Roopa nagaraj

Comedy Romance Others

3  

Roopa nagaraj

Comedy Romance Others

ಒಂದ್ ಪಾನಿಪುರಿ ಕಥೆ

ಒಂದ್ ಪಾನಿಪುರಿ ಕಥೆ

3 mins
576


ಸಮಯ 6:30 ಆದರೂ ಆಫೀಸ್ ನಿಂದ ಆಚೆ ಬಾರದ ತನ್ನವಳ ಕಂಡು ಒಂದೇ ಸಮ ಫೋನ್ ಮಾಡುತ್ತಲೇ ಇದ್ದ ಇವಳೋ ಮೊಬೈಲ್ ಸೈಲೆಂಟ್ ಮಾಡಿ ತನ್ನ ಕಾರ್ಯದಲ್ಲಿ ತೊಡಗಿದ್ದಳು ..... ಇವಳ ಸಹೋದ್ಯೋಗಿಗಳು ಕೂಡ ಮನೆಗೆ ಹೊರಡುವ ತಯಾರಿ ನಡೆಸುತ್ತಿದ್ದರು ಲೇ ದರ್ಶಿ ನೀನಿನ್ನೂ ಹೊರಡಲ್ವ ಮಳೆ ಬೇರೆ ಬರ್ತಿದೆ.

ಈ ಟೈಮ್ ನಲ್ಲಿ ನೀನು ಆಫೀಸ್ ನಲ್ಲಿದ್ಯಾ ಅಂದ್ರೆ ನಂಬೋಕೆ ಆಗ್ತಿಲ್ಲ.

ಇಲ್ಲ ಕಣೇ ಒಂದೆರಡು ಫೈಲಿಂಗ್ಸ್ ಇದೇ ಮುಗಿಸಿ ಹೊರಡ್ತೀನಿ ನೀವು ಹೊರಡಿ.

ಓಕೆ ಮ ಬೈ.

ಟೈಮ್ ನೋಡಿದಳು ಆಗಲೇ ಲೇಟ್ ಆದ್ದರಿಂದ ಒಮ್ಮೆ ಮೊಬೈಲ್ ಕಡೇ ಕಣ್ಣು ಹಾಯಿಸಿದವಳಿಗೆ ತನ್ನವನ ಇಪ್ಪತ್ತೈದು ಮಿಸ್ಕಾಲ್ ನೋಡಿ ಮತ್ತೆ ರಿಟರ್ನ್ ಕಾಲ್ ಮಾಡಬೇಕು ಎಂದವಳು ಬೆಳಗ್ಗೆನೇ ಇಬ್ಬರು ಜಗಳವಾಡಿದ್ದು ನೆನಪಾಗಿ ಚಂದದ ಮುಗುಳ್ನಗು ಬೀರಿ ಹೋ ಹೋ ಸಾಹೇಬ್ರು ಇದಕ್ಕೇನೋ ಬಂದಿರೋದು ಮಾಡ್ತೀನಿ ಅಂತೇಳಿ ಮತ್ತೆ ಇನ್ನು ಅರ್ಧಗಂಟೆ ಎಕ್ಸ್ಟ್ರಾ ಕೆಲಸ ಮಾಡಿದವಳು ಇನ್ನು ತಡೆಯದೆ ಹೊರಟಳು. ಇವಳು ಡೈಲಿ ಬಸ್ ನಲ್ಲಿ ಹೋಗ್ತಿದ್ದ ಕಾರಣ ಬಸ್ಸ್ಟಾಪ್ ಕಡೆಗೆ ಹೆಜ್ಜೆ ಹಾಕುತ್ತಿರುವವಳ ಮುಂದೆ ತನ್ನ ಗಾಡಿ ತಂದು ನಿಲ್ಲಿಸಿದ.

i am sorry ಕಣೇ ಕೋಪದಲ್ಲಿ ಏನೋ ಬೈದೆ,, ಪ್ಲೀಸ್, ಬಾರೇ ಮಳೆ ಬೇರೆ ಜೋರಾಗಿ ಬರ್ತಿದೆ ಹೋಗೋಣ ಬಾ ಮನೆಗೆ.


ಮಿಸ್ಟರ್ ಕೀರ್ತನ್ ನಂಗು ಕಾಣ್ತಿದೆ ಮಳೆ ಬರ್ತಿರೋದು ಸೋ ನಂಗೆ ಗೊತ್ತು ಮನೆಗೆ ಹೋಗೋದು ಕೂಡ ನಿಮ್ಮ ಕೆಲ್ಸ ನೀವು ನೋಡ್ಕೊಳಿ.

ದಿಸ್ ಈಸ್ ಟೂ ಮಚ್ ಕಣೇ ಪ್ಲೀಸ್ ಅಷ್ಟೊತ್ತಿಂದ ಕಾಯ್ತಾ ಇದ್ದೀನಲ್ಲ ಕ್ಷಮಿಸಿಬಿಡಮ್ಮ.


ನಾನೇನು ಹೇಳ್ಳಿಲ್ಲ ನಿಂಗೆ ವೇಟ್ ಮಾಡು ಅಂತ ಇವ್ಳು ನಡ್ಕೊಂಡ್ ಹೋಗ್ತಾನೆ ಇದ್ರೆ ಇವ್ನು ಗಾಡಿಯಲ್ಲಿ ಅವ್ಳ್ ಹಿಂದೆ ಹಿಂದೆನೇ ಫಾಲೋ ಮಾಡ್ಕೊಂಡ್ ಹೋಗ್ತಾ ಇರ್ತಾನೆ.

ನೋಡು ನಮ್ ಆಫೀಸ್ ನವರೆಲ್ಲ ನಿನ್ನ ನೋಡಿಲ್ಲ ಸುಮ್ನೆ ನೀನ್ ಈ ತರ ಬಂದ್ರೆ ಗಾಸಿಪ್ ಕ್ರಿಯೇಟ್ ಮಾಡ್ತಾರೆ ನಡೆ ಇಲ್ಲಿಂದ. ಅವಳದು ಅದೇ ಹುಸಿಕೋಪ.

ನೋಡು ದರ್ಶಿ ನಾನ್ ಇವತ್ತು ಆಫೀಸ್ ಯಿಂದ ಬೇಗ ಬೇರೆ ಬಂದಿದ್ದೀನಿ..... ನಾನ್ ಅನ್ಕೊಂಡೆ ನೈನ್ತ್ ಬ್ಲಾಕ್ ಹೋಗಿ ಬಂಗಾರ್ ಪೇಟೆ ಪಾನಿಪುರಿ ತಿನ್ನೋಣ ಹಾಗೆ ಫಿಫ್ತ್ ಬ್ಲಾಕ್ ನಲ್ಲಿ ಒಂದ್ ಮಸಾಲಾ ದೋಸೆ ತಿಂದ್ಕೊಂಡು ಹೋಗೋಣ ನೈಟ್ ಅಡ್ಗೆ ಮಾಡ್ಸೋದು ಯಾಕೆ ಅಂತ ನೀನೆ ಹೀಗೆ ಹಠ ಮಾಡಿದ್ರೆ ನಂದೇನು ಅಭ್ಯಂತರ ಇಲ್ಲ ಮಳೆ ಬೇರೆ ಬರ್ತಿದೆ ಸರಿ ನಾನಿನ್ನು ಬರ್ತೀನಿ. ಬೈ. ಅನ್ನೋ ಅಷ್ಟರಲ್ಲೇ ಅವಳು ಬಂದು ಗಾಡಿ ಮೇಲೆ ಕೂತಿದ್ದಳು. ಮುಗುಳ್ನಕ್ಕವನು ನಮ್ಗೆ ಗೊತ್ತಿಲ್ವ ಹುಡ್ಗಿರನ್ನ ಹೇಗೆ ಶಾಂತ ಗೊಳಿಸಬೇಕೆಂದು. .

ದರ್ಶಿ :ಫೋನ್ ನಲ್ಲಿ ತನ್ನ ಗೆಳತಿಗೆ ವರದಿ ಒಪ್ಪಿಸಿದಳು. ನಾನು ನನ್ ಗಂಡ ಬೆಳಗ್ಗೆ ಜಗಳ ಆಡಿದ್ದಾಗಿಂದ ಹಿಡಿದು ಇವಾಗ ಅವ್ರೆ ಬಂದು ರಾಜಿ ಆಗಿ ಪಾನಿಪುರಿ ಕೊಡುಸ್ತಿದ್ದಾರೆ ಜೊತೆಗೆ ಇವತ್ತು ಹೊರಗಡೆನೇ ಊಟ ಅಂತ.

ಗೆಳತಿ :ಹಾಗಿದ್ರೆ ಡೈಲಿ ಜಗಳ ಆಡು ದರ್ಶಿ ಅವಾಗ ಡೈಲಿ ಪಾನಿಪುರಿ ತಿನ್ನಬಹುದು ಜೊತೆಗೆ ನೈಟ್ ಅಡ್ಗೆ ಮಾಡೋದು ತಪ್ಪತ್ತೆ ಗಂಡನ ಪ್ರೀತಿ ಕೂಡ ಜಾಸ್ತಿ ಆಗತ್ತೇ.

ದರ್ಶಿ :ಯೋಚನೆ ಮಾಡುವಾ ವಿಷ್ಯನೇ ಕಣೇ ಎಂತ ಐಡಿಯಾ. ಸೂಪರ್ ಕಣೇ ನೀನ್ ಥ್ಯಾಂಕ್ಯೂ ಸೋ ಮಚ್ ಬೈ ಸದ್ಯಕ್ಕೆ ನಾನು ಪಾನಿಪುರಿ ಕಾಲಿ ಮಾಡ್ಬೇಕ್.

ಗೆಳತಿ ತನ್ನ ಮನೆಯಲ್ಲಿ ತನ್ನ ಗಂಡನಿಗಾಗಿ ಕಾದು ಕುಳಿತವಳು ಅವ ಬಂದ ತಕ್ಷಣ ಸುಪ್ರಭಾತ ತೆಗೆದಳು.... ನೀವು ಇದ್ದೀರಾ ದೊಡ್ಡ ವೇಸ್ಟ್ ಬಾಡಿ, ನೋಡಿ ಆ ಕೀರ್ತನ್ ಅಣ್ಣನ ಅವ್ರು ನನ್ ಫ್ರೆಂಡ್ ಜೊತೆಗೆ ಜಗಳ ಆಡಿದ್ರು ಅವ್ರೆ ಮುಂಚೆನೇ ರಾಜಿ ಆಗಿ ಇವಾಗ ಪಾನಿಪುರಿ ಕೊಡ್ಸಿ ಅವಳನ್ನ ಸಮಾಧಾನ ಮಾಡ್ತಾರೆ ಆದ್ರೆ ನೀವು ಒಂದ್ ದಿನ ನಾದ್ರೂ ಹೊರಗೆ ಊಟಕ್ಕೆ ಕರ್ಕೊಂಡ್ ಹೋಗಿದ್ದೀರಾ ಅಟ್ಲಿಸ್ಟ್ ಒಂದ್ ಐಸ್ಕ್ರೀಂ ಎಲ್ಲಾ ನನ್ ಕರ್ಮ. ನೋಡಿ ಇವತ್ತು ಹೊರಗೆ ಊಟಕ್ ಹೋಗ್ಬೇಕ್ ನಾನಂತೂ ಅಡ್ಗೆ ಮಾಡಲ್ಲ ಅಂದ್ರೆ ಮಾಡಲ್ಲ.

ಇದೆಂತ ಕರ್ಮ ಬಂತು ಮಿಸ್ಟರ್ ಕೀರ್ತನ್ ಅಂತ ಕೀರ್ತನ್ ಗೆ ಫೋನ್ ಮಾಡಿ ಏನ್ರೀ ಕೀರ್ತನ್ ನೀವು ನಿಮ್ಮ ಹೆಂಡ್ತಿನಾ ಕರ್ಕೊಂಡು ಹೋಗ್ತೀರಾ ಹೊರಗೆ ಕರ್ಕೊಂಡ್ ಹೋಗಿ ಹಾಗೆ ಏನ್ ಬೇಕಾದ್ರು ತಿನ್ನಿ ಆದ್ರೆ ನಿಮ್ಮ ಹೆಂಡ್ತಿಗೆ ಹೇಳಿ ಯಾವ್ದೆ ವಿಷ್ಯಾನ ನನ್ ಹೆಂಡ್ತಿ ಹತ್ರ ಹೇಳ್ಬೇಡಿ ಅಂತ ನೀವೇನೋ ಅಲ್ಲಿ ಎಂಜಾಯ್ ಮಾಡ್ತೀರಾ ಆದ್ರೆ ಇಲ್ಲಿ ಇವ್ಳು ನನ್ ನೆಮ್ಮದಿನೇ ಹಾಳು ಮಾಡ್ತಾಳೆ.

ಕೀರ್ತನ್ : ಸೋರಿ ಮಿಸ್ಟರ್ ನಾನ್ ಇವಾಗ್ಲೆ ಹೇಳ್ತಿನಿ 

ಕೀರ್ತನ್ : ಇಂತ ಮನೆ ಹಾಳ್ ಐಡಿಯಾ ನೀನು ನಿನ್ ಫ್ರೆಂಡ್ ಮಾತಾಡ್ಕೊಳೋದು. ನೋಡ್ ದರ್ಶಿ ನೀನ್ ನಮ್ ಮದ್ಯೆ ನಡೆಯೋ ಯಾವ್ ವಿಷ್ಯನು ಅಲ್ಲಿ ಹೇಳ್ಬೇಡ ಸಂಸಾರದ ಗುಟ್ಟು ನಮ್ಮಲ್ಲೇ ಇರ್ಬೇಕು ಕಣೇ.

ಹೇ ಪಾನಿಪುರಿ ಎಲ್ಲರೂ ತಿಂತಾರೆ ಇದೆಂತ ಗುಟ್ಟು ಹೋಗ್ರಿರಿ. ಅವ್ಳ್ ಕೂಡ ಸ್ಟೇಟಸ್ ನಲ್ಲಿ ನಾನ್ ಬಿರಿಯಾನಿ ಮಾಡಿದೆ, ನನ್ ಗಂಡ ಹೊಸ ಮನೆ ತಗೊಂಡ ಅಂತ ಹಾಕಲ್ವ ಅದಕ್ಕೆ ಅವಳತ್ರ ಇಲ್ಲದ್ದು ಪ್ರೀತಿ ನಮ್ ಹತ್ರ ಅದ್ ಇದೇ, ನಾನ್ ಅದನ್ನೇ ಹೇಳ್ತೀನಿ.


ಈ ಹೆಂಗಸರ ಸಹವಾಸ. ಇದು ಎಲ್ಲರ ಮನೆ ಮನೆ ಕಥೆ. ಇಬ್ರು ಫ್ರೆಂಡ್ಸ್ ಡಿಫರೆಂಟ್ ಡಿಫರೆಂಟ್ ಆಗಿ ಯೋಚಿಸಿ ಮಾತಾಡಿದ್ರೆ ಒಟ್ನಲ್ಲಿ ಗಂಡ್ ಮಕ್ಳ ಪಾಡು ಇದೇ ನೋಡಿ . ಒಬ್ಬರು ದುಡ್ಡಿನಲ್ಲಿ ಸಂತೋಷ ಕಂಡು ಪ್ರೀತಿ ಸಿಗದಿದ್ದರೆ ಗೆಳತಿಯಂತೆ ಆಡ್ತಾರೆ, ಅತಿಯಾಗಿ ಪ್ರೀತಿಸುವ ಗಂಡ ಸಿಕ್ಕು ದುಡ್ಡಿಲ್ಲ ಅಂದ್ರೆ ಎಲ್ರತ್ರನು ನನ್ ಗಂಡ ಹಾಗೆ ಹೀಗೆ ಅಂತಾರೆ. ಅವಾಗ ಇನ್ನೊಂದ್ ಮನೆಯಲ್ಲಿ ಜಗಳ ಅಂತೂ ಖಂಡಿತ. ಜಲಸ್..ಇನ್ನು ಇದೇ ಆದ್ರೆ ಜಾಸ್ತಿ ಬೇಡ.

ಥ್ಯಾಂಕ್ಯೂ ಸೋ ಮಚ್



Rate this content
Log in

Similar kannada story from Comedy