shristi Jat

Drama Action Classics

4.5  

shristi Jat

Drama Action Classics

ರಾಜಧಾನಿ

ರಾಜಧಾನಿ

5 mins
405


ಯುವರಾಣಿಯ ಹುಡುಕಾಟ


ಯುದ್ದದ ತಯಾರಿ ನಡೆದಿತ್ತು. ಕೋಣರು ಸಿಂಹರ ಮೇಲೆ ದಾಳಿ ನಡೆಸಲು ಮುಂದಾಗಿದ್ದರು .ಅತ್ತ ಸಿಂಹರ ರಾಜಧಾನಿಯ ಉತ್ತಾರಾಧಿಕಾರಿಯಾದ ಧ್ರುವ ವಲ್ಲಭನ ತಾಯಿ, ಪಕ್ಕದೂರಿನಲ್ಲಿ ನೆಲೆಸಿರುವ ತನ್ನ ತಮ್ಮನನ್ನು ಭೆಟಿಯಾಗಿ ಯುದ್ದದ ಕುರಿತಾಗಿ ಚರ್ಚೆ ಮಾಡಿ ಬರುವುದಾಗಿ ಹೇಳಿದಳು.


ಒಪ್ಪಿಕೊಂಡ ರಾಜ ಧ್ರುವ ವಲ್ಲಭ ಕುದುರೆ ಸವಾರಿಯೊಂದಿಗೆ ತೆರಳಿದ. ಇತ್ತ ಕೋಣರ ವಂಶದ ರಾಜ ಮಾದಕ ದುಮ್ನೆ ಸಕಲ ತಯಾರಿಗಳೊಂದಿಗೆ ಯುದ್ದಕ್ಕೆ ತಯಾರಾಗಿದ್ದ. ಸಿಂಹರ ಯುದ್ದ ಹುಡುವ ದಿನಕ್ಕಾಗಿ ಅವರು ಉತ್ತರಕ್ಕಾಗಿ ಕಾಯುತ್ತಿದ್ದ ಪರ ರಾಜ್ಯಗಳ ಸಹಾಯ ಕೇಳತೋಡಗಿದ.


ಧ್ರುವ ವಲ್ಲಭ ತನ್ನ ಸೋದರ ಮಾವನ ಮನೆಗೆ ತಲುಪಿದ ಅಳಿಯನನ್ನು ಕಂಡು ರಾಜ ಪರಮೇಶ ಸ್ವಾಗತ ಕೋರಿ, ಕುಳಿತುಕೊಳ್ಳಲು ಹೇಳಿದ. ಧ್ರುವ ಅಜ್ಜಿಯ ಆಶಿರ್ವಾದ ತೆಗೆದುಕೊಂಡು ಕುಳಿತನು. ಚರ್ಚೆ ಮುಂದುವರಿಯಿತು. ಯುದ್ದದ ತಯಾರಿ ಹೇಗೆ ಎಂಬುದರ ಬಗ್ಗೆ ಹೇಳತೊಡಗಿದ. ಪರಮೇಶ ಕೋಣರ ವಂಶದ ಬಗ್ಗೆ ನನಗೂ ಸ್ವಲ್ಪ ಗೊತ್ತು, ಯಾವುದಕ್ಕೂ ಬೇರೆ ರಾಜ್ಯಗಳ ಸಹಾಯ ತೇಗೆದುಕೊಳ್ಳುವುದು ಉತ್ತಮ ಎಂದನು. ಇಬ್ಬರೂ ಸೈನ್ಯ ಸೇರಿ ಮುತ್ತಿಗೆ ಹಾಕಲು ಹಾಗುವದಿಲ್ಲ ಎಂದು ಅವರು ಖಂಡಿತವಾಗಿಯೂ ಪರ ರಾಜ್ಯಗಳ ಸಹಾಯ ಕೇಳಿರ್ತಾರೆ.


ಹೀಗೆ ಇಲ್ಲಿಂದಲೇ ನಾನೇಳುವ ರಾಜ್ಯಗಳಿಗೆ ಹೋಗಿ ಭೇಟಿ ನೀಡು ಎಂದು ಉಪಹಾರದ ವ್ಯವಸ್ಥೆ ಮಾಡಿದ. ಉಪಹಾರ ಮುಗಿಸಿಕೊಂಡು ರಾಜ ಧ್ರುವ ವಲ್ಲಭ ಅನ್ಯ ರಾಜಧಾನಿಗಳ ಭೇಟಿಯಾಗಲು ಹೊರಟ. 


ಕೊನೆಗೆ ಒಂದು ರಾಜ್ಯವನ್ನು ತಲುಪಿದ. ತುಂಬಾ ದೊಡ್ಡ ರಾಜ್ಯ ಅದು. ಸಹಾಯಕ್ಕೆ ಒಪ್ಪಿಕೊಂಡರೆ ಒಳ್ಳೆಯದಾಗುತ್ತದೆ ಮನದಲ್ಲಿ ಯೋಚಿಸತೊಡಗಿದ. ಧ್ರುವ ವಲ್ಲಭ ಬರುವ ವಿಷಯ ತಿಳಿದ ಆ ರಾಜ್ಯದ ರಾಜ ಸ್ವಾಗತಕ್ಕೆ ಏರ್ಪಾಡು ಮಾಡಿದ. ಆ ರಾಜನ ಆದರ ಸತ್ಕಾರ ಕಂಡು ಧ್ರುವ ವಲ್ಲಭನಿಗೆ ಸಂತೋಷವಾಯಿತು.


ಯುದ್ದದಲ್ಲಿ ತಾವು ನಮ್ಮ ಜೊತೆ ಕೈ ಜೊಡಿಸಬೇಕು ನಿಮ್ಮ ಸಹಕಾರದ ಅವಶ್ಯಕತೆಯಿದೆ ಎಂದು ಕೇಳಿದ. ಅದಕ್ಕೆ ಒಪ್ಪಿದ ರಾಜ ಯಾವಾಗ ನೀವು ಹೇಳಿ ಕಳಿಸಿದರೆ ನಮ್ಮ ಸೈನ್ಯದ ತಯಾರಿ ಮಾಡುತ್ತೆನೆಂದ. ಧನ್ಯವಾದಗಳನ್ನು ಹೇಳಿ, ಊಟದ ವ್ಯವಸ್ಥೆ ಮಾಡಲು ಹೇಳಿದ ರಾಜ ಮುಕುಂದೇಶ. ಆದರೆ ರಾಜ ಧ್ರುವ ವಲ್ಲಭ ಅದಕ್ಕೆ ನಿರಾಕರಿಸಿದ ಕೆಲಸದ ಮೇರೆಗೆ ಬೇರೆ ರಾಜ್ಯಕ್ಕೆ ಹೋಗಬೇಕೆಂದು ಅಲ್ಲಿಂದ ಹೊರಟನು.


ಇನ್ನೊಂದು ರಾಜ್ಯಕ್ಕೆ ತಲುಪಲು ಇನ್ನೂ ಅರ್ಧಭಾಗದ ಪ್ರಯಾಣವಿತ್ತು. ಮಧ್ಯ ದಾರಿಯಲ್ಲಿ ಹೋಗುವಾಗ ನೇರಳೆ ಬಣ್ಣದ ದುಪ್ಪಟ್ಟಾ ಮರದ ಪಕ್ಕ ಅರ್ಧಭಾಗ ಹರಿದಾಡುತ್ತಿತ್ತು. ಆಯಾಸಗೊಂಡಿದ್ದ ರಾಜ ಮರದ ಕೆಳಗೆ ನಿಂತು ನೀರು ಕುಡಿಯಲು ಇಳಿದ. ಅವನ ಎದುರುಗಡೆ ಮರದಲ್ಲಿ ನಗುವ ಶಬ್ದ ಬರುತ್ತಿತ್ತು. ಮರದ ಆಚೆಗೆ ಯುವರಾಣಿ ಶಾಂಭವಿ ಸ್ನೇಹಿತರೊಂದಿಗೆ ನಿಂತಿದ್ದಳು.


ಮೂರು ಮರಗಳಿಂದ ಕೂಡಿದ್ದ ಒಂದು ಮರವಿತ್ತು ರಾಜನಿಗೆ ಬರಿ ದುಪಟ್ಟಾ ಅಷ್ಟೆ ಕಾಣುತ್ತಿತ್ತು. ಮತ್ತು ಮಾತುಗಳು ಕೇಳಿಬರುತ್ತಿದ್ದವು. ಹೆಣ್ಣಿನ ಶಬ್ಬ ಸಹ. ಮತ್ತೆ ಹೊರಡಲು ಸಿದ್ಧನಾದ ರಾಜ.


ಮತ್ತೊಂದು ರಾಜ್ಯಕ್ಕೆ ತಲುಪಿದ ಧ್ರುವ ವಲ್ಲಭ ಯುದ್ದದ ಸಹಕಾರಕ್ಕೆ ಒಮ್ಮತ ಕೇಳಿದ ಅದಕ್ಕೆ ಬೇಗ ಉತ್ತರ ನಿಡಲಾಗದೆ ಆ ಭಾಗದ ರಾಜ ಕೇಶವ ಚಿಂತೆದಲ್ಲಿದ್ದ. ಅವರ ಮುಖ ಕಂಡು ಧ್ರುವ ವಲ್ಲಭ, ರಾಜನೇ ಪರ್ವಾಗಿಲ್ಲ, ಬೇರೆ ರಾಜ್ಯಗಳ ಸಹಾಯ ಕೇಳುವೆ ಎಂದ. ಇಲ್ಲ ನಮ್ಮ ರಾಜ್ಯವು ಸಂಕಷ್ಟದಲ್ಲಿದೆ ನಾವು ನಮ್ಮ ರಾಜ್ಯವನ್ನು ಕಾಪಾಡುವ ತಯಾರಿ ನಡೆಸಿದ್ದೇವೆ ಅಂತದ್ರಲ್ಲಿ ನಿಮಗೆ ಒಪ್ಪಿಗೆ ಕೊಟ್ಟು ಆಮೇಲೆ ಮಾಡಲಾರದೆ ತಪ್ಪಾಗುತ್ತೆ ಎಂದನು.


ಪರ್ವಾಗಿಲ್ಲ ನೀಮಗೆ ತಿರಸ್ಕರಿಸಲು ಕಾರಣಗಳಿವೆ ಆದಕಾರಣ ಸಹಾಯ ಮಾಡುತ್ತಿಲ್ಲ ಅಷ್ಟೆ ಇನ್ನೂ ನಾನು ಹೋರಡುತ್ತೆನೆಂದು ಅಲ್ಲಿಂದ ಎದ್ದ ಅದನ್ನು ಕಂಡು ರಾಜ ಕೇಶವ ಬೇಡ ನಿಮಗೆ ಸಹಾಯ ಮಾಡಕ್ಕಾಗದ ಸ್ಥಿತಿಯಿಂದ ಬೇಸತ್ತಿದಿನಿ. ಊಟದ ವ್ಯವಸ್ಥೆ ಮಾಡಿಸುವೆ ದಯವಿಟ್ಟು ನಿಲ್ಲುವಿರಾ ಎಂದು ಕೇಳಿದ.


ಧ್ರುವ ವಲ್ಲಭ ಅನುಮತಿ ನೀಡಿ ಕುಳಿತುಕೊಂಡ ಅಲ್ಲಿಂದ ಎದ್ದು ಒಳಗೆ ಹೋದ. ಕೇಶವ ರಾಜ ರಾಣಿಯರ ಗುಂಪೊಂದು ಹೊರಗಡೆಯಿಂದ ಒಳಗಡೆ ಬಂತು ಪಕ್ಕ ನೋಡಿದ ಧ್ರುವ ವಲ್ಲಭ ಮತ್ತೆ ನೇರಳೆಯ ದುಪಟ್ಟಾ ಕಂಡು ದಾರಿ ಮಧ್ಯೆ ನೋಡಿದ್ದು ಇದೆ ವಸ್ತ್ರ ಯುವರಾಣಿ ಶಾಂಭವಿ ಮೊದಲು ಭೇಟಿ ನೀಡಿದ ರಾಜನ ಮಗಳಾಗಿದ್ದಳು.


ಕೇಶವ ರಾಜನ ಮಗಳಿಗೂ ಮತ್ತು ಮುಕುಂದೇಶ ರಾಜನ ಮಗಳಿಗೂ ಸ್ನೇಹ ಸಂಬಂಧ ಚಿಕ್ಕಂದಿನಿಂದಾಗಿಂದಲು ಇತ್ತು. ವಿಹಾರಕ್ಕೆ ಹೋಗಲಿ ಎಲ್ಲಿಗೆ ಹೋಗಲಿ ಜೊತೆಯಾಗಿ ಹೋಗುತ್ತಿದ್ದರು.


ಯುವರಾಣಿಯು ತನ್ನ ಕರವಸ್ತ್ರ ಧ್ರುವ ವಲ್ಲಭ ಕೂತಿರುವ ಜಾಗದಲ್ಲಿ ಬಿಟ್ಟಿದ್ದಳು ಹೊರಗಡೆ ಯಾರೋ ಕುಳಿತಿರುವುದನ್ನು ಕಂಡು ಸೇವಕರಿಗೆ ತರಲು ಹೇಳಿದಳು.


ಸೇವಕಿ ಧ್ರುವ ವಲ್ಲಭನ ಪಕ್ಕ ಬಂದು ಕರವಸ್ತ್ರ ತೆಗೆದುಕೊಳ್ಳುತ್ತಿರುವಾಗ ಸೇವಕಿಯನ್ನು ತಡೆದು, ನೇರಳೆ ಬಣ್ಣದ ದುಪ್ಪಟ್ಟಾ ಹೊದ್ದಿಕ್ಕೊಂಡವರ್ಯಾರೆಂದು ಕೇಳಿದ ರಾಜ. ನಮಸ್ಕರಿಸಿದ ಸೇವಕಿ ಅವರ ಆಜ್ಞೆಯಿಲ್ಲದೆ ಅವರ ಬಗ್ಗೆ ನಿಮಗೆ ಹೇಳುವುದು ಒಳಿತಲ್ಲೆಂದಳು.


ನಾನು ಒಂದು ಸೀಮೆಯ ರಾಜ ನನಗಾಗಿ ರಾಣಿಯನ್ನು ಹುಡುಕುತ್ತಿದ್ದಾರೆ. ಮದುವೆಯಾಗಲು ಅವರನ್ನು ನೋಡುವ ಕೂತೂಹಲ. ಆದ ಕಾರಣ ಕೇಳಿದೆ ಎಂದು ಸುಳ್ಳು ಹೇಳಿದ.


ಮುಸುನಕ್ಕ ಸೇವಕಿ ಅವರು ಬೇರೆ ರಾಜ್ಯದ ಯುವರಾಣಿ. ನಮ್ಮ ರಾಣಿಯ ಸ್ನೇಹಿತೆ ಹೊರಗಡೆ ಸುತ್ತಾಡಲು ಹೋಗುತಿರುತ್ತಾರೆ.


ನೀವೆಗೆ ಅವರನ್ನು ನೋಡಲು ಸಾಧ್ಯ. ಅವರಿಗೆ ಹೇಳಲೆ ಎಂದುಸೇವಕಿ ಕೇಳಿದಳು. ಅದಕ್ಕೆ ಬೇಡ ನನ್ನ ಬಗ್ಗೆ ಏನೂ ಹೇಳಬೇಡ. ಏನಾದ್ರೂ ಸುಳ್ಳು ಹೇಳಿ ಒಮ್ಮೆ ಕರೆಸುವಿಯಾ ಎಂದು ಸೇವಕಿಗೆ ಕೇಳಿದನು. ಬರಬಹುದು ಆದರೆ ಮುಖ ನೋಡಲಾಗುವದಿಲ್ಲವಲ್ಲೆಂದಳು ಸೇವಕಿ. ವಲ್ಲಭ ಹೋಗಲಿ ನೀನೆ ಹೇಳು ಸೇವಕಿ. ಅತಿಸುಂದರ ಮತ್ತು ಬುದ್ಧಿವಂತೆ ಅದಕ್ಕೆ ಹೇಳ್ತಿರೋದು ನೀವೆ ನೇರವಾಗಿ ಮಾತಾಡಿಸಿ. ಧ್ರುವ ವಲ್ಲಭ ಸೇವಕಿಗೆ ಇಲ್ಲ ನಾನು ಬೇರೆ ಕೆಲಸದ ಮೇರೆಗೆ ಇಲ್ಲಿ ಬಂದಿರುವೆ. ಇವಾಗ ಹೀಗೆ ಮಾತನಾಡಿಸುವದು ಸರಿಯಲ್ಲ ಎಂದ. ಮನಸ್ಸಿನಲ್ಲಿ ಯುದ್ದದ ಗೆಲುವಾದರೆ ಮದುವೆಯ ಒಪ್ಪಂದ ಮುಂದಿಡಬಹುದು ಎಂದು ಆಲೋಚಿಸತೊಡಗಿದನು. ಅಷ್ಟರಲ್ಲಿ ರಾಜ ಕೇಶವ ಅಲ್ಲಿಗೆ ಬಂದ. ತಕ್ಷಣ ಸೇವಕಿ ಒಳಗೆ ಹೋದಳು.


ಧ್ರುವ ವಲ್ಲಭನ ಗುಣ ನೋಡಿ ಸೇವಕಿ ಯುವರಾಣಿ ಶಾಂಭವಿಯನ್ನು ಅವನ ಹತ್ತಿರ ಕಳೆಸೊ ಯೋಜನೆ ಮಾಡಿದಳು.


ಯುವರಾಣಿ ಶಾಂಭವಿ ಅವರೆ ನಿಮಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ ಅಲ್ಲವೆ ಹೊರಗೆ ಬಂದಿರುವವರು ಚಿತ್ರಗಳನ್ನು ಬಿಡಿಸುತ್ತಾರಂತೆ ಅದರ ವಿಷಯ ಮಾತಾಡುವುದನ್ನು ಕೇಳಿಸಿಕೊಂಡೆ ನಿಮಗೆ ಮಾದರಿ ನೀಡಬಹುದು ಕೇಳಿ ಹೋಗಿ ಎಂದಳು.


ಯುವರಾಣಿ ಶಾಂಭವಿ ಹೌದಾ ಹಾಗಾದರೆ ಹೇಗೆ ಕೇಳಬೇಕು ಹೆಸರು ತಿಳಿದಿಕೊ ಹೋಗು. ನಮ್ಮ ರಾಜ್ಯಕ್ಕೆ ಕರೆಸಿದರಾಯ್ತೆಂದಳು.


ಇಲ್ಲ ರಾಣಿಯವರೆ ಯಾವ ಚಿತ್ರ ಸರಿಯಾಗಿ ತಿಳಿಯಲಿಲ್ಲ. ನೀವೆ ಸರಿಯಾಗಿ ಕೇಳಿ ಅದರಲ್ಲೆನು. ತಿಳಿದುಕೊಳ್ಳಿ ನಿಮಗೆ ಸಹಾಯ ಆಗಬಹುದು.


ಸರಿ ನಮ್ಮ ತಂದೆಯವರನ್ನು ನಾನು ಕರೆದು ಮಾತಾಡಿಸುತ್ತಿರುವೆ. ನೀನು ಬೇಗ ತಿಳಿದಿಕೊ ಎಂದಳು. ಯುವರಾಣಿ ಶಾಂಭವಿ ಸ್ನೇಹಿತೆ ಸೌಮಿನಿ ಹಾಗೂ ತಂದೆಯನ್ನು ಒಳಗೆ ಕರೆದಳು.


ಹೊರಗಡೆ ಹೋದ ಶಾಂಭವಿ ಧ್ರುವ ವಲ್ಲಭ ನನ್ನು ಕೇಳಲು ಸಂಕೋಚವಾಗಿ ಸುಮ್ಮನೆ ನಿಂತಿದ್ದಳು ಅವಳನ್ನು ಕಂಡ ವಲ್ಲಭ ರಾಜ ಯಾಕೆ ಹೀಗೆ ನಿಂತಿರುವುದು ನೋಡ್ತಿದ್ದ ಅಷ್ಟರಲ್ಲಿ ಸೇವಕಿ ಬಂದು ನಮಸ್ಕಾರ ನೀವು ಚಿತ್ರವನ್ನು ಬಿಡಿಸುತ್ತಿರಲ್ಲವೆ ಎಂದು ಧ್ರುವ ವಲ್ಲಭನಿಗೆ ಸನ್ನೆ ಮಾಡಿದಳು.


ಹೂಂ ಬಿಡಿಸುವೆ ಯಾಕೆಂದು ಕೇಳಿದ ಸೇವಕಿ ನಮ್ಮ ರಾಣಿಯವರಿಗೂ ಬಿಡಿಸುವುದು ಇಷ್ಟ ಸ್ವಲ್ಪ ಅದರ ಬಗ್ಗೆ ಹೆಚ್ಚಿನ ಜ್ಞಾನ ತಿಳಿಸಿ.


ಸರಿ ಯಾವ ತರಹದ ಚಿತ್ರಗಳು ಬಿಡಿಸುವುದು ನೀಮಗೆ ತುಂಬಾ ಇಷ್ಟ ಮಾತಾಡಿಸಿದ ಅವಳ ಆಸಕ್ತಿಗಳನ್ನು ಕೇಳುತ್ತಾ ಇದ್ದ ಅವಳ ಕೈ ಅಷ್ಟೆ ಕಾಣುತ್ತಿತ್ತು ನೋಡುತ್ತಾ ಇಲ್ಲದ ಸಲ್ಲದ ವಿಷಯಗಳ ಬಗ್ಗೆ ರಾಣಿಯೊಂದಿಗೆ ಮಾತಾಡತೊಡಗಿದ.


ಹೆಸರು ಕೇಳಿದ ರಾಣಿಗೆ ಸರಿಯಾದ ಹೆಸರು ಊರು ಹೇಳಿದ ಆದರೆ ರಾಜನಿರುವ ಬಗ್ಗೆ ಹೇಳಲಿಲ್ಲ ಹೋರಗಡೆ ಬಂದ ರಾಜ ಕೇಶವ ಧ್ರುವ ವಲ್ಲಭನಿಗೆ ಊಟ ಮಾಡಲು ಕರೆದನು.


ಯುವರಾಣಿ ಅಲ್ಲಿಂದ ಒಳಗೆ ಹೋದಳು ಊಟಕ್ಕೆ ಕುಳಿತಿರುವ ಧ್ರುವ ವಲ್ಲಭನಿಗೆ ರಾಜ ಕೇಶವ ತನ್ನ ರಾಜ್ಯದ ಬಗ್ಗೆ ಕೇಳತೊಡಗಿದನು ಅವನಿಂದ ಸರಿಯಾಗಿ ಉತ್ತರಗಳೆ ಬರುತ್ತಿರಲಿಲ್ಲ ಯುವರಾಣಿಯ ಗುಂಗಿನಲ್ಲಿದ್ದ ಊಟ ಮುಗಿತು ಇನ್ನೂ ನನಗೆ ಹೋಗಲು ಒಮ್ಮತ ಕೋಡುವಿರಾ ಅಲ್ಲಿಂದ ಹೋದನು.


ಸೇವಕಿ ತಾಳದೆ ಎಲ್ಲಾ ನೀಜವನ್ನು ಯುವರಾಣಿಗೆ ಹೇಳಿಬಿಟ್ಟಳು ರಾಜನಿರುವುದಾಗಿ ಸೇವಕಿಯನ್ನು ಬೈದಳು ಮುಖ ನೋಡುತ್ತಿದ್ದೆ ಮೊದಲೆ ಹೇಳಿದರೆ ಹಾಗಾದರೆ ಊರು ಹೆಸರು ಸುಳ್ಳಾ ಸೇವಕಿ ಇಲ್ಲ ಎಲ್ಲಾ ಸತ್ಯ ಆದರೆ ಚಿತ್ರಬಿಡಿಸಲ್ಲ ಮುಸಕನಕ್ಕಳು.


ಇತ್ತ ನೇರೆಹೋರೆ ರಾಜ್ಯಗಳ ಸಹಾಯದಿಂದ ಕೋಣರೊಂದಿಗಿನ ಯುದ್ದದಲಿ ಸಿಂಹರು ಗೆದ್ದರು ಸಂಭ್ರಮದ ಕಾರ್ಯಕ್ರಮ ಇಟ್ಟು ಸಹಾಯ ಮಾಡಿದ ರಾಜ್ಯಗಳಿಗೆ ಆಹ್ವಾನ ಮಾಡಿ ಔತಣ ಕೊಟ್ಟನು ಧ್ರುವ ವಲ್ಲಭ 


ಔತಣದ ಕೂಟಕ್ಕೆ ಯುವರಾಣಿ ಶಾಂಭವಿಯ ತಂದೆ ಬಂದಿರಲಿಲ್ಲ ಯಾಕೆಂದು ತಿಳಿದುಕೊಂಡ ವಿಷಯ ತಿಳಿದು ಗಾಬರಿಯಾದ ಚಿಂತೆಯಿಂದ ಕಳೆಯಿತು ಆ ದಿನ ಯುವರಾಣಿ ಶಾಂಭವಿ ಸ್ನೇಹಿತೆಯೊಂದಿಗೆ ಅವಳ ಆಸ್ತಾನಕ್ಕೆ ಹೋಗಿದ್ದಳು ಆಗ ಅವರ ರಾಜ್ಯದ ಮೇಲೆ ಆಕ್ರಮಣ ಮಾಡಿ ಯುವರಾಣಿ ಶಾಂಭವಿ ಮತ್ತು ಅವಳ ಸ್ನೇಹಿತೆಯನ್ನು ಕರೆದೊಯ್ಯುದಿದ್ದಾರೆ.


ಮರುದಿನ ಧ್ರುವ ವಲ್ಲಭ ಕೆಲ ಸೈನ್ಯ ಸಮೇತ ಅವಳನ್ನು ಹುಡುಕಲು ಹೋದನು. ಯಾವ ಭಾಗದಿಂದ ಬಂದಿರುವರೆಂದು ತಿಳಿಯಿತು. ಅದೇ

ರಾಜ್ಯಕ್ಕೆ ತೆರಳಿದ. ಅವರು ಧ್ರುವ ವಲ್ಲಭನಿಗೆ ಸ್ವಾಗತ ಮಾಡಿದರು.ಆ ರಾಜ್ಯದ ರಾಜನಿಗೆ ಅವರನ್ನು ಬಿಡುವುದಾಗಿ ಹೇಳಿದನು.


ನಮ್ಮತ್ತಿರ ಇಲ್ಲ ಎಂಬ ಸುಳ್ಳು ಹೇಳಿದರು.ಮತ್ತೆ ಹುಡುಕಲು ಬಂದದಾರಿಗೆ ವಾಪಸ್ಸು ಹೋರಟನು ಹೋಗುವಾಗ ಯುವರಾಣಿ ಶಾಂಭವಿ ತೊಟ್ಟಿದ್ದ ಬಳೆಯನ್ನು ಕಂಡ ಅದನ್ನು ತೆಗೆದುಕೊಂಡು ಮತ್ತೆ ಅದೆ ರಾಜ್ಯಕ್ಕೆ ತೇರಳಿದ ಧ್ರುವ ವಲ್ಲಭ ನನ್ನು ಕಂಡು ಅವರು ಹೋರಗೆ ಬಂದರು.


ಸುಳ್ಳು ಹೇಳಿ ಮನೆತನ ಬೆಳೆಸುವುದು ರಾಜರ ಲಕ್ಷಣ ಅಲ್ಲ ನಿಮ್ಮೊಂದಿಗೆ ಯುದ್ಧ ಸಾರಲು ತಯಾರಿದ್ದೇನೆ ನೀವು ಒಪ್ಪುವುದಾದರೆ ಇಲ್ಲ ನಾವು ಆಕ್ರಮಣ ಮಾಡುತ್ತೇವೆಂದ ಲಜ್ಜೆಯಿಂದ ತಲೆ ಕೆಳಗಾಯಿತು ಯುವರಾಣಿ ಶಾಂಭವಿ ಮತ್ತು ಸ್ನೇಹಿತೆಯನ್ನು ಹೊರತಂದು ಧ್ರುವ ವಲ್ಲಭನಿಗೆ ಒಪ್ಪಿಸಿದರು.


ಅಂದೆ ಒಬ್ಬರಿಗೊಬ್ಬರು ನೋಡಿದರು ಉಲ್ಲಾಸದಿಂದರಳಿದ ಮುಖಗಳು ಸ್ನೇಹಿತೆ ಸೌಮಿನಿಯನ್ನು ತನ್ನ ರಾಜ್ಯಕ್ಕೆ ಕರೆದುಕೊಂಡು ಹೋದಳು.


ಇವರನ್ನು ಕಂಡ ತಂದೆ ಮುಕುಂದೇಶ ಹಿಗ್ಗಿನಿಂದ ಬರಮಾಡಿಕೊಂಡ ಧ್ರುವ ವಲ್ಲಭನಿಗೆ ಧನ್ಯವಾದ ತಿಳಿಸಿದ ಅಲ್ಲಿಂದ ತನ್ನ ಸಾಮ್ರಾಜ್ಯಕ್ಕೆ ತೆರಳಿದ.  


ಮರುದಿನ ಯುವರಾಣಿ ಶಾಂಭವಿಯನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ರಾಜ ಧ್ರುವ ವಲ್ಲಭ ಮನೆಯವರನ್ನು ಕರೆದುಕೊಂಡು ಅವಳ ಸನ್ನಿಧಿಗೆ ಹೋದನು.


ಒಪ್ಪಿದ ಮುಕುಂದ ರಾಜ ಮಗಳನ್ನು ಮದುವೆಮಾಡಿ ಕೊಟ್ಟನು.



Rate this content
Log in

Similar kannada story from Drama