ಪುಟ್ಟನ ಹೋಟೆಲ್
ಪುಟ್ಟನ ಹೋಟೆಲ್


ಆಗ ಕೋಲಾರ ಜಿಲ್ಲೆಗೆ ಸೇರಿದ್ದ ಚಿಕ್ಕಬಳ್ಳಾಪುರ ದಲ್ಲಿ ಒಂದು ಹೋಟೆಲ್. ಇದನ್ನ ಬರೀ ಹೋಟೆಲ್ ಅಂದರೆ ತಪ್ಪಾಗುತ್ತೆ. ಅಷ್ಟು ದೊಡ್ಡ ಊರಿನ ಯಾವುದೋ ಮೂಲೆಯಲ್ಲಿ ಇರುವ ಜನರನ್ನೂ ತನ್ನತ್ತ ಸೆಳೆಯುವ ಐಸ್ಕಾಂತ ಅಂತ ಹೇಳ ಬಹುದು . ಕಾರಣ ಒಮ್ಮೆ ಇಲ್ಲಿನ ರುಚಿ ಅನುಭವಿಸಿದವರು ಮತ್ತೆ ತಪ್ಪದೆ ಬಂದೇ ಬರುತ್ತಾರೆ. ನೀವು ನಂಬುತ್ತೀರೋ ಇಲ್ಲವೋ ಈ ಹೋಟೆಲ್ ಗೆ ಬೋರ್ಡ್ ಸಹಾ ಇಲ್ಲ ಎಲ್ಲರ ಬಾಯಲ್ಲೂ "ಪುಟ್ಟು ಹೋಟೆಲ್" ಅಂತಾನೇ ಚಿರ ಪರಿಚಯ. ಬೆಳಗ್ಗೆ ಆರೂವರೆ ಗಂಟೆಗೆ ಓಪನ್ ಮಾಡಿದರೆ ಹನ್ನೊಂದು ಗಂಟೆಗೆ ಕ್ಲೋಸ್. ಮತ್ತೆ ಸಂಜೆ ನಾಲ್ಕಕ್ಕೆ ಓಪನ್ ಆದ್ರೆ ರಾತ್ರಿ ಎಂಟಕ್ಕೆ ಕ್ಲೋಸ್.
ಬಾಗಿಲು ಮುಚ್ಚಿ ಸುಮಾರು ಒಂದು ಗಂಟೆ ಹೊತ್ತು ಕುರ್ಚಿ ಟೇಬಲ್ ಸೇರಿ ಇಡೀ ಹೋಟೆಲ್ ತೊಳೆದು ಬಿಡ್ತಿದ್ರು. ಹೋಟೆಲ್ ಹಿಂದೇನೆ ಹಳೇ ಸಿಹಿ ನೀರಿನ ಭಾವಿ . ಅದಕ್ಕೊಂದು ಪಂಪ್ ಆಗೆಲ್ಲ ಡೈರೆಕ್ಟ್ ಆಗಿ ಅದೇ ನೀರು ಕುಡಿಯಕ್ಕೆ ಅಡುಗೆಗೆ ಮತ್ತೆ ತೊಳೆಯಕ್ಕೆ. ಇಡೀ ಹೋಟೆಲ್ ಗೆ ಮೂರೇ ಜನ. ಯಜಮಾನ ಪುಟ್ಟಣ್ಣ ಅವನ ಹೆಂಡತಿ ಪಾರ್ವತಿ ಮತ್ತು ಅವರ ಊರಿನಿಂದ ಬಂದಿದ್ದ ಒಬ್ಬ ಹುಡುಗ ಭಾಸ್ಕರ್ ಯಾರಾದರೂ ರುಚಿಯ secret ಏನು ಅಂತ ಕೇಳಿದ್ರೆ ಹೇಳ್ತಿದ್ರು ತರಕಾರಿ , ದಿನಸಿ ತುಪ್ಪ ಎಣ್ಣೆ ಎಲ್ಲ ನಾನೇ ಹೋಗಿ ಆರಿಸಿ ತನಗೆ ಬೇಕಾದ್ದನ್ನು ಮಾತ್ರ ತರೋದು , ಮತ್ತು ನಮಗೆ ಕೆಲವರು regular ಆಗಿ item supply ಮಾಡ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಇದರಿಂದ ದೊಡ್ಡ ಮನುಷ್ಯ ಆಗ್ಬೇಕು ಇನ್ನೂ ಹೋಟೆಲ್ ದೊಡ್ಡದಾಗಿ ಮಾಡ್ಬೇಕು ಅನ್ನೋ ಮನಸ್ಸಿಲ್ಲ. ಜೀವನಕ್ಕೆ ಎಷ್ಟು ಬೇಕೋ ಅಷ್ಟು ದೇವರು ಕೊಟ್ಟಿದ್ದಾನೆ. ಆತ್ಮ ತೃಪ್ತಿ ಇಂದ ನಾನು ನನ್ನ ಹೆಂಡತಿ ದುಡಿಯುತ್ತ ದಿನ ಕಳೆಯುತ್ತೇವೆ.
ಅಷ್ಟೇ ಅಲ್ಲದೆ ನಿಮಗೇ ಗೊತ್ತು ನಮ್ಮಲ್ಲಿ ಇದುವರೆಗೂ ತಿಂದ ಆಹಾರಕ್ಕೆ ಎಂದೂ ಬಿಲ್ಹಾಕಿ ಹಣ ಪಡೆದಿಲ್ಲ. ಅಲ್ಲಿರುವ ಡಬ್ಬಕ್ಕೆ ಅವರೇ ಬೋರ್ಡ್ ನೋಡಿ ಹಣ ಹಾಕ್ತಾರೆ. ಎಷ್ಟೋ ಜನ ಹಾಕಲ್ಲ. ಆದರೆ ಹಣವಂತರು ಸ್ವಲ್ಪ ಹೆಚ್ಚಾಗಿ ಹಾಕುವುದರಿಂದ ನಮಗೆ ನಷ್ಟವಿಲ್ಲ. ಹೀಗೆ ಓಡಾಡ್ತಾ ಕೆಲಸ ಮಾಡ್ತಾನೇ ಹೇಳ್ತಾರೆ ಹೋಟೆಲ್ ಮಾಲೀಕ ಪುಟ್ಟಣ್ಣ.,ಒಂದು ದಿನ ಈ ಹೋಟೆಲ್ ಎದುರಿಗೆ ಒಬ್ಬ , ಒಂದು ಹೆಂಗಸಿನ ಕೂದಲು ಹಿಡಿದು ಜೋರು ಜೋರಾಗಿ ಒದ್ದು ಹೊಡೆಯುತ್ತಾ ಇದ್ದಾಗ ಯಾರೂ ಜಗಳ ಬಿಡಿಸಲು ಹೋಗಲಿಲ್ಲ . ಇವನ ಹೆಂಡತಿ ಪಾರ್ವತಿ ಒಳಗಿಂದ ಬಂದವಳೇ ಏನ್ರೀ ಇಷ್ಟು ಜನ ಗಂಡಸರು ನಿಂತು ನೋಡ್ತಾ ಇದೀರಿ ಪಾಪ ಹೆಂಗಸು ಅವನಿಂದ ಅಷ್ಟು ಹೊಡೆತ ತಿಂತಾ ಇದ್ರೂ ನೋಡ್ತಾ ಇದೀರಾ ಅಂದಾಗ ಎಲ್ಲರನ್ನೂ ಪಕ್ಕಕ್ಕೆ ತಳ್ಳಿ ಹೋಟೆಲ್ ನಿಂದ ಹೊರ ಬಂದ ಯಜಮಾನ ಪುಟ್ಟಣ್ಣ ಹೊಡೀತಾ ಇದ್ದವನನ್ನ ಪಕ್ಕಕ್ಕೆ ತಳ್ಳಿದ. ಅವನು ಪಕ್ಕದಲ್ಲಿದ್ದ ಮೋರಿಯಲ್ಲಿ ಬಿದ್ದ.
ಮೋರಿಯಲ್ಲಿ ಕೊಳಕು ನೀರು ತುಂಬಿತ್ತು . ತಲೆ ಮೋರಿ ಒಳಗೆ ಹೋಗಿದ್ರಿಂದ ಉಸಿರು ಕಟ್ಟಿ ಸತ್ತಾನು ಅಂತ ಇನ್ನೊಬ್ಬರು ಬಂದು ಮೇಲೆ ಎತ್ತಿದಾಗ ಅವನಿಗೆ ಮೂರ್ಛೆ ಬಂದು ಇಡೀ ಶರೀರ ಅದುರಕ್ಕೆ ಶುರುವಾಯಿತು. ಅದುವರೆಗೂ ಹೊಡೆತ ತಿಂದ ಹೆಂಗಸು ಅಯ್ಯೋ ನನ್ನ ಗಂಡನ್ನ ಸಾಯಿಸಿ ಬಿಟ್ರಲ್ಲ ಅಂತ ಅವನ ಮೇಲೆ ಬಿದ್ದು ಅರಚಾಡಿದಳು.ಯಾರೋ ಕೈಗೆ ಕಬ್ಬಿಣದ ಕಂಬಿ ಕೊಡ್ತಿದ್ದಾರೆ ಮತ್ತೊಬ್ಬರು ಅವರ ಹತ್ತಿರ ಇದ್ದ ಬೀಗದ ಕೈ ಮತ್ತೊಂದು ಕೈಗೆ ಕೊಡ್ತಾ ಇದಾರೆ. ಬಾಯಲ್ಲಿ ನೊರೆ.ಹೋಟೆಲ್ ಯಜಮಾನ್ರು ಹೆದರಿ ಬೆವೆತು ತಲೆ ಮೇಲೆ ಕೈ ಇಟ್ಟುಕೊಂಡು , ಸತ್ತೇ ಹೋದ್ರೆ ಎನುಗತಿ ಜೈಲಾದರೆ ಏನು ಮಾಡೋದು ಅಂತ ಚಿಂತೆ ಮಾಡ್ತಾ ನಿಂತಿದ್ದಾರೆ. ಅಷ್ಟರಲ್ಲಿ ಜಟಕಾ ಗಾಡಿಯೊಂದರಲ್ಲಿ ಅವನನ್ನ ಹಾಕಿಕೊಂಡು ಮಿಷನ್ ಆಸ್ಪತ್ರೆ ಗೆ ಕರ್ಕೊಂಡು ಹೋದ್ರು. ಕೆಲವರು ಏನಾಗಲ್ಲ ಹೆದರಬೇಡಿ ಅವನು ಕುಡುಕ ಅಂತ, ಮತ್ತೆ ಕೆಲವರು ಅವನಿಗೆ ಫಿಟ್ಸ್ ಬಂದಿರೋದು ಅಷ್ಟೇ ಏನಾಗಲ್ಲ. ದೇವರೇ ಕಾಪಾಡತಾನೇ. ನಿಮ್ಮದು ಏನು ತಪ್ಪಿಲ್ಲ ನಾವು
ನಿಮ್ಮ ಕಡೆ ಸಾಕ್ಷಿ ಹೇಳ್ತೀವಿ ಹೆದರೋದ್ಯಾಕೆ. ಅಂತ ಕೆಲವರು.ಪಾಪ ಹೇಗೋ ಅವರ ಪಾಡಿಗೆ ಅವರು ಇದ್ದರೂ ನೋಡಿ ವಿಧಿ ಅಂತ ಮತ್ತೊಬ್ಬರು.ಎಲ್ಲ ಕೇಳಿಸಿಕೊಂಡು ಗಂಡ ಹೆಂಡತಿ ಹೆದರಿದ ಬೆಕ್ಕಿನ ಹಾಗೆ ಮೂಲೆಯಲ್ಲಿ ನಿಂತಿದ್ದಾಗ ಯಾರೋ ಬಂದು ಹೇಳಿದ್ರು ಅವನು ಆಸ್ಪತ್ರೆಗೆ ಹೋಗೋಕ್ಕೆ ಮೊದಲೇ ಸತ್ತು ಹೋದನಂತೆ ಅಂತ. ಅದನ್ನ . ಕೇಳಿ ಇವರು ಅಲ್ಲೇ ಕುಸಿದು ಬಿಟ್ರು.ಹೆಂಡತಿ ಅಳೊದಕ್ಕೆ ಶುರು ಮಾಡಿದಳು. ಅಲ್ಲಿದ್ದವರು ಈಗ ಯಾರೂ ಸಮಾಧಾನ ಮಾಡ್ತಿಲ್ಲ . ಎಲ್ಲರೂ ಇನ್ನೆಲ್ಲಿ ಕೋರ್ಟು ಕಚೇರಿ ಅಂತ ಎಳೆದಾಡ್ತಾರೋ ನಮಗ್ಯಾಕೆ ಅಂತ ಎಲ್ಲಾ ಹೊರಟು ಬಿಟ್ರು .
ಅಲ್ಲೇ ಇದ್ದ ರಾಘವೇಂದ್ರ ಸ್ವಾಮಿ ಫೋಟೋ ಮುಂದೆ ಕಣ್ಣೀರನ್ನು ಒರೆಸಿ ಕೊಂಡು ಏನಾದ್ರೂ ಆಗಲಿ ಇಬ್ಬರೂ ಅನುಭವಿಸೋಣ ಅಂತ ಒಬ್ಬರು ಇನ್ನೊಬ್ಬರಿಗೆ ಸಮಾಧಾನ ಮಾಡ್ಕೊಂಡು ನಮಸ್ಕಾರ ಮಾಡುವಾಗ ಜಟಕಾ ದಲ್ಲಿ ಅವರೊಂದಿಗೆ ಹೋಗಿದ್ದ ಒಬ್ಬರು ಬಂದು ಹೇಳಿದ್ರು ಪುಟ್ಟಣ್ಣ ಹೆದರ ಬೇಡಿ ಅವನು ಕುಡಿದಿದ್ದ ಹಾಗೆ ಅವನಿಗೆ ಫಿಟ್ಸ್ ಮೊದಲಿಂದ ಇತ್ತಂತೆ ಇನ್ನೇನೂ ಆಗಿಲ್ಲ ನೋಡಿ ಅವನೇ ನಡ್ಕೊಂಡು ಬರ್ತಾ ಇದಾನೆ ಅಂದ್ರು. ಅಷ್ಟರಲ್ಲಿ ಅವನೂ ಅವನ ಹೆಂಡತಿ ಇಬ್ಬರೂ ಬಂದಾಗ. ಅಲ್ಲೇ ಕೂಡಿಸಿ ಬಿಸಿಬಿಸಿ ಕಾಫಿ ಕೊಟ್ಟು ಏನಪ್ಪ ಹಾಗೆ ಹೆಂಗಸಿಗೆ ಹೊಡಿಯೋದ ಅಂದರೆ ಏನೋ ಆಗ ನಂಗೆ ಏನಾಗಿತ್ತೋ ಗೊತ್ತಿಲ್ಲ ಬಿಡಿ ಅಂದ. ಕಾಫಿಗೆ ಕಾಯದೆ ಹೆಂಡತಿ ಹೊರಟು ಹೋಗಿದ್ದಳ ಇವನು ಕಾಫಿ ಹೀರ್ತಾ ಇದ್ದರೆ ಅವನನ್ನೇ ಇಬ್ಬರೂ ನೋಡ್ತಾ ನಿಂತಿದ್ರು. ಡಬ್ಬದ ಹತ್ತಿರ ಹೋಗಿ ದುಡ್ಡು ಹಾಕೋಕ್ಕೆ ಹೋದ . ಬೇಡ ಅಂತ ಅವನ ಕೈ ಹಿಡ್ಕೊಂಡು. ನಗುತ್ತಾ ಹೊರಗೆ ಹೋದ. ಊರ ಮಾರೀ ನ ಮನೆಗೆ ಕರೆದ ಹಾಗಿತ್ತು ಅವರ ಪರಿಸ್ಥಿತಿ ಅಂದು.