ಗುರು-ಶಿಷ್ಯ
ಗುರು-ಶಿಷ್ಯ


.
(ಬಹಳ ಜನಕ್ಕೆ ತಿಳಿಯದ ಒಂದು ಸತ್ಯ ಘಟನೆ. )
ಸುಪ್ರೀಂ ಕೋರ್ಟ್ ನಲ್ಲಿ ಹಿಂದೂ ಧಾರ್ಮಿಕ ವಿಚಾರವಾಗಿ ವಯೋವೃದ್ಧ ವಕೀಲರೊಬ್ಬರು ತಮ್ಮ ವಯಸ್ಸಿಗೆ ತಕ್ಕಂತೆ ಮೆಲುದನಿಯಲ್ಲಿ ವಾದ ಮಾಡುತ್ತಿದ್ದರು.ಅಲ್ಲಿ ಇದ್ದ ಇಬ್ಬರು ನ್ಯಾಯಾ ಧೀಶರಲ್ಲಿ ಒಬ್ಬರು ಬೇರೆ ಮುಖ್ಯ ಕೇಸ್ ಗಳೂ ಇದೆ ನೀವು ಇಷ್ಟು ನಿಧಾನವಾಗಿ ವಾದ ಮಂಡಿಸಿದರೆ ಕಷ್ಟವಾಗುತ್ತೆ. ಬೇಗಬೇಗ ಮುಗಿಸಿ ಎಂದು ಹೇಳಿದರು. ಅದಕ್ಕೆ ಇಲ್ಲ ಇದು ಬಹಳ ಮುಖ್ಯ ವಾದ ವಿಷಯ . ಸ್ವಲ್ಪ ಸಮಯ ಹಿಡಿಯುತ್ತೆ. ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಹೇಳುವಾಗ ಕೇಳಿದರು ನೀವು ಓದುವಾಗ indian law ಅಂತ ಒಂದು subaject ಇತ್ತಲ್ಲ ಅದರಲ್ಲಿ ನಿಮಗೆ ಎಷ್ಟು ಅಂಕ ಅಂತ ಕೇಳಬಹುದೇ ಅಂತ ಹತ್ತಿರ ಬಂದು ಕೇಳಿದರು. ಪಕ್ಕದಲ್ಲಿದ್ದ ಮತ್ತೊಬ್ಬ ನ್ಯಾಯಾ ಧೀಶರುಏನು ಈ ರೀತಿ ನಿನ್ನನ್ನೇ ಪ್ರಶ್ನೆ ಮಾಡ್ತಾ ಇದ್ದರೂ ಸುಮ್ಮಾನೆ ಇದ್ದಿಯಲ್ಲ. ಅಂದದ್ದಕ್ಕೆ ಸುಮ್ಮನೆ ಇರಯ್ಯ ಅವರು ನನಗೆ ಮೇಷ್ಟ್ರು ನಾನು ಆಗ ಆ ಸಬ್ಜೆಕ್ಟ್ ನಲ್ಲಿ fail ಅಂತ ಅವರಿಗೆ ಜ್ಞಾಪಕ ಇದೆ ಅದಕ್ಕೆ ಅಂದರು.ನಂತರ ನಕ್ಕು ವಾದ ಮುಂದುವರೆಸಿ ಎಂದರು.
(ಇದು ಅವರ 88 ನೇ ವಯಸ್ಸಿನ ಹುಟ್ಟುಹಬ್ಬದ ಸಂಧರ್ಭದಲ್ಲಿ ಅವರ ಶಿಷ್ಯರಾಗಿದ್ದ ಆ ನ್ಯಾಯಾಧೀಶರೇ ಹೇಳಿಕೊಂಡಿದ್ದರಂತೆ)