ಒಂದು ಸೀರೆ ಕತೆ
ಒಂದು ಸೀರೆ ಕತೆ


ಒಂದು ಸಾರಿ ಗಂಡ ಹೆಂಡತಿ ಶಾಪ್ಪಿಂಗ್ ಗೆ ಹೋಗಿದ್ದರು. ಗಂಡ ಅನ್ನೋ ಪ್ರಾಣಿಗೆ ಎಪ್ಪತ್ತೈದು. ಹೆಂಡತಿಗೆ ಅರವತ್ತು ವಯಸ್ಸು. ಶಾಪಿಂಗ್ ನ ಮುಖ್ಯ ಉದ್ದೇಶ ದೀಪಾವಳಿಗೆ ಸೀರೆ ತೆಗೆದುಕೊಳ್ಳುವುದೇ ಆಗಿತ್ತು ಐದಾರು ಅಂಗಡಿ ಸುತ್ತಿದ ಮೇಲೆ ಬಹಳ ನೂಕು ನುಗ್ಗಲು ಇದ್ದ ಒಂದು ದೊಡ್ಡ ಅಂಗಡಿಗೆ ಹೋಗೋಣ ಅಂತ ಹೆಂಡತಿ ಹೇಳಿದಾಗ ನನಗಂತೂ ಆಗಲ್ಲಮ್ಮ. ನಾನು ಹೊರಗೆ ಕೂತಿರ್ತೀನಿ. ನೀನೇ ಹೋಗಿ ಬಾ ಅಂತ ಕಳುಹಿಸಿ ಕೊಟ್ಟು ನಾಲ್ಕು ಗಂಟೆ ಆದರೂ ಹೆಂಡತಿ ಆಚೆ ಬರಲಿಲ್ಲ. ಪಾಪ ಗಂಡನಿಗೆ ಏನು ಮಾಡೋದು ಅಂತ ಗೊತ್ತಾಗ್ಲಿಲ್ಲ.
ಕೊನೆಗೆ ಒಂದು ಉಪಾಯ ಹೊಳಿಯಿತು. ಹದಿನೇಳು ಹದಿನೆಂಟು ವರ್ಷದ ಹುಡುಗಿ ಅಂಗಡಿಯಿಂದ ಹೊರಗೆ ಬಂದಿದ್ದು ನೋಡಿ ಚಪ್ಪಾಳೆ ತಟ್ಟಿ ಕೂಗಿದರು. ಆ ಹುಡುಗಿ ನಾನಾ ಅಂತ ಅಲ್ಲಿಂದಲೇ ಕೇಳಿದಳು ಹೌದು ಅಂದರು . ಏನು ತಾತ ಏನು ಬೇಕು ಅಂದಾಗ ಏನಿಲ್ಲಾ ಮಗು ನಮ್ಮವಳು ಒಳಗೆ ಹೋಗಿ ನಾಲ್ಕು ಗಂಟೆ ಆಯ್ತು. ಎಷ್ಟು ಹೊತ್ತಿಗೆ ಬರ್ತಾಳೋ ಗೊತ್ತಿಲ್ಲ ಹತ್ತು ನಿಮಷ ನನ್ನ ಹತ್ತಿರ ಮಾತನಾಡ್ತಾ ಇರಕ್ಕೆ ಆಗತ್ತಾ. ವಿಷಯ ಏನಿಲ್ಲಾಂದ್ರೂ ನಡೆಯತ್ತೆ. ನಿನ್ನಿಂದ ಸಹಾಯ ಆಗತ್ತೆ ಅಂದರು. ಯಾರೂ ಇಲ್ಲದೆ ತಾತನಿಗೆ ಎಲ್ಲೋ ಬಹಳ ಬೇಜಾರಾಗಿರಬಹುದು ಅಂತ ಆಯ್ತು ಅಂತ ಹೇಳಿ ಪಕ್ಕದಲ್ಲಿ ಕೂತು ಬ್ಯಾಗಲ್ಲಿದ್ದ ಜ್ಯೂಸು ಕೊಟ್ಟು ಯಾವ ಊರು ನಿಮ್ಮ ಹೆಸರೇನು ಯಾವಾಗ ರಿಟೈರ್ಡ್ ಆದಿರಿ ಅಂತ ಕೇಳುತ್ತಿದ್ದಾಗ ಅಂಗಡಿಯಿಂದ ಹೆಂಡತಿ ಆಚೆ ಬರೀ ಕೈಯ್ಯಲ್ಲಿ ಬರ್ತಾ ಇದ್ದುದನ್ನ ನೋಡಿ , ಆಯ್ತು ನೀನು ಹೋಗಮ್ಮ thanks ಅಂದರು. ಹೆಂಡತಿ ಬಂದವಳೇ ಯಾರ್ರೀ ಅದು ಅವಳಿಗೆ ಜ್ಯೂಸು ಕೊಡ್ಸಿ ನಗ್ತಾ ಮಾತನಾಡುತ್ತಿದ್ದರಲ್ಲ. ಅದನ್ನ ನೋಡೇ ಅಲ್ಲಿಂದ ಓಡಿಬಂದೆ . ನಡೀರಿ ಮನೇಗೆ. ನಾಳೆ ಪಕ್ಕದ ಮನೆಯವರ ಜೊತೆ ಬರ್ತೀನಿ ನೀವು ಮನೇಲೇ ಇರಿ ಅಂದಳು ಮನಸ್ಸಿನಲ್ಲೇ thanks ಅಂದರು ತಾತ.