STORYMIRROR

murali nath

Comedy Fantasy Others

4  

murali nath

Comedy Fantasy Others

ವಿಸ್ಮಯ ಕನ್ನಡಕ

ವಿಸ್ಮಯ ಕನ್ನಡಕ

2 mins
59



ಒಂದು ಊರಲ್ಲಿ ಪ್ರತಿ ಶನಿವಾರ ಸಂತೆ . ಅಲ್ಲಿ ಎಲ್ಲಾ ರೀತಿ ವಸ್ತುಗಳು ಅಂದು ಬಿಕರಿಯಾಗುತ್ತೆ.ವ್ಯಾಪಾರಿಗಳು ತಮ್ಮ ಚಾಣಾಕ್ಷತನ ಉಪಯೋಗಿಸಿ ಮಾರಿ ಬಿಡಬಹುದೆಂದು ಎಲ್ಲರಿಗೂ ತಿಳಿದಿದೆ. ಹೀಗೆ ಒಂದು ದಿನ ಪಕ್ಕದ ಹಳ್ಳಿಯ ಪಟೇಲ್ ರಾಮಣ್ಣ ಸಂತೆಗೆ ಬಂದು ಹೀಗೆ ನೋಡುತ್ತಿದ್ದಾಗ ಒಬ್ಬ ಹಳೆಯ ಕನ್ನಡಕಗಳನ್ನು ಮಾರುತ್ತಿದ್ದ . ಒಂದೊಂದೇ ಕನ್ನಡಕ ಹಾಕಿಕೊಂಡು ದೂರದ್ದು ಹತ್ತಿರದ್ದು ವಸ್ತುಗಳನ್ನ ನೋಡಿ ಪಕ್ಕಕ್ಕೆ ಇಡುತ್ತಿದ್ದ. ಹೀಗೆ ನೋಡುವಾಗ ಒಂದು ಕನ್ನಡಕ ಹಾಕಿಕೊಂಡ . ತಕ್ಷಣ ಅಂಗಡಿಯವನು ಇವನನ್ನ "ಕಚಡ ಗಿರಾಕಿಗಳು ಬರೀ ನೋಡ್ತಾರೆ ತೋಗೊಳಲ್ಲ ,"ಅಂತ ಮನಸಲ್ಲಿ ಅಂದು ಕೊಂಡದ್ದು ರಾಮಣ್ಣನಿಗೆ ತಿಳಿಯಿತು. ತಕ್ಷಣ ಅಂಗಡಿಯವನನ್ನ ಏಯ್ ಏನು ಹೇಳಿದಿ ಕಚಡಾ ಗಿರಾಕಿ ತೋಗೊಳೊದಿಲ್ಲ ಸುಮ್ಮನೆ ನೋಡ್ತಾರೆ ಅಂತ ಅಲ್ವಾ. ಅಂಗಡಿಯವನಿಗೆ ಆಶ್ಚರ್ಯ . ಇವನಿಗೆ ತಾನು ಮನಸ್ಸಿನಲ್ಲಿ ಅಂದುಕೊಂಡಿದ್ದು ಹೇಗೆ ಗೊತ್ತಾಯ್ತು ಅಂತ. ಇಲ್ಲಪ್ಪ ಬರೋರೆಲ್ಲ ಹೀಗೆ ನೋಡಿ ಹೋದರೆ ವ್ಯಾಪಾರ ಮಾಡೋದು ಹೇಗೆ ಅಂತ ಅಷ್ಟೇ ಅಂದ. ಪಟೇಲರಿಗೆ ಅದಕ್ಕೆ ಕೋಪ ಬರ್ಲಿಲ್ಲ ಆದರೆ ಒಂದು ಕನ್ನಡಕ ಹಾಕಿಕೊಂಡಾಗ ಅವನ ಮನದಲ್ಲಿ ಇದ್ದ ವಿಷಯ ತಿಳಿದದ್ದು ಆಶ್ಚರ್ಯ. ಮತ್ತೆ ಹಾಕಿಕೊಂಡ. ಪಕ್ಕದಲ್ಲಿ ನಿಂತಿದ್ದ ಹಳ್ಳಿಯ ಹೆಂಗಸನ್ನು ನೋಡಿದ "ಈ ಕಂಜೂಸ್ ಪಟೇಲ ಎಷ್ಟು ದುಡ್ಡಿದ್ದರೂ ಗುಜರಿ ಕನ್ನಡಕ ತೋಗೋತಾ ಇದಾನೆ , ಅಂಗಡಿಗೆ ಹೋಗಿ ತೋಗೊಳಕ್ಕೆ ಏನು ರೋಗ" ಅಂತ ಆ ಹೆಂಗಸು ಮನಸಿನಲ್ಲಿ ಅಂದುಕೊಂಡಿದ್ದು ಇವನಿಗೆ ಗೊತ್ತಾಗಿ ಮತ್ತೆ ಆಶ್ಚರ್ಯ. ಕೋಪ ಬರಲಿಲ್ಲ ಬದಲಿಗೆ ಮತ್ತದೇ ಆಶ್ಚರ್ಯ. ಏನೂ ಮಾತಾಡದೆ ಅವನು ಕೇಳಿದಷ್ಟು ಹಣ ಕೊಟ್ಟು ತೆಗೆದುಕೊಂಡ ಮನೆಗೆ ಬಂದ.


ಬಾಗಿಲಲ್ಲಿ ಸೊಸೆ ಪಕ್ಕದ ಮನೆಯ ಹೆಂಗಸಿನ ಹತ್ತಿರ ಮಾತಾಡ್ತಾ ನಿಂತಿದ್ದಳು. ದೂರದಲ್ಲೇ ಕನ್ನಡಕ ತೆಗೆದು ಹಾಕ್ಕೊಂಡ. "ಬಂದಾ ಮುದುಕತಲೆ ತಿಂತಾನೆ . ಸಂತೆಗೆ ಹೋಗಿ ಏನೋ ತರ್ತಾನೆ ಅಂದು ಕೊಂಡಿದ್ದೆ . ಇದೇನು ಕನ್ನಡಕ ತಂದಿದಾನೆ" ಕೋತಿ ತರಾನೇ ಕಾಣ್ತಾ ಇಲ್ವಾ ನೋಡು ಹನುಮಕ್ಕ " ಅಂತ ಅಂದಿದ್ದು ದೂರದಲ್ಲಿದ್ದರೂ ರಾಮಣ್ಣನಿಗೆ ಗೊತ್ತಾಯ್ತು. ಹತ್ತಿರ ಬ

ಂದ ತಕ್ಷಣ ಬನ್ನಿ ಮಾವಯ್ಯ ಚೆನ್ನಾಗಿದೆ ಕನ್ನಡಕ ಎಷ್ಟು ಕೊಟ್ರಿ ನಿಮ್ಮ ಮುಖಕ್ಕೆ ಚೆನ್ನಾಗಿದೆ ಅಂದಳು.ಮರುಮಾತಾಡದೇ ಒಳಗೆ ಹೋದ .ಇವನಿಗೆ ಇಲ್ಲಿಯವರೆಗೂ ಇಲ್ಲದ ಕಷ್ಟ ಈಗ ಶುರು. ಮನೆಯಲ್ಲಿ ಇವನ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಿ ಕೊಳ್ತಾರೆ ಯಾರು ಒಳ್ಳೆಯವರು ಎಲ್ಲಾ ತಿಳಿಯಕ್ಕೆ ಮೊದಮೊದಲು ಕುತೂಹಲವಿತ್ತು. ನಂತರ ಎಲ್ಲರ ಬಗ್ಗೆ ಒಂದು ತರಹೆ  ಕೋಪ ಜಿಗುಪ್ಸೆ ಬಂತು. ಒಬ್ಬರಾದರೂ ಮನಸಾರೆ ತನ್ನನ್ನ ಪ್ರೀತಿಸುವರಿಲ್ಲವೆಂದು ತಿಳಿದು ಬಹಳ ಖೇದವಾಯಿತು.ಹೆಂಡತಿ ಮಕ್ಕಳು ಸಹಾ ಒಂದಲ್ಲ ಒಂದು ಬಾರಿಯಾದರೂ ತನ್ನ ಬಗ್ಗೆ ಎದುರಿಗೆ ಒಂದು ಮನದಲಿ ಮತ್ತೊಂದು ಯೋಚನೆ ಮಾಡುವವರೇ ಎಂದು ತಿಳಿದು ಹೋಯ್ತು. ವಯಸ್ಸಾದಂತೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಇದ್ದು ತಾನು ಅವರಿಗೆಲ್ಲಾ ಭಾರವೆನಿಸಿ ನೊಂದು ಕೊಂಡ. ಒಂದು ದಿನ ಮೊದಲನೇ ಮಗ ನಮ್ಮ ಅಪ್ಪ ಹೋದಮೇಲೆ ಬೆಂಗಳೂರಿನಲ್ಲಿ ಇದ್ದು ಎಲ್ಲರಂತೆ ನಾನೂ ನನ್ನ ಹೆಂಡತಿ ಮಕ್ಕಳು ಮಜವಾಗಿರ ಬಹುದು.ಆದರೆ ಈ ಅಪ್ಪ ಇರೋವರ್ಗೂ ಅದು ಆಗಲ್ಲ .ದಿನಾ ನನ್ನವಳು ಏನಾದ್ರೂ ಮಾಡಿ. ಇಷ್ಟು ದೊಡ್ಡಮನೆ ನನ್ನ ಕೈಲಾಗಲ್ಲ .ಸಿಟಿಗೆ ಹೋಗೋಣ ಅಂತಾನೆ ಇದಾಳೆ . ಹೀಗೆ ಅವನು ಮನದಲ್ಲಿ ಅಂದುಕೊಂಡಾಗ ರಾಮಣ್ಣನಿಗೆ ಸುಮ್ಮನಿರಲು ಆಗಲಿಲ್ಲ.ಮಗನನ್ನ ಕರೆದು ನೆನ್ನೆ ನನ್ನ ಕನಸಲ್ಲಿ ನೀನು ನಿನ್ನ ಸಂಸಾರ ಬೆಂಗಳೂರಲ್ಲಿ ಮನೆ ಮಾಡಿದ ಹಾಗೆ, ನೀನು ಯಾವುದೋ ವ್ಯಾಪಾರ ಮಾಡ್ಕೊಂಡು ಕಾರು ಸ್ಕೂಟರ್ ನಲ್ಲಿ ಜೋರಾಗಿ ಹೋಗ್ತಿದ್ದಾಂಗೆ ಕಂಡೆ ಕಣಪ್ಪ. ಈಗ ಹಂಗೆ ಯಾಕೆ ಮಾಡಬಾರದು ಅಂತ ನನಗೂ ಅನಿಸ್ತಿದೆ. ನಿನ್ನ ಹೆಂಡತಿನ ಕೇಳು. ನಿನ್ನಪಾಲಿಂದು ಹಣ ಜಮೀನ್ ಮಾರಿದ್ದು ಇದ್ಯಲ್ಲ ತೊಗೊಂಡು ಹೋಗು ಅಂದ. ಸೊಸೆ ಇದನ್ನ ಕೇಳಿಸಿಕೊಂಡು ಸೀದಾ ಬಂದು ಮಾವನ ಕಾಲಿಗೆ ನಮಸ್ಕಾರ ಮಾಡಿ ಒಳಗೆ ಹೋದ್ಲು. ಒಂದು ವಾರದಲ್ಲೇ ಮಗ ಸೊಸೆ ಮನೆ ಬಿಟ್ಟು ಹೊರಟು ಹೋದರು.

ಒಂದು ದಿನ ಎಲ್ಲಾ ಈ ಕನ್ನಡಕದ ಕಾರಣ ನನ್ನ ಮನಸ್ಸು ಕೆಟ್ಟಿತು .ಬೇರೆಯವರ ಮನದಲ್ಲಿನ ಮಾತು ತಿಳಿಯುವ ಪ್ರಯತ್ನ ಮಾಡಬಾರದೆಂದು ಜ್ಞಾನೋದಯವಾಗಿ ಮನೆಯ ಹಿಂದಿನ ಹಳೆಯ ಬಾವಿಯಲ್ಲಿ ಎಸೆದು ಬಿಟ್ಟು ನಿರಾಳವಾದ.





Rate this content
Log in

Similar kannada story from Comedy