ಫ್ಯಾಮಿಲಿ ಸೀಕ್ರೆಟ್
ಫ್ಯಾಮಿಲಿ ಸೀಕ್ರೆಟ್


ವಯಸ್ಸಾದ ದಂಪತಿಗಳು ನಗುನಗುತ್ತಾ ಪಾರ್ಕನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿದ್ದ ಒಬ್ಬರು ಕೇಳಿದರು. ನಿಮಗೆ ಮದುವೆ ಆಗಿ ಎಷ್ಟು ವರ್ಷವಾಯ್ತು. ಅದಕ್ಕೆ ಅವರು 55 ವರ್ಷಗಳಾಯ್ತು ಅಂದರು. ನೀವು ಈಗಲೂ ಇಷ್ಟು ಅನ್ಯೋನ್ಯ ವಾಗಿರಲು ಏನು ನಿಮ್ಮ ಸೀಕ್ರೆಟ್ ಅಂತ ಕೇಳಬಹುದೆ ಅಂದಾಗ ಅವರು ಹೇಳಿದರು, ನಾವು ಮದುವೆ ಆದ ಹೊಸದರಲ್ಲಿ ಇಬ್ಬರೂ ಕುದುರೆ ಮೇಲೆ ಏರಿ ಹೋಗುತ್ತಿದ್ದಾಗ, ಕುದುರೆ ಸ್ವಲ್ಪ ಗಲಾಟೆ ಮಾಡ್ತು. . ಇಳಿದು ನಾನು ಕುದುರೆಗೆ ಹೇಳ್ದೆ. ಮತ್ತೆ ಏನಾದ್ರು ತರಲೆ ಮಾಡಿದ್ರೆ ಸರಿಯಾಗಿ ಮಾಡ್ತೀನಿ ಅಂತ. ಹಾಗೇ ಹೇಳಿ ಹತ್ತಿದೆ. ಸ್ವಲ್ಪ ದೂರ ಹೋದಮೇಲೆ ಕುಂಟೋದು, ಹಿಂದೆ ತಿರುಗಿ ನೋಡೋದು ಮಾಡ್ತು. ಮತ್ತೆ ಇಳಿದು ಚಾಟಿಯಲ್ಲಿ ನಾಲ್ಕು ಏಟು ಕೊಟ್ಟೆ. ಸ್ವಲ್ಪ ದೂರ ಹೋಗಿರ ಬಹುದು ಮತ್ತೆ ಅದೇ ಬುದ್ದಿ. ಇಳಿದು ನನ್ನ ಹೆಂಡತಿಯನ್ನೂ ಇಳಿಸಿ, ಪಕ್ಕದ ನದಿಯಲ್ಲಿ ಕುದುರೆಯನ್ನ ತಳ್ಳಿಬಿಟ್ಟೆ. ಆ ಕ್ಷಣದಿಂದ, ನನ್ನ ಹೆಂಡತಿ ಒಂದು ದಿನವೂ ಪಾಪ ನನ್ನ ಹತ್ತಿರ ಯಾವ ವಿಷಯಕ್ಕೂ ಜಗಳ ವಾಡಿಲ್ಲ. ಇದೆ ನಮ್ಮ ಸೀಕ್ರೆಟ್ ಅಂದ. ಕೇಳಿದ್ದೇ ತಪ್ಪಾಯ್ತು ಅಂತ ಅಲ್ಲಿಂದ ಹೆದರಿ ಓಡಿ ಹೋದ್ರು. ಆದರೆ ಅವನು ಮಾತ್ರ ನಗ್ತಾನೇ ಇದ್ದ.