ಸೋಮಾರಿಗಳು
ಸೋಮಾರಿಗಳು


ಒಂದು ಊರಿನಲ್ಲಿ ನಾಲ್ಕುಜನ ಪ್ರಚಂಡ ಸೋಮಾರಿಗಳಿದ್ದರು. ಅವರಿಗೆ ಪೂರ್ತಿ, ಮುಕ್ಕಾಲು ಅರ್ಧ, ಕಾಲು ಸೋಮಾರಿಗಳು ಅಂತ ಹೆಸರು. ಅವರು ಒಮ್ಮೆ ನಡೆದು ಬರುತ್ತಿದ್ದಾಗ ರಸ್ತೆಯಲ್ಲಿ ಐದು ರೂಪಾಯಿ ನಾಣ್ಯ ಬಿದ್ದಿತ್ತು. ಕಂಡರೂ ಒಬ್ಬರು ಮತ್ತೊಬ್ಬರಿಗೆ ಹೇಳಿದರೆ ಹೊರತು ಯಾರೂ ಬಗ್ಗಿ ತೆಗೆದು ಕೊಳ್ಳಲಿಲ್ಲ. ಸ್ವಲ್ಪ ಮುಂದೆ ಬಂದಾಗ ಒಬ್ಬ ಐದು ರುಪಾಯಿಗೆ ನಾಲ್ಕು ಬಾಳೆ ಹಣ್ಣು ಅಂತ ಮಾರುತ್ತಿದ್ದ. ಆಗ ಎಲ್ಲರೂ ಅಯ್ಯೋ ಆ ಐದು ರೂಪಾಯಿ ಇದ್ದಿದ್ದರೆ ಎಲ್ಲರೂ ಒಂದೊಂದು ಬಾಳೆ ಹಣ್ಣಾದರೂ ತಿನ್ನಬಹುದಿತ್ತಲ್ಲ ಅಂತ ನೊಂದರು. ಅಲ್ಲೇ ಪಕ್ಕದಲ್ಲಿ ಒಂದು ದೇವಾಲಯವಿತ್ತು ಅಲ್ಲಿ ಏನಾದರೂ ಪ್ರಸಾದ ಕೊಟ್ಟರೆ ಅದನ್ನಾದರೂ ತಿನ್ನೋಣ ಅಂತ ಯೋಚಿಸಿ ಬಂದರು. ಆಗತಾನೆ ಬಾಗಿಲು ಹಾಕಿಕೊಂಡು ಪೂಜಾರಿ ಹೊರಬರುತ್ತಿದ್ದರು. ಈ ನಾಲ್ಕು ಜನರನ್ನು ವಿಚಾರಿಸಲು
ಬಹಳ ಹಸಿವು ನಾವು ಬೆಳಗ್ಗೆಯಿಂದ ಏನೂ ತಿಂದಿಲ್ಲ ಅಂದಾಗ ಅವರು ಅಕ್ಕಿ ಬೇಳೆ ಎಣ್ಣೆ ಒಲೆ ಪಾತ್ರೆ ನೀರು ಏನೇನು ಬೇಕೋ ಅದನ್ನೆಲ್ಲಾ ತಂದುಕೊಟ್ಟು,ದಯವಿಟ್ಟು ಏನಾದ್ರೂ ಮಾಡಿಕೊಂಡು ತಿನ್ನಿ ಉಪವಾಸ ಇರಬೇಡಿ ಅಂತ ಹೇಳಿ ಪಕ್ಕದಲ್ಲೇ ಇದ್ದ ಅವರ ಮನೆಗೆ ಹೋದರು.
ಒಲೆ ಹಚ್
ಚಲು ಬೆಂಕಿ ಪೊಟ್ಟಣ ಕೊಟ್ಟಿರಲಿಲ್ಲ. ಅವರ ಮನೆಗೆ ಹೋಗಿ ತರಲು ಒಬ್ಬ ಮತ್ತೊಬ್ಬನಿಗೆ ಹೇಳಿದರೇ ಹೊರೆತು ಯಾರೂ ತರಲು ತಯಾರಿಲ್ಲ. ಆಗ ಒಂದು ತೀರ್ಮಾನಕ್ಕೆ ಬಂದರು. ಬಾಯಿ ಮುಚ್ಚಿಕೊಂಡು ಮಲಗಿ ಕೊಂಡಿದ್ದು ಯಾರು ಮೊದಲು ಮಾತಾಡ್ತಾರೋ ಅವರು ಹೋಗಿ ತರೋದು ಅಂತ. ಏನು ತಿಂದರೋ ಪಾಪ ನೋಡೋಣ ಅಂತ ಪೂಜಾರಿ ಅಲ್ಲಿಗೆ ಬಂದು ನೋಡಿದರೆ ಅಲ್ಲಾಡದೆ ಮಲಗಿದ್ದಾರೆ ಕೂಗಿದರೂ ಇಲ್ಲ ಅಲ್ಲಾಡಿಸಿದರೂ ಇಲ್ಲ. ಭಯ ಆಗಿ ಎಲ್ಲೋ ಹಸಿವೆಗೆ ಸತ್ತು ಹೋಗಿರಬೇಕು ಅಂದುಕೊಂಡು. ಇದು ಇನ್ನೆಲ್ಲಿ ತನ್ನ ತಲೆಗೆ ಬರತ್ತೋ ಅಂತ ಹೆದರಿ ಯಾರಿಗೂ ಹೇಳದೆ ಒಬ್ಬಬ್ಬರನ್ನೇ ಎಳೆದುಕೊಂಡು ಹೋಗಿ ಪಕ್ಕದಲ್ಲಿದ್ದ ಹಳ್ಳಕ್ಕೆ ಹಾಕಿದ ಪೂಜಾರಿ. ಕೊನೆಯವನನ್ನ ಹಳ್ಳಕ್ಕೆ ಹಾಕಿ ಬರುವಾಗ ಕತ್ತಲಾದ್ದರಿಂದ ಒಬ್ಬನ ಕಾಲು ತುಳಿದುಬಿಟ್ಟ. ಆಗ ಜೋರಾಗಿ ಕಿರುಚಿದ. ಉಳಿದ ಮೂವರು ಎದ್ದು ನೀನೇ ಹೋಗಬೇಕು ಅಂತ ಕಿರುಚಿದರು. ಪೂಜಾರಿ ದೆವ್ವಗಳಿರಬೇಂದು ಹೆದರಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ಕಿರುಚಿಕೊಂಡವನು ಪೂಜಾರಿ ಹತ್ತಿರ ಬೆಂಕಿ ಪೊಟ್ಟಣಕ್ಕಾಗಿ ಹುಡುಕಾಡುತಿದ್ದಾಗ ಅವರ ಮನೆಯವರು ಬಂದು ಕಳ್ಳರು ಇರಬೇಕೆಂದುಕೊಂಡು ಕೋಲುಗಳು ತಂದು ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದರು.
ನೀತಿ : ಮಿತಿ ಮೀರಿದ ಸೋಮಾರಿತನದಿಂದ ಜೀವಕ್ಕೆ ಆಪತ್ತು ತಪ್ಪಲ್ಲ.