..


ಎರಡು ದಿನಗಳ ನಂತರ...


ಕಮೀಷನರ್ ಆಫೀಸ್..


ಮೂರ್ತಿ ಕಮೀಷನರ್ರಿಗೆ ವಂದಿಸಿ ತನ್ನ ಮಾತು ಶುರುವಿಟ್ಟನು..

" ಗುಡ್ ಮಾರ್ನಿಂಗ್ ಸರ್..ನೀವು ಕೊಟ್ಟ ತಾಸ್ಕನ್ನ ಮಿಸ್ ತಾರವರ್ಷಿಣಿ ಕಂಪ್ಲೀಟ್ ಮಾಡಿದ್ದಾರೆ..ದೃವ ವರ್ಮಾನ ಡೆತ್ ಆಗಿದೆ..ಬಟ್ ಅವನು ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಟ್ಟು ಫಾರೆಸ್ಟ್ ನಲ್ಲಿ ಪ್ರಪಾತಕ್ಕೆ ಜಿಗಿದ..ಮುಖ ಪೂರ್ತಿ ಹಾಳಾಯ್ತು..ಬಾಡಿ ಸಿಕ್ಕಿದೆ..ಅವನೇ ಅಂತ ಐಡೆಂಟಿಫೈ ಆಯ್ತು..ಇನ್ನು ಈ ಕೇಸ್ ಕ್ಲೋಸ್ ಮಾಡೋದು ಒಂದೇ ಬಾಕಿ..."


" ವೆಲ್ ಡನ್ ಮಿಸ್ಟರ್ ಮೂರ್ತಿ..ತಾರಾ ಎಲ್ಲಿ..."


" ಸರ್ ಅದು ಆಕೆ ನೆನ್ನೆನೇ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋದಳು..ಲೆಟರ್ ನಿಮ್ಮ ಟೇಬಲ್ ಮೇಲೆ ಇದೆ.."


" ವಾಟ್ !!! ಯಾಕೆ .."


" ಸರ್ ಆಕೆ ಫ್ಯಾಮಿಲಿ ಯಾರು ಇಲ್ಲಿ ಇಲ್ವಲ್ಲ..ಎಲ್ಲ ಆಸ್ತಿನು ಡೋನೇಟ್ ಮಾಡಿ..ಇವತ್ತು ಬೆಳಿಗ್ಗೆ ಅವಳು ತನ್ನ ಹಳ್ಳಿಗೆ ಹೋಗ್ಬಿಟ್ಲು..."


" ಓಹ್ ಹೋಗ್ಲಿ ಬಿಡಿ..ಲೆಟ್ ಅಸ್ ನಾಟ್ ಫೋರ್ಸ್ ಹರ್..ಬಟ್ ಶೀ ವಾಸ್ ದ ಬೆಸ್ಟ್..."

ಎಂದು ಖುಷಿಪಟ್ಟರು....


ಮೂರ್ತಿಯವರು ಅವರಿಗೆ ಸೆಲ್ಯೂಟ್ ಹೊಡೆದು ಹೊರಬಂಡನು..ತನ್ನ ಫೋನಿನಿಂದ ತಾರಾಳಿಗೆ

" ಹ್ಯಾಪಿ ಮ್ಯಾರಿಡ್ ಲೈಫ್ ಪುಟ್ಟ..ನಡೆದಿದ್ದೆಲ್ಲವನ್ನು ಮರೆತು ಹೊಸ ಜೀವನವನ್ನು ಪ್ರಾರಂಭಿಸು...ಒಳ್ಳೆಯದಾಗಲಿ " ಎಂದು ಸಂದೇಶ ಕಳುಹಿಸಿದನು...


ಐದು ವರ್ಷಗಳ ನಂತರ...



" ಪಪ್ಪಾ.....!!"


" ಏನು ಪುಟ್ಟ...ಏನು ಬೇಕು.."


" ಹೋಮ್ ವರ್ಕ್ ಕೊಟ್ಟಿದ್ದಾರೆ.. ನಮ್ಮ ಫ್ಯಾಮಿಲಿ ಬಗ್ಗೆ ಬರೀಬೇಕು ಅಂತ..ಹೇಳಿಕೊಡು.."

ಆತ ನಗುತ್ತಾ " ಸರಿ ಬರಿ ಮಗು..


ನೇಮ್ : ನಕ್ಷತ್ರ ದೃವ ವರ್ಮಾ..


ಫಾದರ್ ನೇಮ್ : ಮಿಸ್ಟರ್ ದೃವ ವರ್ಮಾ...


ಮದರ್ ನೇಮ್ : ಮಿಸೆಸ್ ತಾರಾವರ್ಷಿಣಿ ವರ್ಮಾ..


ಜಾಬ್ : ಫಾರ್ಮರ್ ಫ್ಯಾಮಿಲಿ...


ಮದರ್ : ಹೌಸ್ ವೈಫ್........


ತಾರಾ ಆಗ ತಾನೇ ಮನೆಕೆಲಸ ಮುಗಿಸಿ ಗಂಡ ಮಗಳೊಂದಿಗೆ ಬಂದು ಕೂತಳು.....


ಕಾನೂನಿನ ಸೇವಕಿಯಾಗಿ ದೃವನನ್ನು ಬಂಧಿಸಲು ನಿಂತ ತಾರಾ ಆತನ ಪ್ರೀತಿಗೆ ಸಿಕ್ಕಿ ಅವನ ಮನದಲ್ಲೇ ಬಂಧಿಯಾಗಿ ದೃವತಾರೆಯಾದಳು....

ತಪ್ಪನ್ನು ಮಾಡಿದವರೆಲ್ಲ ಅಪರಾಧಿಗಳಾಗರು..ಮುಖವಾಡದ ಮನುಜರು ಎಂದಿಗೂ ಒಳ್ಳೆಯ ಮನುಷ್ಯರಾಗರು ಎಂಬ ಉದ್ದೇಶಿತ ಕಥೆಯೇ ಈ ಬಂಧಿಸಲು ನಿಂತು ಬಂಧಿಯಾದೆ.....



Rate this content
Log in

Similar kannada story from Drama