shristi Jat

Classics Inspirational Others

4.0  

shristi Jat

Classics Inspirational Others

ಸೂಪರ್ ಪವರ್

ಸೂಪರ್ ಪವರ್

3 mins
217


ಪವರ್ ಅಂದರೆ ಶಕ್ತಿ ನನ್ನ ಪ್ರಕಾರ ಸಮಾಜಕ್ಕೆ ಹೊಸ ನಿಯಮಗಳನ್ನು ತರುವ ಶಕ್ತಿ ಅಂತಹ ಶಕ್ತಿ ಪ್ರಧಾನ ಮಂತ್ರಿಯವರ ಕೈಯಲ್ಲಿರುತ್ತದೆ.ಒಂದು ವೇಳೆ ನನಗೆ ಅಂತಹ ಶಕ್ತಿ ಬಂದರೆ ನಮ್ಮ ದೇಶದ ಬಹಳಷ್ಟು ನಿಯಮಗಳನ್ನು ಬದಲಾಯಿಸುವೆ.

ಮೊದಲನೆಯದಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವೆ.

ಇತ್ತಿಚಿನ ದಿನಗಳಲ್ಲಿ ಭ್ರಷ್ಟಾಚಾರ ತುಂಬಾ ಹೆಚ್ಚುತಿದ್ದು ಜ್ಞಾನಕ್ಕೆ ಬೇಲೆಯೆ ಇಲ್ಲದಂತಾಗಿದೆ.ಸರ್ಕಾರದ ವೃತ್ತಿಗಳನ್ನು ಹಣಕ್ಕಾಗಿ ಮಾರಲಾಗುತ್ತಿದೆ.ಅಂಕಗಳಿದ್ದು ಜ್ಞಾನವಿದ್ದು ವೃತ್ತಿಯ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಮೋಸ ನಡೆಯುತ್ತಿದೆ ಹಾಗೂ ಫಲಿತಾಂಶಗಳಲ್ಲಿಯೂ ಸಹ ತುಂಬಾ ಮೋಸ ನಡೆಯುತ್ತಿದೆ ದುಡ್ಡು ಕೊಟ್ಟವರಿಗೆ ಉತ್ತೀರ್ಣ ಮಾಡಿ ಕೊಡದೆ ಇದ್ದವರಿಗೆ ಅನುತ್ತೀರ್ಣ ಮಾಡುವದು.

ಅಲ್ಲದೆ ಅವರ ಅಂಕಗಳನ್ನು ಕಡಿಮೆಮಾಡಿ ದುಡ್ಡನ್ನು ಬೇಡಿಕೆ ಇಡುವುದು ಇಂತಷ್ಟು ಕೊಟ್ಟರೆ ವೃತ್ತಿ ನೀಡುವುದಾಗಿ ಹೇಳುವುದು. 

ಎಷ್ಟೋ ಜನಕ್ಕೆ ದುಡ್ಡನ್ನು ತೆಗೆದುಕೊಂಡು ಸರ್ಕಾರದ ಕೆಲಸವನ್ನು ನೀಡಿದ್ದಾರೆ ಹಾಗೂ ಎಷ್ಷೋ ಜನ ದುಡ್ಡು ಇಲ್ಲದೆ ಕೆಲಸವನ್ನು ಕಳೆದುಕೊಂಡಿದ್ದಾರೆ.

ಕಷ್ಟಪಟ್ಟು ಓದಿ ಅಂಕಗಳನ್ನು ತೆಗೆದಿರುತ್ತಾರೆ ಅವರ ಕನಸಿನ ವೃತ್ತಿಗಾಗಿ ಸಕಲ ತಯಾರಿಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿರುತ್ತಾರೆ ಅವರಲ್ಲಿ ಜ್ಞಾನ ಇದ್ದು ಅಂಕವಿದ್ದು ದುಡ್ಡಿಗಾಗಿ ಅವರನ್ನು ಅನುತ್ತೀರ್ಣ ಮಾಡುವರು.

ಆದಕಾರಣ ನನಗೆ ಆ ಶಕ್ತಿ ಇದ್ದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಅವರ ದುಡ್ಡಿಗಲ್ಲದೆ ವೃತ್ತಿಗಾಗಿ ಶ್ರಮ ಪಟ್ಟು ಉತ್ತಿರ್ಣರಾಗಿರುವ ಜನರಿಗೆ ಪ್ರತಿಭೆ, ಜ್ಞಾನ ಇರುವವರಿಗೆ ಕೆಲಸವನ್ನು ಬರುವ ಹಾಗೆ ಮಾಡುವೆ.

ಎರಡನೆಯದಾಗಿ ಮಹಿಳೆಯ ರಕ್ಷಣೆಗೆ ಕಠಿಣವಾದ ಕಾನೂನು ಮತ್ತು ಷರತ್ತುಗಳು ತರುವೆ.

ಹೆಸರಿಗೆ ನಮ್ಮ ದೇಶದಲ್ಲಿ ಕಾನೂನು ಇದೆ ಒಂದು ಹೆಣ್ಣು ಶೋಷಣೆಗಿಡಾದಾಗ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಒಂದು ವೇಳೆ ಕೈಗೊಂಡರು ತುಂಬಾ ಸಮಯವನ್ನು ತೆಗೆದಕೊಳ್ಳುತ್ತಾರೆ.ಇತ್ತಿಚೆಗೆ ಹೆಣ್ಣು ಕಿರುಕುಳಕ್ಕೆ ಒಳಗಾಗುತಿದ್ದಾಳೆ ಮಾನಸಿಕ ಒತ್ತಡಗಳನ್ನು ಅವಳ ಮೇಲೆ ಹೇರುವುದು ಮತ್ತು ದೈಹಿಕವಾಗಿ ಅತ್ಯಾಚಾರ ವೆಸಗುವದು ಯಾವುದೆ ರಕ್ಷಣೆಗಳಿಲ್ಲದೆ ನೋವುಗಳನ್ನು ಅನುಭವಿಸುತ್ತಿದ್ದಾಳೆ.

ಅಲ್ಲದೆ ಗಂಡನ ಮನೆಯಲ್ಲಿನ ಕಿರುಕುಳ ಹೆಚ್ಚುತ್ತಿದ್ದು ಅವಳಿಗೆ ಗಂಡನಿಂದ ಮೋಸವಾದರು ಗಂಡನ ಮನೆಯವರು ಕೊಡುವ ಕಿರುಕುಳ ಸಹಿಸುವುದಲ್ಲದೆ ಬೇರೆ ನಿರ್ಣಯ ತೆಗೆದುಕೊಳ್ಳುವ ಮತ್ತು ಕಾನೂನಿನ ಮುಖಾಂತರ ಅವರನ್ನು ಶಿಕ್ಷಿಸಲು ಆಗುತ್ತಿಲ್ಲ ಕಾರಣ ಹೆಸರಿಗೆ ಕಾನೂನಿನ ನಿಯಮಗಳಿವೆ ಪ್ರಾಯೋಗಿಕವಾಗಿ ಆದರೆ ಕಾನೂನು ಅಂತಹ ಯಾವುದೆ ಕ್ರಮಗಳು ಕೈಗೊಳ್ಳುತ್ತಿಲ್ಲ.

ಇತ್ತೀಚಿನ ದಿನಗಳಲ್ಲಂತು ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಮೋಬೈಲ್ ಗಳನ್ನು ಹ್ಯಾಕ್ ಮಾಡಿ ಅವರ ವೈಯಕ್ತಿಕ ವಿಷಯಗಳನ್ನು ತಿಳಿದುಕೊಂಡು ಬ್ಲ್ಯಾಕ್ ಮೇಲ್ ಮಾಡುವುದು. ಅವರ ಪೋಟೊ ಮತ್ತು ಮಾತುಗಳನ್ನು ರೆಕಾರ್ಡಿಂಗ್ ಮಾಡಿ ದುರುಪಯೋಗ ಮಾಡುತಿದ್ದಾರೆ ಚಲನಚಿತ್ರ ಕ್ಷೇತ್ರ ಇಂತಹ ಕೆಲಸವನ್ನು ಮಾಡುತಿದ್ದು ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಜನರನ್ನು ಕೆಟ್ಟ ದಾರಿಗೆ ಎಳೆಯುತ್ತಿದ್ದುದ್ದಲ್ಲದೆ ಸಮಾಜದಲ್ಲಿ ಧ್ವನಿವರ್ಧಕಗಳನ್ನು ಹೆಚ್ಚಾಗಿ ಬಳಸುತ್ತಿದ್ದು  ಅಶಾಂತಿಯನ್ನು ಸೃಷ್ಟಿಸುತಿದ್ದಾರೆ.ಸ್ತ್ರಿಯರ ಬಗ್ಗೆ ಕೆಟ್ಟ ಹಾಡುಗಳನ್ನು ಬಿಡುಗಡೆ ಮಾಡುವುದಲ್ಲದೆ ಹಲವಾರು ಅರ್ಥವಿಲ್ಲದ ಕಾರ್ಯಕ್ರಮಗಳನ್ನು ಮಾಡಿ ಧ್ವನಿವರ್ಧಕಗಳನ್ನು ಬಳಸಿ ಜನರನ್ನು ತಪ್ಪು ದಾರಿಗೆ ಎಳೆಯುವುದಲ್ಲದೆ ಅಶಾಂತಿಯತೆ ಮತ್ತು ಅನಾರೋಗ್ಯಕ್ಕೆ ತುತ್ತು ಮಾಡುತ್ತಿದ್ದಾರೆ ದುಡ್ಡಿನ ದರ್ಪ,ಅಧಿಕಾರದ ಸಹಾಯದಿಂದ ಮನಬಂದಂತೆ ವರ್ತಿಸುತ್ತಿದ್ದಾರೆ ಇಂತವರನ್ನು ಕಡೆ ಗಣಿಸದೆ ಕಾನೂನು ಕಠಿಣ ಶಿಕ್ಷೆಗೆ ಒಳಮಾಡಬೇಕು ಜನರ ಸಮಾಜದ ಒಳಿಗಲ್ಲದೆ ಕೆಡಕಿಗಾಗಿ ದುರ್ಮಾರ್ಗಗಳಿಡಿದು ನಾಂದಿ ಆಡುತ್ತಿದ್ದಾರೆ.

ಇಂತಹ ಹ್ಯಾಕರ್ಸ್ ಗಳು ವಿರುದ್ಧ ಕಾನೂನು ಬಲವಾದ ಕ್ರಮಗಳು ತರಬೇಕು ಇನ್ನೋಬ್ಬರ ಮೋಬೈಲ್, ಲ್ಯಾಪ್ಟಾಪ್,ಹಾಗೂ ಮುಂತಾದವುಗಳಲ್ಲಿ ಸ್ಪೈ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಸಮಾಜ ಹಾಳುಮಾಡುತಾತಿದ್ದಾರೆ ಮತ್ತು ಸ್ಪೈ ಕ್ಯಾಮೆರಾ ಗಳನ್ನು ಮನೆಗಳಲ್ಲಿ ಕೂಡಿಸಿ ದೂರದಲ್ಲಿಯೆ ಕುಳಿತುಕೊಂಡ ನೋಡುವುದು ಸೈಬರ್ ಕಳ್ಳರು ಇಂತಹ ಮೋಕದ್ದಮೆ ನಡೆಸುತ್ತಿದ್ದಾರೆ.

ಆದಾಕಾರಣ ಹೆಣ್ಣಿಗೆ ಕಿರುಕುಳ ಕೊಡುವವರು ಯಾರೆ ಇರಲಿ ಮಾನಸಿಕವಾಗಿ, ದೈಹಿಕವಾಗಿ ಮತ್ತು ಪ್ರಮುಖವಾಗಿ ಸೈಬರ್ ಫ್ರಾಡ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವೆ.

ತಂತ್ರಜ್ಞಾನವನ್ನು ದುರುಪಯೋಗ ಪಡಿಸಕಾಗದ ಹಾಗೆ ಅಪ್ಲಿಕೇಶನ್ಗಳನ್ನು ಸಾಫ್ಟವೇರ್ ಗಳನ್ನು ಪ್ರತಿಯೊಬ್ಬರು ಹಾಕಿಕೊಂಡು ತಮ್ಮ ವಯಕ್ತಿಕ ರಕ್ಷಣೆಗೊಳಿಸುವ ಹಾಗೆ ಮಾಡುವೆ.

ಅವಳಿಗೆ ಗೌರವದಿಂದ, ಧೈರ್ಯದಿಂದ ಬದುಕುವ ಹಕ್ಕಿದೆ ಅವಳಿಗೆ ಹಾನಿ ಉಂಟು ಮಾಡುವ ಯಾವುದೆ ವಿಷಯವಿರಲಿ ಅಂತಹವರ ವಿರುದ್ಧ ಕ್ರಮ ಎಸಗಬೇಕು ಕಾನೂನಿನ ಭಯ ಮೂಡಬೇಕು.

ಹೆಣ್ಣುಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಬೇಕು ಅದರ ಜೋತೆ ಅವರಿಗಾಗಿ ಉಚಿತ ಸೌಲಭ್ಯಗಳನ್ನು ತರಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ರಕ್ಷಣೆ ನೀಡಬೇಕು.

ಮೂರನೆಯದ್ದಾಗಿ ಬಡವರು ಅಭಿವೃದ್ಧಿ ಹೊಂದುವ ಕೆಲಸವನ್ನು ಮಾಡುವೆ.

ನಮ್ಮ ದೇಶವು ಶ್ರೀಮಂತಿಕೆಯಿಂದ ಕೂಡಿದ ಬಡರಾಷ್ಟ್ರವಾಗಿದೆ. ಬಡವರಿಗೆ ಬೇಕಾದ ಅನುಕೂಲಗಳನ್ನು ಮಾಡಬೇಕು ಅದು ಕೃಷಿ ಕ್ಷೇತ್ರದವರಿಗಾಗಿ ಅಥವಾ ಏನು ಇಲ್ಲದೆ ಸಣ್ಣ ವ್ಯವಹಾರಗಳು ಮಾಡಿ ಬದುಕುವವರಿಗೆ ಬಡ್ಡಿರಹಿತ ಸಾಲಗಳನ್ನ ಒದಗಿಸುವುದು ಅಂತಹವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಅವರು ಖಾತೆಗೆ ಜಮಾಗೊಳಿಸಬೇಕು.

ಕೃಷಿ ಕಾರ್ಮಿಕರಿಗೆ ಉತ್ತಮ ಬೇಲೆಯಲ್ಲಿ ಧಾನ್ಯಗಳನ್ನು ಮಾರಿಕೊಳ್ಳುವ ಅವಕಾಶಗಳು ಸರ್ಕಾರ ಒದಗಿಸಬೇಕು.ಬೆಳೆ ಹಾನಿಯಾದಾಗ ಕೃಷಿಕರಿಗೆ ಧನಸಹಾಯ ಮಾಡಬೇಕು.

ಬಗೆ ಬಗೆಯ ಬೆಳೆಗಳ ಉತ್ಪನ್ನಗಳಿಗೆ ಸಹಕಾರಿಯಾಗುವ ಸಂಘಗಳ ತೆರೆದು ಕೃಷಿಕರರಿಗೆ ಮಾರ್ಗದರ್ಶನ ಮಾಡಬೇಕು

ಅಂತವರ ಮಕ್ಕಳು ಯಾವುದೆ ಕ್ಷೇತ್ರ ಓದಲು ಆಯ್ಕೆ ಮಾಡಿದರೆ ಉಚಿತ ಶಿಕ್ಷಣ ಪಡೆಯುವಂತಿರಬೇಕು.

ನಾಲ್ಕನೆಯದ್ದಾಗಿ ಎಲ್ಲರಿಗೂ ಒಂದೆ ಕಾನೂನು ಮಾಡುವುದು.

ಸಂವಿಧಾನದ ಕೆಲವು ತಿದ್ದುಪಡಿಯಾಗಿವೆ ಅವಶ್ಯಕತೆ ಬಂದಾಗ ಆದರೆ ತುಂಬಾ ಜನ ಶಿಕ್ಷಣಕ್ಕಾಗಿ,ವೃತ್ತಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ ಜಾತಿ ಮತಗಳ ಭಿನ್ನದಿಂದಾಗಿ ಒಬ್ಬನಿಗೊಂದು ಕಾನೂನು ಇನ್ನೊಂದು ಜಾತಿಗೆ ಇನ್ನೊಂದು ಕಾನೂನು ಇತ್ತಿಚಿನ ದಿನಗಳಲ್ಲಿ ಬಡವರು ಎಲ್ಲಾ ಜಾತಿಗಳಲ್ಲಿದ್ದಾರೆ ಹಾಗೂ ಶ್ರೀಮಂತರು ಅವಕಾಶಗಳು ಎಲ್ಲಾ ಬಡವರ ಓದುವಿಗೆ ಇರಲಿ ಆದರೆ ಅವರ ಅಂಕಗಳಿಗಲ್ಲ ಎಲ್ಲರಿಗೂ ಒಂದೆ ಕಾನೂನು ಬರಬೇಕು ಉದ್ಯೋಗದ ಅವಕಾಶಗಳು ಎಲ್ಲರಿಗು ಸಮಾನಾಗಿರಬೇಕು ಹಾಗೂ ವಿದ್ಯಾರ್ಥಿವೇತನಗಳು ಎಲ್ಲಾ ಜಾತಿಗಳಿಗೆ ಸಮ ಇರಬೇಕು ಮತ್ತು ಶಿಕ್ಷಣದ ಶುಲ್ಕವು ಸಮ ಇರಬೇಕು.

ಮಿಸಲಾತಿಗಳ ಜಾರಿಗೆ ಮಾಡಿದಾಗ ಎಲ್ಲಾ ಜಾತಿ ವರ್ಗದವರಿಗೆ ಸಮಾನವಾದ ಅನುಕೂಲಗಳು ಜಾರಿಗೊಳಿಸಬೇಕು.

ನನ್ನ ಕೈಯಲ್ಲಿ ಪವರ್ ಬಂದರೆ ಸುಪರ್ ಪವರನ್ನಾಗಿ ಉಪಯೊಗಿಸಿಕೊಂಡು ಮೇಲಿನ ಎಲ್ಲಾ ತಿದ್ದುಪಡಿಗಳನ್ನ ಮಾಡುವೆ.


 



Rate this content
Log in