Jayashree Kishore

Romance Classics Inspirational

4  

Jayashree Kishore

Romance Classics Inspirational

ನಗುವಿನ ಗುಲಾಬಿ

ನಗುವಿನ ಗುಲಾಬಿ

2 mins
293


ಅಮ್ಮಾ ಅಮ್ಮಾ ಎಂದು ಕರೆದ ಕೂಗಿಗೆ ತಿಂಡಿಯ ಡಬ್ಬಿ ರೆಡಿಯಾಗುತ್ತಿದೆ ಕಣೇ ಬಂದೆ ಎಂದು ಮಗಳ ಮುಂದೆ ಡಬ್ಬಿ ಹಿಡಿದು ಹಣೆಯಲ್ಲಿ ಮೂಡಿದ ಬೆವರು ಒರೆಸೆಕೊಂಡರು.


ಅವರನ್ನು ನೋಡಿ ಅಮ್ಮಾ ಇನ್ನಾದರೂ ರೆಸ್ಟ್ ತೊಗೋ.

ದುಡಿದಿದ್ದು ಸಾಕು.... ಎನ್ನಲು ಸಾಕು ಸುಮ್ಮನಿರೆ...

ಏನು ಕಲ್ಲು ಕುಟ್ಟಿ ಪುಡಿ ಮಾಡಿ ಗುಡ್ಡೆ ಹಾಕ್ತೀನಿ...

ಎರಡು ಹೊತ್ತು ಅಡಿಗೆ ಮಾಡಕ್ಕೆ ಕಷ್ಟವೇ ಎಂದು ನಕ್ಕರು...


ಅದರ ಹಿಂದೆ ಇದ್ದ ನೋವನ್ನು ಅರಿಯಲಾರದಷ್ಟು ದಡ್ಡಿ ಅಲ್ಲ ಸಹನಾ.

ಅಮ್ಮಾ ಕುಶಾಲ್ ಮಲಗಿದ್ದಾನೆ.... ಎಂದು ಕಾರಿನ ಕೀ ಹಿಡಿದು ಹೊರಟವಳಿಗೆ‌ ಏನೋ ಹೇಳಬೇಕು ಎಂದುಕೊಂಡವರ ಬಾಯಲ್ಲಿ ಮಾತು ಹೊರಡದಾಯಿತು.

ಅಮ್ಮಾ ಏನು ಹೇಳಬೇಕೋ ಅದು ಸಹನಾಳಿಗೆ‌ ಅರ್ಥವಾಯಿತು.


ವೆಹಿಕಲ್ ಪಾರ್ಕ್ ಮಾಡಿ ತನ್ನ ಸೀಟಿಗೆ ಬಂದವಳು... ಬೆಲ್ ಹೊತ್ತಿದಾಗ ಬಂದ ಅಟೆಂಡರ್ ಕ್ರಿಷ್ಣ ನಕ್ಕು ಗುಡ್ ಮಾರ್ನಿಂಗ್ ಮೇಡಂ ಎಂದ....

ಆ ನಗು ಅವನ ಮುಖದಲ್ಲಿ ಎಂದೂ ಮಾಸದು....


ನೋಡು ಇವತ್ತು ಇಂಟರ್ ವ್ಯೂ ಗೆ ಕ್ಯಾಂಡಿಡೇಟ್ ಬರ್ತಾರೆ ಎಂದಳು...ಸರಿ ಮೇಡಂ ನಾನು ನೋಡಿಕೊಳ್ಳುತ್ತೇನೆ ಎಂದು ಬಾಗಿಲು ಸರಿಸಿ ಹೋದ.


ಅಪ್ಲಿಕೇಶನ್ ಫೈಲ್ ತೆಗೆದು ನೋಡಿದಾಗ.... ಅದರಲ್ಲಿದ್ದ ಹೆಸರಿನ ಮೇಲೆ ಕೈ ಬೆರಳುಗಳು ತನ್ನ ಪಾಡಿಗೆ ತಾನು ಆಡಿದವು.


ಎರಡು ಮೂರು ಜನರ ಸಂದರ್ಶನದ ನಂತರ ಮೇ‌ ಐ‌ ಕಮಿನ್ ಎಂದವನನಿಗೆ ಕಮ್ ಕಮ್ ಎಂದು ಕೂತುಕೊಳ್ಳುವಂತೆ‌ ಹೇಳಿದಳು.


ಅರವಿಂದ್ ಒಂದು ಕ್ಷಣ ಸಹನಾಳನ್ನು ಎವೆ ಇಕ್ಕದೇ ನೋಡಿದ.... ಅದರಿಂದ ಗಲಿಬಿಲಿಗೊಂಡ ಸಹನಾ ಇಂಟರ್ವ್ಯೂ ಶುರು ಮಾಡಿದಳು.


ಒಳ್ಳೆಯ ಕೆಲಸಗಾರ ಎಂದು ಖಚಿತಪಡಿಸಿಕೊಂಡ ಮೇಲೆ ಅವನನ್ನು ನೋಡಿ ತಾವು ತಿಳಿಸುತ್ತವೆ ಎಂದು ಹೇಳಿದಳು.

ಆಗಲೂ ಏನೋ ಹೇಳಲು ಬಂದವನು ಹಾಗೆ ಹೋರಟು ಹೋದ.


ಹೌದು ಅವನೇ ಎಂಬಿಎ ಮುಗಿಸಿ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಸಿಕ್ಕಿದಾಗ... ಅಪ್ಪ ತನಗೆ ವರನನ್ನು ನೋಡಲು ಶುರುಮಾಡಿದರು....‌

ಒಮ್ಮೆ ಅರವಿಂದ್ ಮತ್ತು ಅವನ ಪೋಷಕರು ಕೂಡ ಬಂದಿದ್ದರು ಆದರೆ....ಅವರ ಹಣದ ಆಸೆ ಸಹನಾಳ ತಂದೆ

ವಿರೂಪಾಕ್ಷಯ್ಯ ಬೇಸತ್ತು ಸಂಬಂಧ ಕೈ ಬಿಟ್ಟರು.


ಆದರೆ ಅರವಿಂದ್ ಮಾತ್ರ ಸಹನಾಳನ್ನು ಮೆಚ್ಚಿದ್ದ....ಅವಳ ಆಫೀಸಿಗೆ ಬಂದು ಒಂದು ಎರಡು ಬಾರಿ ಮಾತನಾಡಿಯೂ ಹೋಗಿದ್ದ... ಆದರೆ

ಯಾಕೋ ತಂದೆಯ ಮುಂದೆ ಇದನ್ನು ಹೇಳದೇ ಸುಮ್ಮನಾಗಿ ಬಿಟ್ಟಳು ಸಹನಾ.


ತುಂಬಾ ಕಡೆ ಗಂಡು ಹುಡುಕಿ ಕೊನೆಗೆ.... ಶ್ರೀಕಾಂತ್ ನನ್ನ ಎಲ್ಲರೂ ಇಷ್ಟ ಪಟ್ಟಿದ್ದರು....

ಒಳ್ಳೆ ಮನೆ, ಕೆಲಸ.... ತಂದೆಯ‌ ಮಾತಿಗೆ ಮರುಮಾತಾಡದೇ ಮದುವೆಗೆ ಒಪ್ಪಿಗೆ‌ ನೀಡಿ ಶ್ರೀಕಾಂತನ ಮಡದಿಯಾದಳು.


ಒಂದೆರಡು ವರುಷ ಎಲ್ಲವೂ ಸುಂದರ....ಮಗ ಕುಶಾಲ್ ಹುಟ್ಟಿದ ಮೇಲೆ ಯಾಕೋ ಶ್ರೀಕಾಂತ್ ಗೆ‌ ತನ್ನ ಮೇಲೆ ಆಸಕ್ತಿ ಕಡಿಮೆಯಾಗಿದೆ ಎಂದೆನಿಸಿತು.. ತಾನು ತರುವ ದುಡಿಮೆಯ ಮೇಲೆ ಅವನ ಒಲವು ಎಂದು ತಿಳಿದಾಗ ಮನಸ್ಸು ಆಘಾತಗೊಂಡಿತು.

ಹಾಗೂ ಹೀಗೂ ಕುಶಾಲ್ ಮೂರು ವರುಷದವನಾಗಿದ್ದಾಗ

ಅವನಿಂದ ವಿಚ್ಚೇದನ ಪಡೆದು ತನ್ನ ಪಾಡಿಗೆ ತಾನು ಒಂಟಿಯಾಗಿ ಜೀವನ ನಡೆಸಿದಳು.


ತಂದೆ ಮಗಳಿಗಾದ ಅನ್ಯಾಯ ಕಂಡು ದುಃಖಗೊಂಡು

ಮನದಲ್ಲೇ ಕೊರಗಿದರು.


ಕೊರಗಿನಲ್ಲಿ ಇಹಲೋಕ ತ್ಯಜಿಸಿದರು ...

ತಾಯಿ ಅಂದಿನಿಂದ ಮಗಳ ಜೊತೆಯಲ್ಲಿ ಮಗುವನ್ನು ನೋಡಿಕೊಂಡು ಇದ್ದರು.


ಸಹನಾ ಹಿಂದಿನದನೆಲ್ಲಾ ನೆನೆದು ಕಣ್ಣೀರಿಟ್ಟಳು.

ಅರವಿಂದನಿಗೆ ಅಪಾಯಿಂಟ್ಮೆಂಟ್ ಆರ್ಡರ್ ಕಳಿಸುವಂತೆ

ಹೆಡ್ ಕ್ಲಾರ್ಕ್ ರಂಗನಾಥ್ ಗೆ‌ ಹೇಳಿಕಳುಹಿಸಿದಳು.


ಮನೆಗೆ ಬಂದ ಮಗಳ ಮುಖ ನೋಡಿ.....ಏನೇ ಇವತ್ತು ನಿನ್ನ ಮುಖದಲ್ಲಿ ಮಂದಹಾಸ ಎಂದರು....

ಅಮ್ಮನಿಗೆ ಅರವಿಂದ್ ತನ್ನ ಕಂಪನಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಎಂದು ಹೇಳಿದಳು.


ಯಾರೇ ಅಂದಾಗ ಅದೇ ಅಮ್ಮ ಅಪ್ಪ ಒಂದು ಹುಡುಗನ ನೋಡಿ.... ಹಣದ ವಿಚಾರದಲ್ಲಿ ಸಂಭಂದ ನಿಂತು ಹೋಯಿತಲ್ಲ ಎಂದಳು.


ಹೋ ....ಈಗ ಹೇಗಿದ್ದಾನೆ ಮದುವೆ ಗಿದುವೆ ಆಯ್ತಂತಾ ಎಂದರು.


ಅಮ್ಮಾ ನಾನು ಯಾಕೆ ಅದೆಲ್ಲಾ ಕೇಳಲಿ ಎಂದಳು.


ನಾಲ್ಕಾರು ದಿನ ಬಿಟ್ಟು ಟಿಪ್ ಟಾಪ್ ಆಗಿ ರೆಡಿಯಾಗಿ ಬಂದ ಅರವಿಂದ್ ಗುಡ್ ಮಾರ್ನಿಂಗ್ ಮೇಡಂ ಎಂದ.


ಅವನ ನೋಡಿ ಮುಗುಳ್ನಗುತ್ತಾ ಗುಡ್ ಮಾರ್ನಿಂಗ್ ಎಂದು ತಮ್ಮ ಕಂಪನಿಯ ಪಾಲಿಸಿ... ಕೆಲಸ... ಎಲ್ಲವನು ಹೇಳಿ ಆಲ್ ದ ಬೆಸ್ಟ್ ಹೇಳಿ ಕೈ ಕುಲುಕಿದಳು.


ಗಾಬರಿಯಿಂದ ನಕ್ಕ ಅರವಿಂದ್....

ದಿನಗಳು ಉರುಳಿದವು ತಿಂಗಳುಗಳು ಕಳೆಯುವಷ್ಟರಲ್ಲಿ ಅರವಿಂದ್ ಆಪ್ತವಾದ.


ಒಮ್ಮೆ ಮಾತಿಗೆ ಏನ್ರೀ ಅರವಿಂದ್ ನಿಮ್ಮ ಮಡದಿ ಮಕ್ಕಳ ಬಗ್ಗೆ ಹೇಳಲೇ ಇಲ್ಲ ..... ಎಂದಳು.

ಇಲ್ಲ ಮೇಡಂ ನಾನು ಮದುವೆಯಾಗಿಲ್ಲ...


ಒಬ್ಬರ ನೆನಪಲ್ಲಿ ಜೀವನ ಕಳೆಯುತ್ತಿದ್ದೇನೆ... ಎನ್ನಲು ಸಹನಾ ಬೆಚ್ಚಿದಳು.


ಯಾರ್ರೀ ಅದು ಎನ್ನಲು.....ನೀವೇ.....

 ಎಂದ. ತನ್ನ ತಂದೆ ತಾಯಿಯ ದುರಾಸೆಯಿಂದ ನಿಮ್ಮಂತ‌ಹ ಒಳ್ಳೆ ಸಂಗಾತಿಯನ್ನು ಪಡೆಯಲಾರದೇ‌ ಹೋದೆ ಎಂದನು.


ಅದು ಸರಿ.... ನಿಮಗೆ ? ಮದುವೆ.... ಮಕ್ಕಳು...ಮನೆಯವರು??? ಎಂದ

ಅವನ ಮುಖ ಒಮ್ಮೆ ನೋಡಿ...ನಡೆದುದೆಲ್ಲವಾ ಹೇಳಿದಳು ಸಹನಾ.


ಛೇ‌ ಹಾಗೆ ಆಗಬಾರದಿತ್ತು.... ಎಂದನು ಅರವಿಂದ್.ಹೀಗೆ ದಿನಗಳು ಉರುಳಿದವು ಸಹನಾ ಮತ್ತು ಅರವಿಂದ್ ಒಳ್ಳೆಯ ಸ್ನೇಹಿತರು.... ಇವಳ ಕಷ್ಟ ಸುಖ ಎಲ್ಲದರಲ್ಲೂ ಅವನು ಭಾಗಿ.


ಅಂತೆಯೇ ಸಹನಾ ಕೂಡ.......


ಸಹನಾಳ ಜೀವನದಲ್ಲಿ ಅರವಿಂದ್ ನಗುವೆಂಬ ಗುಲಾಬಿಯನ್ನು ಅವಳ ತುಟಿಯಲ್ಲಿ ಅರಳಿಸಿದ್ದಾನೆ.


Rate this content
Log in

Similar kannada story from Romance