murali nath

Comedy Others

4  

murali nath

Comedy Others

ಅತಿಯಾದ ಶಿಸ್ತು

ಅತಿಯಾದ ಶಿಸ್ತು

3 mins
88ಒಂದು ಮನೆ. ಇಲ್ಲಿ ಅತಿಯಾದ ಶಿಸ್ತು ಪಾಲಿಸುವ ಗಂಡ. ಅವನಿಗೆ ಹೆದರಿ ನಡೆಯುವ ಹೆಂಡತಿ ಇಬ್ಬರು ಮಾತ್ರ ಇದ್ದಾರೆ. ಗಂಡ ಒಂದು ರೀತಿ ಮಿಲಿಟರಿ ಅಧಿಕಾರಿಯಂತೆ ಎಲ್ಲದರಲ್ಲೂ ಶಿಸ್ತು ಪಾಲಿಸುವ ಮನುಷ್ಯ. ಹೆಂಡತಿಗೆ ಏನಿದು ಮನೆಯನ್ನೆ ಮಿಲಿಟರಿ ಕ್ಯಾಂಪ್ ತರಹೆ ಮಾಡಿದ್ದಾರಲ್ಲ ಅಂತ ಹೇಳಿಕೊಳ್ಳಲಾಗದ ಚಿಂತೆ. ಮಾತೂ ಅಷ್ಟೇ ಎಷ್ಟು ಬೇಕೋ ಅಷ್ಟೇ. ಒಂದು ವಾಕ್ಯ ಸಹಾ ಹೆಚ್ಚು ಮಾತನಾಡಬಾರದು ಅನ್ನೋ ಪ್ರವೃತ್ತಿ ಗಂಡ ಅನ್ನೋ ಈ ಪ್ರಾಣಿಯದು . ಬೆಳಗ್ಗೆ ಐದಕ್ಕೆ ಎದ್ದರೆ ಟ್ರ್ಯಾಕ್ ಸೂಟ್ ಶೂಸ್ ಹಾಕ್ಕೊಂಡು walk ಹೊರಡಕ್ಕೆ ಮೊದಲು ಹೆಂಡತಿ ಬಿಸಿನೀರು ಕೈಯ್ಯಲ್ಲಿ ಹಿಡಿದು ನಿಂತಿರಬೇಕು. ನೀರು ಕುಡಿದ ಮೇಲೆ ಮಾರ್ನಿಂಗ್ ವಾಕ್ . ಹೋಗಿಬರ್ತಿನಿ ಬಾಗಿಲು ಹಾಕ್ಕೊ ಅಂತಾನೂ ಹೇಳದ ಭೂಪ. ಕೇಳಿದರೆ ದಿನ ಎಲ್ಲಿಗೆ ಹೋಗ್ತೀನಿ ಅಂತ ಗೊತ್ತಲ್ಲ ಬಾಗಿಲು ಹಾಕೊಳ್ಬೇಕು ಅಂತ ದಿನಾ ಹೇಳಕ್ಕೆ ಆಗತ್ತಾ ಅಂತ ಒಂದು ದಿನ ಗಂಡ ಹೇಳಿದಾಗಿನಿಂದ ಕೇಳೋದು ಬಿಟ್ಟಾಯ್ತು ಪಾಪ. ತಲೆ ನೋವಿರಲಿ ಹೊಟ್ಟೆ ನೋವಿರಲಿ ತಪ್ಪದೆ ಗಂಡನ ಶಿಸ್ತಿಗೆ ಕುಂದು ಬರದ ಹಾಗೆ ಪ್ರತಿದಿನ ಹೆದರಿ ನಡೆದುಕೊಳ್ಳುತ್ತಿದ್ದಳು. ವಾಕ್ ಮುಗಿಸಿ ಬಂದರೆ ಮಾತನಾಡದೆ ಸೀದಾ ಮಹಡಿ ಮೇಲೆ ಹೋಗಿ ಶೂಸ್ ಬಿಚ್ಚಿ , ಶಾರ್ಟ್ಸ್ ಬನಿಯನ್ ಹಾಕ್ಕೊಂಡು ಎರಡು ಕಾಲನ್ನೂ ಟೇಬಲ್ ಮೇಲಿಟ್ಟು ಕಿಟಕಿ ಕಡೆ ಸುಮಾರು ಅರ್ಧ ಗಂಟೆ ನೋಡೋ ಹವ್ಯಾಸ. ಅಲ್ಲಿ ಹೊರಗೆ ಮಕ್ಕಳು ಆಟ ಆಡೋದು ನೋಡಿ ಕೊಂಡಿರೋ ವಿಚಿತ್ರ ಹವ್ಯಾಸ . ಗಡಿಯಾರ ಎಂಟು ಹೊಡೆದರೆ ಟೇಬಲ್ ಮೇಲೆ ಬಿಸಿ ಬಿಸಿ ಕಾಫಿ ಇರಬೇಕು. ಊಟಕ್ಕೂ ಅಷ್ಟೇ ಟೈಂ ಟೇಬಲ್ ಪ್ರಕಾರ ತಿಂಡಿ ಊಟ. ಸೋಮವಾರದಿಂದ ಭಾನುವಾರದ ವರೆಗೆ ಮೊದಲೇ ನಿರ್ಧಾರ ಮಾಡಿದಂತೆ ಆಗಬೇಕು. ಹೀಗಿರುವಾಗ ಒಂದು ದಿನ ಈ ಶಿಸ್ತಿನ ಸಿಪಾಯಿ ಬೆಳಗ್ಗೆ ವಾಕ್ ಮುಗಿಸಿ ಬರುವ ಹೊತ್ತಿಗೆ gate ಗೆ ಬೀಗ ಹಾಕಿತ್ತು ಇವನಿಗೆ ಆಶ್ಚರ್ಯ. ಗೇಟ್ ಒಳಗೆ ಕೈ ಇಟ್ಟರೆ ಸಿಗುವ ಹಾಗೆ ಒಂದು ಪತ್ರ ಬರೆದಿಟ್ಟು ಅದರ ಮೇಲೆ ಗಾಳಿಗೆ ಹಾರಿ ಹೋಗದ ಹಾಗೆ ಒಂದು ಪುಟ್ಟಕಲ್ಲು ಇಟ್ಟಿರುವುದು ಕಂಡು ತೆಗೆದು ನೋಡಿದ. ನಾನು ತಕ್ಷಣ ಅಮ್ಮ ನ ಮನೆಗೆ ಹೊರಡಬೇಕಾಗಿ ಬಂತು. ಅವರಿಗೆ ಹುಷಾರಿಲ್ಲವೆಂದು ಹಳ್ಳಿಯಿಂದ ಒಬ್ಬರು ಬಂದು ಈಗ ತಾನೇ ತಿಳಿಸಿದರು. ಮನೆ ಬೀಗದ ಕೈ ಪಕ್ಕದ ಮನೆಯಲ್ಲಿ ಕೊಟ್ಟಿದ್ದೇನೆ . ಎರಡು ಮೂರು ದಿನದಲ್ಲಿ ಬರುತ್ತೇನೆ ಎಂದು ಬರೆದಿತ್ತು. ಎಂದೂ ಹೋಗದವನು ಪಕ್ಕದ ಮನೆಗೆ ಹೋಗಿ ಬೀಗದ ಕೈಯನ್ನು ತೆಗೆದುಕೊಂಡ. ಪ್ರತಿದಿನದಂತೆ ಮಹಡಿ ಮೇಲೆ ಹೋದ ಶೂಸ್ ಬಿಚ್ಚಿ ಶಾರ್ಟ್ಸ್ ಹಾಕ್ಕೊಂಡು ಪೇಪರ್ ಓದಿ ಕಿಟಕಿ ಕಡೆ ನೋಡ್ತಾ ಕೂತ. ಅಂದು ಹೆಚ್ಚು ಮಕ್ಕಳು ಸೇರಿದ್ದರು. ಏನೋ ಗಲಾಟೆ ಮಾಡ್ಕೊಂಡು ಹೊಡೆದಾಡುದತ್ತಿದ್ದರು . ಇವನಿಗೂ ಬೇಜಾರಾಯ್ತು.ಕಿಟಕಿ ಇಂದಲೇ ಎಲ್ಲರನ್ನೂ ಸಮಾಧಾನ ಮಾಡಿದ.ಗಡಿಯಾರ ಎಂಟು ಹೊಡೆಯಿತು ಬಾಗಿಲಕಡೆ ನೋಡಿದ ಹಾಗೆ ಟೇಬಲ್ ಮೇಲೆ ನೋಡಿದ ಕಾಫಿ ಬಂದಿಲ್ಲ .ಕೋಪ ಬಂತು ಆದರೆ ತಕ್ಷಣ ಜ್ಞಾಪಕ ಬಂತು ಓಹ್ ಅವಳಿಲ್ಲ. ಕೆಳಗೆ ಇಳಿದು ಬಂದ ಕಾಫಿ ಮಾಡಕ್ಕೆ ಹೋದರೆ ಪುಡಿ , ಸಕ್ಕರೆ ಎಲ್ಲಿದೆ ಅಂತ ಗೊತ್ತಿಲ್ಲ. ಬೇಡ ಹೋಟೆಲಿಗೆ ಹೋಗಿ ಕುಡಿದರೆ ಆಯ್ತು ಅಂದು ಕೊಂಡ. ಸ್ನಾನ ಮಾಡೋಕ್ಕೆ ಹೋದರೆ ಗೀಸರ್ ಸ್ವಿಚ್ ಹಾಕಿಲ್ಲ ತಣ್ಣೀರು ಸ್ನಾನ ಅಭ್ಯಾಸ ಇಲ್ಲ. ಆದರೆ ಇಂದು ಮಾಡಬೇಕಾಯಿತು. ಬಟ್ಟೆ ಪ್ರತಿದಿನ ಟೇಬಲ್ ಮೇಲೆ ಇಸ್ತ್ರಿ ಮಾಡಿ ರೆಡಿ ಇರ್ತಿತ್ತು . ಇವತ್ತು ಇಲ್ಲ . ಬೈಕೊಂಡು ಯಾವುದೋ ಸಿಕ್ಕ ಬಟ್ಟೆ ಹಾಕ್ಕೊಂಡು, ಗಡಿಯಾರ ನೋಡಿದರೆ ಆಫೀಸಿಗೆ ಹೊರಡಲು ಅರ್ಧಗಂಟೆ late ಆಗಿದೆ. ಎಂದೂ late ಆಗಿ ಹೋದವನಲ್ಲ. ಅದಕ್ಕೆ ರಜಾ ಹಾಕಿ ಬಿಡೋಣ ಅಂತ ಹೋಗಲಿಲ್ಲ. ಹೋಟೆಲ್ ಗೆ ಹೋಗಿ ತಿಂಡಿ ತಿನ್ನೋಣ ಅಂತ ಹೊರಟ. ಎಂದೂ ಬಾಗಿಲು ಹಾಕಿಕೊಂಡು ಹೋಗಿದ್ದ ಅಭ್ಯಾಸ ಇಲ್ಲ . ಅವಳೇ ಹಾಕ್ಕೊಳ್ತಾಳೆ ಅನ್ನೋ ಅದೇ ಧೋರಣೆ ಇಂದ ಹೊರಬಂದ. ಹೋಟೆಲ್ ನಲ್ಲಿ ಎದುರಿಗೆ ಒಂದು ಹೆಂಗಸು ತಿಂಡಿ ತಿನ್ನುತ್ತಾ ಇರೋದು ನೋಡಿದಾಗ ತಕ್ಷಣ ಜ್ಞಾಪಕ ಬಂತು ಹೆಂಡತಿ ಊರಿಗೆ ಹೋಗಿದಾಳೆ ಮನೆ ಬೀಗ ಹಾಕದೇ ಬಂದಿದ್ದೇನೆ ಅಂತ . ಮನೆ ಕಡೆ ಓಡಿದ. ಬಂದು ನೋಡಿದರೆ gate ಗೆ ಯಾರೋ ಬೇರೆ ಬೀಗ ಹಾಕಿದ್ದಾರೆ.


ಅರ್ಥ ಆಗಲಿಲ್ಲ ಪಕ್ಕದ ಮನೆಗೆ ಹೋದ ಅವರ ಮನೇನೂ ಬೀಗ.ಏನು ಮಾಡಬೇಕೋ ಗೊತ್ತಾಗಲಿಲ್ಲ. ತಲೆ ಬಿಸಿ ಆಯ್ತು. ಅಷ್ಟರಲ್ಲಿ ಅಲ್ಲಿ ಆಟ ಆಡ್ತಾ ಇದ್ದ ಒಬ್ಬ ಹುಡುಗ ಬಂದು uncle ನೀವು ಮನೆ ಗೆ ಬೀಗ ಹಾಕೋದು ಮರೆತು ಆಫೀಸ್ ಗೆ ಹೋಗಿದಿರಿ ಆಂಟಿ ಬೇರೆ ಇರಲ್ಲಿಲ್ಲ ಅಂತ ಪಕ್ಕದ ಮನೆ ಆಂಟಿ ಬಿಗಾಹಕ್ಕೊಂದು ಹೋದ್ರು ನೀವು ಹೇಗಿದ್ದರೂ ಸಂಜೆ ಬರೋದು ಅಷ್ಟು ಹೊತ್ತಿಗೆ ಬಂದರೆ ಆಯ್ತು ಅಂತ ಅವರ ಅಮ್ಮನ ಮನೆಗೆ ಹೋಗಿದ್ದಾರೆ.ನೀವು ಯಾಕೆ ಇಷ್ಟು ಬೇಗ ಬಂದ್ರಿ ಅಂದ ಹುಡುಗ. ಅವನಿಗೆ ಏನು ಉತ್ತರ ಕೊಡದೆ ಅಲ್ಲಿಂದ ಹೊರಟ. ಹೋಟೆಲಿಗೆ ಬಂದು ತಿಂಡಿ ತಿಂದ. ಎಲ್ಲಿಗೆ ಹೋಗೋದು ಗೊತ್ತಾಗ್ತಿಲ್ಲ. ಸಂಜೆ ವರೆಗೂ ಎಲ್ಲಿ ಕಾಲ ಕಳೆಯೋದು ಗೊತ್ತಾಗ್ತಿಲ್ಲ. ಕೊನೆಗೆ ಆಫೀಸ್ ಗೆ ಹೋಗೋಣ ಅಂತ ಹೊರಟ . ಗೇಟ್ ಗೆ ಬಂದಾಗ ಗೊತ್ತಾಯ್ತು ID ಕಾರ್ಡ್ ಇಲ್ಲದೆ ಒಳಗೆ ಹೋಗಕ್ಕೆ ಆಗಲ್ಲ ಅಂತ. ವಾಪಸ್ ಬಂದ . ಒಂದು ಪಾರ್ಕ್ ನಲ್ಲಿ ಕುಳಿತ. ಸ್ವಲ್ಪಹೊತ್ತಿಗೆ ಸಾರ್ ಟೈಂ ಆಗಿದೆ ಪಾರ್ಕ್ ಕ್ಲೋಸಿಂಗ್ ಟೈಂ ಅಂದ ಅಲ್ಲಿನ ವಾಚ್ ಮ್ಯಾನ್. ಎದ್ದು ಹೊರಟ.ಮತ್ತೆ ಹೋಟೆಲಿಗೆ ಬಂದ ಇನ್ನೊಂದು ಕಾಫಿ ಕುಡಿದ . ಇಷ್ಟು ವರ್ಷ ಪಾಲಿಸಿಕೊಂಡು ಬಂದ ಶಿಸ್ತು ಇಂದು ಗಾಳಿಗೆ ತೂರಿ ಹೋಗಿತ್ತು . ಹೆಂಡತಿ ಮೇಲೆ ಸಿಟ್ಟು ಹೆಚ್ಚಾಯ್ತು. ಅಲ್ಲಿ ಇಲ್ಲಿ ಹುಚ್ಚನಂತೆ ಸುತ್ತಾಡಿ ಗಡಿಯಾರ ನೋಡಿದಾಗ ಐದು ಗಂಟೆ. ಮನೆಕಡೆ ಬಂದ.ಪಕ್ಕದ ಮನೆಯವರು ಬಾಗಿಲಲ್ಲೇ ನಿಂತಿದ್ದರು. ಸಾರ್ ಬೀಗಾನೆ ಹಾಕದೆ ಆಫೀಸ್ ಗೆ ಹೋಗಿದ್ದೀರಿ ಅಕಸ್ಮಾತ್ ನಾನು ನೋಡಿ ಬೀಗ ಹಾಕಿದೆ, ಅಂತ ಹೇಳಿ ಬೀಗ ತೆಗೆದರು.ಎರಡು ದಿನ ಹೋಟೆಲ್ ಊಟ ತಿಂಡಿ ಮಾಡಿ ಹೇಗೋ ಕಾಲ ಕಳೆದ .ಹೆಂಡತಿ ಬಂದಳು.ಬೇರೆ ಯಾರೇ ಆಗಿದ್ದರೂ ನೀನಿಲ್ಲದೆ ಬಹಳ ಕಷ್ಟ ನನ್ನಿಂದ ಒಬ್ಬನೇ ಇರಕ್ಕೆ ಸಾಧ್ಯ ಇಲ್ಲ .ಬಿಟ್ಟು ಹೋಗಬೇಡ ಅಂತ ಹೇಳುತ್ತಿದ್ದರು. ಆದರೆ ಈ ಭೂಪ ಏನೂ ಮಾತನಾಡದೆ ಮತ್ತೆ ಅದೇ ರೀತಿ ಮಹಡಿ ಮೇಲೆ ಹೋದ ಶೂಸ್, ಟ್ರಾಕ್ ಪ್ಯಾಂಟ್, ಟಿ ಶರ್ಟ್ ಹಾಕ್ಕೊಂಡ ಕೆಳಗೆ ಬಂದು ಬಿಸಿ ನೀರಿಗಾಗಿ ಕೈ ಚಾಚಿ ಕುಡಿದು ಎಂದಿನಂತೆ ಹೇಳದೆ walk ಹೊರಟ. ಪಾಪ ಏನೂ ಗೊತ್ತಿಲ್ಲದ ಹೆಂಡತಿ ಬಾಗಿಲು ಹಾಕ್ಕೊಂಡು ಒಳಗೆ ಹೋದಳು .Rate this content
Log in

Similar kannada story from Comedy