Shridevi Patil

Tragedy Crime Others

4  

Shridevi Patil

Tragedy Crime Others

ಪಾಪ, ಶೀಲ ಕಳೆದುಕೊಂಡ ಶೀಲಾ.

ಪಾಪ, ಶೀಲ ಕಳೆದುಕೊಂಡ ಶೀಲಾ.

2 mins
444


ಶೀಲಾ ಒಂಬತ್ತನೇ ತರಗತಿಗೆ ಹೋಗುತ್ತಿದ್ದಳು. ಓದುವುದರಲ್ಲಿ ಒಂದು ಹೆಜ್ಜೆ ಮುಂದೆ , ಗೆಳೆತನ ಮಾಡುವುದರಲ್ಲಿ ಇನ್ನೊಂದು ಹೆಜ್ಜೆ ಮುಂದೆ , ಅಂದ ಚೆಂದ , ಚೆಲುವಿಕೆಯಲ್ಲಿ ಕೂಡ ಎಲ್ಲರಿಗಿಂತ ಸುಂದರಿ , ಒಟ್ಟಾರೆಯಾಗಿ ಹೇಳಬೇಕೆಂದರೆ ದೇವರು ಅತೀ ಪುರುಸೊತ್ತು ಮಾಡಿಕೊಂಡು ತಿದ್ದಿ ತೀಡಿ , ಆಕೆಗೆ ಅಂದ ಚೆಂದ ಕೊಟ್ಟು , ಸಹನೆ ಸಂಯಮ ತಾಳ್ಮೆ ಎಂಬ ಗುಣಗಳನ್ನು ತುಂಬಿ , ವಿದ್ಯಾಬುದ್ಧಿ ಕೊಟ್ಟು ಒಂದು ಸುಂದರ ಹಾಗೂ ಪ್ರಬುದ್ಧ ಹುಡುಗಿಯ ಸೃಷ್ಟಿ ಮಾಡಿದ ಹಾಗಿತ್ತು. ಶೀಲಾಳ ಅಪ್ಪ ಅಮ್ಮ ಕೂಡ ಸಂಭಾವಿತರು. ಯಾರ ತಂಟೆಗೂ ಹೋಗದೆ , ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ಮನೋಧರ್ಮದವರಾಗಿದ್ದರು.


ಮನೆಯಲ್ಲಿ ಬುನಾದಿ ಹೇಗೆ ಬಿದ್ದಿರುತ್ತದೆಯೋ ಹಾಗೆ ಅಲ್ಲವೇ ಮಕ್ಕಳು ಬೆಳೆಯುವುದು ,ಇಲ್ಲಿ ಶೀಲಾ ಕೂಡ ಉತ್ತಮ ಅಡಿಪಾಯದ ಅಡಿಯಲ್ಲಿ ಬೆಳೆದು ಬಂದವಳಾಗಿದ್ದಳು. ಆಕೆಯ ಆ ಒಳ್ಳೆಯ ಗುಣಗಳಿಂದಲೇ ಆಕೆ ಶಾಲೆಯಲ್ಲಿ ಪ್ರತಿವರ್ಷ ಮಾದರಿ ವಿದ್ಯಾರ್ಥಿನಿ , ಆದರ್ಶ ವಿದ್ಯಾರ್ಥಿನಿ , ಎಂಬೆಲ್ಲ ಬಿರುದುಗಳಿಗೆ ಒಡೆಯಲಾಗುತ್ತಿದ್ದಳು.


ಹೀಗೆ ಹೆಸರು ಮಾಡಿದ ಶೀಲಾ ಚಿಕ್ಕವಳಿಂದ ಬೆಳೆದು ದೊಡ್ಡವಳಾಗುವ ಹಂತಕ್ಕೆ ಬಂದಿದ್ದಳು. ಅದೇ ಮೈನೆರೆತು ಶೀಲಾ ಹುಡುಗಿಯಿಂದ ಹೆಣ್ಣಾಗಿದ್ದಳು. ಅದೇನೋ ಗೊತ್ತಿಲ್ಲ , ಹುಡುಗಿಯಿಂದ ಹೆಣ್ಣಾಗಿ ಬದಲಾದ ಪ್ರತಿಯೊಬ್ಬರಲ್ಲೂ ಮುಖದ ಅಂದ ಹಾಗೂ ದೇಹದ ಸೌಂದರ್ಯ ಹೆಚ್ಚಿ ನೋಡುಗರ ಕಣ್ಣು ಕುಕ್ಕುವಂತೆ ಮಾಡುತ್ತದೆ. ಇಲ್ಲಿಯೂ ಹಾಗೆ ಆಗಿತ್ತು. ಶೀಲಾ ಮೊದಲೇ ಸುಂದರಿ ಈಗಂತೂ ಕೇಳುವುದೇ ಬೇಡ , ಅಷ್ಟೊಂದು ಸುಂದರಿಯಾಗಿದ್ದಳು. ಹೀಗೆ ದಿನಗಳೆಯುತ್ತಿರಲು ಹತ್ತನೇ ತರಗತಿ ಮುಗಿಸಿ ತಮ್ಮ ತಾಲೂಕಿಗೆ ಪ್ರಥಮ ಸ್ಥಾನ ಬಂದಿದ್ದಳು. ಮುಂದೆ ಸಾಯನ್ಸ್ ಮಾಡುವ ಇರಾದೆ ಹೊಂದಿದ್ದಳು. ಆದ್ದರಿಂದ ಬೇರೆ ಊರಿಗೆ ಹೋಗಬೇಕಾಗಿ ಬಂತು. ಅಲ್ಲಿ ಹಾಸ್ಟೆಲ್ ವ್ಯವಸ್ಥೆ ಆಯಿತು. ಜೊತೆಗೆ ಟ್ಯೂಶನ್ ಕೂಡ ತೆಗೆದುಕೊಳ್ಳಬೇಕಾಗಿ ಬಂತು. ಬೆಳಿಗ್ಗೆ ಕಾಲೇಜು , ಸಾಯಂಕಾಲ ಟ್ಯೂಶೇನ್ ಹೀಗೆ ವೇಳಾಪಟ್ಟಿ ಹಾಕಿಕೊಂಡಿದ್ದಳು.


ಅದೊಂದು ದಿನ ಟ್ಯೂಶೆನ್ ಮುಗಿಸಿಕೊಂಡು ಬರುತ್ತಿರಲು , ಸಮಯ ಒಂಬತ್ತಾಗಲು ಸಮೀಪಿಸಿತ್ತು. ಹಾಸ್ಟೆಲ್ ಗೇಟ್ ಬಂದಾಗುವ ಸಮಯವೂ ಆಗಿತ್ತು. ಅವಸರ ಅವಸರ ಹೋಗುತ್ತಿದ್ದಾಗ ಒಂದನಾಲ್ಕು ಜನ ಹುಡುಗರು ಬಂದವರೇ ಶೀಲಾಳನ್ನು ಎತ್ತಿ ಹಾಕಿಕೊಂಡು ಓಮಿನಿಯಲ್ಲಿ ಹೋದರು. ಒಬ್ಬಳೇ , ರಾತ್ರಿ ಬೇರೆ , ಫೋನು ಕೂಡ ಇಲ್ಲ , ನಾಲ್ಕು ಜನರ ಮುಷ್ಠಿಗೆ ಪಾಪ ಒಂದು ಹುಡುಗಿ ಏನು ತಾನೇ ಮಾಡಿಯಾಳು?


" ಆ ಹುಡುಗರ ಅಟ್ಟಹಾಸಕ್ಕೆ , ಕ್ರೂರತನಕ್ಕೆ ಶೀಲಾ ಅಂದು ತನ್ನ ಶೀಲವನ್ನೇ ಕಳೆದುಕೊಳ್ಳಬೇಕಾಯಿತು "


ಆ ಹುಡುಗರು ಮಾನಭಂಗ ಮಾಡಿ , ತಮ್ಮ ತೃಷೆ ತೀರಿಸಿಕೊಂಡು , ಅವಳನ್ನು ಅಲ್ಲಿಯೇ ಬಿಟ್ಟು ಹೋದರು. ನಾಲ್ಕು ಜನ ಹುಡುಗರು. ಥೂ ಎಂತಹ ನೀಚಗೇಡಿತನ, ಒಂದು ಅಬಲೆಯ ಮೇಲೆ. ಪಾಪ, ಆಕೆಗೆ ಮೇಲೆಳಲೂ ಆಗುತ್ತಿಲ್ಲ , ರಕ್ತ ಸ್ರಾವ ಆಗುತ್ತಿದೆ. ಆ ರಾತ್ರಿ ಹೇಗೋ ಕಳೆದು ತನ್ನ ಓದಿಗೆ ವಿದಾಯ ಹೇಳಿ , ಆ ದೊಡ್ಡ ಊರಿಗೆ ನಮಸ್ಕಾರ ಹೇಳಿ ತನ್ನೂರಿಗೆ ಹೋದಳು. ಮಗಳ ಆ ಸ್ಥಿತಿಯನ್ನು ಕಂಡು ಹಡೆದವರು ಆ ಕ್ಷಣವೇ ತಾವಿಬ್ಬರೂ ಬದುಕಿಯೂ ಸತ್ತಂತಾಗಿದ್ದರು.


ಮಗಳ ಆರೈಕೆ ಮಾಡಿದರು , ಆ ಅಟ್ಟಹಾಸ ಮೆರೆದ ಹುಡುಗರನ್ನು ಹುಡುಕುವ ಅಥವಾ ಪೊಲೀಸ್ ಕಂಪ್ಲೇಂಟ್ ಕೊಡುವ ಸಾಹಸ ಸಹ ಮಾಡಲಿಲ್ಲ. ಈ ಎಲ್ಲದರ ಮದ್ಯ ಸ್ವಲ್ಪ ದಿನಗಳಲ್ಲಿ ಆಕೆ ತಾಯಿಯಾಗಿದ್ದಳು. ಇದು ಶೀಲಾಳಿಗೆ ಗೊತ್ತಾಗಿಲ್ಲ. ಆಕೆಯ ತಾಯಿಯ ಗಮನಕ್ಕೂ ಬಂದಿಲ್ಲ. ಗೊತ್ತಾಗುವವರೆಗೆ ಅಂದರೆ ವೈದ್ಯರು ಸಹ ಏನು ಮಾಡಲಿಕ್ಕೆ ಬಾರದು, ಸಮಯ ಮೀರಿದೆ ಎಂದಾಗ ಅಕ್ಷರಶಃ ಎಲ್ಲರೂ ಕುಸಿದು ಹೋಗಿದ್ದರು. ಶೀಲಾಳ ಅಪ್ಪ ಅಮ್ಮನಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿತ್ತು.


ಪಾಪ ಶೀಲಾಳ ಪರಿಸ್ಥಿತಿ ಯಾರಿಗೂ ಬೇಡ. ಓದಬೇಕಿದ್ದ ಹುಡುಗಿ ಹೇರಬೇಕಿದೆ. ಹೆತ್ತು ಈ ಸಮಾಜದಲ್ಲಿ ಬದುಕಬೇಕಿದೆ. ಮದುವೆಯಾಗದೆ ಹೇರುವುದು ಅಂದರೆ ಸುಮ್ನೇನಾ?





Rate this content
Log in

Similar kannada story from Tragedy