Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Kalpana Nath

Comedy Others


3  

Kalpana Nath

Comedy Others


ಓನರ್ ಕಿರಿ ಕಿರಿ

ಓನರ್ ಕಿರಿ ಕಿರಿ

1 min 8 1 min 8

 


ಒಬ್ಬ ಮಹಾ ಕಿರಿ ಕಿರಿ ಮಾಡೋ ಮನೆಯ ಓನರ್ ತಾನು ಕೆಳಗೆ ಇದ್ದು ಮೇಲಿನ ಮನೆ ಬಾಡಿಗೆಗೆ ಬಿಟ್ಟಿದ್ದ.ಯಾರೂ ಇವನ ಮನೆಗೆ ಬಾಡಿಗೆಗೆ ಬರಲು ಹೆದರುತ್ತಿದ್ದರು. ಅವನು ಹೇಳೋ ಕಂಡೀಷನ್ ಗಳೇ 

ಯಾರೂ ಒಪ್ಪುತ್ತಿರಲಿಲ್ಲ. ಮೇಲಿನ ಮನೆಗೆ ಹೆಲಗೆಯ ನೆಲವಾದ್ದರಿಂದ ಜೋರಾಗಿ ನಡೆದರೆ., ಅಥವ ಸ್ವಲ್ಪ ಶಬ್ದ ವಾದರೂ ಕೆಳಗಿನ ಮನೆಯ ಓನರ್ ಗೆ ಕಿರಿಕಿರಿ. ಆದ್ದರಿಂದ ಯಾರು ಬಂದರೂ ಕೆಲವೇ ದಿನ ಇದ್ದು ಮನೆ ಖಾಲಿ ಮಾಡಿಸುತ್ತಿದ್ದ. ಒಬ್ಬ ಬ್ರಹ್ಮಚಾರಿ ಬಂದು ಮನೆ ಕೇಳಿದಾಗ ವಿಷಯ ತಿಳಿಸಿ ಬಾಡಿಗೆಗೆ ಕೊಟ್ಟ . ಇಬ್ಬರೂ ಕೆಲವು ದಿನ ನೆಮ್ಮದಿಯಿಂದ ಇದ್ದರು. ಆದರೆ ಒಂದು ದಿನ ಬಾಡಿಗೆಯವನು ಬಂದವನೇ ತನ್ನ ಶೂ ಬಿಚ್ಚಿಡು ಅಂತ ಒಂದನ್ನ ನಂತರ ಮತ್ತೊಂದನ್ನ ಬಿಸಾಡಿದ. ಕೆಳಗಿನ ಓನರ್ ಗೆ ಶೂ ಬಿಚ್ಚಿ ಬಿಸಾಡಿದ್ದು ಗೊತ್ತಾಯ್ತು. ಮಾರನೇದಿನ ಅದೇ ರೀತಿ ಬಂದವನೇ ಒಂದು ಶೂ ಬಿಚ್ಚಿ ಬಿಸಾಡಿದ ಶಬ್ದ ಕೇಳಿಸಿತು. ಎಷ್ಟೊತ್ತಾದರೂ ಮತ್ತೊಂದು ಶೂ ಶಬ್ದ ಕೇಳಿಸದೇ ಓನರ್ ಗೆ ನಿದ್ದೆ ಬರಲಿಲ್ಲ. ಎದ್ದು ಬಂದು ಮೇಲೆ ಹೋಗಿ ಬಾಗಿಲುತಟ್ಟಿ ಕೇಳಿದ ಒಂದು ಶೂ ಶಬ್ದ ಬಂತು ಮತ್ತೊಂದು ಯಾಕೆಬರಲಿಲ್ಲ. ಅದಕ್ಕೆಬಾಡಿಗೆಯವ ಹೇಳಿದ ಇವತ್ತು ಎರಡು ಶೂ ಗಳನ್ನೂ ಒಟ್ಟೆಗೆ ಎಸೆದೆ.ಮಾರನೇ ದಿನ ಅವನು ಮನೆಗೆ ಬಂದಾಗ ತಡ ರಾತ್ರಿ. ಅವನು ಬರೋವರೆಗೂ ಗೇಟ್ ಬೀಗ ಹಾಕದೆ ಕಾದಿದ್ದ. ಬಂದ ತಕ್ಷಣ ಬೀಗ ಹಾಕಿ ಒಳಗೆ ಬಂದು ಕೂತ. ಎಷ್ಟು ಹೊತ್ತಾದರೂ ಶೂ ಬಿಸಾಡಿದ ಶಬ್ದ ಬರಲಿಲ್ಲ. ಮೇಲೆಹೋಗಿ ಬಾಗಿಲು ತಟ್ಟಿದ. ಬಂದವನೇ ಅವನು ಮಲಗಿ ಬಿಟ್ಟಿದ್ದ. ನಿದ್ದೆಯಲ್ಲೇ ಎದ್ದುಬಂದು ಏನೆಂದು ಕೇಳಿದ. ಅದಕ್ಕೇ ಈ ದಿನ ಶೂ ಎಸೆದ ಶಬ್ದ ಬರಲಿಲ್ಲ. ಸಧ್ಯಕ್ಕೆ ನಿನಗೆ ಒಳ್ಳೆ ಬುದ್ದಿ ಬಂದಿದೆ. thanks ಅಂತ ಹೇಳಿ ಹೋಗೋಣ ಅಂತ ಬಂದೆ ಅಂದ. ಅದಕ್ಕೆ ಈ ದಿನ ಚಪ್ಪಲಿ ಹಾಕ್ಕೊಂಡು ಹೋಗಿದ್ದೆ ಅಂದ. ಓಹ್ ಹೌದಾ ಅಂತ ಕೆಳಗಿಳಿದು ಬರುವಾಗ ಧಡ್ ಅಂತ ಶಬ್ದ ಮತ್ತೆ ಏನಾಯ್ತು ನೋಡೋಣ ಅಂತ ಮೇಲೆ ಬಂದು ಬಾಗಿಲು ತಟ್ಟಿ ಏನದು ಅಂದ. ಈಗ ಹಾಕಿದ್ದು ಶೂಸ್ ಅದರದೇ ಶಬ್ದ ಅಂದ. ಕೋಪದಿಂದ ಮಾತಾಡದೆ ಕೆಳಗೆ ಇಳಿದು ಬಂದ. ನಿದ್ದೆ ಮಾತ್ರ ಬರಲಿಲ್ಲ !


Rate this content
Log in

More kannada story from Kalpana Nath

Similar kannada story from Comedy