shristi Jat

Abstract Action Inspirational

4.0  

shristi Jat

Abstract Action Inspirational

ಏಲಿಯನ್

ಏಲಿಯನ್

2 mins
137


ಏಲಿಯನ್ ಕೆಲವು ಅಧ್ಯಾಯಗಳು ಪ್ರಕಾರ ಅನ್ಯಗ್ರಹದ ಜೀವಿ ನಮ್ಮ ಗ್ರಹದಲ್ಲಿ ವಾಸಿಸುತ್ತಿರುವ ಹಲವಾರು ಜೀವಿಗಳಾದ ಪ್ರಾಣಿಗಳು,ಪಕ್ಷಿಗಳು,ಕ್ರಿಮಿಗಳು,ಕೀಟಗಳು ಹಾಗೂ ಮನುಷ್ಯರು ಹೀಗೆ ವಿವಿಧ ಜೀವಿಗಳು ವಾಸಿಸುವ ಗ್ರಹವಿದು ಭೂಮಿ ಇಲ್ಲಿ ಹೇಗೆ ಒಂದು ಸೃಷ್ಟಿ ವಿಸ್ತಾರಗೊಂಡಿದೆ ನೀರು,ಗಾಳಿ,ಅರಣ್ಯ ಜೀವಿಗಳೊಂದಿಗೆ ಹಾಗೆ ಏಲಿಯನ್ ಕೂಡ ಒಂದು ಗ್ರಹದ ಜೀವಿ ಇರಬಹುದು ಅದು ಒಂದು ಸೃಷ್ಟಿಯಾಗಿರುತ್ತದೆ ಆ ಗ್ರಹದ್ದೆ ಆದ ವಾತಾವರಣ ಅಲ್ಲಿ ವಿಸ್ತಾರಗೊಂಡಿರುತ್ತದೆ.

ಕೆಲವು ಜೀವಿಗಳು ನಮ್ಮ ಗ್ರಹದಲ್ಲಿ ಕವಚ ಸಹಿತ ಇರುತ್ತವೆ ಉದಾಹರಣೆಗೆ ರೇಷ್ಮೆ ಹುಳ ಇತ್ಯಾದಿ ಹೀಗೆ ಏಲಿಯನ್ ದೆ ಆದ ತಟ್ಟೆ ಇರಬಹುದು ಅದರ ವಾಸಿಸುವ ಒಂದು ವಿಕಸನ ಇನ್ನೊಂದು ಬಗೆಯಾಗಿ ರೂಪುಗೊಂಡಿರಬಹುದು.

ಹಾಗೂ ಮಂಗಳ ಗ್ರಹದಲ್ಲಿ ಜೀವಿಸಲು ಮಾನವರು ಹೇಗೆ ಅಲ್ಲಿನ ಜಾಗವನ್ನು ಈಗಲೆ ಖರಿದಿಸುತ್ತಿದ್ದಾರೆ ಹಾಗೆಯೆ ಏಲಿಯನ್ ಗಳು ಕೂಡಾ ಭೂಮಿಗೆ ಬಂದರು ಬರಬಹುದು ಒಂದು ವೇಳೆ ಬಂದರು ತೊಂದರೆಯಾಗುವುದೊ ಬಿಡುವುದೊ ಅದು ಬೇರೆ ವಿಚಾರ ಬಂದಾಗ ಅದರ ರೂಪ ರೀತಿ ಬೇರೆಯಾದಲ್ಲಿ ಅರ್ಥೈಸಿಕೊಳ್ಳುಲು ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ.

ಆದರೆ ಇಲ್ಲಿನ ವರೆಗಿನ ಇತಿಹಾಸದ ಪ್ರಕಾರ ಹಾಗೂ ವಿಜ್ಞಾನದ ಅಧ್ಯಯನಗಳ ಪ್ರಕಾರ ಒಂದು ಗ್ರಹದ ಜೀವಿ ಇನ್ನೊಂದು ಗ್ರಹದಲ್ಲಿ ಹೋಗಿ ವಾಸಿಸಿರುವ ಯಾವ ಇತಿಹಾಸ ಮತ್ತು ಆಧಾರಗಳಿಲ್ಲ.

ಹಾಗಾಗಿ ವಾಸಿಸಬಹುದು ಅನ್ನೊದಾಗಿ ಬಂದರೆ ಅದೊಂದು ಬಗೆಯ ಹೊಸ ಅನುಭವವಾಗಿರುತ್ತದೆ.

ನಾವು ಇನ್ನೊಂದು ಗ್ರಹಕ್ಕೆ ಹೋಗಿ ಅಥವಾ ಬೇರೆ ಗ್ರಹದ ಜೀವಿಗಳು ನಮ್ಮ ಗ್ರಹಕ್ಕೆ ಬಂದು ಹೊಸದೊಂದು ಅಧ್ಯಾಯವಾಗಿ ಪರಿಗಣಿಸುತ್ತದೆ.

ಏಲಿಯನ್ ಗಳಿಗೆ ಮಾನವನಿಗಿಂತ ಹೆಚ್ಚು ಬುದ್ಧಿ ಶಕ್ತಿ ಇರುತ್ತದೆ ಅಂತ ಕೆಲವು ನಿಖರವಿಲ್ಲದ ಸುದ್ದಿಗಳು ಬರುತ್ತಿವೆ ಒಂದು ವೇಳೆ ಹಾಗಿದ್ದಲ್ಲಿ ಚಿಂತಿತಗೊಳ್ಳುವುದು ಅನವಶ್ಯಕ ಅನಿಸುತ್ತದೆ.ಯಾಕೆಂದರೆ ಮಾನವನ ಬುದ್ಧಿ ಶಕ್ತಿಗಿನ ಹೊಲಿಕೆ ಅಸಮಂಜಸವಾಗುತ್ತದೆ ಅವನು ಈ ಭೂಮಿಯಲ್ಲಿದ್ದು ಏನೆಲ್ಲಾ ತನ್ನ ಜ್ಞಾನದಿಂದ ಎಷ್ಟೊ ವರ್ಷಗಳಿಂದ ಮಾಡಿದ ಹಾಗೂ ಕಂಡು ಹಿಡಿದು   ಕಲೆಶಿಲ್ಪಗಳು,ಸಂಶೋಧನೆಗಳಾಗಲಿ ಹಾಗೂ ಮತ್ತೊಂದಾಗಿರಬಹುದು ಅವೆಲ್ಲವು ಅದ್ಭುತವಾಗಿವೆ.ಅವು ಆರೋಗ್ಯವರ್ಧಕವಾಗಿರಬಹುದು,ಶಿಲೆಗಳಾಗಿರಬಹುದು ಗಗನಯಾತ್ರಿಗಳು ಬಾಹ್ಯಾಕಾಶದ ಬಗ್ಗೆ ಸಂಶೋಧನೆ ಮಾಡಿದ್ದಾರೆ ಹಾಗೂ ಮಾಡುವ ಪ್ರಯತ್ನದಲ್ಲಿದ್ದಾರೆ.ಮಾನವ ಏನೆಲ್ಲಾ ಸಾಹಸಗಳು ಮಾಡಿದ್ದಾನೆ.

ಹೆಚ್ಚು ಬುದ್ದಿ ಇದ್ದರೆ ಅದು ಅದರ ಸೃಷ್ಟಿ ಹಾಗಾಗಿರುತ್ತದೆ ನಮ್ಮ ಭೂಮಿಯಲ್ಲೆ ಮಾನವನಿಗಿರುವಷ್ಟು ಬುದ್ಧಿ ಶಕ್ತಿ ಬೇರೆ ಜೀವಿಗಳಿಗಿಲ್ಲ ಹಾಗೆಯೆ ಅದರದ್ದು ಕೂಡ ಇರಬಹುದು ಹಾಗಂತ ಮಾನವ ಬೇರೆ ಗ್ರಹದ ವಿಷಯಗಳ ಬಗ್ಗೆ ಸಂಶೋಧನೆ ಮಾಡುತ್ತಾ ಇರುತ್ತಾನೆ ಏಲಿಯನ್ ಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ಸಿಕ್ಕರೆ ತಿಳಿದುಕೊಳ್ಳೊಣ ಅದರ ಬರುವಿಕೆಯಿಂದ ತೊಂದರೆಯಾಗುವದಾದರೆ ಸಂಶೋಧನೆಯ ಪ್ರಯಾಣ ಚಾಲ್ತಿಯಲ್ಲಿರುತ್ತದೆ.

ನಮಗೆ ತೊಂದರೆರಹಿತವಾಗಿ ಅವುಗಳನ್ನು ಬರುವ ಯೋಜನೆಗಳು ಮಾಡಿದರಾಯ್ತು ಅದೊಂದು ಜೀವಿ ಅನ್ಯ ಗ್ರಹದ ಜೀವಿ ಅಷ್ಟೆ ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ನಕಾರಾತ್ಮಕ ಭಾವನೆ ಹೊಂದುವುದು ತಪ್ಪು ನಮ್ಮ ಗ್ರಹದಲ್ಲಿ ನಮಗೆ ಸಂರಕ್ಷಣೆ ಇಲ್ಲದಂತಾಗಿದೆ ವೈರಸ್ ಗಳು ಪ್ರಕೃತಿ ಹಾನಿಯಿಂದಾಗಿ ಇದ್ದ ಜೀವಿಗಳಿಗೆ ರಕ್ಷಿಸಲು ವಿಫಲರಾಗುತ್ತಿದ್ದೇವೆ.

ಏಲಿಯನ್ ಗಳಿಗೆ ಮಾನವನಿಂದ ರಕ್ಷಣೆ ಬೇಕಿದ್ದರೆ ರಕ್ಷಿಸೋಣ ಹಾಗೂ ಏಲಿಯನ್ ಗಳಿಂದ ನಮಗೆ ಹೊಸ ಅಧ್ಯಯನವಾಗಿ ರೂಪುಗೊಂಡರೆ ಸ್ವಾಗತಿಸೋಣ.

ಏಲಿಯನ್ ಹಾರುತ್ತದೆ ನಡೆಯುತ್ತದೆ ಅದು ಅದರ ವಿಕಸನ ಭೂಮಿಯಲ್ಲೆ ಪಕ್ಷಿಗಳು ಹಾರುತ್ತವೆ ಅದೆ ರೀತಿ ಇರಬಹುದು.ಸೃಷ್ಟಿಯ ನಿಯಮ ಬದಲಿಸಲಾಗುವದಿಲ್ಲ ಏಲಿಯನ್ ಒಂದು ಜೀವಿ ಎಂಬ ಸಕಾರಾತ್ಮಕ ಭಾವನೆಯಿಂದ ಇರುವುದು ಒಳ್ಳೆಯದು ನಕಾರಾತ್ಮಕಕ್ಕೆ ಒತ್ತು ಕೋಡುವುದು ಸರಿ ಅಲ್ಲ ಅವುಗಳ ಮಾಹಿತಿಯಿಲ್ಲದೆ.


 


Rate this content
Log in

Similar kannada story from Abstract