Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

Kalpana Nath

Drama Tragedy Others

4  

Kalpana Nath

Drama Tragedy Others

ಪಾಪಿ ಯಾರು

ಪಾಪಿ ಯಾರು

1 min
42ಒಂದು ದಿನ ಭಾರಿ ಮಳೆಯೊಂದಿಗೆ ಗುಡುಗು ಸಿಡಿಲು ಹೆಚ್ಚಾಗಿದೆ. ಹಳ್ಳಿಯಲ್ಲಿ ಕೆಲವು ಹಳೇ ಮನೆಗಳು ಬಿದ್ದುಹೋಗುವ ಭಯ. ಎಲ್ಲರೂ ಊರ ಹೊರಗಿನ ಮಂಟಪ ಒಂದರಲ್ಲಿ ಬಂದು ನಿಂತಿದ್ದಾರೆ. ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಯಾವ ಸಮಯದಲ್ಲಾದರೂ ಸಿಡಿಲು ಹೊಡೆಯಬಹುದೆಂಬ ಭೀತಿ. ಅವರಲ್ಲಿ ಒಬ್ಬ ವಯಸ್ಸಾದವರು ಹೇಳಿದರು. ನಮ್ಮಲ್ಲಿ ಯಾರಾದರೂ ಒಬ್ಬರು ಪಾಪ ಮಾಡಿದವರಿದ್ದರೂ ಎಲ್ಲರಿಗೂ ಆಪತ್ತು. ಹೌದೆಂದು ಪಕ್ಕದಲ್ಲಿದ್ದವನೂ ಅದಕ್ಕೆ ತಲೆಯಾಡಿಸಿದ. ಮತ್ತೊಬ್ಬರಿಂದ ಇದರ ಪರಿಹಾರಕ್ಕೆ ಒಂದು ಉಪಾಯಕ್ಕೇಳಿ ಬಂತು. ಹೆಚ್ಚು ಜನ ಇದಕ್ಕೆ ಒಪ್ಪಿದರು. ಅದು ಏನಪ್ಪಾ ಅಂದರೆ ಮುಂದೆ ಕಾಣುತ್ತಿರುವ ಆ ಮರವನ್ನ ಒಬ್ಬರ ನಂತರ ಒಬ್ಬರು ಹೋಗಿ ಮುಟ್ಟಿ ಬರೋದು. ಅವರು ಪಾಪ ಮಾಡಿದ್ದರೆ ಸಿಡಿಲು ಅವರಿಗೆ ಮಾತ್ರ ಹೊಡೆಯುತ್ತೆ. ಉಳಿದವರು ಪಾರಾಗಬಹುದು. ಎಲ್ಲರೂ ಇದಕ್ಕೆ ಒಪ್ಪಿದರೂ ಸಹ ತಾವು ಏನು ತಪ್ಪು ಮಾಡಿದ್ದೇವೆಂದು ಯಾರಿಗೂ ಅರಿವು ಇರದು. ಹಾಗಾಗಿ ಎಲ್ಲರಿಗೂ ಒಳಗೊಳಗೇ ಭಯ ಇದ್ದೇ ಇತ್ತು. ಎಲ್ಲರಿಗೂ ಧೈರ್ಯ ಹೇಳಿ ಆ ವಯಸ್ಸಾದ ಅಜ್ಜಿಯೇ ಮೊದಲು ಹೋಗಿ ಮುಟ್ಟಿಬಂದರು. ಅವರನ್ನ ನೋಡಿ ಮತ್ತೊಬ್ಬ ನಂತರ ಇನೊಬ್ಬ ಹೀಗೆ ಎಲ್ಲರೂ ಆ ಮರವನ್ನ ಮುಟ್ಟಿಬಂದು ನಿಂತರು. ಇವರಲ್ಲಿ ಹೇಗೋ ಈ ಮೂರ್ಖರಿಂದ ತಪ್ಪಿಸಿಕೊಂಡರೆ ಸಾಕೆಂದು ಮೂಲೆಯಲ್ಲಿ ಒಬ್ಬ ಯುವಕ ನಿಂತಿದ್ದ. ಎಲ್ಲರೂ ಅವನನ್ನ ಹಿಡಿದು ಹೊರಗೆ ತಳ್ಳಿದರು. ಹೆದರಿ ಮರದ ಬಳಿ ಹೋದ. ಆ ಸಮಯಕ್ಕೆ ಭಾರಿಸಿಡಿಲು ಬಡಿಯಿತು. ಪಾಪ ಮಂಟಪ ಬಿದ್ದು ಅದರಲ್ಲಿದ್ದವೆರೆಲ್ಲಾ ಸತ್ತರು. ಮರದ ಬಳಿ ಹೆದರಿ ಬಂದವನು ಉಳಿದ. !


Rate this content
Log in

More kannada story from Kalpana Nath

Similar kannada story from Drama