ಮೊಬೈಲ್ ಸ್ಟೇಟಸ್
ಮೊಬೈಲ್ ಸ್ಟೇಟಸ್
ಸುಬ್ಬಿ ಸುಬ್ಬಿ ಎಂದು ಇಪ್ಪತ್ತೆರಡು ಹಲ್ಲು ಕಿರಿದು ಹೆಂಡತಿಯ ಮುಂದೆ ಬಂದು ನಿಂತಾಗ ಗುಂಡಾ....
ಸುಬ್ಬಿಯ ಪಿತ್ತ ನೆತ್ತಿಗೇರಿತು.....ರೀ.... ಯಾವಾಗ್ಲೂ ಸುಬ್ಬಿ.... ಸುಬ್ಬಿ ಅಂತಾ ಇರ್ತಿರಾ.... ನಿಮಗೆ ಬೇರೆ ಕೆಲಸವಿಲ್ಲವೋ???? ಎಂದು ಗಂಡನ ಮೂತಿ ತಿವಿಯಲು ಬಂದಳು.
ಅಯ್ಯೋ ಇವಳಾ!! ಅಲ್ಲಾ ನಾನೇನು ಅಂತಾದು ಹೇಳಿದ್ದು..... ಪ್ರೀತಿಯಿಂದ ಮಡದಿಯನ್ನು ಕರೆಯಬಾರದೇ??? ಲೇ ...ಒಂದು ಲೋಟ ಕಾಫಿ ಕೊಡೇ ... ಪೂಜೆಗೆ ಹೋಗ್ಬೇಕು ಹೊತ್ತಾಗುತ್ತೆ ಎಂದಾಗ ..
ಅಡುಗೆ ಮನೆಯಲ್ಲಿ ಮುಸಿ ಮುಸಿ ಅಳು...
ಹತ್ತಿರ ಬಂದು ಕೇಳಿದ...ಯಾಕೆ ಏನಾಯ್ತು ಎನ್ನಲು.... ತನ್ನ ಮೊಬೈಲ್ ತೆಗೆದು ಪಕ್ಕದ ಮನೆಯ ಪದ್ಮಾ ಅವರ ಮೊಬೈಲ್ ಸ್ಟೇಟಸ್ ನೋಡಿದ್ರಾ.....
ಹಾ.... ಪಕ್ಕದ ಮನೆಯ ಪದ್ಮಾ ನಂಬರ್ ನನ್ನ ಹತ್ತಿರ ಎಲ್ಲೇ ಇದೆ????
ಮತ್ತೆ ಹೇಳು ನೋಡೋಣ....ಎಂದಾ ನಗುತ್ತಾ....
ಗುಂಡನ ತಲೆ ಮೇಲೆ ಒಂದು ಮೊಟಕಿದಳು ಸುಬ್ಬಿ....
ಅಯ್ಯೋ....ಹಾ.... ಏನೇ ಇದು ಈ ವಿಪರೀತ.....ಗಂಡನ ಮೇಲೆ ಕೈ ಮಾಡೋದೇ...
ರಾಮ ರಾಮ ಏನ್ಕಾಲಾ ಬಂತಪ್ಪಾ.....
ರೀ ಸುಮ್ಮರ್ರೀ.... ಸುಮ್ಮನೆ ಮುಟ್ಟಿದ್ದು ಅಷ್ಟೇ ಎಂದಳು...
ಕಾಫಿ..... ಎಂದಾಗ....
ಹಾ....ರೀ ಮೊದಲು ನೀವು ನಂಗೆ ಈ ತರಹ ಸೀರೆ.... ಇದೇ ತರಹ ಒಡವೆ ಕೊಡ್ಸೀ.... ಆಮೇಲೆ ಎಲ್ಲಾ??
ಅಲ್ಲ ಮುಂಚೆಯೆಲ್ಲಾ ಹೆಂಗಸರು ಮದುವೆ ಮನೆಗಳಲ್ಲಿ.... ಗೃಹಪ್ರವೇಶಕ್ಕೆ....ಮುಂಜುವೆಗೆ ಹೋಗಿ ಅಲ್ಲಿನ ಹೆಣ್ಣು ಮಕ್ಕಳು ತೊಟ್ಟ ಒಡವೆ, ಸೀರೆ ಇವೆಲ್ಲಾ ನೋಡಿ ಬಂದಮೇಲೆ...ಶುರುವಾಗುತ್ತಿದ್ದ ರಾಮಾಯಣ ಮಹಾಭಾರತ....ಈಗ ದಿನ ಬೆಳಗಾದರೆ ಶುರು....
ದಿನಾ ಅವರಿವರ ಮೊಬೈಲ್ ಸ್ಟೇಟಸ್ ನೋಡೋದು.... ನನ್ನ ಮೇಲೆ ಕೂಗಾಡೋದು....
ಅಷ್ಟಕ್ಕೂ ಮೊಬೈಲ್ ಸ್ಟೇಟಸ್ ನಲ್ಲಿ ಇರುವುದು ಸುಳ್ಳೋ ನಿಜವೋ....ಹಳೇದೋ...ಹೊಸದೋ ಒಂದು ತಿಳಿಯದು....
ನೋಡು ಸುಬ್ಬಿ ಅವರಿವರ ಮೊಬೈಲ್ ಸ್ಟೇಟಸ್ ನೋಡಿ ಸುಮ್ಮನೆ ನಮ್ಮ ಮನೆ ನೆಮ್ಮದಿ ಹಾಳು ಮಾಡಬೇಡ...
ದೇವರು ಕಣ್ಣು ಬಿಡಲಿ ನೀನು ಎಲ್ಲವನ್ನೂ ಉಟ್ಟು ತೊಟ್ಟು ಸ್ಟೇಟಸ್ ಗೆ ಹಾಕ್ಕೊ....
ಈಗ ಒಂದು ಲೋಟ ಕಾಫಿ ಎಂದವನು...
ಸುಬ್ಬಿ ಬಿಟ್ಟ ಕಣ್ಣು ನೋಡಿ.... ಪರಮಾತ್ಮ ಎಂದು ದೇವರ ಮನೆ ಸೇರಿದ.
