ಮಾನವೀಯತೆ ಮರೆತ ಹುಡುಗರು
ಮಾನವೀಯತೆ ಮರೆತ ಹುಡುಗರು


ಮನುಷ್ಯ ಎಂದರೆ ತನ್ನ ಜೀವನದಲ್ಲಿ ಏಳು ಬೀಳುಗಳನ್ನು ಕಂಡೇ ಇರುತ್ತಾನೆ . ಏಕೆಂದರೆ ನಾವು ನಡೆಯುವ ದಾರಿಯಲ್ಲಿ ಉಬ್ಬು ತಗ್ಗುಗಳು ಇದ್ದೆ ಇರುತ್ತವೆ. ಹಾಗಾಗಿ ಅಲ್ಲಿ ಏಳುವುದು , ಬೀಳುವುದು , ಸೋಲುವುದು , ಗೆಲ್ಲುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದ್ದರಿಂದ ಯಾವತ್ತಿಗೂ ಸೋಲು ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಂತೆ ಕಂಗೊಳಿಸುತ್ತವೆ.
ಇನ್ನು ಹೆಣ್ಣು ಮಕ್ಕಳ ವಿಷಯಕ್ಕೆ ಬಂದರೆ ಮುಗಿದೆ ಹೋಯಿತು , ಆಕೆಯಂತೂ ಪ್ರತಿಯೊಂದಕ್ಕೂ ಹೊಂದಿಕೊಂಡು , ಎಲ್ಲರ ಅಭಿರುಚಿ , ಅಭಿಪ್ರಾಯಗಳಿಗೆ ತಲೆ ಬಾಗಿ , ತನ್ನದೆಲ್ಲವನ್ನು ಪಕ್ಕಕ್ಕಿಟ್ಟು , ತನ್ನ ಅಭಿರುಚಿ ಆಸಕ್ತಿ ಎಲ್ಲವನ್ನು ತೊರೆದು , ಇನ್ನೊಬ್ಬರ ಏಳಿಗೆಗೆ ಹೊಂದಾಣಿಕೆ ಸೂತ್ರದಡಿ ಕೆಲಸ ಮಾಡುವುದರಲ್ಲೇ ತನ್ನ ಜೀವನ ಸವೆಸುತ್ತಾಳೆ. ತನ್ನ ಆಸೆ ಕನಸುಗಳನ್ನು ಈಡೇರಿಸುವಲ್ಲಿ ಸೋಲುತ್ತಾಳೆ . ಆದರೂ ಕೂಡ ಅವಳು ಸೋತರು ಸಹ ಇನ್ನೊಬ್ಬರ ಗೆಲ್ಲುವಲ್ಲಿ ತನ್ನ ಗೆಲುವನ್ನು ಕಾಣುತ್ತಾಳೆ . ಇದರಿಂದ ಈ ಗುಣ ಹೆಣ್ಣಿಗೆ ದೇವರು ನೀಡಿದ ಒಂದು ಅದ್ಭುತ ವರದಾನ ಎಂದು ಹೇಳಬಹುದು. ಸೋತು ಗೆದ್ದವಳು ಎನ್ನುವ ಆ ವಾಕ್ಯವೇ ಅವಳಿಗೆ ಹೇಳಿ ಮಾಡಿಸಿದಂತಿದೆ.
ಸೋತರೂ ಕುಗ್ಗದೆ , ಗೆದ್ದರೆ ಹಿಗ್ಗದೆ ಎರಡನ್ನೂ ಸಮವಾಗಿ ಸ್ವೀಕರಿಸುವ ಆಕೆ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಎಂದು ತೋರಿಸಿದವಳು . ಆಕೆ ಎಂತಹದೇ ಪರಿಸ್ಥಿತಿಯಲ್ಲಿ ಸಹ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಾರಳು. ಯಾರೋ ಮಾಡಿದ ಕುತಂತ್ರಕ್ಕೆ , ಅಥವಾ ಮೋಸಕ್ಕೆ ಬಹುಶಃ ಬಲಿಯಾಗಿ ಸೋತರೂ ಸೋಲಬಹುದು . ಆದರೆ ಅವಳು ತಾನಾಗಿಯೇ ಸೋಲೊಪ್ಪಿಕೊಳ್ಳುವ ಜಾಯಮಾನದವಳಂತೂ ಅಲ್ಲವೇ ಅಲ್ಲ....
ಕಲ್ಪನಾ , ಕಲ್ಪನೆಗ
ೂ ಮೀರಿದ ಸಾಮರ್ಥ್ಯವನ್ನು , ಶಲ್ತಿಯನ್ನು , ಅಭಿರುಚಿ ಆಸಕ್ತಿಯನ್ನು ಹೊಂದಿದ ಅದ್ಭುತ ಹೆಣ್ಣು ಮಗಳು . ಅಪ್ಪನ ಪ್ರೀತಿಯ ಮಗಳಾಗಿ , ಅಮ್ಮನ ಮುದ್ದಿನ ಮಗಳಾಗಿ , ಶಾಲೆಯಲ್ಲಿ ಅದ್ಭುತ ಪ್ರತಿಭೆಯಾಗಿ ಯಾವತ್ತೂ ಯಾವ ವಿಷಯದಲ್ಲೂ ಹಿಂದೆ ಸರಿಯಲಾರದ ಅಪ್ರತಿಮ ಚತುರೆ ಈ ಕಲ್ಪನಾ.
ಸೋಲು ಕಾಣದ ಈ ಕಲ್ಪನಾ , ಯಾವತ್ತೂ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಾರದ ಆಕೆ ಗೆಲುವನ್ನೇ ತನ್ನ ಧ್ಯೇಯ ಮಂತ್ರವನ್ನಾಗಿಸಿ ,ಎಲ್ಲರಿಗೂ ಅದನ್ನೇ ಹೇಳುತ್ತಿದ್ದವಳು . ಹಾಗೆಂದ ಮಾತ್ರಕ್ಕೆ ಅವಳು ಸೋಲನ್ನು ಕಡೆಗಣಿಸುತ್ತಿರಲಿಲ್ಲ. ಸೋಲು ಗೆಲುವು ಜೀವನದಲ್ಲಿ ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ . ಸೋತೆರೆ ಅನುಭವ ಸಿಗುತ್ತದೆ , ಗೆದ್ದರೆ ಖುಷಿಯೊಂದಿಗೆ ಆಚರಣೆ ಮಾಡಬಹುದು ಎನ್ನುತ್ತಿದ್ದ ಅವಳು , ಶಾಲೆಯ ಸ್ಪರ್ಧೆಯೊಂದರಲ್ಲಿ ಹೆಣ್ಣು ಗಂಡಿನೊಳು ಶ್ರೇಷ್ಠ ಯಾರೆಂಬುದರ ಕುರಿತು ಡಿಬೆಟ್ ಒಂದರಲ್ಲಿ ಹೆಣ್ಣು ಶ್ರೇಷ್ಠ ಎಂದು ವಾದಿಸಿ ಗೆದ್ದು ಬೀಗಿದವಳು ಅಂದೆ ಆ ರಾತ್ರಿಯ ಮಧ್ಯದಲ್ಲಿ ಯಾರೋ ಮಾಡಿದ ಕುತಂತ್ರಕ್ಕೆ ತನ್ನ ಜೀವನದ ಸರ್ವಸ್ವವನ್ನು ಕಳೆದು ಕೊಂಡಾಕೆ ಆಕೆ . ಸ್ಪರ್ಧೆಯಲ್ಲಿ ವಾದಿಸುತ್ತಿರುವಾಗ ವಿರೋಧ ಟೀಮಿನಲ್ಲಿ ವಾದಿಸುತ್ತಿದ್ದ ಹುಡುಗರಿಬ್ಬರು ಇವಳ ವಾದದ ರೀತಿ ಕಂಡು ತಂಗಾಗಿದ್ದರು. ಜೊತೆಗೆ ಪುರುಷರನ್ನು ಹೀನಾಯವಾಗಿ ಕಂಡಿದ್ದು ನೋಡಿ ಅವರು ರೊಚ್ಚಿಗೆದ್ದು ಕಲ್ಪನಾಳಿಗೆ ,ಕಲ್ಪನೆಗೂ ನಿಲುಕದ ರೀತಿಯಲ್ಲಿ ಎತ್ತಾಕಿ ಕೊಂಡು ಹೋಗಿ ಬಲಾತ್ಕಾರ ಮಾಡಿ ಬಿಸಾಕಿ, ತಾವು ಯಾವ ರೀತಿ ಗೆದ್ದೆವೆಂದು ತೋರಿಸಿ ,ಅಮಾನವಿಯತೆ , ಕ್ರೂರತೆಯನ್ನು ಮೆರೆದಿದ್ದರು.
ಶಾಲೆಯಲ್ಲಿ ಡಿಬೆಟ್ ಗೆದ್ದರೂ ಸಹ ಕಲ್ಪನಾ ತನ್ನ ಶೀಲ ಕಳೆದುಕೊಂಡು ಜೀವನದಲ್ಲಿ ಸೋತಿದ್ದಳು.