ಕಥೆ: ಕೃತಕ
ಕಥೆ: ಕೃತಕ
ಲೇ ಲೀಲಾತಗೋ ನೀನು ಹೇಳಿದಸಾಮಾಗ್ರಿಗಳನ್ನು ತಂದ್ದಿದ್ದೀನಿ.. ಮುತ್ತು ಹೇಳಿದಾಗ ಬಂದೆಎಂದು ಹತ್ತಿರ ಹೋದಾಗ ಮತ್ತೆ ಅದೇವಾಸನೆ....
ರೀ ನಿಮಗೆ ಎಷ್ಟುಸಲ ಹೇಳಿದ್ದೀನೀ ಈಗಲಾದರೂ ಸಿಗರೇಟುಸೇದುವುದು ಬಿಡಿ.. ಎಂದು ಲೀಲಾ ಬೆಸರಿಸಿಕೋಂಡಳು.
ದಿನವೆಲ್ಲಾ ಕಷ್ಟಪಟ್ಟು ಆಟೋಓಡಿಸುತ್ತಿದ್ದ ..ಬರುವ ದುಡಿಮೆಯಲ್ಲಿ ಹೆಂಡತಿಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದವಿಗೆ ಯಾಕೋ ಸಿಗರೇಟುಸೇದುವ ಚಟಅಂಟಿಕೊಂಡಿತ್ತು.
ಒಂದುದಿನ ಮನೆಗೆಬೇಗ ಬಂದವನೇ ಮುತ್ತು ಮಲಗಿಬಿಟ್ಟ ಕಾಲುನೋವು ಎಂದು...
ಲೀಲಾ ಗೆ ಗಾಬರಿ... ಅಲ್ಲಿ ಮೆಡಿಕಲ್ಸ್ಟೋರ್ ನಲ್ಲಿ ಮಾತ್ರೆ ತಂದುಕೊಟ್ಟಳು.
ಹೀಗೆ ಎರಡುಮೂರು ದಿನಕಳೆದಿತ್ತು ಮುತ್ತುವಿಗೆ ಕಾಲು ಯಾಕೋ ತನ್ನಸತ್ವವನ್ನು ಕಳೆದುಕೊಂಡಂತೆ ಭಾಸವಾಯಿತು.
ತಕ್ಷಣ ಆಸ್ಪತ್ರೆಗೆತೋರಿಸಿದಾಗ ಎಲ್ಲವನ್ನೂ ಪರೀಕ್ಷಿಸಿದ ವೈದ್ಯರುಎಕ್ಸರೇ ತೆಗೆದುನೋಡಿದರೆ.... ಎಡಗಾಲಿನ ನರದಲ್ಲಿ ರಕ್ತಸಂಚಾರ ನಿಂತು ಆಜಾಗದಲ್ಲಿ ಗ್ಯಾಂಗ್ರಿನ್ ಆಗಿತ್ತು ತಕ್ಷಣವೇ ಅಪರೇಷನ್ಮಾಡಿ ಅವನ ಕಾಲು ಮುಕ್ಕಾಲು ಭಾಗ ತೆಗೆದುಬಿಟ್ಟರು ಕಾರಣ ಅವನದುಶ್ಚಟ.
ಲೀಲಾಗೆ ದಿಕ್ಕು ತೋಚದಾಯಿತು.
ಮೂರುತಿಂಗಳು ಕಳೆಯುವಷ್ಟರಲ್ಲಿ ಡಾಕ್ಟರ್ ಸಲಹೆ ಮೇರೆಗೆ ಮುತ್ತು ಕೃತಕ ಕಾಲು ಜೋಡಿಸಿದರು.
ಮುತ್ತುಎಂದಿನಂತೆ ಆಟೋ ಓಡಿಸುವುದರ ಜೊತೆಗೆ ದುಷ್ಟಟಗಳನ್ನು ಬಿಟ್ಟಿದ್ದಾನೆ.
