Surabhi Latha

Drama Romance Others

4  

Surabhi Latha

Drama Romance Others

ಪತ್ರ

ಪತ್ರ

2 mins
389



ಅಂದು ಗೆಳತಿಯ ಮದುವೆಯ ಸಂಭ್ರಮದಲ್ಲಿ ನಿನ್ನ ಕಂಡಿದ್ದೆ . ಮೌನವಾಗೇ ಎಲ್ಲರನ್ನೂ ನಗು ಮುಖದಿಂದ ಸತ್ಕರಿಸುತ್ತಿದ್ದೆ ನೀನು . 

ಆಗಾಗ ನನ್ನ ಕಡೆ ನಿನ್ನ ನೋಟ ಹರಿಯುತ್ತಿತ್ತು . ಅಲ್ಲಿ ಬಂದ ಹುಡುಗಿಯರೆಲ್ಲರೂ ತುಂಬಾ ಅಂದವಾಗೇ ಇದ್ದರೂ ನಿನ್ನ ನೆಟ್ಟ ನೋಟವು ಮಾತ್ರ ನನ್ನ ಮೇಲೆಯೇ ಇತ್ತು . 

ಮುಜುಗರ ಎನಿಸಿದರೂ ಏಕೋ ಆ ನಿನ್ನ ನೋಟ ಇಷ್ಟವಾಗಿತ್ತು . ನಿನಗಾಗೇ ಅಂದು ಆರತಕ್ಷತೆ ದಿನ ಮುತುವರ್ಜಿಯಿಂದ ಹೆಚ್ಚಾಗೇ ಅಲಂಕರಿಕೊಂಡಿದ್ದೆ . 

ಮಧು ಮಗಳ ಪಕ್ಕ ನಿಂತ ನಾನು ನಿನ್ನ ಹುಡುಕಿದ್ದೆ . ಏಕೊ ಕಾಣೆ ನೀನು ಕಾಣಲೇ ಇಲ್ಲ . ಮನಸ್ಸು ಪೆಚ್ಚಾಗಿತ್ತು . 

ನೀನು ಯಾರೋ . ಏನೋ ನಿನ್ನ ಬಗ್ಗೆ ನನಗೇನೂ ತಿಳಿದಿಲ್ಲ . ಆದರೂ ನಿನಗೇಕೆ ನಾನು ಕಾಯ ಬೇಕು ? 

ಗೊಂದಲಗಳು ಮನದಲ್ಲಿ ಇದ್ದರೂ ಕಣ್ಣು ಮಾತ್ರ ನಿನ್ನೇ ಹುಡುಕುತ್ತಿತ್ತು . 

ನೋರಾರು ಜನರ ಮಧ್ಯೆ ಹೇಗೆ ಹುಡುಕಲಿ ನಿನ್ನ , ಎಲ್ಲಿ ಹೋದ ಇವನು ? 

ಯೋಚಿಸುತ್ತಿರುವಾಗಲೇ ನನ್ನ ಕಿವಿಯ ಬಳಿ ನೀನು  

ನುಡಿದಿದ್ದೆ . " ಹುಡುಕುತ್ತಿರುವುದು ನನ್ನ ? " ಗಾಬರಿಯಿಂದ ನಿನ್ನ ನೋಡಿದವಳಿಗೆ ನೀನು ನನ್ನ ಪಕ್ಕದಲ್ಲೇ ನಿಂತು ನನ್ನ ಕಣ್ಣು ನೋಡುತ್ತಿದ್ದೆ. 

ಅಲ್ಲಿನ ವಾತಾವರಣ , ಜನ ಎಲ್ಲರನ್ನೂ ಒಂದು ಕ್ಷಣ ನಾವಿಬ್ಬರೂ ಮರೆತು ಕಣ್ಣೊಳಗೆ ಕಣ್ಣು ಬೆರೆಸಿದ್ದೆವು .

ಪಕ್ಕದಲ್ಲಿ ನಿಂತ ಗೆಳತಿ ಸುಮತಿ ಕರೆದಾಗಲೇ ಇಬ್ಬರೂ ಎಚ್ಚರ ಗೊಂಡಿದ್ದು. 

love is first sight ಎಂದು ಯಾರು ಹೇಳಿದರೋ ಅದು ನಿಜವಾಗಿ ಇದೇ ನಾ ? 

ನೆನೆದಾಗ ಈಗಲೂ ನಗು ಬರುತ್ತದೆ. ಮಾರನೆಯ ದಿನ ಹಿಂದಿರುಗಿ ಬೆಂಗಳೂರಿಗೆ ಬರಬೇಕಿತ್ತು . ಮನಸ್ಸು ಮಾತ್ರ ನಿನ್ನ ಬಳಿಯೇ ಇತ್ತು .  

ಎಷ್ಟು ಆತ್ಮ ವಿಶ್ವಾಸ ದಿಂದ ನುಡಿದಿದ್ದೆ ನೀನು . ಎರಡು ದಿನದಲ್ಲಿ ನನ್ನ ಕಾಣಲು ಬರುವೆ ಎಂದಿದ್ದೆ . 

ನಾನು ನಿನ್ನ ಕೆಣಕಿದ್ದೆ . " ನಾನು ಯಾವುದೇ ರೀತಿಯ ನನ್ನ ಮಾಹಿತಿ ಕೊಡುವುದಿಲ್ಲ ಹೇಗೆ ನನ್ನ ಕಾಣಲು ಬರುವೆಯೋ ನೋಡೋಣ" ಎಂದಿದ್ದೆ .

ಆದರೆ ಆ ನಿನ್ನ ಮುಗಳು ನಗೆಯಲ್ಲಿ ಉತ್ತರ ಸಿಕ್ಕಿತ್ತು.

ಯಾರನ್ನು ಹೆಚ್ಚು ಹಚ್ಚಿಕೊಂಡವಳಲ್ಲ . ಆದರೆ ಹುಡುಗ ನೀನು ಏನು ಮೋಡಿ ಮಾಡಿದೆಯೋ ಗೊತ್ತಿಲ್ಲ ಕಣೋ 

ಪ್ರತೀ ಕ್ಷಣವೂ ನಿನ್ನ ಬರುವಿಕೆಗಾಗಿ ಕಾಯುತ್ತಿತ್ತು ಮನ. 

ನಿನ್ನ ಎದುರಿನಲ್ಲಿ ಮನಬಿಚ್ಚಿ ಮಾತನಾಡಲು ನಾಚಿದ್ದರೂ . ಮನಸು ತುಂಬಾ ನಿನ್ನ ದೇ ಯೋಚನೆ ಕಣೋ. 

ಅಂದು ನೀನು ಹೇಳಿದಂತೆ ಅಣ್ಣನ ಜೊತೆ ಮನೆಗೆ ಬಂದಿದ್ದೆ . ಅಣ್ಣ ನಿನ್ನನ್ನು ನನಗೆ ಪರಿಚಯ ಮಾಡಿ ಕೊಟ್ಟಾಗ ಏನೂ ಅರಿಯದವಳಂತೆ ನಿನ್ನ ನೋಡಿ ಮುಗುಳು ನಕ್ಕು ಒಳ ಹೋಗಿದ್ದೆ . 

ನೀನು ಇರುವ ವರೆಗೂ ಹೊರಗೆ ಬರದೇ ಹೋದೆ . ನಿನ್ನ ಕಣ್ಣು ನನಗಾಗಿ ಹುಡುಕುತ್ತಿತ್ತು . ಅದು ನನಗೂ ಗೊತ್ತು ಕಣೋ. 

ಆದರೆ ಏನು ಮಾಡಲಿ ಅಣ್ಣನ ಎದುರು ನಿನ್ನ ಮಾತನಾಡಿಸಲು ಏನೋ ನಾಚಿಕೆ .

ಅಣ್ಣ ನಾನು ಗೆಳೆಯರ ತರಹ ವಿದ್ದರೂ . ಈ ವಿಷಯದಲ್ಲಿ ಮಾತ್ರ ಏನೋ ಅಂಜಿಕೆ ಕಾಡಿದ್ದು ನಿಜ. 

ಮುನಿಸಿನಿಂದ ನಿನ್ನ ಮುಖ ಕೆಂಪೇರಿದ್ದನ್ನು ನಾನು ಕೊಠಡಿ ಯ ಕಿಟಕಿಯಿಂದಲೇ ನೋಡಿದ್ದೆ. 

ನೀನು ಹೊರಡುವಾಗಲೂ ನಾನು ಹೊರಗೆ ಬರಲೇ ಇಲ್ಲ . 

ಮತ್ತೆ ನಿನ್ನ ಕಾಣುವ ಅವಕಾಶ ಕ್ಕಾಗಿ ಕಾದಿದ್ದವಳಿಗೆ ಎರಡು ದಿನದ ನಂತರ ನನ್ನ ಹುಟ್ಟು ಹಬ್ಬ ನೆನಪಿಗೆ ಬಂತು . 

ಈಗಲೂ ನಿನ್ನ ಬಗ್ಗೆ ಅಣ್ಣನಿಗೆ ಹೇಳಲಿಲ್ಲ ಎಂದರೆ ಮತ್ತೆ ನಾವು ಸಿಗುವುದು ಕಷ್ಟ ವಾಗಿತ್ತು . ಅದಕ್ಕಾಗಿ ಅವನಿಗೆ ನಿನ್ನ ಬಗ್ಗೆ ಹೇಳಿದ್ದೇನೆ . 

ಅಂದು phone ಮಾಡಿದಾಗಲೂ ನೀನು ನನ್ನ ಮೇಲಿನ ಕೋಪದಿಂದ ಸರಿಯಾಗಿ ಮಾತು ಆಡಿರಲಿಲ್ಲ . 

ಅದಕ್ಕಾಗಿ ನಾನು ನಿನ್ನ ಕ್ಷಮೆ ಕೇಳುವೆ ಗೆಳೆಯ . ಸತಾಯಿಸದೇ ಬಂದು ಬಿಡೋ . 

ನಿನ್ನ ಇರುವಿಕೆಯನ್ನು ಈ ನನ್ನ ಪುಟ್ಟ ಹೃದಯ ಕಾಯುತ್ತಿದೆ ಕಣೊ . 

ಮತ್ತೆ ನಿನ್ನ ಕಣ್ಣಲ್ಲಿ ಕಣ್ಣು ಬೆರೆಸಿ ಕ್ಷಮೆ ಯಾಚಿಸ ಬೇಕಿದೆ . ನಿರಾಸೆಗೋಳಿಸುವುದಿಲ್ಲ ಎಂಬ ನಂಬಿಕೆ ನನಗಿದೆ .

ನಿನ್ನ ಬರುವಿಕೆಗಾಗಿ ಕಾಯುತ್ತಿರುವ ನಿನ್ನ 

ಸನ್ನಿದಿ .



Rate this content
Log in

Similar kannada story from Drama