Red ಫೈಲ್
Red ಫೈಲ್


ಬಹಳ ವರ್ಷಗಳ ಹಿಂದೆ ಒಬ್ಬ ಮಂತ್ರಿಯ ಅಳಿಯ RTO ಕಚೇರಿಗೆ ಬಂದು ಅವರ ಬಸ್ಸುಗಳ ಪರ್ಮಿಟ್ ಬಗ್ಗೆ ಮೇಲಧಿಕಾರಿ ಹತ್ತಿರ ಮಾತನಾಡಿದರು . ಅವರು ಮಂತ್ರಿಗೆ (ಮಾವ) ಫೋನ್ ಮಾಡಿ , ಸಾರ್ ನಿಮ್ಮ ಅಳಿಯ ಬಂದಿದಾರೆ ಇದು ರೆಡ್ ಫೈಲ್ ಅಥವಾ ಗ್ರೀನ್ ಫೈಲ್ ಅಂತ ಗೊತ್ತಾಗ್ಲಿಲ್ಲ. ಅದಕ್ಕೆ ಫೋನ್ ಮಾಡಿದೆ ಅಂದ್ರು.ಅಳಿಯನಿಗೆ ಅಲ್ಲಿಂದಲೇ ಫೋನಿನಲ್ಲಿ ಹೇಳಿದ್ರು ನೀವು ಹೋಗೋವಾಗ ನನಗೆ ಹೇಳದೇ ಹೊರಟು ಹೋದರೆ ಹೇಗೆ ಬನ್ನಿ ಮನೆಗೆ. ನಾಳೆ ನಿಮ್ಮ ಕೆಲಸ ಆಗತ್ತೆ ಅಂತ.ಮಾರನೇ ದಿನ ಅಳಿಯನಿಗೆ ಒಂದು ಕವರ್ ಕೊಟ್ಟು , ನಿಮ್ಮ ಕೆಲಸ ಆಗುತ್ತೆ ಹೇಳಿದೀನಿ ಅಂದರು.
ಬಂದು ಕವರ್ ಕೊಟ್ಟರು ಕೆಲಸ ಆಯ್ತು.ಆದರೆ ಅಳಿಯನಿಗೆ ಕುತೂಹಲ ಏನದು ರೆಡ್ ಗ್ರೀನ್ ಫೈಲ್ ಅಂತ. ಮಾವನ್ನ ಕೇಳಿದ್ರು. ಅದಕ್ಕೆ ಅವರು ಹೇಳಿದರು ರೆಡ್ ಅಂದರೆ ಹಣ ತೊಗೊಂಡು ತಕ್ಷಣ ಮಾಡೋ ಕೆಲಸ . ಗ್ರೀನ್ ಅಂದರೆ ಹಣವಿಲ್ಲದೆ ಒಂದುವಾರದಲ್ಲಿ ಮಾಡೋ ಕೆಲಸ .ಇನ್ನೂ ಒಂದು ಇದೆ ಬ್ರೌನ್ ಫೈಲ್ ಅದು ಹಣ ತೋಗೊಳ್ದೆ ಸುಮ್ಮನೆ ಪೆಂಡಿಂಗ್ ನಲ್ಲಿ ಇಡೋದು.
ಅದಕ್ಕೆ ಕೇಳಿದ್ರು ಹಾಗಾದ್ರೆ ನಂದು. ಕೊಟ್ರಲ್ಲ ಐವತ್ತು ಸಾವಿರ ರೆಡ್ ಫೈಲ್ ಅಂದರು ಅಳಿಯ ಸುಸ್ತೋ ಸುಸ್ತು.