ವಾಸನೆ
ವಾಸನೆ
ಬಹಳ ಹಿಂದೆ ಮಾಜಿ ಪ್ರಧಾನಿಯವರ ಸಂಪುಟದಲ್ಲಿ ಒಬ್ಬ ಕೇಂದ್ರ ಮಂತ್ರಿ ಇದ್ದರು. ಇವರು ಪ್ರಧಾನಿಗೆ ಬಹಳ ಆಪ್ತರು. ಹಾಗಾಗಿ ಪ್ರಧಾನಿಗಳ ಎಲ್ಲಾ ಕಾರ್ಯಕ್ರಮಗಳಲ್ಲೂ ಜೊತೆಗೆ ಇರುತ್ತಿದ್ದರು. ಒಂದು ಸಾರಿ ಪ್ರಧಾನಿಯವರು ತಮ್ಮ ಸಿಬ್ಬಂದಿಯಲ್ಲಿ ಒಬ್ಬರನ್ನ ಕರೆದು ಬೆಳಗ್ಗೆ ಯಿಂದ ನನಗೆ ಏನೋ ಕೆಟ್ಟ ವಾಸನೆ ಮೂಗಿಗೆ ಹೊಡೆಯುತ್ತಿದೆ. ಕಾರಣ ತಿಳಿಯುತ್ತಿಲ್ಲ ಅಂತ ಹೇಳಿ ಸ್ವಲ್ಪ ಬೇಜಾರು ಮಾಡಿಕೊಂಡರು. ಇದನ್ನ ಕೇಳಿಸಿಕೊಂಡ ಪಕ್ಕದಲ್ಲೇ ಕುಳಿತಿದ್ದ ಆ ಮಂತ್ರಿ ತಮ್ಮ ಆಪ್ತರನ್ನ ಕರೆದು ಮೇಡಂ ಗೆ ಕೋಪ ಬರುವ ಮೊದಲು ಎಲ್ಲಿಂದ ಈ ಕೆಟ್ಟ ವಾಸನೆ ಬರುತ್ತಿದೆ ಅನ್ನುವುದನ್ನ ಕಂಡುಹಿಡಿಯಿರಿ. ಇಲ್ಲವಾದರೆ ಕಷ್ಟ ಅಂತ ಹೇಳಿದರು. ಆ ಕಾರ್ಯಕ್ರಮ ಮುಕ್ತಾಯವಾಗಿ ಪ್ರಧಾನಿ ಬೇರೊಂದು ಕಾರ್ಯಕ್ರಮಕ್ಕೆ ಹೊರಟರು. ಅಲ್ಲಿಗೆ ಈ ಮಂತ್ರಿಗಳು ಕಾರಣಾಂತರದಿಂದ ಹೋಗಲಿಲ್ಲ. ಪ್ರಧಾನಿಯವರ ಆ ಕಾರ್ಯಕ್ರಮದಲ್ಲಿ ಆ ಕೆಟ್ಟ ವಾಸನೆ ಇಲ್ಲದಿದ್ದ ಕಾರಣ ಸ್ವಲ್ಪ ನೆಮ್ಮದಿ ಇಂದ ಇದ್ದರು. ಅದನ್ನ ಕಂಡು ಹಿಡಿಯಬೇಕಾದ ಆ ಮನುಷ್ಯನಿಗೆ ವಿಷಯ ತಿಳಿದು ಮಂತ್ರಿಗಳಿಗೆ ಸುದ್ದಿತಿಳಿಸಿದ. ಮಾರನೇದಿನ ಮತ್ತೊಂದು ನಗರದಲ್ಲಿ ಕಾರ್ಯಕ್ರಮ.
ಅಲ್ಲಿಗೆ ಇದೇ ಮಂತ್ರಿಗಳು ಪಕ್ಕದಲ್ಲಿ ಕುಳಿತುಕೊಂಡು ಮೇಡಂ ನಿಮ್ಮ problem ಗೆ ಪರಿಹಾರ ಸಿಕ್ಕಿತಂತೆ ಅದಕ್ಕಾಗಿ ಒಬ್ಬನನ್ನ ನೇಮಿಸಿದ್ದೆ ಅಂತ ಹೇಳಿ, ಹೊಗಳಬಹುದೆಂದು ಕಾದರು. ಆದರೆ ಆಗಿದ್ದೆ ಬೇರೆ. ನಿನ್ನೆ ಪೂರ್ತಿ ದಿನ problem ಇರಲಿಲ್ಲ ಈಗ ಮತ್ತೆ ಶುರುವಾಯ್ತು ಅಂದರು. ಮಂತ್ರಿಗಳು ಅದೇ ಮನುಷ್ಯ ನಿಗೆ ಹೇಳಿಬರೋಣವೆಂದು (ಮೇಡಂ permission
ತೆಗೆದುಕೊಂಡು )ಎದ್ದು ಹೋದರು. ಆಗ ಗೊತ್ತಾಯ್ತು ಎಲ್ಲಿಂದ ಆ ವಾಸನೆ ಅಂತ. ಅದು ಬೇರೆಲ್ಲೂ ಅಲ್ಲದೆ ಅವರ ಎಂದೋ ಸೋಪು ಕಂಡ ಕಾಲುಚೀಲದಿಂದ ಅಂತ. ಬಂದ ತಕ್ಷಣ ಬೈದು
ಹೇಳಿದರು. Sorry madam ಅಂತ ಹೊರಗೆ ಹೋಗಿ ಸ್ವಲ್ಪ ಹೊತ್ತಿಗೆ ವಾಪಸ್ ಬಂದು ಬರೀ ಕಾಲಿಗೆ ಬೂಟ್ ಹಾಕಿ ಕೊಂಡಿರುವುದನ್ನ ತೋರಿಸಿದರು. ನಗುತ್ತಾ ok ok ಅಂದರು. ಆದರೆ ಮತ್ತೆ ಅದೇ ವಾಸನೆ ಗೆ ಮೂಗು ಮುಚ್ಚಿಕೊಂಡು ಕೇಳಿದರು ಏನಿದು ನೀವು ಬರೀ ಕಾಲಲ್ಲಿದ್ದರು ಈ ದುರ್ವಾಸನೆ ಅಂತ. ಅದಕ್ಕೆ ಮಂತ್ರಿಗಳು ಕಾಲಿಗೆ ಹಾಕಿಕೊಂಡರೆ ನಿಮಗೆ ವಾಸನೆ ಅಂತ ನೋಡಿ ಜೀಬಿನಲ್ಲಿ ಇಟ್ಟುಕೊಂಡಿದೀನಿ ಅಂದರು. ಅಂದಿನಿಂದ ಪ್ರಧಾನಿಯ ಜೊತೆಯಲ್ಲಿ ಅವರು ಮಂತ್ರಿಯಾಗಿ ಇರುವವರೆಗೂ ಎಲ್ಲೂಕಾಣಿಸಿಕೊಳ್ಳಲಿಲ್ಲವಂತೆ.