ನಟಿ
ನಟಿ


(ಒಬ್ಬ ಖ್ಯಾತ ನಟಿಯ ಜೀವನ ಚರಿತ್ರೆ. ಹೆಸರು ಊರುಗಳನ್ನ ಬದಲಾವಣೆ ಮಾಡಲಾಗಿದೆ )
ಹೈದರಾಬಾದ್ ನ ಕರೀಂ ನಗರದ ಇರ್ಫಾನ್ ಒಂದು MNC ಕಂಪೆನಿಯ ಸೀನಿಯರ್ ಮ್ಯಾನೇಜರ್. ಇವರ ಒಬ್ಬಳೇ ಮಗಳು ಸಾರಾ, ತಾಯಿಯಂತೆ ಸ್ಪುರದ್ರೂಪಿ. ಇರ್ಫಾನ್ ಗೆ ಮಗಳನ್ನ ಕಂಡರೆ ಬಹಳ ಪ್ರೀತಿ. ಮಗಳು ಏನೇ ಕೇಳಿದರೂ ಇಲ್ಲ ಅನ್ನುತ್ತಿರಲಿಲ್ಲ. ಹಾಗಾಗಿ ಓದಿನ ಜೊತೆ ಭರತನಾಟ್ಯ, ನಾಟಕ, ಕರಾಟೆ ಸಂಗೀತ ಹೀಗೆ ಎಲ್ಲದರಲ್ಲೂ ಮೊದಲಿಂದ ಅಭಿರುಚಿ. ಸಾರಾ ಕಾಲೇಜ್ ಗೆ ಬಂದ ಮೇಲೆ ಸ್ನೇಹಿತರೂ ಹೆಚ್ಚಾದರು. ಈಗ ಮೊದಲಿ ನಂತಲ್ಲ. ಕಾಲೇಜು ಮುಗಿದ ಮೇಲೆ ನೇರ ಮನೆಗೆ ಬರಲ್ಲ. ಅಮ್ಮನಿಗೆ tension. ಆದರೆ ಅಪ್ಪ ಮಾತ್ರ ಅವಳೇನೂ ಚಿಕ್ಕ ಹುಡುಗಿ ಅಲ್ಲ. ಪ್ರಪಂಚ ಏನೂ ಅಂತ ಗೊತ್ತಿದೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ತಿಳಿಯೋ ವಯಸ್ಸು. ಮುಂದಿನ ಭವಿಷ್ಯ ರೂಪಿಸಿ ಕೊಳ್ಳಕ್ಕೆ ಅವಳಿಗೆ ಸ್ವಾತಂತ್ರ್ಯ ಬೇಕು. ಇದು ನಮ್ಮ ಕಾಲ ಅಲ್ಲ. ಇಡೀ ಪ್ರಪಂಚವನ್ನ ತಮ್ಮ ಬೆರಳಲ್ಲೇ ನೋಡೋರು ಇವರು, ಅಂತ ಮಗಳನ್ನೇ ವಹಿಸಿ ಕೊಂಡು ಮಾತಾಡ್ತಾರೆ ಅಪ್ಪ. ಅಮ್ಮ ಮಮ್ತಾಜ್ ಕೋಪ ಮಾಡ್ಕೊಂಡು ಅಡುಗೆ ಮನೆ ಒಳಗೆ ಹೋಗಿ ಉದ್ದಾರ ಆದ ಹಾಗೆ, ಹೀಗೆ ಮಗಳನ್ನ ತಲೆ ಮೇಲೆ ಕೂಡಿಸ್ಕೊಂಡ್ರೆ. ನಾಳೆ ಹೆಚ್ಚುಕಡಿಮೆ ಆದರೆ ಕಣ್ಣುಕಣ್ಣು ಬಿಡೋರು ನಾವೇ ಅಂತ ಗೊಣಗಾಡುತ್ತಾರೆ.
ಒಂದುದಿನ ಅಪ್ಪ ಊರಿನಿಲ್ಲಿ ಇಲ್ಲದಿದ್ದಾಗ ಅಮ್ಮಂಗೆ ಬೆಳಗಿನ ಜಾವಎದೆ ನೋವು ಜಾಸ್ತಿಯಾಗಿ ಸಾರಾ ಸ್ನೇಹಿತರ ಸಹಾಯದಿಂದ hospital ಗೆ ಅಡ್ಮಿಟ್ ಮಾಡಿ ಅಪ್ಪನಿಗೆ phone ಮಾಡಿದಳು. ಉಸಿರಾಟದ ತೊಂದರೆ ಮೊದಲಿಂದಲೂ ಇದ್ದುದರಿಂದ ಈಗ ಉಲ್ಬಣ ವಾಗಿದೆ. ICU ನಲ್ಲಿ ಇಡೀ ರಾತ್ರಿ ಇರಬೇಕಾಯ್ತು. ಮಗಳು ಈಗ ಎಷ್ಟು ಸ್ನೇಹಿತರನ್ನ ಸಂಪಾದಿಸಿದಾಳೆ ಅಂತ ಆ ರಾತ್ರಿ ಇರ್ಫಾನ್ ಗೆ ಗೊತ್ತಾಯ್ತು. ಎಲ್ಲಾ ಕಾಲೇಜು ಹುಡುಗರು ಹುಡುಗಿಯರು. ಆಸ್ಪತ್ರೆ ಎಲ್ಲಾ ಇವರದೇ ಓಡಾಟ. ಅವರಲ್ಲಿ ಒಬ್ಬಳ ಅಮ್ಮ ಬೇರೆ ಇಲ್ಲೇ doctor ಅಂತ ನನಗೆ introduce ಮಾಡಿದ್ಲು. ಮಗಳ ಬಗ್ಗೆ ಅಭಿಮಾನ ಇನ್ನೂ ಹೆಚ್ಚಾಯ್ತು. ಪಾದರಸದ ಹಾಗೇ ಸಾರಾ ಓಡಾಡ್ತಾ ಇರೊದು ನೋಡಿ ಅಮ್ಮನ್ನ ಖಂಡಿತ ಉಳಿಸಿಕೊಳ್ತಾಳೆ. ಏನೂ ಆಗಲ್ಲ ಅಂತ ಒಂದು ನಿಮಿಷ ಕಣ್ಣುಮುಚ್ಚಿ ಸೋಫಾ ಮೇಲೆ ಕೂತು ಹಾಗೇ ನಿದ್ರೆ ಮಾಡಿದರು. ಬೆಳೆಗ್ಗೆ ಸುಮಾರು ನಾಲ್ಕು ಗಂಟೆಗೆ ಕೆಟ್ಟವಾರ್ತೆ ಬಂದೇ ಬಿಡ್ತು. ಇಬ್ಬರೂ ತಬ್ಬಿಕೊಂಡು ಆಸ್ಪತ್ರೆ ಅನ್ನೋದು ಸಹಾ ಮರೆತು ಅತ್ತು ಬಿಟ್ಟರು.
ಯಾವುದೂ ನಿಲ್ಲಲ್ಲ ಜೀವನವೇ ಹೀಗೆ, ದಿನಗಳೂ ಗಾಲಿಯಂತೆ ವೇಗವಾಗಿ ಉರುಳುತ್ತಿದೆ. ಮನೆಯಲ್ಲಿ ಈಗ ತಂದೆ ಮಗಳು ಮಾತ್ರ. ಅಮ್ಮ ಒಂದು ದಿನವೂ ಸಹಾಯ ಮಾಡು ಅಂತ ಕೇಳದೆ ಇದ್ದುದರಿಂದಲೋ ಅಥವಾ ತಾನೇ ಹೋಗಿ ಕಲಿಯದೇ ಇದ್ದುರಿಂದಲೋ ಇಂದು ಅಪ್ಪನಿಗೆ ಒಂದು ಕಪ್ ಚಾ ಮಾಡಿ ಕೊಡಕ್ಕೂ ಆಗ್ತಿಲ್ಲ ಅಂತ ನೆನೆದು ಕಣ್ಣಲ್ಲಿ ನೀರು. ಹೊರಗೆ ವಾಕ್ ಹೋದೋರು ಮಗಳ ಕಷ್ಟ ಗೊತ್ತಿದ್ದೇ ಹೋಟೆಲ್ ನಿಂದ ಫ್ಲಾಸ್ಕ್ ನಲ್ಲಿ ಚಾ ತಂದರು. ಮಾರನೇ ದಿನದಿಂದ ಬಡತನದಲ್ಲಿದ್ದ ದೂರದ ಸಂಭಂದಿಕರ ಹೆಂಗಸು ಒಬ್ಬರು ಬಂದು ಅಡುಗೆ ಕೆಲಸದ ಜವಾಬ್ದಾರಿ ವಹಿಸಿಕೊಂಡರು. ದಿನಗಳು ಉರುಳಿದ ಹಾಗೆ ಮತ್ತೆ ಸಾರಾ ಕಾಲೇಜಿಗೂ, ಅಪ್ಪ ಆಫೀಸ್ಗೂ ಹೊರಟರು. ಅಮ್ಮನ ಕಳ್ಕೊಂಡ ದುಃಖದಲ್ಲೂ MBA final exam ಬರೆದು ಕಾಲೇಜ್ ಗೆ ಮೊದಲು ಬಂದಿದ್ದಾಳೆ. ಅಪ್ಪನಿಗೆ ಬಹಳ ಸಂತೋಷ. ಆದರೆ ಅಮ್ಮ ಇಲ್ಲದಿರುವ ದುಃಖ ಮರೆಯಲಾಗಿಲ್ಲ.
ಸಾರಾಗೆ ಮೊದಲಿಂದಲೂ ಡ್ರಾಮಾ, ನೃತ್ಯ ಅಂದರೆ ಬಹಳ ಆಸೆ. ಅದರಲ್ಲೇ ಹೆಸರು ಮಾಡಬೇಕು ಅನ್ನೋ ಆಸೆ ಮೊದಲಿಂದಲೂ ಇತ್ತು. ಅದನ್ನ ಅಪ್ಪನಿಗೂ ಸಹಾ ಹೇಳಿದ್ದಳು. ಮಗಳು ಏನು ಮಾಡಿದರೂ ಅವರ ಸಹಕಾರ ಇದ್ದೇ ಇತ್ತು. ಅಪ್ಪ ಒಂದು ದಿನ ಹತ್ತಿರ ಕೂತು ಕೇಳಿದ್ರು ನನಗೊಂದು ಜವಾಬ್ದಾರಿ ಇದೆ. ಅದು ನಿನ್ನ ಮದುವೆ. ಹುಡುಗನ ಆಯ್ಕೆ ನಿನಗೇ ಬಿಟ್ಟಿದ್ದೀನಿ.ನಿನಗ ಇಷ್ಟ ಇರುವ ಅಥವ ಅವರು ನಿನ್ನನ್ನ ಇಷ್ಟ ಪಟ್ಟಿ ರುವರು ಯಾರಾದರೂ ಇದ್ದರೆ ಹೇಳು ಅಂದರು. ಅದಕ್ಕೆ ಅಪ್ಪ ನೀವು ನನಗೆ ಯಾವ ತಂದೇನೂ ಕೊಡದಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ. ಈ ವಿಷಯದಲ್ಲಿ ಮಾತ್ರ ಆಯ್ಕೆ ನಿಮ್ಮದೇ ಇರಲಿ ಅಂತ ನನ್ನ ಆಸೆ. ನಾನಾದ್ರೂ ಎಡವಬಹುದು ಆದರೆ ನೀವು ಸರಿಯಾಗೇ ನನಗೆ ತಕ್ಕವನನ್ನ ಆಯ್ಕೆ ಮಾಡಿರ್ತೀರಿ ಅಂತ ನನಗೆ ನಂಬಿಕೆ ಇದೆ. ನೀವು ಯಾರನ್ನ ತೋರಿಸಿದರೂ ಮದುವೆ ಮಾಡ್ಕೋತೀನಿ. ಆದರೆ ನೀವು ಇಲ್ಲಿ ಒಂಟಯಾಗಿ ಇರೋ ಹಾಗಿಲ್ಲ. ನಮ್ಮ ಜೊತೆ ಇರಬೇಕು. ಅಂದರೆ ಆ ಹುಡುಗ ಅವರ ಅಪ್ಪ ಅಮ್ಮನನ್ನ ಬಿಟ್ಟು ನಮ್ಮಜೊತೆ ಇರಬೇಕಾಗುತ್ತೆ . ಅದಕ್ಕೆ ಯಾರೂ ಒಪ್ಪಲ್ಲ ಅನ್ನೋದು ನನಗೆ ಗೊತ್ತು. ಅಂತಹ ಹುಡುಗ ಸಿಕ್ಕಾಗ ಮದುವೆ ಯೋಚನೆ. ಅಲ್ಲಿಯವರೆಗೂ ಬೇಡ ಅಂದಳು. ನನಗಾಗಿ ನಿನ್ನ ಜೀವನ ಹಾಳಾಗೋದು ನನಗೆ ಇಷ್ಟ ಇಲ್ಲ ಅಂದರೂ ಒಪ್ಪಲೇ ಇಲ್ಲ. ಬಹಳ. ಹೊತ್ತಿನ ಮೇಲೆ goodnight ಅಂತ ಹೇಳಿ ಹೋಗಿ ಮಲಗಿದರು. ರಾತ್ರಿಯೆಲ್ಲಾ ಮಗಳು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಬಗ್ಗೆ ಯೋಚಿಸುತ್ತಾ ನಿದ್ದೆ ಬರಲಿಲ್ಲ. ಅವಳಿದ್ದಾಗ ಎಷ್ಟು ಸಾರಿ ಹೇಳಿದಳು ಸಾರಾ ಗೆ ಮದುವೆ ಒಂದು ಮಾಡಿ ಅದು ನಮ್ಮ ಜವಾಬ್ದಾರಿ ಅಂತ ನಾನು ಕೇಳಲಿಲ್ಲ. ಹೀಗೆ ಹಿಂದಿನ ದಿನಗಳ ನೆನೆಪು ಮರಕಳಿಸುತ್ತಲೇ ಇತ್ತು. ನಿದ್ದೆ ಮಾಡಲಿಲ್ಲ. ಬೆಳಗಾಯ್ತು. ಸಾರಾ ಎಲ್ಲರ ಜೊತೆ ಬಹಳ ಬೇಗ ಬೆರೆತು ಸ್ನೇಹ ಗಳಿಸುತ್ತಾಳೆ. ಅದು ಅವಳ ಸಹಜ ಗುಣ. ಅದು ಹುಡುಗರಾಗಲಿ ಹುಡುಗಿಯರಾಗಲಿ ಒಂದೇ ರೀತಿ. ನೇರ ನುಡಿ ಧೈರ್ಯ ಬುದ್ದಿವಂತಿಕೆ ಇವುಗಳನ್ನ ಮೆಚ್ಚಿ ಹಲವು ಹುಡುಗರು ಇಷ್ಟಪಟ್ಟರೂ ಸಹಾ ಹೇಳಲು ಯಾರಿಗೂ ಧೈರ್ಯವಿಲ್ಲದೆ ಅವಳ ಹತ್ತಿರದ ಸ್ನೇಹಿತೆಯರ ಮೂಲಕ ಹೇಳಿಸಿದಾಗ, ಅವಳು ಓದು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಬಾ, ಯೋಚನೆ ಮಾಡೋಣ ಅಂತ ಹೇಳ್ತಿದ್ದಳು.
ಅಷ್ಟು ಧೈರ್ಯವಂತೆ ಅಮ್ಮ ಹೋದಾಗಿನಿಂದ ಮನೆಯಿಂದ ಹೊರೆಗೆ ಬರ್ತಿಲ್ಲ. ರೂಮ್ ನಲ್ಲಿ ಏನ್ಮಾಡ್ತಿ ರ್ತಾಳೆ ಅನ್ನೋದು ಗೊತ್ತಿಲ್ಲ ಅಂತಾರೆ ಅಡುಗೆ ಮಾಡೋ ಆಂಟಿ. ಊಟ ತಿಂಡಿ ಕೊಟ್ರೆ ತಿಂತಾಳೆ. ಹಸಿವೂ ಅಂತ ಕೇಳಲ್ಲ. ಅಪ್ಪನ ಹತ್ತಿರಾನೂ ಹೆಚ್ಚಾಗಿ ಮಾತಾಡಲ್ಲ. ಅಪ್ಪ ಕೆಲಸ ಅಂತ ಹೊರ ಊರಲ್ಲಿ ಇರೋದೇ ಹೆಚ್ಚು.
ಒಂದು ದಿನ ಸಾರಾ ಸ್ನೇಹಿತರಾದ ರಾಹುಲ್ ಮತ್ತೆ ಸಂಧ್ಯಾ ಮನೆಗೆ ಬಂದರು. ಸರಿ ನಾನೇ ಶುರು ಮಾಡ್ತೀನಿ ಅಂತ ಹೇಳಿ, ಸಾರಾ ನಿನಗೆ ಮೊದಲಿಂದ ನಾಟಕ ಆಕ್ಟಿಂಗ್ ಅಂದರೆ ಎಲ್ಲದಕ್ಕಿಂತ ಹೆಚ್ಚು ಇಷ್ಟ. ಅದು ನಮಗೂ ಗೊತ್ತಿದೆ. ನೀನು ಹೀಗೆ ಆಚೆ ಬರದೇ ಮನೇಲೆ ಕುಳಿತರೆ depression ಗೆ ಹೋಗ್ಬಿಡ್ತಿ. ನಮ್ಮ ಮಾತು ಕೇಳು. ರಾಹುಲ್ ನ ಅಣ್ಣಾ ಒಂದು ಸಿನಿಮಾ ಮಾಡ್ತಿದಾನೆ. ಅವನು ಒಳ್ಳೆ director ಅಂತ ನಿನಗೂ ಗೊತ್ತಿದೆ. ನಿನ್ನ ವಿಷಯ ಎಲ್ಲಾ ಹೇಳಿದೀವಿ. ನಿನ್ನನ್ನ ನಮ್ಮ ಕಾಲೇಜಿನ ethnic day ದಿನ ಮಾಡಿದ ನಾಟಕದಲ್ಲಿ ನಿನ್ನ ಆಕ್ಟಿಂಗ್ ನೋಡಿದ್ದರಂತೆ. ನಮ್ಮಜೊತೆ ಬಾ . Introduce ಮಾಡ್ತೀವಿ ಅಂದಾಗ. ಮನಸ್ಸು ತಕ್ಷಣ ಒಪ್ಪಲಿಲ್ಲ. ಸ್ವಲ್ಪ ಸಮಯ ಕೊಡಿ ಯೋಚನೆ ಮಾಡ್ತೀನಿ ಅಂದಳು. ಅಧೃಷ್ಟ ಹೇಗೆ ಬರುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ ಬಂದಾಗ ಕಣ್ಣು ಮುಚ್ಚಿಕೊಂಡು ಕೂತು, ಆಮೇಲೆ ಪಶ್ಚತ್ತಾಪ ಪಟ್ಟೋರು ಬಹಳ ಜನ ಇದಾರೆ. ಬೇಡ ಈಗಲೇ ಬಾ ಅಂದರು. ಧೈರ್ಯ ಮಾಡಿ ಹೊರಟಳು. ಇವಳಿಗಾಗಿಯೇ ಮೂವರು ಕಾದು ಕೂತಿದ್ದಾರೆ. ನೋಡಿದ ತಕ್ಷಣ ವೆಲ್ಕಮ್ ಅಂತ ಹೇಳಿ, ಎಲ್ಲರೂ ತಾವೇ introduce ಮಾಡಕೊಂಡರು. ನಾನು ಶ್ರೀ ರಾಮ್ camera man, ನಾನು ರಾಹುಲ್ ಅಣ್ಣ ಪ್ರಕಾಶ್ film director, ಮತ್ತು ಹರಿಬಾಬು still ಫೋಟೋಗ್ರಾಫರ್ from ಚೆನ್ನೈ.
ರಾಹುಲ್ ಮತ್ತು ಸಂಧ್ಯಾ ಹೊರಬಂದರು. ಸುಮಾರು ಎರಡು ಗಂಟೆ ಆದರೂ ಸಾರಾ ಹೊರಗೇ ಬಂದಿಲ್ಲ. ಸಂಧ್ಯಾ ರಾಹುಲ್ ಗೆ ಹೇಳಿದಳು ನಿಮ್ಮ ಅಣ್ಣನಿಗೆ ಫೋನ್ ಮಾಡು. ಇಲ್ಲಾಂದ್ರೆ ನಾವೇ ಒಳಗೆ ಹೋಗೋಣ. ಪಾಪ ಅವಳನ್ನ ಕರೆದು ತಂದು ತಪ್ಪು ಮಾಡಿದ್ದೇವೆ ಅನ್ಸುತ್ತೆ. ರಾಹುಲ್ ಹೇಳ್ದ. ಅಣ್ಣಾ ಇದಾನಲ್ಲ ಭಯ ಏನು. ಎಷ್ಟಾದ್ರು ಫಿಲಂ ಫೀಲ್ಡ್ ಅಲ್ಲಪ್ಪ ಅಂತ ರಾಗಾ ಎಳೆದಾಗ, ಏಹ್ ಏನೇನೋ ಯೋಚನೆ ಮಾಡ್ಬೇಡ ಅಂತ ಹೇಳ್ತಿದ್ದಾಗ ಸಾರಾ ಆ ಕಡೆಯಿಂದ ಬರ್ತಿದ್ಲು. ಮುಖದಲ್ಲಿ ಏನೋ ಬದಲಾವಣೆ. ಜೋರಾಗೆ ಹೆಜ್ಜೆ ಹಾಕಿ ಬರ್ತಿದಾಳೆ. ಇಬ್ಬರೂ ಹತ್ತಿರ ಹೋಗಿ ಕೇಳುವಷ್ಟರಲ್ಲಿ ಸಾರಾನೆ ಹೇಳಿದ್ಲು. ನಾನು expect ಮಾಡಿರಲಿಲ್ಲ. ಇವತ್ತೇ ಡಿಫರೆಂಟ್ costume ಗಳಲ್ಲಿ Shoot ಮಾಡಿ, ಒಂದು "ಬಾಂಡ್ "ಗೆ ಸೈನ್ ಮಾಡಿ ಕೊಡಿ ಅಂದರು. ನಿಮ್ಮ ಅಣ್ಣಾ ಇದ್ದುದರಿಂದ ಧೈರ್ಯವಾಗಿ ಏನೂ ನೋಡ್ದೆ ಮಾಡಿಕೊಟ್ಟೆ ಅಂದಾಗ ಒಂದು ಕ್ಷಣ ಸಂಧ್ಯ ಹೆದರಿ, ಏನೋ ರಾಹುಲ್ ಇದೆಲ್ಲಾ ಅಂದಾಗ ಅವರ ಅಣ್ಣಾನೆ ಫೋನ್ ಮಾಡಿ ಹೇಳಿದ್ರು. ರಾಹುಲ್ we have Selected her for our new project. ಉಳಿದ ವಿಷಯ ನಿನ್ನ ಹತ್ರ ರಾತ್ರಿ ಮಾತಾಡ್ತೀನಿ ಅಂತ ಹೇಳಿದ. ಸಾರಾ ಕಂಗ್ರಾಜುಲೇಷನ್. ಅಂದ ರಾಹುಲ್. ಸ್ಮೈಲ್ ಮಾಡಿ ಸುಮ್ಮನೆ ತಲೆ ಬಗ್ಗಿಸಿದಳು. ಜೀವನದಲ್ಲಿ ಎಲ್ಲಾ ಬಾಗಿಲು ಮುಚ್ಚಿದರೆ ಒಂದು ಕಿಟಕಿ ಆದ್ರೂ ಎಲ್ಲೋ ತೆರೆದಿರುತ್ತೆ ಅಂತಾರೆ. ಆದರೆ ನಿನ್ನ ವಿಷಯದಲ್ಲಿ main door open ಆಗ್ತಿದೆ ಅಂದಳು ಸಂಧ್ಯಾ ನಗ್ತಾ.
ಒಂದು ತಿಂಗಳಲ್ಲೇ ಫಿಲಂ ಶುರು ಆಯ್ತು. ಒಂದೇ ಸಮನೆ ಹದಿನೈದು ದಿನ ಶೂಟಿಂಗ್ ಇತ್ತು. ಮೊದ ಮೊದಲು ಜೊತೆಗೆ ಸಂಧ್ಯಾ ಹೋಗ್ತಾ ಇದ್ಲು. ನಂತರ ಆಗ್ಲಿಲ್ಲ. ರಾಹುಲ್ ಮಾತ್ರ ಇರ್ತಿದ್ದ. ಸಾರಾಗೆ ಕ್ರಮೇಣ ಕ್ಯಾಮೆರಾ ಭಯ ಹೋಗಿ ನಾರ್ಮಲ್ ಆಯ್ತು. ಒಂದೇ takeಗೇ ok ಆಗ್ತಿತ್ತು. Set ನಲ್ಲಿ ಎಲ್ಲರ ಹತ್ತಿರ ಬಹಳ ಖುಷಿ ಯಿಂದ ಓಡಾಡ್ಕೊಂಡು ಇರ್ತಾ ಇದ್ದಳು. ರಾಹುಲ್ ದಿನ ಕಳೆದಂತೆ ಬಹಳ ಹತ್ತಿರವಾದ. ಸಾರಾಗೂ ಒಳ್ಳೆಯ ಗೆಳಯ ಬೇಕಿತ್ತು. ಗೆಳೆತನ ಮುಂದುವರೆದು ಮತ್ತಷ್ಟು ಹತ್ತಿರವಾದ್ರು. ಬೇರೆ ಊರು ಗಳಲ್ಲಿ ಶೂಟಿಂಗ್ ಇದ್ದಾಗ ರಾಹುಲ್ ಬಿಟ್ರೆ ಯಾರೂ ಹತ್ತಿರ ಇಲ್ಲ . ಎಲ್ಲದಕ್ಕೂ ಅವನ ಸಹಾಯ ಬೇಕಾಯ್ತು. ಒಂದು ದಿನ ಮನೆಯಲ್ಲಿ ಅಪ್ಪ ಪೇಪರ್ ಓದುತ್ತಾ ಕೂತಿದ್ದಾಗ, ಹೇಳಿದ್ಲು. ಒಂದು ತಪ್ಪು ಮಾಡ್ತಾ ಇದೀನ. ನಿಮಗೆ ಹೇಳ್ಬೇಕಿತ್ತು, ಅದನ್ನ ನೀವು ಹೇಗೆ ತೊಗೋತೀರಾ ಗೊತ್ತಿಲ್ಲ. ಒಂದು ದಿನ ನೀವೇ ಕೇಳಿದ್ರಿ ಯಾರಾದರೂ ಹುಡುಗ ನಿನ್ನ ಮನಸಲ್ಲಿ ಇದಾನ ಅಂತ, ಈಗ yes ಅಂತಿನಪ್ಪ. ಹೇಳಮ್ಮ ಅಂದರು. ಅವನು ಹಿಂದು. Ok. ಅವನಿಗೆ ಇನ್ನೂ ಯಾವುದೂ ಒಳ್ಳೆ ಕೆಲಸ ಅಂತ ಇಲ್ಲ ok. ಅವನ ಹೆಸರು ರಾಹುಲ್ ok, ಅವರ ಅಣ್ಣಾ ನೆ ನಾನು ಈಗ ಮಾಡ್ತಾ ಇರೋ ಫಿಲಂ director. ok, ಇನ್ನೇನು ಬಿಟ್ಟಿದ್ದಿ bio- data ದಲ್ಲಿ. ಅಂದರು ನಗುನಗುತ್ತಾ. ಒಳ್ಳೆ ಹುಡುಗ ok. ಅವನಿಂದಲೇ ಈ project ಸಿಕ್ಕಿದ್ದು. ಎಲ್ಲಾ ok. ಆದರೆ ನೀನು ಅವನಿಗೆ ಇದನ್ನ ಹೇಳಿದ್ದೀಯಾ ಅಂತ ಕೇಳಿದಾಗ ಇಲ್ಲ ನಿಮಗೆ ತಿಳಿಸಿ ok ಅಂದರೆ ಹೇಳೋಣ ಅಂತ. Very good. ಮೊದಲು ಅವನ opinion ಕೇಳು. ಅವನ ಮನಸಲ್ಲಿ ನೀನಿದ್ರೆ ok ಅಂದರು. ಮಾರನೇ ದಿನ ರಾಹುಲ್ ನ ಕಂಡು ನಿನ್ನ ಹತ್ತಿರ ಒಂದು important ವಿಷಯ discuss ಮಾಡ್ಬೇಕಿದೆ. ಯಾವಾಗ ಎಲ್ಲಿ ಮಾತಾಡೋಣ. ಅದು ಈ project ಸಂಭಂದವೊ ಅಥವ ಫೈನಾನ್ಸ್ ಬಗ್ಗೆಯೊ ಅಂದಾಗ ಎರಡೂ ಅಲ್ಲ ನನ್ನ ಮುಂದಿನ ಜೀವನದ ಬಗ್ಗೆ. ನಿನ್ನ ಜೀವನದ ಬಗ್ಗೆ ನನ್ನ ಹತ್ರ discuss ಮಾಡ್ಬೇಕಾ. ನಿಮ್ಮ ಅಪ್ಪ ಇದಾರಲ್ಲ. ಅವರ ಹತ್ತಿರ first ರೌಂಡ್ ಆಯ್ತು. Final ಮಾಡಕ್ಕೆ ಮೊದಲು ನಿನ್ನ, ಆಮೇಲೆ ಸಂಧ್ಯಾ ನ ಕೇಳ್ಬೇಕು. ಆಯ್ತು ಹೇಳು ಅಂದಾಗ ಹತ್ತಿರ ಇದ್ದ coffee day ಗೆ ಹೋದ್ರು. ಶುರು ಮಾಡ್ಲಾ ಕಾಫಿ ಬರ್ಲಾ. ಇಲ್ಲಿ coffee ಗೆ ಕಾದ್ರೆ
ಏನು ಮಾತಾಡ್ಬೇಕು ಅನ್ನೊದೆ ಮರೆತು ಹೋಗಿರ್ತೀವಿ. ಆಯ್ತು, ನಿನಗೆ ಮದುವೆಯಾವಾಗ. ಒಳ್ಳೆ question. ಆದರೆ ಉತ್ತರ ಗೊತ್ತಿಲ್ಲ. Ok ಮಾಡ್ಕೋ ಅಂತ ಮನೇಲಿ ಹೇಳಿದ್ದಾರಾ. ಇಲ್ಲ. ಏಕೆ. ನಮ್ಮ ಅಣ್ಣಾಮೊದಲು ಮಾಡ್ಕೋಬೇಕು ಆ ಮೇಲೆ ಒಳ್ಳೆ ಹುಡುಗಿ ಸಿಕ್ಕಾಗ ಯೋಚನೆ ಮಾಡಬಹುದು. ಒಳ್ಳೆ ಹುಡುಗಿ ಅಂದರೆ ನಿನ್ನ ಒಪೀನಿಯನ್ ನಲ್ಲಿ ಏನು. Bold, sraight forward, intelligent, dependable, humble etc etc... ಆ ರೀತಿ ಹುಡುಗಿಯರು ಇರ್ತಾರೆ ಅಂತ ನಿನಗೆ ಅನಿಸುತ್ತಾ. ಗೊತ್ತಿಲ್ಲ. ಗೊತ್ತಿಲ್ಲಾ ಅಂದಮೇಲೆ ಅದರ ಆಸೆ ಮಾತ್ರ ಏಕೆ. ಅಸೆ ಪಡೋದು ತಪ್ಪಲ್ಲ ಅಂತಾರಲ್ಲ ಅದಕ್ಕೇ. ನಿನ್ನ ಆ ಆಸೆಗಳನ್ನ ಪೂರೈಸಲು ತಯಾರಾಗಿ ನಿನ್ನ ಮುಂದೆ ಬಂದರೆ ?, ನಿನ್ನ ರಿಯಾಕ್ಷನ್ ಹೇಗಿರತ್ತೆ ನೋಡ್ಬೇಕು. ಅದಕ್ಕೇ ಇಲ್ಲಿ ಕೂತಿದ್ದೀನಿ ಅಂದಾಗ, ಇಲ್ಲಿ ಮೂವಿ ಕ್ಯಾಮೆರಾ ಇಲ್ಲ, ಇರೋದು CC ಕ್ಯಾಮೆರಾ ಮಾತ್ರ. ಅಂದಾಗ ನಕ್ಕು ಹೇಳಿದಳು. ಈಗ ನನ್ನ ಬಗ್ಗೆ ನಿನ್ನ ಒಪೀನಿಯನ್ ಬೇಕು ಅದಕ್ಕೇ ಇಷ್ಟೆಲ್ಲಾ ಆಕ್ಟಿಂಗ್ ಅಂದಳು. ಅವಳು ಹೇಳಿದ್ದ ಎಲ್ಲಾ ಮಾತುಗಳನ್ನ re- wind ಮಾಡಿ ನೆನೆದಾಗ ಅರ್ಥವಾಯ್ತು.ತಕ್ಷಣ ಹೇಳಿದ ನಿನ್ನ ಬಗ್ಗೆ ನಾನು ಏನೂ ಹೇಳಲ್ಲ. ಆದರೆ ಒಂದು ವಿಷಯ ಹೇಳದೆ ಇದ್ದರೂ ತಪ್ಪಾಗತ್ತೆ ಅದು you are an angel !.
ಎದ್ದು ಇಬ್ಬರೂ ಮನೆಗೆ ಹೊರಟರು. ಅರ್ಧ ದಾರಿವರೆಗೂ ಡ್ರಾಪ್ ಕೊಟ್ಟು ರಾಹುಲ್ ಹೊರಟ. ಇಬ್ಬರಿಗೂ ಅಂದು ರಾತ್ರಿ ಎಲ್ಲಾ ಯೋಚನೆಗಳ ಸುಳಿಯಲ್ಲಿ ಮುಳುಗಿ ತೇಲುತ್ತಾ ನಿದ್ದೆ ಹತ್ತಲಿಲ್ಲ.. ಮಾರನೇ ದಿನ ಶೂಟಿಂಗ್ ಇರಲಿಲ್ಲ . ಮಾಲ್ ನಲ್ಲಿ ಮೀಟ್ ಮಾಡಿದ್ರು. ಇಬ್ಬರೂ ಅದರ ಬಗ್ಗೆ ಮಾತನಾಡಲು ಪ್ರಯತ್ನ ಮಾಡಿದರೂ ಏಕೋ ಆಗುತ್ತಿಲ್ಲ. ಕೊನೆಗೆ ರಾಹುಲ್ ಹೇಳಿದ. ಕ್ಷಮಿಸು ಸಾರಾ ನೀನು ತಿಳಿದಿರುವ ಹಾಗೆ ನೀನು ನನ್ನ ಮನಸ್ಸಲ್ಲಿ ಇಲ್ಲ. ಅದು just ಫ್ರೆಂಡ್ ಶಿಪ್ ಅಷ್ಟೇ ಅಂದ. ಆಶಾ ಗೋಪುರ ಕಳಚಿ ಬಿದ್ದ ಹಾಗಾಯ್ತು. ಒಬ್ಬಳೇ ಮನೆಗೆ ಬಂದಳು. ಅಂದಿನಿಂದ ರಾಹುಲ್ ಜೊತೆ ಹೆಚ್ಚುಮಾತನಾಡುತ್ತಿರಲಿಲ್ಲ. ಒಬ್ಬಳೇ ಎಲ್ಲಾ manageಮಾಡ್ತಾ ಇದ್ದಳು. ಇನ್ನೂ ಎರಡು high budget ಸಿನಿಮಾ offer ಬಂತು. ಕಾಲ ಕಳೆದಂತೆ ಮೂರು ನಾಲ್ಕು ಭಾಷೆಗಳ ಸಿನೆಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾದಳು. ಒಂದು ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಅಣ್ಣನಜೊತೆ ರಾಹುಲ್ ಹೋಗಿದ್ದಾಗ ಅಕಸ್ಮಾತ್ ಸಾರಾ ಭೇಟಿ ಆಯ್ತು. ಮಾತನಾಡಿಸಲು ರಾಹುಲ್ ಹತ್ತಿರ ಹೋದಾಗ ಸೆಕ್ಯೂರಿಟಿಯವರು, ಬೌನ್ಸರ್ ಗಳೂ ಅದಕ್ಕೆ ಅವಕಾಶ ಕೊಡಲಿಲ್ಲ. ಹೊರಗೆ ಬಂದು ಒಬ್ಬನೇ ಆಕಾಶದ ಹುಣ್ಣಿಮೆ ಚಂದ್ರನ ನಿಟ್ಟಿಸಿ ನೋಡ್ತಾ ನಿಂತ.