Jayashree Kishore

Abstract Classics Others

4.5  

Jayashree Kishore

Abstract Classics Others

ಕಥೆ: ಕಾಲ ಚಕ್ರ ಉರುಳಿದಾಗ

ಕಥೆ: ಕಾಲ ಚಕ್ರ ಉರುಳಿದಾಗ

3 mins
460


ಅಮ್ಮ ಅಮ್ಮ ಎಂದು ಜೋರಾಗಿ ಕೂಗಿದ ಮಗನ ಮಾತಿಗೆ ಮಂಚದಿಂದ ಮೆಲ್ಲಗೆ ಇಳಿದು ತನ್ನ ಊರುಗೋಲನ್ನು ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದ ಅಮ್ಮನ ನೋಡಿ ಮಗ ರಾಜೇಶ್ ನ ಮೈ ಹತ್ತಿ ಉರಿಯಿತು, ಏನಮ್ಮ ಅಷ್ಟು ಹೋತ್ತಿಂದ ಬಡಕೊತಾ ಇದ್ದೀನಿ.... ನೀನು ಈಗ ಬರ್ತಾ ಇದ್ದಿಯಾ ! ಅಂದಾಗ 

 ಅಲ್ವೋ ನಿನಗೆ ಗೊತ್ತು ನನಗೆ ಮಂಡಿ ನೋವಿದೆ ತಕ್ಷಣ ಎದ್ದು ಬರಕ್ಕೆ ಆಗಲ್ಲ ಅಂತ , ನೀನೆ ಒಂದು ಹೆಜ್ಜೆ ಬರಬಾರದೇ ಎಂದಾಗ ಸರಿ ಸರಿ ನಿಂದು ಇದ್ದದ್ದೇ ಪುರಾಣ, ನಾನು ಸುಮ ಮೂರು ದಿನ ಇರೋಲ್ಲ ಊರಿಗೆ ಹೋಗ್ತಾ ಇದ್ದೀವಿ ನೀನು ಮನೆ ಕಡೆ ನೋಡಿಕೋ ಎಂದು ಹೇಳಿದಾಗ , ಸರೋಜಮ್ಮನ ಮನಸ್ಸು ಮರುಗಿತು . 


ಇವನು ನಾ ಹೆತ್ತ ಮಗನಾ ಚಿಕ್ಕ ವಯಸ್ಸಿನಲ್ಲೇ ಗಂಡನ ಕಳೆದು ಕೊಂಡ ತಾನು ಮಗನನ್ನು ಹಾಕಿ ಬೆಳೆಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಎಲ್ಲರೂ ಕೈ ಬಿಟ್ಟಾಗ ತಾನು ಕಲಿತ ಹೊಲಿಗೆ ಕೆಲಸದ ಜೊತೆ ಜೊತೆಗೆ ಎರಡೆರಡು ಮನೆಯಲ್ಲಿ ಹಗಲೂ ರಾತ್ರಿ ಎನ್ನದೆ ಅಡುಗೆ ಮಾಡಿ, ಚೂರು ಕೂಡ ಕಷ್ಟದ ಅರಿವಾಗದಂತೆ ಬೆಳೆಸಿದನ್ನು ಮರೆತನೇ?


 ಒಮ್ಮೆ ಹೈಸ್ಕೂಲ್ ಓದುವಾಗ ತಾನು ಕ್ಲಾಸಿಗೆ ಸೆಕೆಂಡ್ ಬಂದಾಗ ಅತ್ತ ಮಗನ ಮುಖವನ್ನು ನೋಡಿ ಪರವಾಗಿಲ್ಲ ಇನ್ನೂ ಚೆನ್ನಾಗಿ ಓದಿ ಫಸ್ಟ್ ಬಾ ಎಂದು ಸಮಾಧಾನ ಪಡಿಸಿದ್ದಳು. ಮಗ ರಾಜೇಶ ಬುದ್ಧಿವಂತ, ಕಷ್ಟಪಟ್ಟು ಇಂಜಿನಿಯರಿಂಗ್ ಓದಿ ಒಳ್ಳೆಯ ಕೆಲಸಕ್ಕೆ ಸೇರಿದ, ಅಲ್ಲೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಮೀರಾಳನ್ನು ಮದುವೆಯಾಗುವುದಾಗಿ ಹೇಳಿದಾಗ ತಾಯಿ ‌ಸಂತೋಷದಿಂದ ಒಪ್ಪಿದರು. 

 

ಇಬ್ಬರೂ ಸೇರಿ ಒಂದು ಫ್ಲಾಟ್ ಖರೀದಿಸಿರು.

ಎಲ್ಲವೂ ಹೊಸತರಲ್ಲಿ ಚೆನ್ನಾಗಿ ಇತ್ತು, 

ಮೊದ ಮೊದಲು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಸೊಸೆಗೆ ಒಂದು ದಿನ ಆರೋಗ್ಯ ತಪ್ಪಿ ಮಲಗಿದಾಗ ಮೀರಾಳ ನಿಜವಾದ ಮುಖದ ಪರಿಚಯವಾಯಿತು, ಮಗನನ್ನು ಕೂಡ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ

ಮಾಡಿಕೊಂಡಳು.


ಒಂದು ದಿನ ಸರೋಜಮ್ಮನ ತಲೆತಿರುಗಿ ಬಿದ್ದಾಗ ರಾಜೇಶ್ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದ , ಆಕೆಯನ್ನು ನೋಡಿದ ಡಾಕ್ಟರ್ ಶ್ರೀಧರ್ ನಿಮ್ಮ ತಾಯಿಯವರಿಗೆ ಹೈ ಬಿಪಿ ಇದೆ, ಜಾಗರುಕತೆಯಿಂದ ನೋಡಿಕೊಳ್ಳಿ ಮಾತ್ರೆ ಮಾತ್ರ ನಿಲ್ಲಿಸಬಾರದು ಎಂದಾಗ ಸರಿ ಎಂದ.

ಹೀಗೆ ತಿಂಗಳು ಕಳೆಯಿತು ಈಗ ಸಲ್ಪ ಸುಧಾರಿಸುತ್ತಿದ್ದರು ಸರೋಜಮ್ಮ, ಆದರೆ ಮುಂಚಿನ ರೀತಿ ಮೈಯಲ್ಲಿ ಶಕ್ತಿಯಿಲ್ಲ ಎಂದು ಕೊಂಡರು.

ಹೀಗೆ ಮಲಗಿದ ತನ್ನ ಮೇಲೆ ಎಲ್ಲರಿಗೂ ತಾತ್ಸಾರ ಎಂದು ಕೊಂಡವರು.... ಒಂದು ದಿನ ಪಕ್ಕದ ಮನೆಯ ಮಗು ಬಂದಾಗ ತನ್ನ ಮನೆ, ಮನೆಯವರ ಬಗ್ಗೆ ವಿಚಾರಿಸಿದಾಗ...ತಾನು, ಅಪ್ಪ ಅಮ್ಮ, ಎಂದವ.. ಮತ್ತೆ ಪದ್ಮಮ್ಮಜ್ಜಿ ಇದ್ದಾರೆ ಆದರೆ ಅವರು ಇಲ್ಲಿ ಬರಲ್ಲ, ಯಾಕೆ ಎಂದಾಗ ಅವರು ಸಿನಿಯರ್ ಸಿಟಿಜನ್ ಹೋಂ ಅಲ್ಲಿ ಇರುವುದಾಗಿಯೂ, ತನ್ನನ್ನು ಆಗಾಗ ಅಲ್ಲಿ ತನ್ನ ಅಪ್ಪ ಕರೆದುಕೊಂಡು ಹೋಗುವುದಾಗಿ ಹೇಳಿದ ನೆನಪು .


ಹುಷಾರು ಎಂದು ಹೊರಟ ಮಗನಿಗೆ ಕೈ ಬೀಸಿ ಮೆಲ್ಲಗೆ ಬಂದು ಕುಳಿತರು, ತಾನೇ ಕೈಲಾದದ್ದು ಅಡುಗೆ ಮಾಡಿ ಊಟ ಮಾಡಿ ಮಲಗಿದ ಸರೋಜಮ್ಮನಿಗೆ ನಾನು ಮಗನಿಗೆ ಭಾರವಾಗಿದ್ದೀನಾ, ಹೀಗೆ ಎಷ್ಟು ದಿನ ಈ ನೋವಲ್ಲಿ ಜೀವನ ನಡೆಸುವುದು ಎಂದು ಕೊಂಡು ಒಂದು ನಿರ್ಧಾರಕ್ಕೆ ಬಂದರು.


ಬೆಳಿಗ್ಗೆ ಎದ್ದು ತನ್ನ ಬಟ್ಟೆ ಬರೆ ಪ್ಯಾಕ್ ಮಾಡಿ ಅಷ್ಟೋ ಇಷ್ಟೋ ಕೂಡಿಟ್ಟಿದ್ದ ಹಣವನ್ನು ಹಿಡಿದು , ಕೆಳಗಡೆ ಬಂದು ಸೆಕ್ಯೂರಿಟಿ ಗಾರ್ಡ್ಗೆ ಸಲ್ಪ ಹೊರಗೆ ಹೋಗಿ ಬರುತ್ತೇನೆ ಎಂದು ಅಲ್ಲೇ ಪಕ್ಕದ ಮನೆಯ ಪದ್ಮಮ್ಮನವರ ಮೊಮ್ಮಗ ವಿನಯ್ ಗಾರ್ಡನ್ ಏರಿಯಾದಲ್ಲಿ ಆಡುತ್ತಿದ್ದವನನ್ನು ಕರೆದು ಪುಟ್ಟ ಒಂದು ಆಟೋ ಹಿಡಿದು ತರ್ತ್ತಿಯಾ ಎಂದಾಗ

ಹೂ ಅಜ್ಜಿ ಎಂದಾಗ ಅದೇ ಮಗು ನಿಮ್ಮ ಅಜ್ಜಿ ಇದ್ದಾರಲ್ಲಾ ಅಲ್ಲಿಗೆ ಎಂದಾಗ ಹೂ ಎಂದು ಓಡಿದ, ಆಟೋ ಹತ್ತಿ ಪುಟ್ಟ ಅಂಕಲ್ ಗೆ ಅಡ್ರೆಸ್ಸ್ ಹೇಳು ಎಂದಾಗ ಯಾವುದೋ ಸಿನೀಯರ್ ಸಿಟಿಜನ್ ಹೋಂ ಎಂದ.


ಭಾರವಾದ ಮನಸ್ಸು ಹೊತ್ತು ಬಂದ ಸರೋಜಮ್ಮನಿಗೆ‌ ಅಮ್ಮ ಬಂತು ನೀವು ಹೇಳಿದ ಜಾಗ ಎಂದಾಗ.... ಸರಿ ಎಂದು ಇಳಿಯಲು ಕಷ್ಟ ಪಡುತ್ತಿದ್ದ ತನ್ನನ್ನು ಮೆಲ್ಲಗೆ ಇಳಿಸಿ ಅಮ್ಮ ಬನ್ನಿ ಒಳಗೆ ಬಿಟ್ಟು ಬರುತ್ತೇನೆ ಎಂದ , ಅವನಿಗೆ ಹಣ ಕೊಟ್ಟು ಧನ್ಯವಾದಗಳನ್ನು ಹೇಳಿ ಕಳುಹಿಸಿದಳು,  


ಆಫೀಸಿಗೆ ಬಂದು ಪದ್ಮಮ್ಮನ ಕರಿಯುವಂತೆ ಕೇಳಿದಾಗ, ಅಲ್ಲಿನ ಮ್ಯಾನೇಜರ್... ಆಯಾ ಕಮಲಮ್ಮಗೆ.. ಅಲ್ಲೇ 

ವಾಕಿಂಗ್ ಮಾಡ್ತಾ ಇರಬಹುದು ನೋಡು... ಎಂದು ಕುಳಿತು ಕೊಳ್ಳಲು ಹೇಳಿದರು.


ಬಂದ ಪದ್ಮಮ್ಮ ಸರೋಜಮ್ಮನ ನೋಡಿದಾಗ ಪರಿಸ್ಥಿತಿ ಅರಿವಾಯಿತು, ಮೆಲ್ಲಗೆ ಕೈ ಅಮುಕಿ....ತಾವೇ ಅಡ್ಮೀಷನ್ ಮಾಡಿಸಿ....ಬನ್ನಿ ನಮ್ಮ ಗುಂಪಿನ ಹೊಸ ಸದಸ್ಯರು...

ಎಂದು ನಕ್ಕರು .

ಕಣ್ಣಂಚಿನಲ್ಲಿ ನೀರು ಜಿನುಗಿತು, ಯಾಕೆ ಅಳ್ತೀರಾ ಅಳಬೇಕಾಗಿದ್ದು ಮಕ್ಳು, ಚಿಗುರಿದ ಎಲೆ ಹಣ್ಲೆಲೆಯಾಗಿ ಉದುರಲೇ ‌ಬೇಕು.... ಇದು ಪ್ರಕೃತಿಯ ನಿಯಮ. ಬನ್ನಿ ನನ್ನ ರೂಮ್ ಅಲ್ಲಿ ಒಂದು ಬೆಡ್ ಖಾಲಿ ಇದೆ, ನಾನು ನಿಮಗೆ ನೀವು ನನಗೆ ಇರುವವರೆಗೂ.....


ಇಂದು ನಾವು , ನಾಳೆ ಅವರಾಗಬಹುದು ಇಲ್ಲಿನ ಅತಿಥಿಗಳು

ಕಾಲ ಚಕ್ರ ಉರುಳಿದಾಗ.....




ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ ಎಂದು ಆಶಿಸುವ



Rate this content
Log in

Similar kannada story from Abstract