shristi Jat

Classics Inspirational Others

3.8  

shristi Jat

Classics Inspirational Others

ಕನಸು

ಕನಸು

2 mins
189


"ಕನಸು ಗುರಿಯ ಆಸೆ ಮೊಳಕಿಸುವ ಸಸಿ" ನಾವು ಏನನ್ನಾದರು ಸಾಧಿಸಬೇಕೆಂದರೆ ಮೊದಲು ನಾವು ಅದರ ಕನಸ್ಸು ಕಾಣುತ್ತೇವೆ. ನಂತರ ಆ ದಾರಿಗೆ ಬೇಕಾಗುವ ಹೆಜ್ಜೆಯನ್ನು ಇಡುತ್ತೇವೆ.

ಗುರಿಯ ಹಿಂದೆ ಗುರು ಇದ್ದ ಹಾಗೆ ಒಂದು ಗುರಿಯ ಹಿಂದೆ ಕನಸ್ಸು ಇರುತ್ತದೆ ಆ ಕನಸ್ಸು ನನಸ್ಸು ಮಾಡಲು ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತವೆ ಅಲ್ಲದೆ ಕನಸ್ಸನ್ನು ಈಡೇರಿಸಿಕೊಳ್ಳಲು ಅದಕ್ಕೆ ಬೇಕಾಗುವ ಕಾರ್ಯಗಳಲ್ಲಿ ನಿರತರಾಗುತ್ತೇವೆ. 

ನಮ್ಮ ಜೀವನ ಕನಸ್ಸುಗಳಿಂದಲೆ ಪ್ರಾರಂಭವಾಗುತ್ತದೆ ಅದರಲ್ಲಿ ನನಸ್ಸಾಗುವವೇಷ್ಟೊ ಹಾಗೆ ಉಳಿಯುವವೇಷ್ಟೊ ಗೋತ್ತಿಲ್ಲ ಆದರೆ ಕನಸ್ಸುಗಳಿಲ್ಲದೆ ಜೀವನವಿಲ್ಲ ತಯಾರಿ ಎಲ್ಲದಕ್ಕೂ ಮಾಡುತ್ತೇವೆ ಕೆಲವು ಭಾಗಶಃ ಪ್ರತಿ ಆಗುವುದಿಲ್ಲ.

ಕನಸ್ಸಿನ ಅಡಿಪಾಯ ಯೋಜನೆಗಳಿಂದ ಪ್ರಾರಂಭವಾಗುತ್ತದೆ ಕರ್ತವ್ಯಗಳೊಂದಿಗೆ ಮುನ್ನಡೆಯುತ್ತದೆ ಯಶಸ್ಸಿನೊಂದಿಗೆ ಪರಿಪೂರ್ಣಗೊಳ್ಳುತ್ತದೆ.ಒಂದು ಬಗೆಯ ಕನಸ್ಸಿರುವದಿಲ್ಲ ವಯಸ್ಸಿಗೆ ತಕ್ಕಂತೆ ಜ್ಞಾನ ಬೆಳೆಯುತ್ತಿದ್ದಂತೆ ಕನಸ್ಸುಗಳು ಹೆಚ್ಚಾಗುತ್ತಾ ಹಾಗೂ ಬದಲಾಗುತ್ತಾ ಇರುತ್ತವೆ.

ಕೆಲವರಿಗೆ ಹೆತ್ತವರನ್ನು ಖುಷಿಯಾಗಿರಿಸುವ ಕನಸ್ಸು ಮನೆ ಕಟ್ಟಿಸಿಡುವುದು ಐಷಾರಾಮಿ ಜೀವನ ಕಲ್ಪಿಸುವುದು ಪ್ರವಾಸದ ತಾಣಗಳಿಗೆ ಕರೆದೊಯ್ಯುವದು ಇದಲ್ಲದೆ ಕೆಲವರಿಗೆ ವೃತ್ತಿ ಜೀವನದ ಕನಸ್ಸುಗಳಿರುತ್ತವೆ ಉದಾಹರಣೆಗೆ ಓದಿನ ವೃತ್ತಿಗಳಾದಂತಹ ವಕೀಲ, ವೈದ್ಯ, ಇಂಜಿನಿಯರ್, ಲಾಯರ್, ಪ್ರಾಧ್ಯಾಪಕ ಬ್ಯಾಂಕ್ ನ ಹುದ್ದೆ ಇತ್ಯಾದಿ ಹಾಗೂ ಕೆಲವರಿಗೆ ಕಲೆ, ಸಾಹಿತ್ಯ ಮತ್ತು ಕ್ರೀಡೆಗಳ ಕಲೆಯನ್ನು ವೃತ್ತಿಯಾಗಿಸಿಕೊಂಡಿರುವ ಚಿತ್ರಕಾರಕ,ನೃತ್ಯಗಾರ ಹಾಡುಗಾರ,ಕ್ರಿಡಾಪಟುಗಳಾಗುವ ಕನಸ್ಸುಗಳಿರುತ್ತವೆ.

ಅದರ ದಡ ಸೇರಲು ಸತತವಾಗಿ ಅದರ ಅಭ್ಯಾಸಗಳಲ್ಲಿ ನಿರತರಾಗಿ ಅದರ ಕ್ಲಾಸ‌ಸ್ ಗಳಲ್ಲಿ ಸೇರುತ್ತಾರೆ ಕ್ರಿಡಾಪಟು ಆಗಲು ಅದರ ಕೋಚಿಂಗ್ ಕ್ಲಾಸ್ ಗೆ ಸೇರುತ್ತಾನೆ ಹಾಡುಗಾರನಾಗಲು ಸಂಗೀತ ಕ್ಲಾಸ್ ಗೆ ಸೇರುತ್ತಾನೆ ನೃತ್ಯ ಮಾಡಲು ಅದರ ಕ್ಲಾಸ್ ಗೆ ಸೇರುವದಲ್ಲದೆ ಅದರ ಅಭ್ಯಾಸಗಳನ್ನು ಮಾಡುತ್ತಾರೆ.

ಹಾಗೂ ಓದಿನ ವೃತ್ತಿಗಾಗಿ ಶಾಲಾಕಾಲೇಜುಗಳಲ್ಲದೆ ಕೆಲ ಬೋಧನೆಗಳ ವರ್ಗಕ್ಕೆ ಸೇರುತ್ತಾರೆ.

ಇನ್ನೂ ಕೆಲವರಿಗೆ ದೇಶಸೇವೆ ಮಾಡುವ ಸೈನಿಕಕನಾಗುವ ಕನಸಿರುತ್ತದೆ ಹಾಗು ಕೆಲವರಿಗೆ ವ್ಯವಹಾರಗಳು ಮಾಡುವ ಇಷ್ಟವಿರುತ್ತದೆ.

ಹೀಗೆ ಹಲವರಲ್ಲಿ ಹಲವು ರೀತಿಯ ಕನಸ್ಸುಗಳಿರುತ್ತವೆ ಅವರು ಇಚ್ಚೆಯ ಕನಸ್ಸುಗಳನ್ನು ಈಡೇರಿಕ್ಕೊಳ್ಳುವದಕ್ಕಾಗಿ ಶ್ರಮಿಸುತ್ತಾರೆ.

ಬದುಕು ಕನಸ್ಸುಗಳಿಂದ ಅಲಂಕೃತಗೊಳ್ಳುತ್ತದೆ ಮನುಷ್ಯನನ್ನು ಲವಲವಿಕೆಯಿಂದಿರಿಸಿ ಆಸಕ್ತಿಗಳ ಛಾಪು ಮೂಡಿಸುತ್ತದೆ ಮನುಷ್ಯನನ್ನು ಖುಷಿಯಾಗಿರಿಸುತ್ತದೆ.

ಕನಸ್ಸುಗಳನ್ನು ಕಾರ್ಯರೂಪಕ್ಕೆ ತರಬೇಕು ಯಶಸ್ವಿಯಾಗುವುದು ಬಿಡುವುದು ಎರಡನೆಯ ಮಾತು ಆದರೆ ಆ ಕಾರ್ಯವು ನಮ್ಮ ಜೀವನದ ಅನುಭವವಾಗಿರುತ್ತದೆ.ಮುಂದಿನ ಕನಸ್ಸುಗಳಿಗೆ ಮಾರ್ಗದರ್ಶಿಯಾಗುತ್ತವೆ ಹೇಗೆ ಪೂರ್ಣಗೊಳಿಸಬೇಕೆಂಬ ಜ್ಞಾನ ಬರುತ್ತದೆ.

ಹಗಲು ಗನಸು ಇರುಳು ಗನಸು ಎರಡು ಬಗೆಯ ಕನಸ್ಸುಗಳಿರುತ್ತವೆ ಹಗಲು ಕನಸು ನಮ್ಮ ಯೋಚನೆಗಳಿಂದ ಬರುವಂತವಾಗಿರುತ್ತವೆ.ನಮ್ಮ ಆಸೆಗಳಿಂದ ಬರುವಂತಹವು ಇರುಳು ಕನಸು ನಮಗೆ ಅರ್ಥವಾಗದ ನಿದ್ರಾಹೀನದ ಕನಸ್ಸುಗಳು ಕೆಲವು ನನಸ್ಸಾಗದ ಭ್ರಮೆಗಳು ಹಾಗೂ ಮುನ್ಸೂಚನೆಗಳ ಕನಸ್ಸಾಗಿರುತ್ತವೆ.

ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮಲ್ಲಿ ಒಂದು ಕನಸ್ಸಾದ ನಂತರ ಇನ್ನೊಂದು ಬೆಳೆಯುತ್ತಾ ಇರುತ್ತವೆ ಹಾಗೂ ಪೂರೈಸುತ್ತಾ ಹೋಗುತ್ತೇವೆ ಕನಸ್ಸುಗಳಿಗೆ ಅಂತ್ಯವಿಲ್ಲ

" ಮನುಷ್ಯ ಕನಸ್ಸುಗಳಿಂದ ತುಂಬಿರುವ ಮೂಟೆ "

ಇನ್ನು ಕೆಲವರಿಗೆ ತಮ್ಮ ಪ್ರೀತಿಸಿದವರೊಂದಿಗೆ ಮದುವೆಯಾಗುವ ಕನಸ್ಸು ಅಲ್ಲದೆ ಕೆಲವು ಪೋಷಕರು ಮಕ್ಕಳನ್ನು ಐಷರಾಮಿನಲ್ಲಿರಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೋಡುತ್ತಾರೆ ಅವರಿಗಾಗಿ ಆಸ್ತಿ ಐಶ್ವರ್ಯವನ್ನು ಮಾಡಿರುತ್ತಾರೆ.



Rate this content
Log in

Similar kannada story from Classics