ಪ್ರೇಮ ಸೇತುವೆ
ಪ್ರೇಮ ಸೇತುವೆ
ನನ್ನಾಸೆಯ ಹೂವೇ..... ಬೆಳದಿಂಗಳ ಚೆಲುವೆ......
ವಾಹ್ ಎಂತಹಾ ಮಧುರವಾದ ಗೀತೆ.... ಎಂದು ಮೈಮರೆತು ಹಾಡಿನಲ್ಲಿ ತಲ್ಲೀನರಾಗಿದ್ದ ಸುಮಂತ್ ತಲೆಗೆಯಾರೋ ಮೊಟಕಿದಂತಾಯಿತು.... ತಕ್ಷಣ ಕಣ್ಣು ಬಿಟ್ಟರೆ ಅಕ್ಕಪರಿಮಳ ಲೋ....ಏನೋ ಕನಸ್ಸಾ??? ಏಳು ರೆಡಿಯಾಗು ಇವತ್ತು ಆಫೀಸಿನ ಮೊದಲನೇ ದಿನ....ಭಾವ ನಿನ್ನಬಿಟ್ಟು ಹಾಗೆ ಆಫೀಸ್ಗೆ ಹೋಗುತ್ತಾರೆ.... ಎಂದಳು.
ತನ್ನಲ್ಲಾ ದಿನಚರಿ ಮುಗಿಸಿ ಶಿಸ್ತಾಗಿ ತಯಾರಾಗಿ ಆಫೀಸ್ಗೆ ಬಂದ ಸುಮಂತನನ್ನು ರಿಸೆಪ್ಷನಿಸ್ಟ್ ಅವೆಯಿಕ್ಕದೆನೋಡಿದಳು....ಆ ನೋಟಕ್ಕೆ ಮುಜುಗರವಾಯಿತು ಸುಮಂತ್ ಗೆ...
ತನ್ನ ಚೆಲುವಿನ ಬಗ್ಗೆ ಅವನಿಗೆ ಹೆಮ್ಮೆಕೂಡ... ಮ್ಯಾನೇಜರ್ ಪ್ರದೀಪ್ ಬಂದು ಒಬ್ಬರನ್ನೊಬ್ಬರನ್ನು ಪರಿಚಯಿಸಿದ.
ಎರಡು ಮೂರುವಾರ ಕಳೆಯುವಷ್ಟರಲ್ಲಿ, ಎಲ್ಲರನ್ನೂ ಪ್ರೀತಿಯಿಂದಮಾತನಾಡಿಸಿ ಎಲ್ಲರ ಮೆಚ್ಚುಗೆಗೆಪಾತ್ರನಾದ.
ಎಂದಿನಂತೆಬೆಳಿಗ್ಗೆ ಆಫೀಸಿಗೆಬಂದಾಗ ತನ್ನಪಕ್ಕದ ಕ್ಯಾಬಿನ್ ಅಲ್ಲಿ..ಕುಳಿತ ಯುವತಿಯನ್ನು ಎಲ್ಲರೂ ಬಂದು ಬಂದು ಮಾತನಾಡಿಸುತ್ತಿದ್ದರು...ಅವಳ ಕಣ್ಣಲಿ ನೀರು...
ಸುಮಂತ್ನಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ....ಅವಳ ಮುಖವನ್ನು ಒಮ್ಮೆ ನೋಡಿದ ..
ಪಕ್ಕದಲ್ಲಿ ಕೂತ ಶಶಾಂಕ್ನ ಕೇಳಿದಾಗ...
ಸಂಧ್ಯಾಳ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ತಿಳಿಸಿದನು.
ಮದುವೆಯಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ನವೀನ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡನು..
ಜೀವನದ ಪಯಣದಲಿ ಜೊತೆಯಾಗಿ ನಡೆಯಬೇಕಿದ್ದವನು ಅರ್ಧದಾರಿಯಲ್ಲಿ ತನ್ನ ಬಾಳ ಪಯಣವನ್ನು ನಿಲ್ಲಿಸಿದಾಗ ಸಂಧ್ಯಳಿಗೆ ಬರಸಿಡಿಲು ಬಡಿದಂತಾಯಿತು.
ಎಲ್ಲಾ ಮುಗಿಸಿ ಈಗ ತಾನೇ ಆಫೀಸಿಗೆ ಬಂದಿದ್ದಳು.
ಎರಡು ಮೂರು ತಿಂಗಳು ಕಳೆಯುವಷ್ಟರಲ್ಲಿ ಸುಮಂತ್ ಗೆ ಸಂಧ್ಯಾಳ ಮುಗ್ದತೆ ಮತ್ತು ಸರಳತೆಗೆ ಮಾರುಹೋದ.
ಒಮ್ಮೆ ಗೆಳೆಯ ಮತ್ತು ಸಹೋದ್ಯೋಗಿ ಶಶಾಂಕನ ಬಳಿ ತನ್ನ ಮನದಿಂಗತವನ್ನು ತಿಳಿಸಿದಾಗ....
ನೋಡು ನಿನ್ನ ಆದರ್ಶವನ್ನು ನಾನು ಮೆಚ್ಚುತ್ತೇನೆ...
ಆದರೆ ಇದೇ ಉತ್ಸಾಹ ಜೀವನದ ಕೊನೆಯವರೆಗೂ ಇರಬೇಕು ಎನ್ನಲು ...
ಇಲ್ಲ ಕಣೋ ಆ ರೀತಿ ಎಂದೂ ಆಗಲ್ಲ... ನೀನೇ ನಮ್ಮ ಪ್ರೀತಿಗೆ ಸೇತುವೆಯಾಗಿ ನಿಲ್ಲಬೇಕು ಎಂದಾಗ
ಗೆಳೆಯನ ಕೈ ಹಿಡಿದು ಮೆಲ್ಲಗೆ ಒತ್ತಿ ಭರವಸೆಯನ್ನು ಇತ್ತ ಶಶಾಂಕ್ನಗೆ ಮನದಲ್ಲೇ ವಂದನೆ ಸಲ್ಲಿಸಿದ.
