ಕಿಲಾಡಿ ಅತ್ತೆ
ಕಿಲಾಡಿ ಅತ್ತೆ


ಒಂದು ಹೆಂಗಸು ತನ್ನ ಮಗನಿಗೆ ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿದಾಗ ಸೊಸೆ ಮನೆಗೆ ಬಂದ ಮಾರನೇ ದಿನವೇ, ನೋಡಿ ಅತ್ತೆ ನಿಮಗೆ ವಯಸ್ಸಾಯಿತು ನಾನು ನಿಮ್ಮ ಮನೆ ಜವಾಬ್ದಾರಿ ತೆಗೆದುಕೊಂಡು ನಿಭಾಯಿಸುತ್ತೇನೆ . ನೀವು ಆರಾಮವಾಗಿ ಕಾಶಿ ರಾಮೇಶ್ವರ ಅಂತ ಎಲ್ಲಾ ದ್ರು ಹೋಗಿ ಅಂತ ಹೇಳಿದಳು. ಅದಕ್ಕೆ ಅತ್ತೆ ನೀನು ಹೇಳೋದು ಸರಿಯಾಗಿದೆ ನನಗೊಂದು ಆಸೆ ನಿಮಗೊಂದು ಮಗು ಆಗಿ ಅದನ್ನ ನೋಡಿ ಕಣ್ಣು ಮುಚ್ಚಿಕೊಂಡು ಬಿಡೋಣ ಅಂತ . ಸೊಸೆ ಆಯ್ತು ಅದು ಆಗಲಿ ಅಂದು ಸುಮ್ಮನಾದಳು. ಗಂಡು ಮಗು ಆಯ್ತು . ತವರುಮನೆ ಯಿಂದ ಬಂದವಳೇ ಅತ್ತೆ ನಿಮ್ಮ ಆಸೆ ತಿರಿಸಿದ್ದಾಯ್ತು .
ನನ್ನ ತಂಗಿ , ಮಗೂನ ಹೇಗೋ ನೋಡಿಕೊಳ್ತಾಳೆ ನೀವು ಹೊರಡಬಹುದು ಅಂದಾಗ ಏನಮ್
ಮ ಮೊಮ್ಮಗನ ಆಟಪಾಟ ನೋಡೋ ಆಸೆ ಅಜ್ಜಿಗೆ ಇರಲ್ವೆ ಮಗೂಗೆ ಐದಾರು ವರ್ಷ ಆದರೆ ನೋಡ್ಕೊಂಡು ಹೋಗಬಹುದು ಅಂತ ಹೇಳಿದಳು ಅತ್ತೆ. ಆಯ್ತು ನಿಮ್ಮಿಷ್ಟ ಅಂತ ಒಳಗೆ ಹೋದಳು ಸೊಸೆ. ಮಗು ದೊಡ್ಡದಾಗಿ ಸ್ಕೂಲು ಕಾಲೇಜು ಮುಗಿದು ಮದುವೆ ಮಾಡಿ ಸೊಸೆಗೆ ಸೊಸೆ ಬಂದಾಗ ಮರೆಯದೆ ಅತ್ತೆಗೆ ಹೇಳಿದಳು ನೀವು ಇನ್ನು ಮೊಮ್ಮಗನ ನೋಡಬೇಕು ಅಂತ ಇಲ್ಲೇ ಇರಬೇಡಿ ನೀವು ಕೇಳಿದ್ದಕ್ಕೆ ಹತ್ತು ಪಟ್ಟು ಹೆಚ್ಚಾಗಿ ನಿಮ್ಮ ಆಸೆ ತೀರಿಸಿ ಕೊಂಡಿದ್ದಿರಿ ಸಾಕು ಇನ್ನು ಹೊರಡಿ ಅಂದಾಗ , ನೀನು ನಡಿ ನನ್ನ ಜೊತೆ ನಿನ್ನ ಸೊಸೆಗೆ ಎಲ್ಲಾವಿಷಯ ತಿಳಿಸಿ ಕಾಶಿಗೆ ಇಬ್ಬರಿಗೂ ಟಿಕೆಟ್ ಬುಕ್ ಮಾಡಿದಾಳೆ ಬೇಕಾದ್ರೆ ಅವಳನ್ನೇ ಕೇಳು ಅಂತ ಅಲ್ಲೇ ನಿಂತವಳನ್ನ ತೋರಿಸಿದಾಗ ಬೆಚ್ಚಿ ಬಿದ್ದಳು ಸೊಸೆ.