ಸುಖದ ಸ್ವರ್ಗ
ಸುಖದ ಸ್ವರ್ಗ


ಒಂದು ಸಾರಿ ಒಬ್ಬ ವೃದ್ಧರು ಮರಣ ಹೊಂದಿ ಸ್ವರ್ಗಕ್ಕೆ ಹೋದರು. ಅಲ್ಲಿ ದೊಡ್ಡ ಹೋಟೆಲ್. ಭೂಮಿ ಮೇಲೆ ಇವರು ಇಂತಹ ವೈಭವದ ಹೋಟೆಲ್ ನೋಡಿಯೇ ಇರಲಿಲ್ಲ . ದ್ವಾರದಲ್ಲೇ
ಇಬ್ಬರು ಇವರನ್ನ ಸ್ವಾಗತಿಸಿ ಭೋಜನ ಗೃಹಕ್ಕೆ ಕರೆದು ಕೊಂಡು ಹೋದರು.ಅಲ್ಲಿ ನೋಡಿದರೆ ಎಲ್ಲ ಬಗೆಯ ಸಿಹಿ ತಿಂಡಿಗಳು ಇವರಿಗೆ ಬಾಲ್ಯದಲ್ಲಿ ಇಷ್ಪಪಟ್ಟರೂ ಸಿಗದೆ ಇದ್ದ ಹಾಗೂ ಬೇಕಾದಷ್ಟುಇಷ್ಟ ಪಟ್ಟು ತಿಂದಿದ್ದರೂ ಅಮತ್ತೆ ನೋಡಿಯೇ ಇರದ ಹಲವಾರು ಸಿಹಿ ತಿಂಡಿಗಳು ಘಮ ಘಮ ಪರಿಮಳ ಮೂಗಿಗೆ ಬಡಿದು ಹುಚ್ಚು ಹಿಡಿಸಿತು. ಆದರೆ ತಕ್ಷಣ ನಿರಾಸೆ. ಅಲ್ಲಿದ್ದವರಿಗೆಹೇಳಿದರು ನನಗೆ ಸಕ್ಕರೆ ಖಾಯಿಲೆ ಇದೆ ನಾನು ತಿನ್ನುವಂತಿಲ್ಲ ಏನು ಮಾಡೋದು. ಇದು ಭೂಲೋಕ ಅಲ್ಲ ಇಲ್ಲಿ ಏನು ಬೇಕಾದ್ರೂ ತಿನ್ನಿ ಯೋಚನೆ ಬಿಡಿ. ಒನ್ ಅಲ್ಲಿಂದಲೇ ಹೆಂಡತಿಗೆ ಕೂಗಿ ಹೇಳಿದರು , ಏ ನಾನು ಹತ್ತು ವರ್ಷ ಮೊದಲೇ ಬರಬೇಕಿತ್ತು ಕಣೇ . ತಪ್ಪು ಮಾಡಿಬಿಟ್ಟೆ.ನೀನು ಏನು ತಿನ್ನಕ್ಕು ನನ್ನ ಬಿಡ್ತಾನೆ ಇರ್ಲಿಲ್ಲ.ಇಲ್ಲಿ ಏನು ಬೇಕಾದ್ರೂ ಎಷ್ಟು ಬೇಕಾದ್ರೂ ಸಿಹಿ ತಿನ್ನಬಹುದು ಗೊತ್ತಾ! ನಿನಗೇನು ಈ ತೊಂದರೆ ಇಲ್ಲ ಹತ್ತು ವರ್ಷ ಅಲ್ಲೇ ಇರು. ಇಲ್ಲಿ ನಾನು ಹಾಯಾಗಿ ಇದೀನಿ.