shristi Jat

Classics Inspirational Others

4.0  

shristi Jat

Classics Inspirational Others

ಯಶಸ್ಸು

ಯಶಸ್ಸು

2 mins
200


ಯಶಸ್ಸು ಎಂಬ ಪದ ತುಂಬಾ ಪ್ರಮುಖವಾದದ್ದು ನಾವು ಯಾವುದೆ ಕೆಲಸ ಮಾಡಲಿ ಅದರ ಫಲಿತಾಂಶ ಸಿಕ್ಕಾಗಲೆ ಆ ಕೆಲಸ ಅರ್ಥ ಪೂರ್ಣವಾಗುವದು.

ನಾವು ಮಾಡಿದ ಕೆಲಸದಿಂದ ನಮಗೆ ಯಶಸ್ಸು ಸಿಕ್ಕಾಗ ನಮ್ಮಲ್ಲಿರುವ ಜ್ಞಾನ ಕಲೆಗಳ ಬಗ್ಗೆ ಗೌರವದ ಭಾವ ಮೂಡುತ್ತದೆ.ಅಲ್ಲದೆ ಆ ಯಶಸ್ಸಿನಿಂದ ಇನ್ನೊಬ್ಬರಿಗೆ ಸಹಾಯ ಆಗುವ ಯಶಸ್ಸು ಇದ್ದರೆ ಅದಕ್ಕಿಂತ ಸಮಾಜ ಸೇವೆ ಇನ್ನೊಂದಿಲ್ಲ.

ಯಶಸ್ಸಿನಲ್ಲಿ ಎರಡು ವಿಧಗಳಿವೆ. ಒಂದು ಶಿಕ್ಷಣದ ಯಶಸ್ಸು ಮತ್ತೊಂದು ವೃತ್ತಿಯ ಯಶಸ್ಸು. 

ಶಿಕ್ಷಣದ ಯಶಸ್ಸು ಎಂದರೆ ನಾವು ವಿದ್ಯೆ ಕಲಿಯುವಾಗ ಪರಿಕ್ಷೆಯಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗಿ ಸಿಗುವ ಯಶಸ್ಸು ಅವರ ಜ್ಞಾನ ಮತ್ತು ಬುದ್ಧಬುದ್ಧಿಶಕ್ತಿಗೆ ಸಿಗುವ ಗೌರವವಾಗಿ ರುತ್ತದೆ.

ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಕಾರ್ಯಕ್ರಮಗಳನ್ನು ಮಾಡಿ ಅವರಿಗೆ ಪ್ರಮಾಣ ಪತ್ರದ ಜೊತೆಗೆ ಪದಕ ವಿತರಿಸುವುದರಿಂದ ಅವರ ಶ್ರಮ ಮತ್ತು ಜ್ಞಾನಕ್ಕೆ ಬೇಲೆ ಸಿಗುತ್ತದೆ.

ವೃತ್ತಿಯ ಯಶಸ್ಸು ಎಂದರೆ ನಾವು ಮಾಡುವ ಕೆಲಸದಿಂದ ಒಂದು ಸಂಸ್ಥೆಯ ಹೆಸರು ಗಳಿಸುವುದು ಮಾಡುವ ಕೆಲಸದಲ್ಲಿ ಶ್ರಮ,ಜ್ಞಾನ ಮತ್ತು ಕಲೆಯನ್ನು ಉಪಯೊಗಿಸಿ ಯಶಸ್ವಿಗೊಳಿಸುವದು.

 ನಾವು ಕೆಲಸಮಾಡುವ ಸಂಸ್ಥೆಗೆ ಅತ್ಯುತ್ತಮ ಸೇವೆಗಳನ್ನು ಸಲ್ಲಿಸಿದಾಗ ಆ ಸಂಸ್ಥೆ ಅವರ ಪ್ರತಿಭೆಗೆ ಕಾರ್ಯಕ್ರಮಗಳನ್ನು ಮಾಡಿ ಅವರಿಗೆ ಪ್ರಮಾಣ ಪತ್ರ ಮತ್ತು ಪದಕ ವಿತರಿಸಿದಾಗ ಅವರ ಸೇವೆಗೆ ಬೇಲೆ ಸಿಗುತ್ತದೆ.

ಶ್ರಮ ಪಟ್ಟವರಿಗೆಲ್ಲರಿಗೂ ಯಶಸ್ಸು ಸಿಗುತ್ತದೆ ಮತ್ತು ಕೆಲಸಮಾಡಿದವರೆಲ್ಲರಿಗೂ ಯಶಸ್ಸು ಸಿಗುತ್ತದೆ ಹಾಗಂತ ಅವರು ಪ್ರತಮ ದರ್ಜೆಯಲ್ಲಿಲ್ಲ ಅಂದಾಕ್ಷಣ ಅವರ ಪ್ರತಿಭೆಗೆ ಬೇಲೆ ಇಲ್ಲ ಅಂತಲ್ಲ ಅವರಿಗೂ ಬೇಲೆ ಇದೆ ಅವರು ಸಹ ವಿದ್ಯಾ ಸಂಸ್ಥೆಯಾಗಿರಬಹುದು ವೃತ್ತಿ ಸಂಸ್ಥೆಯಾಗಿರುಬ ಹುದು ಅವರು ಆ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿರುತ್ತಾರೆ.

ಕೆಲವರು ತಮ್ಮ ಅದ್ಭುತ ಪ್ರತಿಭೆ, ಜ್ಞಾನ, ಕಲೆಗಳಿಂದ ಬೆರಗುಮೂಡಿಸುತ್ತಾರೆ.ಯಾಕೆಂದರೆ ಅವರು ಅಷ್ಟು ಜ್ಞಾನ ಶಕ್ತಿಯನ್ನು ಹೊಂದಿರುತ್ತಾರೆ ತಮ್ಮ ಕಾರ್ಯದ ರೂಪದಲ್ಲಿ ವ್ಯಕ್ತಪಡಿಸುತ್ತಾರೆ ಹಾಗೂ ಕೆಲವರು ತಮ್ಮ ಶ್ರಮದಿಂದ ವ್ಯಕ್ತಿ ಪಡಿಸುತ್ತಾರೆ.

ಹಿಂದೆ ತಮ್ಮ ಜ್ಞಾನದಿಂದ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಟ್ಟಿರುವ ಸರ್.ಎಂ.ವಿಶ್ವೇಶ್ವರಯ್ಯನವರು ಹಾಗೂ ಸಂವಿಧಾನ ರಚಿಸಿ ಕಾನೂನನ್ನು ತಂದ ಡಾ.ಬಿ.ಆರ್ ಅಂಬೇಡ್ಕರ್ ರವರು ಇತ್ಯಾದಿ ಕೆಲವರು ತಮ್ಮ ಅದ್ಭುತ ಆಲೋಚನೆಗಳೊಂದಿಗೆ ಜನರು ಹಿತಕ್ಕಾಗಿ ಶ್ರಮಿಸಿ ಸಮಾಜ ಸುಧಾರಣೆಗೆ ಕೊಡುಗೆಗಳನ್ನು ನೀಡಿ ಯಶಸ್ವಿಯಾಗಿದ್ದಾರೆ.

ಅದಲ್ಲದೆ ಭಾರತದ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟುಗಳಾಗಿರ್ತಕ್ಕಂತ ಧ್ಯಾನ್ ಚಂದ್ ರವರಿಗೂ ಪದ್ಮ ವಿಭೂಷಣ ಎಂಬ ಪ್ರಶಸ್ತಿ ಪಡೆದಿರುವ ಇವರು ತಮ್ಮ ಅದ್ಭುತ ಕಲೆಯಿಂದ ಪ್ರಸಿದ್ಧಿ ಪಡೆದರು. 

ಹಾಗೂ ಅಮೆರಿಕದ ಈಜುಗಾರ 23 ಭಾರಿ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಮೋದಲು ಬಂದು ಪ್ರಸಿದ್ಧಿಯಾದ ಮೈಕೆಲ್ ಫ್ರೇಡ್ ಫೆಲ್ಪ್ಸ್ ಬಂಗಾರದ ಪದವಿಯನ್ನು ಪಡೆದರು.

ಇತ್ತಿಚಿಗಿನ ಭಾರದದ ಟೆನಿಸ್ ಆಟಗಾರ್ತಿ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಚೇತನ ಚೇತನ್ ಆನಂದ್ ರವರು ಕ್ರೀಡೆಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಹೀಗೆ ಹಲವಾರು ಜನ ತಮ್ಮ ಪ್ರತಿಭೆ,ಕಲೆಯಿಂದ ಬೆರಗುಮೂಡಿಸಿ ಯಶಸ್ವಿಗೊಂಡಿದ್ದಾರೆ.ಕೆಲವರು ವಿದ್ಯಾಭ್ಯಾಸಗಳಲ್ಲಿ ಮುಂದೆ ಬಂದು ರಾಷ್ಟ್ರ ಮಟ್ಟದ ಪ್ರಶಸ್ತಿ ಹೊಂದಿದ್ದಾರೆ ಇನ್ನು ಕೆಲವರು ತಮ್ಮ ವೃತ್ತಿಯಲ್ಲಿ ಹಾಗೂ ಕೆಲವರು ದೇಶಕ್ಕಾಗಿ ಆಡಿ ಯಶಸ್ವಿಗೊಂಡಿದ್ದಾರೆ.

ಯಶಸ್ವಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಗಿರುತ್ತಾರೆ ಅವರವರ ಕಲೆಗಳ ಹಾಗೂ ಸ್ಪರ್ಧೆಗಳ ಮಟ್ಟದ ಮೇಲೆ ಹೋಗಿರುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಬರುವ ವಿಜೇತರು ನಿರಂತರ ಶ್ರಮ ಮತ್ತು ಜ್ಞಾನದಿಂದ ಆ ಕೆಲಸದಲ್ಲಿ ಒಳಗೊಂಡಿರುತ್ತಾರೆ ದೇಶಕ್ಕೆ ಮತ್ತು ತಮ್ಮ ಸಂಸ್ಥೆಗೆ ಹೆಸರು ತರುತ್ತಾರೆ.

ಸಾಧಿಸಲು ಹಲವು ಕ್ಷೇತ್ರಗಳಿವೆ ಚಿತ್ರಕಲೆ, ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನಿ, ನೃತ್ಯ, ಕ್ರೀಡೆಗಳು ಇನ್ನಿತರ ಭಾಗಿಯಾದವರೆಲ್ಲರೂ ಪ್ರಯತ್ನ ಪಟ್ಟಿರುತ್ತಾರೆ ಆದರೆ ಎಲ್ಲರ ಬುದ್ಧಿ ಶಕ್ತಿ ಒಂದೆ ಇರುವುದಿಲ್ಲ ಒಂದು ವೇಳೆ ಇದ್ದಲ್ಲಿ ಕುಂದುಕೊರತೆಗಳಿರುತ್ತವೆ.ಹಾಗಾಗಿ ಎಲ್ಲರೂ ಮೊದಲು ಬರಲಾಗುವದಿಲ್ಲ.

ಯಶಸ್ವಿ ಅನ್ನೊದು ಶ್ರಮದ ಗುಟ್ಟು ಆದರೆ ಇತ್ತೀಚೆಗೆ ಮೊಸದಾಟಗಳೆ ಪದಕ ಗಳಿಸಿ ನಾಂದಿ ಹಾಡುತ್ತಿದ್ದಾವೆ.


 


 

 


Rate this content
Log in

Similar kannada story from Classics