shristi Jat

Classics Inspirational Others

4.5  

shristi Jat

Classics Inspirational Others

ಸ್ವಾತಂತ್ರ್ಯ

ಸ್ವಾತಂತ್ರ್ಯ

2 mins
387


ಸ್ವಾತಂತ್ರ್ಯ ಎಂದರೆ ಒಂದು ಮನುಷ್ಯ ಒಬ್ಬರ ಆಡಳಿತದಿಂದ ವಿಮುಕ್ತ ಹೊಂದುವುದು ಮಾನವ ಹಕ್ಕುಗಳೊಂದಿಗೆ ತನ್ನಿಷ್ಟದಂತೆ ಬದುಕುವುದು ಕಾನೂನು ನಿಯಮಗಳ ಸಹಿತ ಜೀವನವನ್ನು ಸಾಗಿಸುವದು.


ನಮ್ಮ ದೇಶ ಭಾರತ ಈಗಾಗಲೆ ಬ್ರಿಟಿಷರ ಗುಲಾಮತನದಿಂದ ವಿಮುಕ್ತರಾಗಿದ್ದೇವೆ. ನಮ್ಮನ್ನ ದುಡಿಸಿಕೊಂಡು ಊಟಕ್ಕೂ ತೊಂದರೆಗೀಡು ಮಾಡಿರುವುದುಂಟು. ನಮ್ಮ ದೇಶದ ನೆಲ ಜಲ ಕಸಿದುಕೊಂಡು ಜನರಿಗೆ ಸ್ವಾತಂತ್ರ ಇಲ್ಲದೆ ಹಾಗೆ ಮಾಡಿ, ಅವರದ್ದೆ ಆದ ನಿಯಮಗಳನ್ನು ಮಾಡಿ, ಜನರ ಮೇಲೆ ದಬ್ಬಾಳಿಕೆ,ದೌರ್ಜನ್ಯ ಮಾಡಿರುವುದುಂಟು. ಎಲ್ಲ ಮಾನವರು ಸಮಾನತೆಯಿಂದ ಬದುಕಬೇಕೆಂದು ಹಲವಾರು ಜನ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಸುಭಾಶ್ಚಂದ್ರ ಬೋಸ್,ಬಾಲ ಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯ್ ಪಟೇಲ್, ಮಹಾತ್ಮ ಗಾಂಧಿ ಇನ್ನೂ ಅನೇಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದರು. ನಮ್ಮ ದೇಶದ ಜನರಿಗೆ ಸ್ವಾತಂತ್ರ ತಂದುಕೊಟ್ಟರು.


ಮನುಷ್ಯನ ಮೂಲಭೂತ ಹಕ್ಕುಗಳಾದಂತಹ ಸಮಾನತೆಯ ಹಕ್ಕು, ಸಾಂಸ್ಕೃತಿಕ ಮತ್ತು ವಿದ್ಯಾಬ್ಯಾಸದ ಹಕ್ಕು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು, ಶೋಷಣೆ ವಿರುದ್ಧದ ಹಕ್ಕು, ಸಂವಿಧಾನದ ಪರಿಹಾರದ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕು ಹೀಗೆ ಒಬ್ಬ ಮಾನವನಿಗೆ ಸಮಾನತೆಯಿಂದ ಬದುಕುವ ವಿದ್ಯಾಭ್ಯಾಸ, ಆಸ್ತಿ, ಹಣ,ಕೆಲಸ ಮಾಡುವ ಹಕ್ಕು ಎಲ್ಲರಿಗೂ ಸಮಾನವಾಗಿರುತ್ತದೆ.


ಹಾಗೂ ಮನುಷ್ಯ ಯಾವುದೆ ಧರ್ಮದವನಾಗಿರಲಿ, ತನ್ನ ಧರ್ಮವನ್ನು ಪೂಜಿಸುವ, ಆರಾಧಿಸುವ ಹಕ್ಕನ್ನು ಹೊಂದಿರುತ್ತಾನೆ ತನ್ನ ಸಂಸ್ಕೃತಿಯ ಉಡುಗೆ ತೊಡುಗೆ ಧರಿಸಿ ಪರಂಪರೆಗಳನ್ನು ಪಾಲಿಸುವ ಹಕ್ಕನ್ನು ಹೊಂದಿರುತ್ತಾನೆ. ಅಲ್ಲದೆ ತನಗೆ ಗೊತ್ತಿರುವ ಭಾಷೆಯಲ್ಲಿ ಮಾತಾಡುವ ಹಾಗೂ ವಿಧ್ಯಾಭ್ಯಾಸ ಮಾಡುವ ಹಕ್ಕನ್ನು ಹೊಂದಿರುತ್ತಾನೆ ಮತ್ತು ಕ್ರೌರ್ಯ, ಆತ್ಯಾಚಾರ, ಬಾಲಕಾರ್ಮಿಕ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯ ಇತ್ಯಾದಿ ದುರ್ವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳುವ ಶೋಷಣೆಗಳ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಇರುತ್ತದೆ. ತನಗೆ ಯಾವುದೇ ಕಷ್ಟ ಬಂದಾಗ ಅದರ ವಿರುದ್ಧ ಸಂವಿಧಾನದ ತಿದ್ದುಪಡಿಯ ಮುಖಾಂತರ ಪರಿಹರಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ.


ಮೇಲಿನ ಎಲ್ಲಾ ಅಂಶಗಳು ಒಂದು ವ್ಯಕ್ತಿ ತನ್ನ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ಪಾಲನೆ ಮಾಡುವ ಹಕ್ಕುಗಳನ್ನು ಹೊಂದಿರುವುದೇ ಸ್ವಾತಂತ್ರ್ಯ.


ತನಗೆ ಬೇಕಾದ ವೃತ್ತಿ, ವಿದ್ಯಾಭ್ಯಾಸ, ಕ್ಷೇತ್ರಗಳ ಆಯ್ಕೆ ಮಾಡಿಕೊಳ್ಳುವ ಮತ್ತು ಸಮಾಜದ ಕೆಲಸ ಮಾಡುವ ಹಕ್ಕುಗಳನ್ನು ಹೊಂದಿರುವುದೇ ಸ್ವಾತಂತ್ರ್ಯ ಎನ್ನತ್ತೇವೆ.


ತನಗಿಷ್ಟದ ಸ್ಥಳಗಳನ್ನು ಸುತ್ತುವ ಹಾಗೂ ನೆಲೆಸುವ ಸ್ವಾತಂತ್ರ್ಯ.


ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ ಇಬ್ಬರಿಗೂ ಸಮನಾಗಿ ಬದುಕುವ ಹಕ್ಕಿದೆ ಅದು ವಿದ್ಯಾಬ್ಯಾಸ, ವೃತ್ತಿಗಳ ನೇಮಕ, ಎಲ್ಲದಕ್ಕೂ ಹೆಚ್ಚಾಗಿ ಮೀಸಲಾತಿಗಳನ್ನು ಕೊಡುವುದರಲ್ಲಿ ಹೆಣ್ಣಿಗೆ ಕಡಿಮೆ ಪ್ರಾಮುಖ್ಯತೆ ಕೊಡುವುದನ್ನು ನಿಷೇಧಿಸಬೇಕು. ಮನುಷ್ಯರು ಹೆಣ್ಣಾಗಿರಲಿ ಗಂಡಾಗಿರಲಿ ಅವಕಾಶಗಳು, ಮಿಸಲಾತಿಗಳನ್ನು ಹೆಚ್ಚಿಸಿ ಮಹಿಳಾ ಸಬಲಿಕರಣಕ್ಕೆ ಒತ್ತು ಕೊಡಬೇಕು. ಅದು ಹೆಣ್ಣಿನ ಸ್ವಾತಂತ್ರ್ಯ.


ಬಡವ ಶ್ರೀಮಂತವೆಂಬ ತಾರತಮ್ಯವೆಸಗುವಂತಿಲ್ಲ. ಬಡವರನ್ನು ದುರ್ವ್ಯವಹಾರಗಳಿಗೆ ಬಳಸುವಂತಿಲ್ಲ. ಒಂದು ವೇಳೆ ಅವನು ಆಸ್ತಿ ಹೊಂದಿರದೆ ಯಾವುದೇ ಒಂದು ಕೆಲಸಕ್ಕೆ ಸೇರಿಕೊಂಡರೆ, ತನ್ನ ಜೀವನ ಸಾಗಿಸಲು ಅವನ ಕರ್ತವ್ಯಕ್ಕೆ ಗೌರವ ಕೊಟ್ಟು ಸರಿಯಾದ ಸಂಬಳ ವಿತರಣೆ ಮಾಡಬೇಕು. ಅದು ಅವನ ಸ್ವಾತಂತ್ರ್ಯ.


ಸ್ವಾತಂತ್ರ್ಯದಿಂದ ಬದುಕುವುದು ಅಂದರೆ ಇನ್ನೊಬ್ಬರ ಒತ್ತಾಯವಿಲ್ಲದೆ ತನ್ನ ಹಕ್ಕುಗಳೊಂದಿಗೆ ಬದುಕುವುದು ಅದು ಸಂವಿಧಾನಕ್ಕೆ ವಿರುದ್ಧವಲ್ಲದ ಹಾಗೆ. ಸಮಾಜಕ್ಕೆ ಧಕ್ಕೆ ತರದ ರೀತಿಯಲ್ಲಿ ತನ್ನ ಇಷ್ಟದ ನೆಲೆಯಲ್ಲಿ ಬಾಳುವುದು,ಇಷ್ಟದ ವೃತ್ತಿಗಳ ಆಯ್ಕೆ ಮಾಡುವದು ಇತ್ಯಾದಿ.


ಇತ್ತಿಚೆಗೆ ಮತ್ತೆ ದುಡ್ಡಿನ ಆಮಿಷ ತೋರಿಸಿ ಅವರನ್ನು ತಪ್ಪು ದಾರಿಗೆ ಎಳೆಯುತ್ತಿರುವುದನ್ನು ಗಮನಿಸಬಹುದು. ಇಂತವರಿಗೆ ತಮ್ಮ ಸ್ವಾತಂತ್ರ್ಯದ ಅರಿವಿರುವುದಿಲ್ಲ ಮತ್ತು ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ನೋಡುತ್ತಾರೆ.


ಇನ್ನೊಬ್ಬರ ಗುಲಾಮರನ್ನಾಗಿ ಬದುಕುವದೆಂದರೆ ನಮ್ಮಲ್ಲಿರುವ ಪ್ರತಿಭೆ ಜ್ಞಾನಕ್ಕೆ ಬೆಲಿ ಹಾಕಿದ ಹಾಗೆ! ಇಂತಹವುಗಳನ್ನು ಹೊರತುಪಡಿಸಿ ನಮ್ಮದೆ ಆದ ಜ್ಞಾನ, ಪ್ರತಿಭೆಗಳನ್ನು ಬೆಳಕಿಗೆ ತರುವುದೆ ಸ್ವಾತಂತ್ರ್ಯ! 


ದುಷ್ಟರನ್ನು ಆದಷ್ಟು ದೂರವಿಟ್ಟು ಒಳ್ಳೆಯ ಸಮುದಾಯದ ಬೆಳವಣಿಗೆಗೆ ಒತ್ತು ಕೊಡಬೇಕು.


ನಮ್ಮ ಪ್ರಕೃತಿಯಾದ ನೆಲ, ಜಲ, ವಾಯು ಮುಂತಾದವುಗಳನ್ನು ಕಾಪಾಡುವ ಸ್ವಾತಂತ್ರ್ಯ, ಜವಾಬ್ದಾರಿ ನಮಗಿದೆ. ಅಂತಹವುಗಳ ರಕ್ಷಣೆಗಾಗಿ ಸೌಲಭ್ಯಗಳನ್ನು ತರುವುದಲ್ಲದೆ ಅದರ ಬಗ್ಗೆ ಮಾಹಿತಿ ನೀಡುವ ಸಂಘಗಳನ್ನು ನಿರ್ಮಿಸಬೇಕು.


Rate this content
Log in

Similar kannada story from Classics