Kalpana Nath

Comedy Others

3  

Kalpana Nath

Comedy Others

ಗೌರಿ

ಗೌರಿ

2 mins
265ವಿಶ್ವ ಬೆಂಗ್ಳೂರಿಗೆ ಬಂದ್ಮೇಲೆ ಹೊಸ್ದಾಗಿ ಮದ್ವೆ ಆಗಿ ಕೆಲ್ಸಸಕ್ಕೆ ಸೇರಿದ್ದ. ಹೆಂಡ್ತಿ ಗೌರಿ ಹಳ್ಳಿ ಹುಡ್ಗಿ . ಮೊದ್ಲೇ ಹೆಂಡ್ತಿಗೆ ಹೇಳಿದ್ದ ನೀನು ತುಂಬ ಬದ್ಲಾಗ್ಬೇಕು ಸಿಟೀಲಿ ಹುಡ್ಗೀರ್ನ ನೋಡಿ ಬಹಳ ಕಲೀಬೇಕು . ಇಲ್ದಿದ್ರೆ ನಿನ್ಗೇ ಕಷ್ಟ ಆಗತ್ತೆ ಅಂತ . ಆಯ್ತು ಕಲೀತೀನಿ ಅಂದಿದ್ಲು ಗೌರಿ.


ಒಂದು ದಿನ ಯಾರೋ ಮನೆಗೆ ಬಂದು ಬೆಲ್ ಮಾಡ್ದಾಗ ಕಿಟ್ಕೀಲ್ನೋಡಿ ಅವ್ರಿಲ್ಲ ಹೊರ್ಗೋಗಿದಾರೆ ಅವ್ರು ಬಂದ್ಮೇ ಲ್ ಬನ್ನಿ ಅಂದ್ಳು. ವಿಶ್ವ ಮನೆಗೆ ಬಂದೋನೆ ಇದು ನಿಮ್ ಹಳ್ಳಿ ಅಲ್ಲ. ಯಾರಾದ್ರೂ ಮನೆಗೆ ಬಂದ್ರೆ ಒಳಗ್ಬನ್ನಿ ಕೂ ತ್ಕೊಳಿ ಅಂತ ಹೇಳಕ್ಕೂ ಗೊತ್ತಾಗಲ್ವ ಅವ್ನು ನನ್ಗೆ ತುಂಬಾ ಬೇಕಾದವ್ನು ಅಂತ ಚೆನ್ನಾಗ್ ಬೈದ. ಮನಸ್ಗೆ ಬೇಜಾರಾದ್ರೂ ಪಾಪ ಏನೂ ಮಾತಾಡ್ದೇ ಸುಮ್ನೆ ಇದ್ಲು.

ಇನ್ನೊಂದಿನ ಒಬ್ರು ಹೀಗೇ ಮನೇಗ್ಬಂದಾಗ ಅವತ್ತೂ ವಿಶ್ವ ಮನೇಲಿರ್ಲಿಲ್ಲ. ಅವ್ರು ಹೊರ್ಗೆಲ್ಲೋ ಹೋಗಿದಾರೆ, ಬನ್ನಿ ಒಳ್ಗೆ ಕೂತ್ಕೊಳಿ ಬರ್ತಾರೆ ಅಂದ್ರೂ ,ಇಲ್ಲ ಇಲ್ಲ ವಿಶ್ವ ಬಂದ್ಮೇಲೆ ಬರ್ತೀನಿ ಅಂತ ಹೇಳಿದ್ರೂ ಕೇಳ್ದೆ ಆಗಲ್ಲ ನೀವೇನಾದ್ರೂ ಹಾಗೆ ಹೊರಟೋದ್ರೆ ನನ್ಗೆ ಬೈತಾರೆ ನಾನು ಬೈಸ್ಕೋಬೇಕು ಒಳಗೆ ಬನ್ನಿ ಅಂತ ಬೇಡ ಅಂದ್ರೂ ಕೇಳ್ದೆ ಬಲ್ವಂತ್ವಾಗಿ ಒಳ್ಗೇ ಕೂಡ್ಸಿದ್ಲು. ಎಷ್ಟೊತ್ತಾದ್ರೂ ವಿಶ್ವ ಬರ್ಲಿಲ್ಲ. ಬಂದೋರ್ಗೆ ಪ್ರಾಣ ಸಂಕ್ಟ ತಪ್ಪಿಸ್ಕೊಂಡು ಓಡೋದ್ರೆ ಸಾಕಂತ ನೋಡ್ತಿದ್ದಾಗ ಅವಳು ಅಡುಗೆ ಮನೇಗೆ ಹೋಗಿದ್ನೋಡ್ಕೊಂಡು ಆಚೆ ಓಡೋದ್ರು. ಆಚೆ ಬಂದು ಟೀ ಕೊಡಕ್ಕೆ ನೋಡಿದ್ರೆ ಅಲ್ಲಿಲ್ಲ. ವಿಶ್ವ ಮನೇಗೆ ಬಂದ. ಏನಾಯ್ತೋ ಅದನ್ನ ಹೇಳಿದ್ಳು .ಹೆಸರು ಕೇಳಿದ್ಯಾ ಅಂದ ಇಲ್ಲಾ ಅಂದ್ಳು .ಯಾರು ಅಂತ ಗೊತ್ತಿಲ್ಲ ಅಂದ್ರೂ 

ಒಳಗೆ ಕೂಡ್ಸಿ ಟೀ ಕೊಡ್ತೀ ಅಂದ್ರೆ ಎಷ್ಟು ಧೈರ್ಯ ನಿಂಗೆ ಅಂತ ಬೈದ.

ಏನ್ಮಾಡಿದ್ರೂ ಕೋಪ ಮಾಡ್ಕೋತಾರಲ್ಲ ಅಂತ ಬೇಜಾರಾಗಿದ್ಲು. ವಿಶ್ವ ಆಫೀಸ್ ಗೆ ಹೋದಾಗ ಅವನ ಸ್ನೇಹಿತ ರಾಘು ಕೇಳ್ದ ಏನಪ್ಪ ನಿಮ್ಮನೇ ಕಡೆ ಬಂದಿದ್ದೆ ಹಾಗೆ ನಿನ್ನ ನೋಡೋಣ ಅಂತ ಮನೇಗೆ ಬಂದ್ರೆ ನೀನು ಇಲ್ಲ ನಿನ್ನ ವೈಫೂ ಇಲ್ಲ . ಬೇಡಮ್ಮ ಅಂದ್ರೂ ಕೇಳ್ದೆ ಕೆಲ್ಸದೋಳು ಒಳಗೆ ಬಂದು ಕೂತ್ಕೊಳಿ ಅಂತ ಬಲವಂತವಾಗಿ ಕರೀತಾಳೆ.ಯಾರ್ಯಾರ್ನೋ ಕರ್ಯೋದು ಡೇಂಜರ್. ಇದು ಬೆಂಗಳೂರು ಸ್ವಲ್ಪ ಎಚ್ಚರ.ಅವಳಿಗೆ ವಾರ್ನ್ ಮಾಡು ಅಂದ. ವಿಶ್ವ ಏನೂ ಮಾತಾಡ್ಲಿಲ್ಲ.


ಮನೇಗೆ ಬಂದು ಹೇಳ್ದ. ನೀನು ಒಳ್ಳೆ ಕೆಲಸ್ದೋಳಿದ್ದ ಹಾಗೆ

ಇರ್ಬೇಡ. ಸ್ವಲ್ಪ ಸಿಟಿ ಹುಡುಗಿಯರ್ತರ ಇರೋದನ್ ಕಲಿ

ಅಂದ.ಆಯ್ತು ಅಂತ ತಲೆ ಅಡಿಸಿದ್ಲು.

ಒಂದ್ತಿಂಗ್ಳಾದ್ಮೇಲೆ ಒಂದಿನ ವಿಶ್ವನ್ ಹುಡುಕ್ಕೊಂಡೊಬ್ರು 

ಬಂದ್ರು. ಬಾಗಿಲ್ತೆಗೆದು ನಿಮ್ ಹೆಸ್ರೇನು ಅಂದ್ಲು ನನ್ಹೆಸ್ರೇ ನಾದ್ರೂ ಇರ್ಲಿ , ವಿಶ್ವ ಎಲ್ಲಿ ಹೇಳಿ ಅಂದ್ರು. ಅವ್ರಿಲ್ಲ ನಿಮ್ ಹೆಸ್ರೇಳಿದ್ರೆ ಒಳಕ್ಕರೀಬೋದು ಹೆಸರ್ಗೊತ್ತಿಲ್ದೆ ರಸ್ತೇಲ್ಹೋಗೋರ್ನೆಲ್ಲಾ ಒಳಕ್ಕರಿಯಕ್ಕಾಗತ್ತ ಅಂದ್ಲು . ಅದೂ ಸರೀನೇ ನನ್ ಹೆಸ್ರು ಬಾಬು ಇವಾಗೊಳ್ಗೆ ಬರ್ಲಾ ಅಂದ. ಬನ್ನಿ ಅಂದ್ಲು.ಒಳಕ್ಕೂತ .ಕಾಫೀ ಮಾಡಕ್ಕೇಂತ

ಒಳಗೋದಾಗ ಇವನೂ ಪತ್ತೆ ಇಲ್ಲ. ವಿಶ್ವ ಬಂದಾಗ ಹೇಳಿದ್ಲು ನೋಡಿ ಹೊಸ ಸೀರೆ ವಾಚು ಕನಕಾಂಬರ ಹೂವು ಈಗ ಸಂತೋಷಾನಾ ಅಂದ್ಲು. ಸಧ್ಯ ಬದಲಾದ್ಯಲ್ಲ ಹೋಗ್ಲಿ ಅಂತಹೇಳಿ ಕಾಫೀ ಕುಡ್ಯೋವಾಗ ಹೇಳಿದ್ಳು ,ನಿಮ್ಮನ್ ಹುಡುಕ್ಕೊಂಡು ಬಾಬು ಬಂದಿದ್ರು 

ನಾನೇ ಅವರ ಹೆಸರ್ನ ಕೇಳಿ ಒಳಕ್ಕೂಡ್ಸಿ ಕಾಫೀ ತರೋದ್ರಲ್ಲಿ ನಾಪತ್ತೆ ಅಂದಾಗ, ಬಾಬು ಅಂತ ನನಗ್ಗೊತ್ತಿರೋರ್ ಯಾರೂ ಇಲ್ವಲ್ಲಾ ಅಂತ ತಲೆ ಕೆರ್ಕೊಂಡು ಇಲ್ಲಿ ನನ್ ಸಂಬಳದ ಪೂರ್ತಿ ಹಣ ಇಲ್ಲೇ ಕವರ್ರಲ್ಲಿ ಇಟ್ಟಿದ್ದೆ ಒಳಗೇನಾದ್ರು ನೀನು ಇಟ್ಟಿದೀಯಾ ಅಂದರೆ ನಂಗೊತ್ತಿಲ್ಲ ಅಂದ್ಳು. ಎಲ್ಲೂ ಇಲ್ಲ. ವಾಚ್ ಇಲ್ಲ 

ನನ್ನ ಉಂಗುರ ಇಲ್ಲ ಅಯ್ಯೋ ಅವನು ಯಾರೋ ಕಳ್ಳ ಇರಬೋದು ಸಿಕ್ಕಿದ್ದೆಲ್ಲಾ ದೋಚ್ಕೊಂಡೋಗಿದಾನೆ ಅಂದ. 

ಎದುರಿಗಿದ್ದ ನ್ಯೂಸ್ ಪೇಪರ್ನಲ್ಲಿ ಒಬ್ನ ಫೋಟೋ ಇತ್ತು. 

ಕೆಳಗೆ ಜಾಗ್ರತೆ ಇವನೊಬ್ಬ ಕತರ್ನಾಖ್ ಕಳ್ಳ. ಒಂಟಿ ಮಹಿಳೆಯರೇ ಇವನ ಟಾರ್ಗೆಟ್ ಅಂತ ನೋಡಿ ತಲೆ ಚಚ್ಕೊಂಡ. ಏನ್ಮಾಡ್ಬೇಕೋ ಗೊತ್ತಾ ಗ್ಲಿಲ್ಲ.


Rate this content
Log in

Similar kannada story from Comedy