Vaishnavi Puranik

Comedy Drama Children

3  

Vaishnavi Puranik

Comedy Drama Children

ಲೇಖನ - ಸವಿಯಾದ ಮನ

ಲೇಖನ - ಸವಿಯಾದ ಮನ

3 mins
306


"ಈ ಸುಂದರ ಬೆಳಕಿನ ಅಂಗಳದಲ್ಲಿ ನನ್ನ ನಿನ್ನ ನಡುವಿನಲ್ಲಿ " ಆ ಸುಂದರ ಪದ್ಯವನ್ನು ಹಾಡುತ್ತಾ ಪ್ರಕೃತಿಯ ಮಧ್ಯದಲ್ಲಿ ನಾನು ಕವಿಯಂತೆ ಹಾಡುತ್ತ ಯಾವಾಗ ಬರುತ್ತಾಳೆ? ಎಂದು ಹೂವಿನ ನಡುವೆ ದುಂಬಿಯ ಹಾಗೆ ಅತ್ತ ಇತ್ತ ಸಂಚಾರ ಮಾಡುತ್ತಾ ಇರುವಾಗ, ನನ್ನನ್ನು ಯಾರೋ ಕರೆದ ಹಾಗೆ ಎನಿಸಿ ಯಾರೂ ಯಾರು? ಎಂದು ನೋಡಿದಾಗ..


ನಮ್ಮ ಮನೆಯ ಸದಾ ಒಳ್ಳೇದನ್ನು ಬಯಸುವ ನಮ್ಮ ಪ್ರೀತಿಯ ಸಣ್ಣ ಬಂದು ಅಯ್ಯ ಅಯ್ಯ.. ಎಂದು ಕರೆಯುತ್ತಾ ಬಂದರು ನಾನು ಏನು ಆಯಿತು? ಎಂದು ಕೇಳಿದಾಗ ಮನೆಯಲ್ಲಿ ನಿಮ್ಮನ್ನು ಬರಲು ಹೇಳಿದರೆ ಎಂದು ಹೇಳಿದರು. ನಾನು ಆ ಹೂವುಗಳಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಆ ಸುಂದರ ಸಾವಿರದ ಪಂದರವಾಗಿ ಹಕ್ಕಿಯಂತೆ ಹಾರಿಕೊಂಡು ಬಂದೆ ನಮ್ಮ ಮನೆಗೆ. 


ನಮ್ಮ ಮನೆಯಲ್ಲಿ ಇನ್ನೂ ಕಾಲುಗಳು ಇಡುವ ಹೊತ್ತಿಗೆ ನಮ್ಮ ಸುಂದರ ಹಕ್ಕಿಗಳು ನನ್ನ ಮೇಲೆ ಬಂದು ಸವಿಸವಿ ಮಾತುಗಳನ್ನು ಕೇಳಿ ನನಗೆ ಖುಷಿಯಾಗಿ ಒಮ್ಮೆ ಹೂವೋ ಹೋ ಹೋ ಎಂದು ಕೂಗಿದಾಗ ನನ್ನ ಬಾಯಿನಲ್ಲಿ "ಎಲ್ಲಿರುವೆ ಮನವ ಕಾಡುವ "ಹಾಡುವಾಗ ಎಲ್ಲರೂ ನಾಳೆ ಬರುತ್ತಾಳೆ ಎಂದು ಎಂದು ಹೇಳಿ ತಮಾಷೆ ಮಾಡತೊಡಗಿದರು. ನಾನು ಅವಳ ಮುಖವನ್ನು ಮನಸಲ್ಲಿ ನೆನೆಸಿಕೊಂಡು ಕನಸಿನ ಲೋಕದಲ್ಲಿ ತೇಲಿ ಹೋದೆನು.


ನನ್ನ ಮನೆಯ ತೋಟದ ಕೆಲಸವನ್ನು ಮುಗಿಸಿಬರುವಾಗ ಬರುವಾಗ ನನಗಿಂತ ಮೊದಲೇ ಅಣ್ಣ ಅತ್ತಿಗೆ ಎಲ್ಲರೂ ಮನೆಯನ್ನು ಸಿಂಗಾರ ಮಾಡಿ ಸಿದ್ದರಾಗಿದ್ದರು. ನಾನು ಬರುವಾಗ ಬೇಗ ತಯಾರಿ ಮಾಡಿಕೋ ಎಂದು ಹೇಳಿದಾಗ ಅಪ್ಪಯ್ಯ ಹೇಳಿದರು ನಾವೇ ನೋಡಿಕೊಂಡು ಬರುತ್ತೇವೆ ಎಂದು ಹೇಳಿದಾಗ..


ನನ್ನವಳು ಹೇಗೆ ಇದಾಳೋ ಎಂದು ನನ್ನ ಮನದ ಚಡಪಡಿಕೆ ಹೆಚ್ಚು ಆಗುತ್ತಾ ಇತ್ತು. 


ನಾನು ಮೆಲ್ಲನ್ನೇ ಅತ್ತಿಗೆ ಅಮ್ಮನನ್ನು ಕರೆದು ಅವಳು ಹೇಗೆ ಇದ್ದಾಳೆ? ಎಂದು ನೋಡಿ ಬಂದು ಹೇಳಿ ಎಂದು ಹೇಳಿದಾಗ ಕದ್ದು ಕೇಳಿಸಿಕೊಂಡ ಸಣ್ಣ ಅಣ್ಣ ಎಂದು ಹೇಳಲು ಹೋದಾಗ ನನ್ನ ಮಗನ ಆಟಕ್ಕೆ ಅವಳೇ ನಿನ್ನನು ಸರಿ ಮಾಡಬೇಕು ಎಂದು ತಮಾಷೆ ಮಾಡಿದರು.


ಎಲ್ಲರೂ ನಮ್ಮಊರಿನಲ್ಲಿ ನೋಡಲು ಹೋದರು ನನ್ನ ಬಿಟ್ಟು. ಹುಡುಗಿ ನಾವೇ ನೋಡಿ ಬರುತ್ತೇವೆ ಎಂದು ನನ್ನ ಅಪ್ಪಯ್ಯ ದೊಡ್ಡ ಹನುಮಂತರ ಮುಖದಲ್ಲಿ ಉತ್ತರ ನೀಡಿದರು.


ಊರಿಗೆ ಊರೇ ನನ್ನವಳನ್ನು ನೋಡಲು ಹೋಗಿದ್ದರು. ನನಗೆ ಕುತೂಹಲ ಉಂಟಾಯಿತು.


 ಸುಮಾರು ಒಂದು ಗಂಟೆಯನ್ನು ಕಳೆಯುವ ಹೊತ್ತಿಗೆ ಎತ್ತಿನ ಗಾಡಿಯ ಶಬ್ದವನ್ನು ಕೇಳಿ ನಾನು ಓಡಿ ಬಂದೆ. ಅವಾಗ ಎಲ್ಲರ ಮುಖವು ಬಾಡಿಹೋದ ಹೂವಿನಂತೆ ಭಾಸವಾಗಿತ್ತು. ನನ್ನ ಮುಖದಲ್ಲಿ ನಗು ಎಲ್ಲಾ ಗಾಳಿನಲ್ಲಿ ಲೀನವಾಯಿತು……... 


ಅವಾಗ ನಮ್ಮ ಊರಿನ ಮುಖಂಡರು ಬಂದು ಹೇಳುವ ಹೊತ್ತಿಗೆ ಎಲ್ಲರೂ ಸೇರಿ ಪದ್ಯವನ್ನು ಕಂಡು ನಾನು ಓಡಿದೆ. ಅವಾಗ ಅವಳು ಸುಂದರ ಉಯ್ಯಾಲೆಯಲ್ಲಿ ನಾಲ್ಕುಮೊಳ ಸೀರೆ ಮುಖವನ್ನು ಚಂದ್ರನಿಗೆ ಹೋಲಿಸಬೇಕು ನಡೆಯುವಾಗ ಅನಿಸಿತು.


ಎಲ್ಲಿ ಭೂಮಿಗೆ ನೋವು ಆಗುತ್ತೆ ಎಂದು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಬಂದಳು. ಅವಳ ಕಣ್ಣುಗಳು ಆಆಆಹಾ ಎಂದು ಹೇಳುವಾಗ ನಾನು ಕನಸಿನ ಲೋಕದಲ್ಲಿ ಚಿತ್ರಿಸಿಕೊಂಡೆನು.


ಎಲ್ಲರೂ ನನ್ನ ಹುಡುಕಿಕೊಂಡು ಎಲ್ಲಿ ಹೋದ ಈ ಕಳ್ಳ ಕೃಷ್ಣ ಎಂದು ನೋಡುವಾಗ ನಾನು ತೋಟದ ಮಧ್ಯದಲ್ಲಿ ಅವಳ ಲೋಕದಲ್ಲಿ ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗನ್ಸಣ್ಣ ಬಂದು ಓಡೆಯೆರ್ ಎಂದು ಕರೆದಾಗ ನಾನು ಹೆದರಿಕೊಂಡು ಅಲ್ಲೇ ಸಣ್ಣ ಹಳ್ಳತರಹ ಇದ್ದು ಅದ್ಕಕ್ಕೆ ಬಿದ್ದೆ. ಅವಾಗ ಅಲ್ಲಿ ಕೆಲಸ ಮಾಡುತ್ತಾ ಇದ್ದ ಹೆಂಗಸರು ನನ್ನ ಗತಿ ನೋಡಿ ಸಣ್ಣ ನಗು ಬೀರಿದರು ಯಾಕೆ ನಗುತ್ತೀರಾ ಎಂದು ಕೇಳಿದ್ದಕ್ಕೆ ನಿಮ್ಮ ಸ್ಥಿತಿ ನೋಡಿ ಎಂದು ಹೇಳಿದಾಗ ಹಾ ಎಂದು ಸಣ್ಣ ಏನೋ ಕರೆದಿದ್ದು ಎಂದು ಜೋರಾಗಿ ಕೇಳಿದಾಗ ಅಪ್ಪಾಜಿ ಕರೆದಿದ್ದರೆ ಬರಬೇಕು ಅಂತೆ ಬನ್ನಿ ಬೇಗಾ.... ಎಂದು ಹೇಳಿದಾಗ ನಾನು ಒಂದೇ ವೇಗದಲ್ಲಿ ಅಲ್ಲಿಂದ ಓಡಿದೆ ನಮ್ಮ ಮನೆಗೆ ಬಂದೆ.


ಅವಾಗ ಮಾರ್ಗಮದ್ಯದಲ್ಲಿ ಯಾರೂ ಬಂದರು ನನಗೆ ತಿಳಿಯದು ಅಷ್ಟು ಬೇಗದಲ್ಲಿ ಪಯಣ ಬೆಳಸಿದೆ.


ಅಂತಹ ಸಂದರ್ಭದಲ್ಲಿ ನನ್ನ ಸಣ್ಣ ಮಧ್ಯ ಬಂದ ಅವನು ಹೋಗಿ ಹೊಳೆಯಲ್ಲಿ ಬಿದ್ದಿದ್ದನು..

ಅವನು ನನ್ನ ಹಿಂದೆಯಿಂದ ಬರುತ್ತಾ ಬೇಕೋ ಬೇಡೋವೊ ಹಾಗೆ ಬಂದ ಕೊನೆಯಲ್ಲಿ ಬಂದನು ನಾನು ಅಮ್ಮ ಅಪ್ಪಾಜಿ ಯಾಕೆ ಬರಲು ಹೇಳಿದ್ದು ಎಂದು ಕೇಳಿದಾಗ ಸಣ್ಣನ ಮುಖದರ್ಶನ ಕಂಡು ಎಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗು ಬಂದಿತ್ತು. 


ಅತ್ತಿಗೆ ಏನು ಅಯಿತು ಎಂದು ನೋಡಿದಾಗ, ಅಯ್ಯೋ ದೇವರೇ ನಿನ್ನ ಅವ್ಯವಸ್ಥೆಗೆ ಯಾರು ಕಾರಣ ಎಂದು ಕೇಳಿದಾಗ ಅವರೇ ಎಂದು ನನ್ನ ಕೈಮಾಡಿ ತೋರಿಸಿದರು. ಅವಾಗ ನನಗೆ ಎಷ್ಟು ಬೈದರು. ಆಮೇಲೆ ನಾಳೆ ಹುಡುಗಿಯ ಮನೆಗೆ ನೀನು ಹೋಗಿ ಬಾ ಎಂದು ಹೇಳಿದಾಗ….. 


ಸಣ್ಣ ನಾನು ಹೋಗೋದಾ ಎಂದು ಕೇಳಿದಾಗ ಎಲ್ಲರೂ ಇದೇ ವೇಷದಲ್ಲಿ ಹೋಗ್ಬೇಡ ಎಂದು ಎಲ್ಲರೂ ಮತ್ತೇ ತಮಾಷೆ ಮಾಡತೊಡಗಿದರು. 


ನಾನು ಹೋ ಎಂದು ಹೊಳೆಯಲ್ಲಿ ಜಳಕ ಮಾಡಿ ಮನೆಗೆ ಬಂದು ತನ್ನ ಹುಡುಗಿಯ ಸುಂದರಿಗೆ ಯಾವ ಉಡುಪು ಹಾಕುವುದು ಎಂದು ನೋಡಿ ನೋಡಿ ನಾನು ಎಲ್ಲಿ ಇದೇನೆ ಅಂಥನೇ ಗೊತ್ತಿಲ್ಲ.


ಅವಾಗ ನನ್ನ ಮುದ್ದಿನ ಅತ್ತಿಗೆ ಎಲ್ಲಿ ಇದ್ದಿಯಾ ಎಂದು ಹುಡುಕುತ್ತಾ ಬರುವಾಗ ನಾನು ಎಲ್ಲಿ ಇದೇನೆ ಎಂದು ಏಳುವಾಗ ನನ್ನ ಮುಖನೋಡಿ ಒಮ್ಮೆ ಅವರು ಅಯ್ಯೋ ಭೂತಾ ಭೂತಾ ಎಂದು ಕೂಗುವಾಗ ನಾನು ಅವರ ಬಳಿ ಹೋದೆ..


ನಾನು ಅತ್ತಿಗೆ ಅಮ್ಮ ಎಂದು ಹೇಳಿದಾಗ ಏನೋ ನಿನ್ನ ಅವಸ್ತೆ ಎಂದು ಹೇಳಿದಾಗ ಯಾವ ಉಡುಪು ಹಾಕುವುದು ಎಂದು ಯೋಚನೆ ಮಾಡಿ ಒಂದು ಎಲ್ಲವನ್ನು ಹಾಕುವಾಗ ಒಂದು ಈ ರೀತಿ ಮಾಡಿ ಬಿಟ್ಟಿದೆ ತೆಗೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದಾಗ ನನ್ನ ತಂಗಿಯ ಗತಿಯೇನು ಎಂದು ತಮಾಷೆ ಮಾಡಿದ್ರು.



ಅತ್ತಿಗೆ ಅಮ್ಮ ಹೋಗೋ ಎಂದು ಹೇಳಿ ಓಡಿದಾಗ ಅವನು ಅದೇ ವೇಷದಲ್ಲಿ ಹೊರಗಡೆ ಬಂದಾಗ ಸಣ್ಣ ಮಧ್ಯ ಬಂದು ಆತನಿಗೆ ಆತನ ಲುಂಗಿ ಕೆಳಗಡೆ ಬಿದ್ದು ಎಲ್ಲರೂ ಏನೋ ನಿನ್ನ ಅವಸ್ತೆ ಎಂದು ಹೇಳಿದರು. ಅಯ್ಯೋ ನನ್ನ ಒಂದು ಬಟ್ಟೆ ಇದೇ ಅಲ್ವಾ ಎಂದು ಹೇಳಿದಾಗ ಅತ್ತಿಗೆ ಲಂಗೋಟಿ ಇದೆ ಅಲ್ವಾ ಎಂದು ಹೇಳಿದಾಗ ಎಲ್ಲರಿಗೂ ನಕ್ಕು ನಕ್ಕು ಸಾಕು ಎನಿಸಿತು.




Rate this content
Log in

Similar kannada story from Comedy