STORYMIRROR

Surabhi Latha

Comedy Drama Others

3  

Surabhi Latha

Comedy Drama Others

ಹಾಸ್ಯ

ಹಾಸ್ಯ

1 min
560

 ಅಡಿಗೆ ಮಾಡುವ ವಿಡಿಯೊ ನೋಡುತ್ತಿದ್ದೆ ಮಾಡಲು. ಸಾಕಷ್ಟು ಬಾರಿ ನೋಡಿ ಮಾಡಿದ್ದೆ ಕೂಡಾ. ಅದು ಚೆನ್ನಾಗಿತ್ತು.

ಈ ಸಾರಿನು ಮಾಡೋಣ ಅಂತ ಅಡಿಗೆ ಹೆಸರು ಕೇಳೂಕೆ ಆಗಲಿಲ್ಲ. ಅಡಿಗೆ ವಿಡಿಯೋ ಶುರುವಾಗಿತ್ತು. ಅವರು ಹೇಳುತ್ತಾ ಹೋದರು. ನಾನು ಇಲ್ಲಿ ತಯಾರಿ ಮಾಡಿಕೊಳ್ಳುತ್ತಾ ಹೋದೆ. ಈರುಳ್ಳಿ, ಬೆಳ್ಳುಳ್ಳಿ, ಟೋಮೇಟೋ. ಕೊತ್ತಂಬರಿ, ಗರಂಮಸಾಲ ಇನ್ನು ಏನೇನೋ ಮಸಾಲೆ ಪದಾರ್ಥಗಳು ಹೀಗೆ ಎಲ್ಲಾ ತಯಾರಿ ಮಾಡಿಕೊಂಡೆ. ಅವರು ಹೇಳಿದಂತೆ ಒಗ್ಗರಣೆ ಹಾಕಿದೆ. ಇದಕ್ಕೆ ಇನ್ನೇನು ಸೇರಿಸಬೇಕು ಅಂತ ನೋಡುತ್ತಿದ್ದೆ ನೋಡಿದರೆ ಅರ್ಧ ಕೆಜಿ ಅದೆಂತದೋ ಮಾಂಸದ ತುಂಡುಗಳನ್ನು ಕತ್ತರಿಸಿ, ಸೇರಿಸಿ ಬಿಡೋದಾ? 


ಅಯ್ಯಾ ಕರ್ಮ! ದೇವರೇ, ಈಗ ಈ ಮಸಾಲೆನ ಏನು ಮಾಡಲಪ್ಪ? ಛೆ!, ಸರಿಯಾಗಿ ತಿಳಿಯದೆ ಹೀಗೆ ಮಾಡಿಕೊಂಡನಲ್ಲ ಅಂತ ಕೊನೆಗೆ ಅದನ್ನೇ ಟಮೋಟೂ ಗೊಜ್ಜು ಮಾಡಿದೆ. ನಾನಂತೂ ಆ ಮಸಾಲೆ ಹಾಕಿರೋದು ತಿನ್ನಲಿಲ್ಲ. ಯಜಮಾನರಿಗೆ ಬಡಿಸಿದೆ ಅವರ ಮುಖ ನೋಡುತ್ತಿದ್ದೆ, ಏನಾದರೂ ಮುಖದ ಚಹರೆ ಬದಲಾಗುತ್ತಾ ಅಂತ. ಆದ್ರೆ ಪಾಪ ಅವರು ಏನೂ ಮಾತಾಡದೆ ತೆಪ್ಪಗೆ ತಿಂದು ಹೋದರು.



Rate this content
Log in

Similar kannada story from Comedy