shristi Jat

Romance Classics Inspirational

4.4  

shristi Jat

Romance Classics Inspirational

ಮದುವೆ

ಮದುವೆ

2 mins
223


ಮದುವೆ ಒಂಟಿ ಜೀವನದಿಂದ ಜಂಟಿಯಾಗುವ ನಂಟು. ನಮ್ಮ ಬಾಳಿನ ಅರ್ಧಭಾಗದ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಅರ್ಧಾಂಗಿ.

ಮದುವೆ ಒಂದು ಬಂಧನ ವಧು ವರರ ಸಮ್ಮಿಲನ ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿರುವ ಸಂವಹನ.

ಮದುವೆ ಹೆಣ್ಣು ಗಂಡುವಿನ ನಡುವೆ ಬಾಂಧವ್ಯ ಬೆಸೆಯುವ ಸಂಬಂಧ ಇಬ್ಬರು ಸೇರಿ ಜವಾಬ್ದಾರಿಗಳ ಕರ್ತವ್ಯ ಪಾಲಿಸುವ ಉಸ್ತುವಾರಿಗಳು.

ಮದುವೆ ಆಗುವ ಎಷ್ಟೊ ಗಂಡು ಹೆಣ್ಣಿಗೆ ಅವರ ಬಗ್ಗೆ ಪರಿಚಯವಿರುವುದಿಲ್ಲ ಮದುವೆ ಆಗುವ ಮೂಲಕ ಅವರ ಮತ್ತು ಅವರ ಕುಟುಂಬದವರೊಂದಿಗಿನ ಪರಿಚಯವಾಗಿರುತ್ತದೆ.

ಹೀಗೆ ಗೋತ್ತು ಪರಿಚಯವಿಲ್ಲದ ವ್ಯಕ್ತಿಗಳು ಮದುವೆ ಅನ್ನೊ ಹೊಸ ಬಂಧನದಕ್ಕೆ ಕಾಲಿಡುತ್ತಾರೆ.ಅಲ್ಲದೆ ಅವರಿಬ್ಬರ ಕುಟುಂಬಗಳ ನಡುವೆ ಒಡನಾಟ ಬೆಳೆಯುತ್ತದೆ.ಹಾಗೂ ಇಬ್ಬರ ಸಂಬಂಧಿಕರ ಮಧ್ಯೆ ಹೊಸ ಭಾಂದವ್ಯಗಳಾಗುತ್ತವೆ.

ಇಬ್ಬರ ಅಪರಿಚಿತರು ಮದುವೆಯಾದ ಮೇಲೆ ಅವರ ಕುಟುಂಬಗಳ ಮಧ್ಯೆ ನಂಟು ಬೆಳೆಯುವದಲ್ಲದೆ ಅವರಿಬ್ಬರ ಸಂಭಂದಿಕರ ನಡುವೆ ಹೊಸ ನಂಟು ಬೆಳೆಯುತ್ತವೆ.ಒಂದು ವೇಳೆ ಮೊದಲಿನಿಂದಲೆ ಪರಿಚಯವಿದ್ದಲ್ಲಿ ಹಾಗೂ ಯಾವುದೆ ನಂಟಿದ್ದಲ್ಲಿ ಮದುವೆ ಆದಮೇಲೆ ಇವರ ಕುಟುಂಬ ಹಾಗೂ ಸಂಬಂಧಿಕರ ನಡುವೆ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತವೆ.

ನಮ್ಮ ಭಾರತೀಯ ಪರಂಪರೆಯ ಪ್ರಕಾರ ಹೆಣ್ಣು ಮದುವೆ ಆದ ಮೇಲೆ ತನ್ನ ಮನೆ ಬಿಟ್ಟು ಗಂಡನ ಮನೆಯಲ್ಲಿ ವಾಸಿಸುವದಾಗಿದ್ದು ಸುಲಭವಲ್ಲದ ಮಾತು ಆದರೆ ಅವಳು ಆ ಮನೆ ಸೇರಿ ಅವರ ಕುಟುಂಬವನ್ನು ಹೊಂದಿಕೊಂಡು ಅವರೊಂದಿಗೆ ಇರುತ್ತಾಳೆ.ತಾನು ಹುಟ್ಟಿ ಬೆಳೆದ ಮನೆ ಪ್ರೀತಿಯಿಂದ ಬೆಳೆಸಿದ ತಂದೆ ತಾಯಿಯನ್ನು ಹಾಗೂ ಒಡಹುಟ್ಟಿದವರನ್ನು ತೊರೆದು ಗಂಡನ ಮನೆ ಸೆರುತ್ತಾಳೆ.

ಬೇರೆ ಮನೆ ಬೇರೆ ಜನರು ಬೇರೆ ವಾತಾವರಣಕ್ಕೆ ಹೊಂದಿಕೊಂಡು ಅವರಿಗಾಗಿ ತಾನಿರುವ ಶೈಲಿಯನ್ನು ಬದಲಾಯಿಸಿಕೊಂಡಿರುತ್ತಾಳೆ.

ಅತ್ತೆ ಮಾವನ ಸೇವೆಗೆ ಮಗಳಾಗಿರುತ್ತಾಳೆ,

ಗಂಡನ ಸುಖದುಃಖಗಳನ್ನು ಹಂಚಿಕೊಳ್ಳವ ಸ್ನೇಹಿತೆಯಾಗಿರುತ್ತಾಳೆ,

ಗಂಡನ ಒಡಹುಟ್ಟಿದವರ ಪೂರೈಕೆಗಳಿಗೆ ಅಮ್ಮನ ಹಾಗೆ ಬೆಂಬಲಿಸುತ್ತಾಳೆ,

ಹೀಗೆ ಎಲ್ಲರೊಡನೆ ತಾನು ಒಬ್ಬಳಾಗಿ ಬೆರೆಯುತ್ತಾಳೆ.

ಅಲ್ಲದೆ ಗಂಡನು ಸಹ ಎಲ್ಲರನ್ನೂ ತೊರೆದು ಬಂದ ಅವಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಮತ್ತು ಅವರ ಮನೆಯವರು ಸಹ ಅತ್ತೆ ಮಾವ ಅವಳಿಗೆ ತಾಯಿ ಪ್ರೀತಿ ನೀಡುತ್ತಾರೆ ಹಾಗೂ ಗಂಡನ ಕುಟುಂಬದವರು ಅವಳ ಬೇಡಿಕೆಗಳಿಗೆ ಬೆಂಬಲ ನೀಡುತ್ತಾರೆ.

ಹಾಗೂ ಗಂಡನು ತನ್ನ ಅತ್ತೆ ಮಾವನನ್ನು ತಂದೆ ತಾಯಿಯಂತೆ ನೋಡಿಕೊಳ್ಳುತ್ತಾನೆ,

ಅವಳ ಒಡಹುಟ್ಟಿದವರಿಗೆ ಅಣ್ಣನಾಗಿ ಸಹಾಯಮಾಡುತ್ತಾನೆ,

ತನ್ನ ಕುಟುಂಬದಂತೆ ಅವರನ್ನು ಕಾಣುತ್ತಾನೆ.

ಗಂಡ ಹೆಂಡತಿ ಇಬ್ಬರಲ್ಲಿ ಯಾರಿಗೂ ಕಷ್ಟ ಬಂದರೂ ನೋವು ಇಬ್ಬರಿಗೂ ಆಗುತ್ತೆ ಅಂದು ಕುಟುಂಬದ ಕುರಿತಾಗಲಿ ಅಥವಾ ವೃತ್ತಿಯ ಕುರಿತಾಗಿರಲಿ ಹಾಗೂ ಇನ್ನೊಂದಿರಲಿ ಅವರು ನಮ್ಮ ಅರ್ಧ ಭಾಗವಾಗಿರುತ್ತಾರೆ.

ಮದುವೆ ಪೋಷಕರಿರಲಿ ಇಲ್ಲದಿರಲಿ ಅದೊಂದು ಕುಟುಂಬ ಎಂದು ಪರಿಗಣಿಸುತ್ತದೆ ಯಾಕೆಂದರೆ ಇಬ್ಬರು ಒಬ್ಬರಿಗೊಬ್ಬರು ಜೀವನ ಹಂಚಿಕೊಂಡಿರುತ್ತಾರೆ.ತಮ್ಮ ವಂಶ ಬೆಳೆಯಲು ಪೋಷಕರಾಗುತ್ತಾರೆ ಹುಟ್ಟುವ ಮಕ್ಕಳನ್ನು ಸಲಹುವ ಜವಬ್ದಾರಿಗಳಾಗುತ್ತಾರೆ.

ಮಕ್ಕಳ ಇಷ್ಟ ಕಷ್ಟಗಳನ್ನು ಈಡೆರಿಸಲು ತ್ಯಾಗಿಗಳಾದರು,

ಮಕ್ಕಳ ಭವಿಷ್ಯಕ್ಕಾಗಿ ಚಿಂತಾಮಣಿಗಳಾದರು,

ಮಕ್ಕಳ ರಕ್ಷಣೆಗಾಗಿ ಸೌಲಭ್ಯಗಳ ಮೂಟೆ ಕಟ್ಟಿದರು,

"ಕುಟುಂಬದಿಂದ ಸಮೃದ್ಧ ಕುಟುಂಬವಾಗಿಮಾಡಿತು ಮದುವೆ ವಂಶೊದ್ದಾರಕರಿಂದ ಬಂತು ಸಂಸಾರದ ಕಳೆ"

ಮೂರು ಗಂಟಿನಿಂದ ಒಂದಾದರು ಮಂಗಳಸೂತ್ರ ಇದಕೆ ಪುರಾವೆ.

ಜನುಮಜನುಮಕು ಜೊತೆಯಾದರು ಸಂಸಾರ ಇದಕೆ ಆಧಾರವೆ.

ಎರಡು ಮನಸ್ಸು ಮತ್ತು ಆತ್ಮಗಳು ಒಂದಾಗುವ ಮಿಲನವನ್ನು ಮದುವೆ ಎಂದು ಕರೆಯುತ್ತಾರೆ.

ಅವರವರ ಜಾತಿ ಮತ್ತು ಪರಂಪರೆಯ ಅನುಗುಣವಾಗಿ ಮದುವೆ ಆಗುತ್ತಾರೆ ಯಾಕೆಂದರೆ ಕ್ರಿಶ್ಚಿಯನ್ ಮದುವೆಯಲ್ಲಿ ಮಂಗಳಸೂತ್ರ ಕಟ್ಟುವುದಿಲ್ಲ.

ಪರಂಪರೆ ಬೇರೆಯಾದರೂ ಮದುವೆಯ ಕಾರಣ ಒಂದೆ ಕೂಡಿ ಬಾಳುವುದು.


 

 


Rate this content
Log in

Similar kannada story from Romance