Surabhi Latha

Drama Tragedy Others

4  

Surabhi Latha

Drama Tragedy Others

ತಾಳ ತಪ್ಪಿದ ಶ್ರುತಿ

ತಾಳ ತಪ್ಪಿದ ಶ್ರುತಿ

2 mins
510


ತಾಳ ತಪ್ಪಿದ ಶೃತಿ - ಕಥೆಯಲ್ಲ ಜೀವನ 


ಒಂದೇ ಸಮನೆ ಬಯ್ಯುತ್ತಿದ್ದ ಅಕ್ಕನ ಮೇಲೆ ಶೃತಿಗೆ ಕೋಪ ಬರಲಿಲ್ಲ. ಬದಲಾಗಿ ಅವಳ ಮೇಲೆ ಪ್ರೀತಿಯೇ ಬಂದಿತು. 


ಶೃತಿಗೆ ಮದುವೆಯಾಗಿ ಐದು ವರ್ಷ ದಾಟಿತ್ತು . ಗಂಡನಿಗೆ ಬರುವ ಹತ್ತು ಸಾವರ ಸಂಬಳದಲ್ಲಿ ಸುಖವಾಗಿ ಜೀವನ ಸಾಗಿಸಬಹುದಿತ್ತು . 

ಮನೋಹರನ ತಂದೆ ತಾಯಿ ಬೇರೆ ಕಡೆ ಇರುತ್ತಿದ್ದರು.  ಶೃತಿಗೆ ಮದುವೆಯಾದಗಿನಿಂದಲೂ ಗಂಡನಿಂದ ಸುಖವಿರಲಿಲ್ಲ 

ಒಂದು ಪ್ರೀತಿಯ ಮಾತು ಒಂದು ಅಪ್ಪುಗೆ ಏನೂ ಇಲ್ಲ. ಗಂಡ ಎಷ್ಟೇ ಚುಚ್ಚು ನುಡಿಗಳಾಡುತ್ತಿದ್ದರೂ ಶೃತಿಗೆ ಗಂಡನ ಮೇಲೆ ಹುಚ್ಚು ಪ್ರೀತಿ. 

ಎಲ್ಲಾ ಹೆಣ್ಣಿನಂತೆ ತಾನು ತಾಯಿಯಾಗುವ ಬಯಕೆ ಹೊತ್ತಾಗ ಮನೋಹರ್ ಹೇಳಿದ್ದ " ನನಗೆ ಸಂಬಳ ಸಾಲದು ಇನ್ನೂ ಕೆಲವು ದಿನ ಕಳೆಯಲಿ ನಂತರ ಯೋಚಿಸೋಣ " ಎಂದು ಶೃತಿ ಅಂದು ಒಪ್ಪಿದ್ದಳು. ನಂತರದ ದಿನಗಳಲ್ಲಿ ತಂದೆ ತಾಯಿಯನ್ನು ಕರೆದುಕೊಂಡು ತನ್ನ ಬಳಿಯೇ ಇರಿಸಿಕೊಳ್ಳುವೆ ಎಂದ ಅದಕ್ಕು ಒಪ್ಪಿಗೆ ಸೂಚಿಸಿದ್ದಳು. 


ಆದರೆ ದಿನಗಳು ಕಳೆದಂತೆ ಮನೋಹರ್ ಶೃತಿಯಿಂದ ಹೆಚ್ಚು ಹೆಚ್ಚು ದೂರವಾಗೇ ಹೋಗುತ್ತಿದ್ದ . 

ಯಾವುದೇ ಹೆಣ್ಣಿಗಾದರೂ ಗಂಡ ತನ್ನ ಬಳಿ ಪ್ರೀತಿಯಿಂದ ನಾಲ್ಕು ಮಾತಾಡಲಿ ಮುದ್ದು ಗರಿಯಲಿ ಎಂಬ ಆಸೆ ಇರುವುದು ಸಹಜ . ಆದರೆ ಶೃತಿಗೆ ವರ್ಷಗಳು ಕಳೆದರೂ ನಿರಾಸೆ ಕಟ್ಟಿಟ್ಟ ಬುತ್ತಿಯಂತಾಗಿತ್ತು. ಗಂಡನಿಂದ ಯಾವುದೇ ಸುಖವು ಸಿಗದಾದಗ ಅವನ ಮೇಲಿನ ಕೋಪ ಅತ್ತೆ ಮಾವನ ಮೇಲೆ ತೋರಿಸುವಂತಾಗುತ್ತಿತ್ತು. 


ಅತ್ತೆ ಮಾವ ಹಿರಿಯವರಾಗಿ ಮಗನ ಸಂಸಾರ ಕಣ್ಣು ಮುಂದೆ ಹಾಳಾಗುತ್ತಿದ್ದರೂ ಸೋಸೆಯನ್ನೇ ದೂರುತ್ತಿದ್ದರು. ಶೃತಿಯ ತಂದೆ ತಾಯಿ ಅವಳಿಗೆ ಗಂಡನಿಂದ ಡೈವರ್ಸ್ ತೆಗೆದುಕೊಂಡು ಬಿಡು, ಇರುವುದು ಒಬ್ಬಳೇ ಹೆಣ್ಣು ಮಗಳು, ಗಂಡಂತೆ ಸಾಕುತ್ತೇವೆ ಎಂದಾಗಲೂ ಶೃತಿಗೆ ಗಂಡನ ಮೇಲಿದ ಪ್ರೀತಿಯಿಂದ ಅದಕ್ಕೆ ಒಪ್ಪದೆ ಅವನೇ ಬೇಕೆಂದು ಕಾದಿದ್ದಳು.


ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬರುತ್ತದೆ ಗಂಡನಿಂದ ಪ್ರೀತಿ ಸಿಗುತ್ತದೆ ಎಂದು ಕಾದಿದ್ದಳು. ಮನೋಹರ್ ಬೆಳಗ್ಗೆ ತಿಂಡಿ ತಿಂದು ಹೋದರೆ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬರುತ್ತಿದ್ದ ಬಂದವನು ಕೈ ಕಾಲು ಸಹ ತೊಳೆಯದೆ ಊಟ ಮಾಡಿ ಒಂದು ಗಂಟೆಯವರೆಗೆ ಮೊಬೈಲ್ ಇಟ್ಟುಕೊಂಡು ಕೂರುತ್ತಿದ್ದ . ಶೃತಿ ಏನಾದರೂ ಮಾತನಾಡಲು ಹೋದರೆ ಜಗಳವಾಡುತ್ತಿದ್ದ . ಅವಳು ಮಾತನಾಡಲೇ ಹೆದರುವಂತಾಗಿತ್ತು. ಒಂದು ಮಗುವಿನ ಬಯಕೆ ಇಟ್ಟಾಗಲೂ ತಾನು ದುಡಿದು ತಂದು ಕೊಟ್ಟರೂ ಸಹ ಅವನ ನಡವಳಿಗೆ ಬದಲಾಗಲೇ ಇಲ್ಲ . ಅವನೊಬ್ಬ ಅರ್ಥವಾಗದೇ ಬಿಡಿಸಲಾಗದ ಗಂಟಿನಂತಾಗಿದ್ದ .


ಇದೇ ಕಾರಣಕ್ಕೆ ತನ್ನ ಅಕ್ಕ (ದೊಡ್ಡಮ್ಮನ ಮಗಳು) ಅಮೃತ  ಅವಳಿಗೆ ಬಯ್ಯುತ್ತಿದ್ದಳು. 


" ಐದು ವರ್ಷ ದಿಂದ ಅವನಿಂದ ಯಾವುದೇ ಸುಖವು ಇಲ್ಲ, ನೆಮ್ಮದಿ ಯೂ ಇಲ್ಲ ಹೀಗಿದ್ದರೂ ಅವನೇ ಬೇಕು ಎಂಬ ಹಟ ನಿನಗೆ ಯಾಕೆ? 

ಐದು ವರ್ಷವಾದರೂ ನಿನ್ನ ಮುಟ್ಟಿಯೂ ನೋಡಿಲ್ಲವೆಂದರೆ ಅವನು ನಿಜವಾಗಿ ಗಂಡಸಲ್ಲ ಎಂಬ ಅನುಮಾನ ನನಗೆ, ನಿನ್ನ ಪ್ರೀತಿಯಿಂದ ನೋಡಿಕೊಳ್ಳದಿರುವಾಗ ಅವರ ತಂದೆ ತಾಯಿಗೆ ನಿನ್ನ ಪ್ರೀತಿ ಗೌರವ ಹೇಗೆ ಸಿಗುತ್ತದೆ.? ನಿನ್ನ ಜೀವನ ನೀನೇ ಹಾಳು ಮಾಡಿಕೊಳ್ಳಬೇಡ, ಅವನನ್ನು ಬಿಟ್ಟು ಹೊರ ಬಾ ಆಗಲಾದರೂ ನೀನು ಬೇಕು ಅಂತ ಅವನಿಗೆ ಅನಿಸಿದರೆ ಬರಲಿ" ಅಕ್ಕ ಒಂದೇ ಸಮನೆ ಹೇಳುತ್ತಿದ್ದಳು. 


"ಒಮ್ಮೆ ಮದುವೆಯಾಗಿ ಹೋದ ಮೇಲೆ ಮತ್ತೆ ತಾಯಿಯ ಮನೆಯಲ್ಲಿ ಕೂತು ಅವರಿಗೆ ಕೆಟ್ಟ ಹೆಸರು ತರುವುದು ಸರಿಯೆ?"

ಎಂದು ಕೇಳುತ್ತಿದ್ದಳು ಶೃತಿ. 


ಅಕ್ಕ : " ಈಗೀನ ಕಾಲದಲ್ಲಿ ಅವೆಲ್ಲವೂ ಯಾರೂ ಕೇಳುವರು? ಸಂತೋಷವಾಗಿ ಇದ್ದಾಗ ಬದು ಕೇಳದ ಜನ ನೊಂದಾಗ ಬರುವರೆ? ಅದು ನಿನ್ನ ಹುಚ್ಚು, ಪ್ರೀತಿ ವಿಶ್ವಾಸ ನಂಬಿಕೆ ಇಟ್ಟು ಹೆಂಡತಿಯನ್ನು ಒಲಿಸಿಕೊಳ್ಳದವನು ಜೀವನದಲ್ಲಿ ಏನು ತಾನೆ ಸಾಧಿಸಿಯಾನು?  ಒಂದು ಮನೆಯಲ್ಲಿ ಹೆಣ್ಣು ನಗುತ್ತ ನೆಮ್ಮದಿಯಿಂದ ಬಾಳುತ್ತಿದ್ದರೆ ಮಾತ್ರವೇ ಆ ಮನೆ ಏಳ್ಗೆ ಕಾಣುತ್ತದೆ ಎಂದು ಪುರಾಣಗಳಲ್ಲಿ ಹೇಳಿದೆ"


ಶೃತಿ ವರ್ಷಗಳಿಂದ ನೊಂದು ಬೇಯುತ್ತಿದ್ದಳು. ಅದಕ್ಕೆ ತಕ್ಕಂತೆ ಅತ್ತೆ ಮಾವನಿಗೆ ಏನಾದರೂ ಒಂದು ಖಾಯಿಲೆ ಅವರನ್ನು ಅಂಟುಕೊಂಡೇ ಇತ್ತು. 


ಮುಂದೆ..ನಿರೀಕ್ಷಿಸಿ. 


ನಿಮ್ಮ ಅನಿಸಿಕೆ ಯನ್ನು ತಿಳಿಸಿ 



Rate this content
Log in

Similar kannada story from Drama