murali nath

Tragedy Inspirational Others

4  

murali nath

Tragedy Inspirational Others

ಸಹೋದರರು

ಸಹೋದರರು

2 mins
28



ಫ್ರೆಂಚ್ ದೇಶದಲ್ಲಿ ಅತಿ ಶ್ರೀಮಂತ ಅಷ್ಟೇ ಸಹೃದಯಿ ಮನುಷ್ಯ ಒಮ್ಮೆ ತಮ್ಮ ವೈದ್ಯರು ಹೇಳಿದ ಕಾರಣ ಸಮುದ್ರ ತೀರದಲ್ಲಿ ಮುಂಜಾನೆ ನಡೆದು ಹೋಗುತ್ತಿದ್ದರು. ಅದುವರೆಗೂ ಎಂದೂ ಮನೆ ಬಿಟ್ಟು ಹೊರಗೆ ಒಬ್ಬನೇ ಬಂದವನಲ್ಲ..ಅಲ್ಲಿ ಎದುರಿಗೆ ಒಬ್ಬ ಬಿಕ್ಷುಕ ಬಂದು ಕಾಸಿಗಾಗಿ ಕೈ ಚಾಚಿ ಸಹಾಯ ಮಾಡಿ ಎಂದ. ಅದುವರೆಗೂ ಬಿಕ್ಷುಕರನ್ನ ಹತ್ತಿರದಿಂದ ಕಂಡಿದ್ದಿಲ್ಲ. ಮತ್ತು ಏಕೆ ಬಿಕ್ಷೆ ಬೇಡುತ್ತಾರೆ ಎನ್ನುವುದು ಅವನಿಗೆ ಗೊತ್ತಿಲ್ಲ. ಬಿಕ್ಷುಕನನ್ನು ಕೇಳಿದರು ನಿನಗೇನು ಬೇಕು .ಅದಕ್ಕೆ ಅವನು ಕಾಸು ಅಥವಾ ಊಟ ಕೊಡಿ ಎಂದ. ಇವರಿಗೆ ಒಂದು ಕ್ಷಣ ಅರ್ಥ ವಾಗಲಿಲ್ಲ. ಜನ ಹೀಗೆ ಬೇರೆಯವರಿಂದ ಕೇಳಿ ಪಡೆದು ಜೀವನ ನಡೆಸುವುದು ಅವರಿಗೆ ಅನಿರೀಕ್ಷಿತವಾಗಿತ್ತು. ಆ ಸಮಯಕ್ಕೆ ಅವರ ಬಳಿ ಹಣವಿರಲಿಲ್ಲ ಹಾಗಾಗಿ ಊಟ ಕೊಡಿಸಲೂ ಸಾಧ್ಯವಿರಲಿಲ್ಲ. ಆದರೆ ಅವನಿಗೆ ಸಹಾಯ ಮಾಡಬೇಕೆಂಬ ಆಸೆ ಮಾತ್ರ ಹೃದಯದಿಂದ ಬಂತು.. ಜೇಬಿನಿಂದ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟು ಈ ಅಡ್ರೆಸ್ ಗೆ ಬಂದರೆ ಸಹಾಯ ಮಾಡುವುದಾಗಿ ಹೇಳಿದರು. ಆ ಬಿಕ್ಷುಕ, ಊಟ ಕೇಳಿದರೆ ಕಾರ್ಡ್ ಕೊಡ್ತೀರಾ ಅಂತ ಕೋಪ ಮಾಡಿಕೊಂಡು ಅವರ ಎದುರಿಗೆ ಹರಿದು ಹಾಕಿದ.ಇವರಿಗೆ ಕೋಪ ಬಂತು.ಅಷ್ಟು ಹೊತ್ತಿಗೆ ಯಾರೋ ಇವರನ್ನ ಗುರುತಿಸಿ ಮಾತ ನಾಡುತ್ತಿದ್ದಾಗ ಈ ವಿಷಯವೂ ಚರ್ಚೆಗೆ ಬಂತು. ಇವರ ಬದಲಾಗಿ ಅವರೇ ಕಾಸು ಕೊಟ್ಟು ಕಳುಹಿಸಿದರು.

ಈ ಸಾಹುಕಾರನಿಗೆ ಅಂದು ರಾತ್ರಿ ನಿದ್ದೆ ಬರಲಿಲ್ಲ.ಮಾರನೇದಿನ ಅದೇ ಸ್ಥಳಕ್ಕೆ ಬರುವಾಗ ಜೇಬು ತುಂಬಾ ಹಣ ತಂದಿದ್ದ. ಆದರೆ ಅವನು ಎಲ್ಲೂ ಕಾಣಲಿಲ್ಲ. ಅದರ ಮಾರನೇ ದಿನವೂ ಊಟ ಮತ್ತು ಹಣ ತಂದ ಅಂದೂ ಸಹ ಬರಲಿಲ್ಲ. ಶ್ರೀ ಮಂತ ನಿಗೆ ಬಹಳ ಬೇಜಾರಾಗಿ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಅಂಗಡಿವರನ್ನ ಕೇಳಿದರು ಇಲ್ಲಿ ಕೆಲವು ದಿನದ ಹಿಂದೆ ಒಬ್ಬ ಬಿಕ್ಷೆ ಬೇಡುತ್ತಿದ್ದ ಅವನು ಈಗ ಇಲ್ಲಿ ಕಾಣುತ್ತಿಲ್ಲ. ಎಲ್ಲಿರುತ್ತಾನೆ ನಿಮಗೆ ಗೊತ್ತೇ ಅಂದಾಗ ಅವನು ಹೇಳಿದ್ದು, ಹೌದು ಅವನು ನಿನ್ನೆ ಇಲ್ಲೇ ಪ್ರಾಣ ಬಿಟ್ಟ . ಕಾರ್ಪೊರೇಷನ್ ನವರು ಅವನ ದೇಹವನ್ನು ತೆಗೆದುಕೊಂಡು ಹೋದರೆಂದ . ಇವರಿಗೆ ಬಹಳ ಬೇಜಾರಾಯ್ತು. ಮನೆಗೆ ಹೋದವನೇ ಕಾರ್ಪೊರೇಷನ್ ಆಫೀಸ್ ಗೆ ಫೋನ್ ಮಾಡಿ ವಿಚಾರಿಸಿದಾಗ ಕೆಲವು ಮಾಹಿತಿ ಸಿಕ್ಕಿತು. ಅದೇ ಆಧಾರದ ಮೇಲೆ ಖಾಸಗಿ ಪೋಲೀಸರ ಸಹಾಯ ಪಡೆದು ಅವನು ಯಾರು, ಬಿಕ್ಷೆ ಬೇಡುತ್ತಿದ್ದ ಕಾರಣ ಏನು ಹೀಗೆ ತಿಳಿಯಲು ಏಕೋ ಹೆಚ್ಚು ಆಸಕ್ತಿ ಆಯ್ತು. ಒಬ್ಬನೇ ಪೊಲೀಸರೊಂದಿಗೆ ಓಡಾಡಿದಾಗ ದಿನ ದಿನಕ್ಕೂ ಕುತೂಹಲ ಹೆಚ್ಚಾಯ್ತು. ಕಾರಣ ಅವನು ಹುಟ್ಟಿದ ಹಳ್ಳಿ ಇವನದೆ ಆಗಿತ್ತು . ಅಂತ್ಯಕ್ಕೆ ಅದು ಆ ಹಳ್ಳಿಯಲ್ಲಿ ಇದ್ದ ಇವನ ತಂದೆಯ ಮನೆ ವಿಳಾಸವಾಗಿ ಹುಡುಕಿಕೊಂಡು ಹೋದಾಗ ಸತ್ತವ್ಯಕ್ತಿ ತನ್ನ ಸ್ವಂತ ತಮ್ಮನೆಂದು ತಿಳಿಯಿತು. ಎಷ್ಟೋ ವರ್ಷಗಳ ಹಿಂದೆ ಮನೆ ಬಿಟ್ಟು ಬಂದು ವ್ಯಾಪಾರ ಮಾಡುತ್ತಿದ್ದ ಈ ಶ್ರೀಮಂತ ವ್ಯಕ್ತಿ ಗೆ ತಮ್ಮನೆಂದು ತಿಳಿಯದೆ ಹೋದರು ಸತ್ತಮೇಲೆ ಕರುಳ ಸಂಭಂದ ಬೆಸೆದದ್ದು ಬಹಳ ಬೇಸರ ತರಿಸಿತು.

ಇವರು ಆ ಹಳೇ ಮನೆಯನ್ನ ಪಡೆದು ತಮ್ಮನ ಹೆಸರಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿಸಿ .ಇಡೀ ಹಳ್ಳಿಯನ್ನ ಮಾದರಿ ಹಳ್ಳಿಯಾಗಿ ಮಾಡಿದರು. 





Rate this content
Log in

Similar kannada story from Tragedy