murali nath

Drama Tragedy Inspirational

3  

murali nath

Drama Tragedy Inspirational

ಅಮ್ಮ ಬೆಸೆದ ಸ್ನೇಹ

ಅಮ್ಮ ಬೆಸೆದ ಸ್ನೇಹ

2 mins
38



ರಾಮನಾಥ್ ಮತ್ತು ನಟರಾಜ್ ಒಂದೇ ಶಾಲೆಯಲ್ಲಿ ಓದಿದ ಆಪ್ತಮಿತ್ರರು. ಇಬ್ಬರೂ ತಮ್ಮ ಕಾಲೇಜು ವ್ಯಾಸಂಗ ಬೇರೆಬೇರೆ ಊರುಗಳಲ್ಲಿ ಮಾಡಿದರೂ ಒಂದೇ ಹೈಸ್ಕೂಲ್ ನಲ್ಲಿ ಇಬ್ಬರೂ ಪ್ರಾಧ್ಯಾಪಕರಾಗಿ ಬಂದದ್ದು.ಇಬ್ಬರಿಗೂ ಸಂತೋಷವಾಗಿತ್ತು. ನಟರಾಜ್ ಗೆ ಮದುವೆಯಾಗಿ ಒಬ್ಬ ಮಗ ಇದ್ದ.  ರಾಮನಾಥ್ ಮಾತ್ರ ಮದುವೆ ಮಾಡಿಕೊಳ್ಳದೆ ತಾಯಿ ಜೊತೆಯಲ್ಲಿ ವಾಸವಾಗಿದ್ದರು. ಇಬ್ಬರದೂ ಮೂವತ್ತು ವರ್ಷದ ಸ್ನೇಹ.ಕೆಲವು ವರ್ಷ ದೂರವಾಗಿದ್ದರೂ ಮತ್ತೆ ಒಂದಾಗಿದ್ದರು.ಒಂದು ದಿನ ನಟರಾಜ್ ಗೆ ಕೋರ್ಟ್ ನೋಟಿಸ್ ಬಂತು. ಅವರ ತಂದೆ ಮಾಡಿದ್ದ ಸಾಲ ತೀರಿಸಲಾಗದೇ ಬಡ್ಡಿ ಚಕ್ರಬಡ್ಡಿ ಬೆಳೆದು ನಾಲ್ಕು ಲಕ್ಷ ರೂಪಾಯಿ ಒಂದು ವಾರದಲ್ಲಿ ಕೋರ್ಟ್ ಗೆ ಕಟ್ಟಬೇಕಾಗಿತ್ತು. ಈ ವಿಷಯ ಮಾತ್ರ ಎಂದೂ ರಾಮನಾಥ್ ಗೆ ತಿಳಿಸಿರಲಿಲ್ಲ. ಒಂದು ವಾರದಲ್ಲಿ ಅಷ್ಟುಹಣ ಹೊಂದಿಸುವುದು ಬಹಳ ಕಷ್ಟವಾಗಿತ್ತು. ಗಂಡ ಹೆಂಡತಿ ರಾತ್ರಿಯೆಲ್ಲಾ ಯೋಚಿಸಿದರೂ ದಾರಿ ಕಾಣಲಿಲ್ಲ. ಮಾರನೇದಿನ ಪ್ರತಿನಿತ್ಯ ದಂತೆ ಇಬ್ಬರೂ ಬೆಳಗ್ಗೆ ವಾಕ್ ಹೋದಾಗ ಬೇಜಾರಾಗಿರುವ ನಟರಾಜ್ ನ ಮುಖ ನೋಡಿದ ತಕ್ಷಣ ರಾಮನಾಥ ಗೆ ಏನೋ ವೆತ್ಯಾಸ ಆಗಿದೆ ಅಂತ ಗೊತ್ತಾಯ್ತು .ರಾತ್ರಿ ನಿದ್ದೆ ಬಂದಿಲ್ಲ ಅದಕ್ಕೆ ಅಷ್ಟೇ ಅಂತ ಹೇಳಿದರೂ ನಂಬದೆ ಕೈಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಕೇಳಿದಾಗ ಹೇಳಲೇ ಬೇಕಾಯಿತು. ಇಬ್ಬರೂ ವಾಕ್ ಮುಗಿಸಿ ಮನೇಗೆ ಬಂದಾಯ್ತು. ಈಗ ಸ್ನೇಹಿತ ನಟರಾಜ್ ಗಿಂತಲೂ ರಾಮನಾಥ್ ಗೆ ಸ್ನೇಹಿತನ ಬಗ್ಗೆ ಯೋಚನೆ ಹೆಚ್ಚಾಯ್ತು. ಪಾಪ ಹೇಗೆ ಅಷ್ಟು ಹಣ ಹೊಂದ್ದಿಸ್ತಾನೆ . ಕೊಡದೇ ಜೈಲ್ ಹೋದರೆ ಏನು ಗತಿ ಹೀಗೆಲ್ಲ ಯೋಚನೆ. ರಾತ್ರಿ ಅಮ್ಮನ ಹತ್ತಿರ ವಿಷಯ ತಿಳಿಸಿದರೆ ಮನಸ್ಸು ಸ್ವಲ್ಪ ಹಗುರ ಆಗುತ್ತೆ ಅಂತ ಮಲಗುವ ಮೊದಲು ಹೇಳಿದ. ಬೇಜಾರು ಮಾಡಿಕೊಂಡರೇ ಹೊರತು ಏನೂ ಮಾತ ನಾಡಲಿಲ್ಲ. ಅಮ್ಮ ಬೆಳಗ್ಗೆ ಬೇಗ ಎದ್ದು ಅಡುಗೆ ಮಾಡಿಟ್ಟು ಮಗನಿಗೆ ಹೇಳಿದರು, ನಾನು ಸ್ವಲ್ಪ ನಮ್ಮ ಹಳ್ಳಿಗೆ ಹೋಗಿ ಬರ್ತೀನಿ .ಸಂಜೆ ಒಳಗೆ ಬಂದು ಬಿಡ್ತೀನಿ. ನೀನೇ ಊಟ ಮಾಡ್ಕೋ ಅಂತ ಹೇಳಿದಾಗ ಏನಮ್ಮ ರಾತ್ರಿ ಇಲ್ಲದ ಪ್ರೋಗ್ರಾಮ್ ಈಗ ತಕ್ಷಣ ಅಂದ ಮಗ. ಬಹಳ ದಿನ ಆಯ್ತು ಏಕೋ ನಮ್ಮ ಅಣ್ಣನ್ನ ನೋಡಿ ಬರೋಣ, ಹೇಗೂ ನಿನಗೆ ರಜೆ ಇದೆ . ಸಂಜೆ ಬಂದು ಬಿಡ್ತೀನಿ ಅಂತ ಹೇಳಿ ಹೊರಟೇ ಬಿಟ್ರು ಸಂಜೆ ಮನೆಗೆ ಬಂದವರೇ ನಟರಾಜ್ ನ ಹೆಂಡತಿಯನ್ನ ಮಗ ಇಲ್ಲದ ಸಮಯದಲ್ಲಿ ಕರೆದು ಕೇಳಿದರು. ನನ್ನ ಮಗ ನಿನ್ನ ಗಂಡ ಎಂತಹ ಸ್ನೇಹಿತರು ಅಂತ ನಿನಗೆ ನಾನು ಹೇಳಲೇ ಬೇಕಿಲ್ಲ. ಒಬ್ಬರ ಕಷ್ಟದಲ್ಲಿ ಇನ್ನೊಬ್ಬರು ಸಹಾಯ ಮಾಡದೇ ಇದ್ದರೆ ಅದೆಂತಾ ಸ್ನೇಹ .ನಿಮಗೆ ಕೋರ್ಟ್ ನೋಟಿಸ್ ಬಂದಿರೋ ವಿಷಯ ಗೊತ್ತಾಯ್ತು. ನಮ್ಮ ಅಣ್ಣ ಲಾಯರ್ . ಹೋಗಿ ಹೇಳಿ ಬಂದಿದೀನಿ .ನೀವು ಒಂದು ಕೆಲಸ ಮಾಡಿ ಒಂದು ಲಕ್ಷ ಈಗ ಕೊಡ್ತೀವಿ ಉಳಿದ ಹಣ ಮೂರು ತಿಂಗಳಲ್ಲಿ ಕೊಡ್ತೀವಿ ಅಂತ ಬ್ಯಾಂಕ್ ಮನೇಜರ್ ಹತ್ತಿರ ಮಾತನಾಡಬೇಕೆಂದು ಹೇಳಿದ್ದಾನೆ. ತೊಗೊ ಇದರಲ್ಲಿ ಒಂದು ಲಕ್ಷ ಇದೆ . ಹೆದರಬೇಡಿ ಅಂತ ಹಣದ ಚೀಲ ಕೊಟ್ಟರು. ಅವರು ಹೇಳಿದ ಹಾಗೆ ಒಂದು ಲಕ್ಷ ರೂಪಾಯಿ ಕೊಟ್ಟು ಮೂರು ತಿಂಗಳು ಸಮಯವನ್ನೂ ಪಡೆದರು. ಆದರೆ ಉಳಿದ ಹಣ ಎಲ್ಲಿಂದ ಹೊಂದಿಸೋದು ಅಂತ ತಿಳಿಯ ದಾಯಿತು. ಒಂದು ಲಕ್ಷ ಕೊಟ್ಟವರನ್ನ ಮೂರು ಲಕ್ಷಾನೂ ಕೊಡಿ ಅಂತ ಕೇಳಕ್ಕೆ ಆಗಲ್ಲ . ಅವರೂ ನಮ್ಮಂತೆ ಸ್ಕೂಲ್ ಟೀಚರ್.ಏನು ಮಾಡೋದು ಅಂತ ಯೋಚನೆ ಮಾಡ್ತಾ ಇದ್ದಾಗ ರಾಮನಾಥ್ ಬಂದು ಅಮ್ಮ ಎಲ್ಲಾ ಹೇಳಿದ್ದಾರೆ ನನಗೇ ಹೇಳದೆ ಅವರ ಅಣ್ಣ ಲಾಯರ್ ಹತ್ತಿರ ಹೋಗಿ ಮಾತ ನಾಡಿದ್ದಾರೆ . ಯೋಚನೆ ಮಾಡಬೇಡಿ ಅಮ್ಮಂದು ಏನೋ ಮಾಸ್ಟರ್ ಪ್ಲಾನ್ ಇರತ್ತೆ ಅಂತ ಹೇಳಿದರೂ ಅವರಿಗೆ ಉಳಿದ ಹಣದ್ದೇ ಯೋಚನೆ. ಆಗ ರಾಮನಾಥ್ ಹೇಳಿದ್ರು ನನಗೆ ನಿಮ್ಮ ಚಿಂತೆ ಅರ್ಥ ಆಗುತ್ತೆ.ಉಳಿದ ಹಣಕ್ಕೆ ಏನು ಮಾಡೋದು. ಮತ್ತೆ ಆ ಹಣ ನಾವು ಹೇಗೆ ತೀರಿಸೋದು ಅಂತ ಅಲ್ಲವೇ ಅಂದಾಗ , ಹೌದು ಸರಿಯಾಗಿ ಹೇಳಿದಿ ಅಂದ. ಯೋಚನೆ ಬೇಡ ಎಲ್ಲಾ ಅಮ್ಮ ನೋಡ್ಕೋತಾಳೆ.ಏಕೆಂದರೆ ನಾನು ಕೇಳಿದ್ದಕ್ಕೆ ಅದು ನನ್ನ ಜವಾಬ್ದಾರಿ ನಿಮ್ಮ ಸ್ನೇಹ ಗಟ್ಟಿ ಮಾಡೋದು ನನ್ನ ಉದ್ದೇಶ . ಹಣದಿಂದ ಸ್ನೇಹ ಹಾಳಾಗುತ್ತೆ ಅಂತಾರೆ . ಆದರೆ ಹಣದಿಂದಾನೆ ಸ್ನೇಹ ಉಳಿಯತ್ತೆ ಅಂತ ನಾನು ಜಗತ್ತಿಗೆ ತೋರಿಸ್ತೀನಿಅಂದರು. ಆಸ್ತಿ ಪಾಲಾದಾಗ ಅಮ್ಮನ ಹಣ ಅವರ ಅಣ್ಣನ ಹತ್ತಿರವೇ ಇತ್ತಂತೆ ಯಾವಾಗ ಬೇಕಾದರೂ ಕೇಳು ಕೊಡ್ತೀನಿ ಅಂದಿದ್ರಂತೆ , ಅದಕ್ಕೆ ಅಮ್ಮ ಹಳ್ಳಿಗೆ ಹೋಗಿ ಬಂದಿರೋದು ನನಗೂ ಹೇಳಿರಲಿಲ್ಲ. ಅಂದಾಗ ಸ್ವಲ್ಪ ಸಮಾಧಾನ ಆಯ್ತು.

(ಇದೊಂದು ಈ ಕಾಲದಲ್ಲಿ ನಂಬಲಾಗದ ಕಥೆ ಅನಿಸಿದರೂ , ಇವರಿಬ್ಬರನ್ನೂ ಹತ್ತಿರ ದಿಂದ ನೋಡಿದ್ದ ಒಬ್ಬರು ಹೇಳಿದ ನೈಜ ಕಥೆ)



Rate this content
Log in

Similar kannada story from Drama