Kalpana Nath

Comedy Others

4  

Kalpana Nath

Comedy Others

ವಿದೇಶದ ಕನಸು

ವಿದೇಶದ ಕನಸು

1 min
36


 


ಒಂದು ಪುಟ್ಟ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬನಿಗೆ ಹೇಗಾದರೂ ಮಾಡಿ ವಿದೇಶಕ್ಕೆ ಹೋಗಬೇಕೆಂಬ ಹಂಬಲ. ಒಂದು ದಿನ ಒಬ್ಬನೇ ಮಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡುವವನಂತೆ ನಟಿಸಿ ಒಂದು ಹಡಗು ಹತ್ತಿದ. ಅದು ಎಲ್ಲಿಗೆ ಹೋಗುತ್ತೆ ಎಂತಲೂ ಗೊತ್ತಿಲ್ಲ. ಒಂದು ವಾರ ಆದ ಮೇಲೆ ಯಾವುದೋ ದೇಶ ಮುಟ್ಟಿತು ಬಹಳ ಜನ ಅಲ್ಲೇ ಇಳಿದುಕೊಂಡಾಗ ಇವನೂ ಇಳಿದ. ಬಹಳ ಹಸಿವಾಗಿದ್ದರಿಂದ ಏನಾದರೂ ತಿನ್ನಬೇಕಿತ್ತು. ನೋಡಿದ. ಎಲ್ಲರೂ ಹೋಗುತ್ತಿದ್ದ ಕಡೆ ಇವನೂ ಹೊರಟ. ಒಂದು ದೊಡ್ಡ ಅರಮನೆಯಂತಿದ್ದ ಕಟ್ಟಡ. ಬಾಗಿಲಲ್ಲಿ ಅರಮನೆ ನೌಕರರ ಪೋಷಾಕಿನಲ್ಲಿ ಇದ್ದವರು ನಮಸ್ಕಾರ ಮಾಡಿದರು ಅವರ ಭಾಷೆ ತಿಳಿಯದೆ ನಕ್ಕು ಒಳಗೆ ಹೋದ. ಎಲ್ಲರಂತೇ ಇವನು ಒಂದು ಕಡೆ ಕುಳಿತ. ಆರು ಅಡಿ ಎತ್ತರದ ಮನುಷ್ಯ ಬಂದು ಒಂದು ಪುಸ್ತಕ ಕೊಟ್ಟ. ಅರ್ಥವಾಗಲಿಲ್ಲ. ಎದುರುಗಡೆ ಕುಳಿತವರ ಕಡೆ ಕೈ ತೋರಿಸಿದ. ಅವರಿಗೆ ಕೊಟ್ಟ ತಿಂಡಿಗಳೆನ್ನೆಲ್ಲ ತಂದು ಕೊಟ್ಟಾಗ ತಿಂದ. ಒಂದು ಪುಟ್ಟ ಯಂತ್ರ ತಂದು ಕೊಟ್ಟಾಗ ಅವರು ಕಾರ್ಡ್ ಒಂದನ್ನ ಅದರಲ್ಲಿ ತೂರಿಸಿ ಏನೋ ಮಾಡುತ್ತಿದ್ದುದನ್ನ ಗಮನಿಸಿದ. ಅದೆಲ್ಲಾ ನಮಗೆ ಬೇಡ ಎಂದು ಎದ್ದು ಹೊರಟ. ಅಷ್ಟರಲ್ಲಿ ಇಬ್ಬರು ಬಂದು ಇವನ ಕೈ ಹಿಡಿದರು. ಅಲ್ಲಿಯವರೆಗೂ ಅರಮನೆಯಲ್ಲಿ ವಿದೇಶದಿಂದ ಬಂದವರಿಗೆ ಒಳ್ಳೆಯ ಆತಿಥ್ಯ ಎಂದೇ ತಿಳಿದಿದ್ದ. ಅವರ ಭಾಷೆಯಲ್ಲಿ ಏನು ಹೇಳುತ್ತಿದ್ದಾರೋ ತಿಳಿಯಲಿಲ್ಲ. ಇವನಿಗೆ ಒಣಗಿದ ಹಾರ ತಂದು ಹಾಕಿದರು. ಸನ್ಮಾನ ಮಾಡುತ್ತಿದ್ದಾರೆಂದೇ ತಿಳಿದ. ಒಂದು ಕತ್ತೆಯ ಮೇಲೆ ಹಿಂದುಮುಂದಾಗಿ ಕೂಡಿಸಿದರು. ಅಲ್ಲಿನ ಸಂಪ್ರದಾಯವೆಂದು ತಿಳಿದ. ಉದ್ದನೆ ಟೋಪಿ ಹಾಕಿ ರಸ್ತೆಯಲ್ಲಿ ಮೆರವಣಿಗೆಮಾಡಿದರು . ಅಕ್ಕಪಕ್ಕದಲ್ಲಿ ಜನ ನಿಂತುಚಪ್ಪಾಳೆ ಹೊಡೆಯುತ್ತಿದ್ದರೆ, ವಿದೇಶದಲ್ಲಿ ಇಷ್ಟೊಂದು ಗೌರವ ಕೊಡುತ್ತಿದ್ದಾರೆಂದು ಭಾವಿಸಿದ.  ಆ ಜನಗಳ ಮಧ್ಯೆ ಅಕಸ್ಮಾತ್ ಒಬ್ಬ ನಮ್ಮದೇಶದವನು ಕಂಡ. ಅವನು ಓಡಿಬಂದು ಕತ್ತೆಯನ್ನ ಹಿಡಿದಿದ್ದವನ ಹತ್ತಿರ ಅವರ ಭಾಷೆಯಲ್ಲಿ ವಿಚಾರಿಸಿದ. ಹಣ ಕೊಡದೆ ಓಡಿ ಹೋಗುತ್ತಿದ್ದ ವಿಷಯ ಗೊತ್ತಾಯ್ತು. ಅವನೇ ಹಣ ಕೊಟ್ಟು ಅವರಿಂದ ಬಿಡಿಸಿದ. ನಮ್ಮ ದೇಶದ ಮರ್ಯಾದೆ ಹೋಗುತ್ತೆಂದು ಅವನಿಗೆ ತಿಳಿಸಿ ಬೇರೆ ಮಾರ್ಗವಿಲ್ಲದೆ ಪೊಲೀಸರಿಗೆ ಒಪ್ಪಿಸಿದ. ವಿದೇಶ ನೋಡುವಾಸೆಗೆ ಜೈಲಲ್ಲಿ ದಿನ ಕಳೆಯ ಬೇಕಾಯ್ತು. 

   ದಯವಿಟ್ಟು ಬಿಟ್ಟು ಬಿಡಿ ಮತ್ತೆ ಎಂದೂ ಇಲ್ಲಿಗೆ ಬರಲ್ಲ ಅಂತ ಕೂಗಾಡುವುದನ್ನ ನೋಡಿ ಪಕ್ಕದಲ್ಲಿದ್ದವನು ಮುಖಕ್ಕೆ ನೀರು ಎರಚಿದಾಗಲೇ ಗೊತ್ತಾಗಿದ್ದು ಇದು ಬರೀ ಕನಸು ಅಂತ.


Rate this content
Log in

Similar kannada story from Comedy