Surabhi Latha

Inspirational Others Children

4  

Surabhi Latha

Inspirational Others Children

ಅಮ್ಮ

ಅಮ್ಮ

1 min
395


ನಾನು ಚಿಕ್ಕವಳಿರುವಾಗ ಅಮ್ಮ ನಂಗೆ ಒಂದು ಹೊಸ ಹುಂಡಿ ಕೊಡಿಸಿದ್ದರು. ಅದರಲ್ಲಿ ಮೊಟ್ಟಮೊದಲ ಸಾರಿ ಅಮ್ಮ ಹಣ ಹಾಕಿ ಪ್ರತೀ ದಿನ ದುಡ್ಡು ಕೊಟ್ಟು ಹಾಕಿಸುತ್ತಿದ್ದರು. ಅಪ್ಪ, ಅಕ್ಕಂದಿರು, ಆಗಾಗ ಬರುವ ನೆಂಟರು ಎಲ್ಲಾ ಚಿಕ್ಕವಳು ಅಂತ ದುಡ್ಡು ಕೊಡುತ್ತಿದ್ದರು ಅದನ್ನೆಲ್ಲ ಹುಂಡಿಗೆ ಹಾಕುತ್ತಾ ಬಂದೆ. ಅದು ಒಂದು ದಿನ ತುಂಬಿ ಹೋಗಿ ಅದರಲ್ಲಿ ಸಾಕಷ್ಟು ಹಣ ಶೇಖರಣೆ ಆದಾಗ ಅದನ್ನು ಒಡೆದು ನಂಗೆ ಬೆಳ್ಳಿಯ ಕಾಲ್ಗೆಜ್ಜೆ ಕೊಡಿಸಿದರು. 

ಮತ್ತೊಮ್ಮೆ ಹೊಸ ಮಣ್ಣಿನ ಹುಂಡಿ ಕೊಡಿಸಿದರು ಆದರೆ ಅಮ್ಮ ಅಂದು ತಾನು ಹೊರಗಡೆ ( ಮುಟ್ಟು) ಆಗಿದ್ದು ಹುಂಡಿಯಲ್ಲಿ ಹಣ ಹಾಕಲಿಲ್ಲ ಅಂದು ಮೊದಲ ಸಾರಿ ನಾನೇ ಹಾಕಿದೆ. ಆದರೆ ಅದೇನೊ ಗೊತ್ತಿಲ್ಲ ಹುಂಡಿಗೆ ದುಡ್ಡೆ ಬೀಳಲಿಲ್ಲ. ಅಮ್ಮನಿಗೂ ಏನೇನೋ ಖರ್ಚುಗಳು. ಕೊನೆಗೆ ತುಂಬಾ ತಿಂಗಳುಗಳೇ ಹಿಡಿದರೂ ಹುಂಡಿ ಮಾತ್ರ ತುಂಬಲಿಲ್ಲ. 


ಆಗ ನಾನು ಜೋರಾಗಿ ಅಳಲು ಶುರು ಮಾಡಿದೆ ಆಗ ಅಮ್ಮ ಹೇಳಿದರು " ಮೊಟ್ಟಮೊದಲ ಸಾರಿ ಹುಂಡಿಗೆ ದುಡ್ಡು ಹಾಕುವಾಗ ಯಾರಾದರೂ ಒಳ್ಳೆಯವರ ಕೈಲಿ (ಹಿರಿಯರು, ಮುತೈದೆಯರು ) ಅಂತಹವರ ಕೈಲಿ ಹಾಕಿಸಬೇಕು ಅವರು ಆಶೀರ್ವಾದ ಮಾಡಿ ಹಾಕಿದರೆ ಒಳ್ಳೆಯದು ಅಂತ.  ನಂತರ ಆ ಹುಂಡಿ ಒಡೆದು ಬೇರೆ ಕೊಂಡುಕೊಂಡು ಅಮ್ಮನ ಕೈಲೇ ದುಡ್ಡು ಹಾಕಿಸಿಕೊಂಡೆ .


ನಿಜವಾಗಿ ಹೇಳುವೆ ಅದು ನಂಬಿಕೆಯೊ ಕಾಕತಾಳಿಯೊ ತಿಳಿಯುದು ಈ ಸಾರಿ ಎಷ್ಟು ಬೇಗ ಹುಂಡಿ ತುಂಬಿತು ಅಂದರೆ... ಅದರಲ್ಲಿ ಇರುವ ದುಡ್ಡಿನ ಜೊತೆ ಅಮ್ಮ ಇನ್ನೂ ಹೆಚ್ಚುವರಿ ದುಡ್ಡು ಸೇರಿಸಿ ನಂಗೆ ಹವಳದ ಉಂಗುರ ತೆಗೆದುಕೊಟ್ಟರು.  ಈಗಲೂ ಆ ಉಂಗುರ ನನ್ನ ಬಳಿ ಇದೆ. ಆದರೆ ಅದು ಕಟ್ ಆಗಿದೆ, ಸರಿ ಮಾಡಿಸಿ ಹಾಕಿಕೊಳ್ಳಬೇಕು. ಈಗ ದಪ್ಪ ಬೇರೆ ಆಗಿದೀನಿ . 

ನಮ್ಮ ನಂಬಿಕೆ ಎಷ್ಟೋ ಸರಿ ನಮ್ಮ ಕೈ ಹಿಡಿಯೊದಂತು ಸತ್ಯ. ಈ ಸಾರಿ ಅಮ್ಮ ಬಂದಾಗ ಅಮ್ಮನ ಕೈಯಿಂದ ದುಡ್ಡು ತಗೊಬೇಕು, ಅದು ಹತ್ತು ರೂಪಾಯಿಯಾದರೂ ಪರವಾಗಿಲ್ಲ. 



Rate this content
Log in

Similar kannada story from Inspirational