Surabhi Latha

Classics Inspirational Others

4  

Surabhi Latha

Classics Inspirational Others

ಸತ್ಯ

ಸತ್ಯ

1 min
272



ಅದು ಸಣ್ಣ ಹಳ್ಳಿ ಅಲ್ಲಿನ ಪಕ್ಕದ ಕಾಡಿನಿಂದ ಜನ ಕಟ್ಟಿಗೆ ಕಡಿದು ಮಾರಿ ಜೀವನ ಸಾಗಿಸುತ್ತಿದ್ದರು. ಆದರೆ ಕಾಡು ತುಂಬಾ ದೊಡ್ಡದಾಗಿಯೂ ಕಾಡು ಪ್ರಾಣಿಗಳಿಂದ ತುಂಬಿತ್ತು. 

ಕಟ್ಟಿಗೆ ತರಲು ಹೋದ ಹಳ್ಳಿ ಜನ ಕಾಡಿನ ಪ್ರಾಣಿಗಳಿಗೆ ಕೆಲವೊಮ್ಮೆ ಆಹಾರವಾಗಿಬಿಡುತ್ತಿದ್ದರು.  ಹಳ್ಳಿಯ ಜನಕ್ಕೆ ಬೇರೆ ಕೆಲಸ ತಿಳಿಯದಾಗಿತ್ತು. ಹಾಗಾಗಿ ಇದಕ್ಕೆ ಪರಿಹಾರ ಹುಡುಕಬೇಕೆಂದು ಯೋಚಿಸಿದರು. ಅಲ್ಲಿನ ಹಿರಿಯ ಅಜ್ಜ ಒಂದು ಉಪಾಯವನ್ನು ಹೇಳಿದ. ಕಾಡಿನ ಪ್ರಾಣಿಗಳು ಕಂಡಾಗ ಮರ ಹತ್ತಿ ಕೂತುಬಿಡಿ ಆಗ ಪ್ರಾಣಿಗಳು ಮರ ಹತ್ತಲಾಗದೆ ಹೊರಟು ಹೋಗುತ್ತದೆ ಎಂದು. ಆದರೆ ಹಳ್ಳಿಯ ಸುಮಾರು ಜನಕ್ಕೆ ಮರವೇರಲು ಬರದಾಗಿತ್ತು. ಅದಕ್ಕೆ ಮರ ಹತ್ತುವುದನ್ನು ಕಲಿಸುವ ಒಬ್ಬ ಗುರುವನ್ನು ಹುಡುಕಿದರು. 

ಆತ ಒಬ್ಬ ಸಾಧುವಾಗಿದ್ದ. ಆತ ಕಲಿಸಲು ಒಪ್ಪಿದ. ಹಾಗೆ ಸುಮಾರು ದಿನಗಳು ಮರ ಹತ್ತುವ ಇಳಿಯುವ ಅಭ್ಯಾಸ ನಡೆಯಿತು.  ಒಂದು ದಿನ ಅವರಿಗೆಲ್ಲಾ ಪರೀಕ್ಷೆ ಇಡಲಾಯಿತು .

ಒಬ್ಬೊಬ್ಬರೇ ಎತ್ತರದ ಒಂದು ಮರ ಹತ್ತಿ ಇಳಿಯಬೇಕು. ಹಾಗೆಯೇ ಒಬ್ಬೊಬ್ಬರಾಗಿ ಮರ ಹತ್ತಿ ತುದಿಯ ಬಳಿ ಹೊರಡುವ ಸಮಯಕ್ಕೆ ಸಾಧು ಹೇಳುತ್ತಿದ್ದ " ನಿಧಾನವಾಗಿ ಇಳಿದು ಬಾ" ಎಂದು 


ಎಲ್ಲರೂ ಅದೇ ರೀತಿಯಲ್ಲಿ ಹತ್ತಿ ಇಳಿಯುತ್ತಿದ್ದರು. ಸಾದು ಇಳಿಯುವಾಗ ಪ್ರತಿಯೊಬ್ಬರಿಗೂ ಹುಷಾರಾಗಿ ಇಳಿದು ಬಾ" ಎನ್ನುತ್ತಿದ್ದ. ಎಲ್ಲರಿಗೂ ಒಂದು ಅನುಮಾನ ಕಾಡಿತು. ಹತ್ತುವಾಗ ಹೇಳದೆ, ಇಳಿಯುವಾಗ ಮಾತ್ರ ಎಚ್ಚರಿಕೆ ಕೊಡುವರಲ್ಲ ಯಾಕೆ? 


ಕೊನೆಗೆ ಸಾಧುವನ್ನೇ ಕೇಳಿದರು. ಆಗ ಆ ಸಾಧು ಹೇಳುತ್ತಾರೆ.

" ಹತ್ತುವಾಗ ಏರುವ ಆಸಕ್ತಿಯಲಿ ಗುರಿ ತಲುಪುವ ಆಸೆಯಲ್ಲಿ ಹುಮ್ಮಸ್ಸಿನಿಂದ ಗುರಿಯ ಕಡೆ ಹೋಗುತ್ತಾರೆ. ಗುರಿ ಇನ್ನೇನು ತಲುಪಿದೆ ಎಂದಾಗ ಇಷ್ಟೇನಾ ನಾ, ಗೆದ್ದು ಬಿಟ್ಟೆ ಎಂಬ ಅತೀ ಆತ್ಮವಿಶ್ವಾಸ ಅವನನ್ನು ಇಳಿಯುವಾಗ ಆಯ ತಪ್ಪಿ ಬೀಳುವಂತೆ ಮಾಡುತ್ತದೆ. ಜೀವನ ದಲ್ಲೋ ಸಹ ಗುರಿ ತಲುಪಿದವನು ಹಿಂದೆ ನಡೆದು ಬಂದ ದಾರಿ ಮರೆಯದೇ ಮುಂದೆ ಸಾಗಬೇಕು ಎಂದು ಹೇಳಿದ. 


ಸ್ನೇಹಿತರೆ ಸಾಧನೆ ಸುಲಭವಲ್ಲ, ಆದರೆ ಸಾಧಿಸಿದ ಮೇಲೆಯೂ ಸಹ ಅದೇ ಉತ್ಸಾಹ ಹಾಗೂ ಅತಿಯಲ್ಲದ ಆತ್ಮವಿಶ್ವಾಸ ಬಲುಮುಖ್ಯವಾಗುತ್ತದೆ. 



Rate this content
Log in

Similar kannada story from Classics