Shridevi Patil

Classics Inspirational Others

3.7  

Shridevi Patil

Classics Inspirational Others

ದುಡಿಮೆಯೇ ದುಡ್ಡಿನ ತಾಯಿ

ದುಡಿಮೆಯೇ ದುಡ್ಡಿನ ತಾಯಿ

1 min
299


ರಾಜು, ರಾಜು ಎಲ್ಲಿದಿಯಾ? ಓ ಇಲ್ಲಿದಿಯಾ, ಇದೊಂದೇ ನೋಡು ನೀನು ಮಾಡೋ ಕೆಲಸ, ಅದೆಷ್ಟು ಅಂತ ಬಿದ್ದು ಹೊರಳಾಡ್ತಿಯಾ? ನಾನಾದ್ರೂ ಎಷ್ಟು ದಿನ ಅಂತ ಕೂಲಿ ಮಾಡ್ತಾ ಇರಲಿ, ಇಪ್ಪತ್ತೈದು ವರ್ಷದವನಾದೆ,ಇನ್ನಾದ್ರೂ ನಿ ದುಡಿದು ನನ್ನ ಸಾಕು.ಎನ್ನುತ್ತಾ ಅಮ್ಮ ಬೈಯುತ್ತಿದ್ದನ್ನು ಕಂಡು ಸಿಡಿಮಿಡಿಗೊಂದು ರಾಜು ಸಿಟ್ಟಿನಿಂದ ಎದ್ದವನೆ ಬರಬರ ಹೊರಟೆಬಿಟ್ಟ.

ಸಿಟ್ಟಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಎರಡೂ ಕಾಲಿಲ್ಲದ ಅಂಗವಿಕಲನೊಬ್ಬ ವೀಲ್ ಚೇರ್ ನಲ್ಲಿ ಕೂತು ತರಕಾರಿ ಮಾರುವುದನ್ನು ಕಂಡು ಆತನ ಹತ್ತಿರ ಹೋಗಿ, ಏನಪ್ಪಾ ನೀ ತರಕಾರಿ ಮಾರ್ತಿದಿಯಾ?ಕಷ್ಟ ಆಗಲ್ವೇ ಎಂದನು. ಆಗ ಆ ಅಂಗವಿಕಲ, ಇಲ್ಲ ಕಣಪ್ಪ ದುಡಿದರೆ ಮಾತ್ರ ಜೀವನ ನಂದು, ನನ್ನ ನಂಬಿಕೊಂಡು ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಇದ್ದಾರೆ. ಅಷ್ಟಕ್ಕೂ ದುಡಿಯದೆ ಇದ್ದರೆ ಹಣವಾದ್ರೂ ಎಲ್ಲಿಂದ ಬರಬೇಕು, ದುಡಿಮೆನೇ ದುಡ್ಡಿನ ತಾಯಿ, ಬೆವರು ಸುರಿಸಿ ದುಡೀತಿನಿ, ಸಮಾಧಾನದ ಜೀವನ ಮಾಡ್ತಿದೀವಿ ಅಂದ.

ಆತನ ಮಾತುಗಳು ರಾಜುವಿನ ಮನಸ್ಸನ್ನು ಪರಿವರ್ತಿಸಿದವು. ದುಡಿಮೆಯೇ ದುಡ್ಡಿನ ತಾಯಿ ಎಂದು ದುಡಿಯಲಾರಂಭಿಸಿದನು.



Rate this content
Log in

Similar kannada story from Classics