Surabhi Latha

Classics Inspirational Others

4  

Surabhi Latha

Classics Inspirational Others

ಸತ್ಯ

ಸತ್ಯ

1 min
264


ಪ್ರಿಯ ಸ್ನೇಹಿತರೇ, ಬಂಧುಗಳೇ,


ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.


೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.


೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.


೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.


ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.


ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!


೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.


೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.


೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!


ನಾನು ಹುಟ್ಟಿದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.


ನೀತಿ:

ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು. "ಭಗವತ್ ಗೀತೆ ನುಡಿ "


ಹುಟ್ಟಿದಾಗ ನೀ ಅಳುತ್ತಿದ್ದೆ,

 ಮಡಿದಾಗ ನಿನ್ನವರು ಅಳುತ್ತಿದ್ದರು.


ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,

ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.


ಹುಟ್ಟಿದಾಗ ಹುಡುಕುವರು ನಿನಗೆ

ನೂರೆಂಟು ನಾಮ,

ಮಡಿದಮೇಲೆ ಶವ ಎಂದೇ

ನಿನ್ನ ನಾಮ.


ನೀನೇನನ್ನೂ ಗಳಿಸದೇ ಬಂದೆ, 

ಮಡಿದಾಗ

ನೀನು ಗಳಸಿದ್ದನ್ನು ಕಳದುಕೊಂಡೆ.


ಓ ಮಾನವಾ..

ಮಡಿದಾಗ ಮಣ್ಣಲ್ಲಿ ಮರಳಾಗಿ

ಹೊಗುವ ನೀನು

 ನಿನ್ನದು ಎನ್ನಲು ನಿನಗೇನಿದೆ,


ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,


ಕಡೆಗೆ ನಿನ್ನ ಅಂತ್ಯ ಸಂಸ್ಕಾರ

ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.


ನಾನು ಎಂದು ಅಹಂಕರಿಸಲು

ನಾನು ಯಾರು ?

ಏನಿದೇ ನನ್ನಲ್ಲಿ ?


ಚಿಂತಿಸುವವನಿಗೆ ದೃಷ್ಟಾಂತವಿದೆ. 



Rate this content
Log in

Similar kannada story from Classics