Surabhi Latha

Abstract Comedy Others

4  

Surabhi Latha

Abstract Comedy Others

ನೆನಪು

ನೆನಪು

2 mins
1.7K



ಹೋದ ವರ್ಷ ರಜೆಗೆಂದು ಹರಿಹರದಲ್ಲಿರುವ ಅಕ್ಕನ ಮನೆಗೆ ಹೋಗಿದ್ದೆ . 

ಅಕ್ಕ ಭಾವ ತುಂಬಾ ಪ್ರೀತಿಯಿಂದ ಬರ ಮಾಡಿಕೊಂಡರು 


ಬೆಂಗಳೂರಿನಲ್ಲಿ ನೋಡಬೇಕೆಂದರೂ ಒಂದು ಕೋತಿ ಸಿಗುವುದಿಲ್ಲ . ಆದರೆ ಅಕ್ಕನ ಮನೆಯ ಬಳಿ ಹಿಂಡು ಹಿಂಡು ಕೋತಿಗಳು ಬರುತ್ತದೆ. 

ನನಗೆ ಅದನ್ನು ನೋಡುವುದೆಂದರೆ ತುಂಬಾ ಇಷ್ಟ. ಅಕ್ಕ ಬಿಸಿ ಬಿಸಿ ಚಪಾತಿ ಮಾಡಿ ನನ್ನ ತಟ್ಟೆಗೆ ಹಾಕುತ್ತಿದ್ದರೆ , ನಾನು ಅದನ್ನು ಚೂರು ಚೂರು ಮಾಡಿ ಕೋತಿಗಳಿಗೆ ಹಾಕುತ್ತಿದ್ದೆ . 


ಅಕ್ಕ ಹೇಳುತ್ತಿದ್ದಳು " ಹೀಗೆ ರೂಡಿ ಮಾಡು ,ದಿನಾ ಅದು ಹಿಂಡು ಹಿಂಡು ಒಂದೇ ಸರಿ ಬಂದು ಬಿಡುತ್ತದೆ " ಎಂದು.


ಅಲ್ಲಿನ ಕೋತಿಗಳಿಗೆ ನಿಜವಾಗಿಯೂ ತುಂಬಾ ಧೈರ್ಯ. ಕೋಪ ಬಂದರೆ ಮೈಮೇಲೆ ಹಾರುತ್ತದೆ . ಆದರೂ ಪುಟ್ಟ ಪುಟ್ಟ ಮರಿ ಕೋತಿ ನೋಡಲು ತುಂಬಾ ಮುದ್ದು ಅನ್ನಿಸುತ್ತೆ. 


ಅಕ್ಕ ಭಾವನ ಜೊತೆ ರಾತ್ರಿ ಹತ್ತು ಗಂಟೆಯ ವರೆಗೂ ಹರಟೆ ಹೊಡೆಯುತ್ತ ಕುಳಿತು ಬಿಡುತ್ತಿದ್ದೆ. 


ಒಂದು ವಾರ ಹೇಗೆ ಕಳೆಯಿತೋ ತಿಳಿಯಲೇ ಇಲ್ಲ. 

ಅಂದು ಮತ್ತೆ ಬೆಂಗಳೂರಿಗೆ ಮರಳಿ ಬರಬೇಕಿತ್ತು. ಅವತ್ತು ಅಕ್ಕ ನನಗೆ ಇಷ್ಟ ಅಂತ ಒಬ್ಬಟ್ಟು ಮಾಡಿದಳು . ಊಟದ ಸಮಯ ವಾಗಿತ್ತು . ಭಾವ ಇನ್ನೂ ಬಂದಿರಲಿಲ್ಲ .ಎಲ್ಲರೂ ಒಟ್ಟಿಗೆ ಊಟ ಮಾಡಲು ಭಾವನಿಗಾಗಿ ಕಾದೆ. 


ಅಕ್ಕನ ಮನೆಯಲ್ಲಿ ಎರಡು ಬಾಗಿಲು. ಮುಂದೆ ಒಂದು . ಹಿಂದೆ ಹಿತ್ತಲ ಬಾಗಿಲು ಒಂದು. ಅಡಿಗೆ ಮನೆಯನ್ನು ದಾಟಿ ಹಿತ್ತಲಿಗೆ ಹೋಗಬೇಕು. ಅಲ್ಲಿ ವಾಶಿಂಗ್ ಮಿಷನ್ ಹಾಗೂ ಪಾತ್ರೆ ತೊಳೆಯಲು ಹಿತ್ತಲಲ್ಲಿ ಜಾಗ ಮಾಡಿ ಕೊಂಡಿದ್ದಾರೆ.


ಹಿತ್ತಲ ಕಡೆ ತುಂಬಾ ಗಿಡ ಮರಗಳು ಇದೆ ನೋಡಲು ತುಂಬಾ ಚೆನ್ನಾಗಿದೆ. 


ಅಕ್ಕ ಹೇಳಿದಳು " ಒಬ್ಬಟ್ಟು ಮಾಡಿದ ಪಾತ್ರೆಗಳನ್ನು ಹಿತ್ತಲಲ್ಲಿ ಹಾಕಿಬರುತ್ತೇನೆ . ಅಷ್ಟರಲ್ಲಿ ಟೈಮ್ ಆಗುತ್ತದೆ ಒಟ್ಟಿಗೆ ಊಟ ಮಾಡೋಣ " ಎಂದಳು . ನಾನು ಟಿವಿ ನೋಡುತ್ತಾ ಕುಳಿತೆ . 


ಕರೆಗಂಟೆ ಕೇಳಿ ಅಕ್ಕ ಒಳಗಿನಿಂದ ಬಂದು ಬಾಗಿಲು ತೆರೆದಳು . ನಾವೆಲ್ಲ ಊಟಕ್ಕೆ ಕುಳಿತೆವು ಅರ್ಧ ಊಟ ವಾಗಿತ್ತು ಅಕ್ಕ ಒಬ್ಬಟ್ಟ ತರಲು ಅಡಿಗೆ ಮನೆಗೆ ಹೋದಳು. ಅಲ್ಲಿ ಒಬ್ಬಟ್ಟಿನ ಪಾತ್ರೆ ಕಾಣಲಿಲ್ಲ . ಅವಳು ನನ್ನ ನ್ನು ಕೇಳಿದಳು . ನಾನು ಅಲ್ಲಿ ನೋಡಿದೆ ಒಬ್ಬಟ್ಟಿನ ಪಾತ್ರೆ ಕಾಣಲೇ ಇಲ್ಲ . ಇಟ್ಟ ಕಡೆ ಪಾತ್ರೆ ಮಾಯವಾಗಿತ್ತು. 


ನಾನು ಹಿತ್ತಲ ಕಡೆ ನೋಡಲು ಹೋದೆ ಅಷ್ಟೇ , 

ಅಲ್ಲಿ ನಾನು ಹಾಗೇ ಕುಳಿತೆ ನಗು ತಡೆಯಲು ಆಗಲೇ ಇಲ್ಲ . ಕಣ್ಣಲ್ಲಿ ನೀರು ಬರುವಷ್ಟು ನಗು .


ನನ್ನ ನಗುವಿನ ಶಬ್ದ ಕೇಳಿ ಅಕ್ಕ ಭಾವ ಓಡಿ ಬಂದರು. 

ಅಕ್ಕನ ಮುಖದಲ್ಲಿ ಕೆಂಡದಂತ ಕೋಪ .


ಭಾವ ನಾನು ನಗುತ್ತಿದ್ದದ್ದನ್ನು ನೋಡಿ ನಗಬೇಕೋ ಅಥವಾ ಅಕ್ಕನನ್ನು ಸಮಾಧಾನ ಮಾಡಬೇಕೋ ತಿಳಿಯದೆ ಗೊಂದಲದಲ್ಲಿ ಇದ್ದರು. 


ಅಲ್ಲಿ ನಡೆದದ್ದು ಇಷ್ಟು.


ಅಕ್ಕ ಹಿತ್ತಲಲ್ಲಿ ಪಾತ್ರೆ ಹಾಕುತ್ತಿದ್ದವಳು ಭಾವ ಬಂದರು ಅಂತ ಬಾಗಿಲು ತೆಗೆಯಲು ಬಂದಿದ್ದಳು . ಹಾಗೆಯೇ ಊಟಕ್ಕೆ ಕುಳಿತೆವು .ಹಿತ್ತಲ ಬಾಗಿಲು ಮುಚ್ಚಿರಲಿಲ್ಲ. 


ಬುದ್ಧಿವಂತ ಕೋತಿ ಒಬ್ಬಟ್ಟಿನ ಪಾತ್ರೆ ಹೊತ್ತು ಹೋಗಿತ್ತು. ಅಲ್ಲಿ ಹತ್ತು ಕೋತಿಗಳು ಇರಬಹುದು ಎಲ್ಲವೂ ಹಿತ್ತಲಲ್ಲಿ ಒಬ್ಬಟ್ಟನ್ನು ಚೆಲ್ಲಾ ಪಿಲ್ಲಿ ಮಾಡಿ ಹಬ್ಬ ಮಾಡಿ ತಿನ್ನುತ್ತಿದ್ದವು . ಮರಿ ಕೋತಿ ಇಂದ ಹಿಡಿದು ದಡೂತಿ ಕೋತಿಯವರೆಗೂ . 


ನನಗೋ ಅದನ್ನು ನೋಡಿ ನಗು. ಪಾಪ ಅಕ್ಕ ನನಗಾಗಿ ಕಷ್ಟ ಪಟ್ಟು ಮಾಡಿದ್ದಳು . 


ನಾನು ಒಂದು ಸಹ ತಿಂದಿರಲಿಲ್ಲ ವಲ್ಲ ಎಂದು ಹೊಟ್ಟೆ ಉರಿಸಿಕೊಂಡಳು . 


ಅಂದು ಸಾಯಂಕಾಲ ನನಗೆ train book ಆಗಿತ್ತು. ಹಾಗಾಗಿ ನಾನು ಬರಲೇ ಬೇಕಾಯಿತು. 


train ನಲ್ಲಿ ಕುಳಿತರೂ ಆ ಕೋತಿಗಳನ್ನೆ ನೆನಸಿಕೊಡು ಬೆಂಗಳೂರು ಬರುವ ತನಕ ನಗು ಬರುತ್ತಲೇ ಇತ್ತು. 



Rate this content
Log in

Similar kannada story from Abstract