ಏನೆಂದು ಹೆಸರಿಡಲಿ.....
ಏನೆಂದು ಹೆಸರಿಡಲಿ.....
ರಚ್ಚು ನಿನ್ನ ಸೊಷಿಯಲ್ ನೊಟ್ಸು ಕೊಡೇ.... ಕಾಪಿ ಮಾಡಿ ನಾಳೆ ತಂದು ಕೊಡ್ತೀನಿ ಎಂದು ಅನಂತ ಹೇಳಲು ಹೇ....ಹೊಗೋ... ಕ್ಲಾಸ್ ನಲ್ಲಿ ಬರೆದುಕೊಳಕ್ಕೆ ಏನೋ ರೋಗ ಎಂದು ...ಸಿಡಿಕಿದರೂ ...ಕೈ ಮುಂದೆ ಚಾಚಿ ತಗೋ ಬೆಳಿಗ್ಗೆ ಬರ್ತಾ ತರಬೇಕು ಆಯ್ತು.... ಎನ್ನಲು ಹೂ ಎಂದು ಮುಂದೆ ಮುಂದೆ ಹೊರಟಾಗ... ಏಯ್ ತಡೀ ನಾನು ಬರ್ತೀನಿ ಎಂದು ಜೊತೆ ಜೊತೆಗೆ ಹೆಜ್ಜೆ ಹಾಕಿದಳು.
ರಕ್ಷಿತಾ ತಂದೆ ಮತ್ತು ಅನಂತನ ತಂದೆ ಪಿಡಬ್ಲ್ಯೂಡಿ ಯಲ್ಲಿ ಕೆಲಸ ಮಾಡುತಿದ್ದರು.... ಸರ್ಕಾರಿ ವಸತಿಗೃಹದಲ್ಲಿ ವಾಸ...
ಇಬ್ಬರು ಕಂಠಸ್ಯ ಗಳಸ್ಯ.... ರಚ್ಚು ತಂದೆ ಅಶೋಕ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು... ಅನಂತನ ತಂದೆ ಪರಮೇಶ್ ಎರಡನೇ ದರ್ಜೆ ಗುಮಾಸ್ತರಾಗಿದ್ದರು.
ಅವರ ಗೆಳೆತನಕ್ಕೆ ಅಧಿಕಾರ ಎಂದೂ ಅಡ್ಡಿ ಬಂದಿರಲಿಲ್ಲ...
ಹಬ್ಬ ಹರಿದಿನಗಳಲ್ಲಿ ಇವರ ಮನೆಗೆ ಅವರು ಅವರ ಮನೆಗೆ ಇವರು ಖಾಯಂ ಅತಿಥಿಗಳು.
ಇನ್ನೂ ಪರಮೇಶನ ತಾಯಿ ರುದ್ರಮ್ಮ ಮತ್ತು ರಚ್ಚು ತಾಯಿ ರಮಾ ಇಬ್ಬರೂ ಆಪ್ತ ಗೆಳತಿಯರಾಗಿದ್ಜು... ಎಲ್ಲೇ ಹೋಗಲಿ, ಬರಲಿ ಒಟ್ಟಿಗೆ ಇರುತ್ತಿದ್ದರು.
ಕಾಲ ಕಳೆದಂತೆ ಮಕ್ಕಳು ದೊಡ್ಡವರಾದ ಮೇಲೆ ವಸತಿಗೃಹ ಬಿಟ್ಟು ಬೇರೆಡೆ ಹೋಗಬೇಕಾದಾಗ ಎಲ್ಲರ ಕಣ್ಣಲ್ಲೂ ನೀರು...
ಅನಂತ ಕಣ್ಣಲ್ಲೇ ಹೋಗಿ ಬರುವುದೆಂದು ಸನ್ನೆ ಮಾಡಿದಾಗ...ಅವನ ಹತ್ತಿರ ಬಂದು ಕೈ ಹಿಡಿದು ಮೆಲ್ಲಗೆ ಅಮುಕಿ ಕೈ ಬೀಸಿದಳು.
ವರ್ಷಗಳು ಹೀಗೇ ಕಳೆದವು... ಮೊದ ಮೊದಲು ಪರಮೇಶ ನಿಂದ ಅಶೋಕನಿಗೆ, ಅಶೋಕನಿಂದ ಪರಮೇಶನಿಗೆ ಕಾಗದಗಳು ಬರತೊಡಗಿದವು..ನಂತರ ನಿಂತು ಹೋದಾಗ ಅವರವರ ಜೀವನದಲ್ಲಿ ಅವರವರು ತಮ್ಮದೇ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದು ಕೊಂಡರು.
ತಂದೆ ಒಂದು ದಿನ ರಚ್ಚು ಬಾ ಇಲ್ಲಿ... ಆಯ್ತಾ ಕೆಲಸ ಎಂದಾಗ...ಹೂ ಅಣ್ಣಾ ಈಗ ಲಾಗ್ ಔಟ್ ಮಾಡಿದೆ... ಎನ್ನಲು.
ನೋಡು ಮಗು... ನಿನಗೆ ಒಂದು ಹುಡುಗನ ನೋಡಿದ್ದಿನೀ... ಹೇಗೂ ನಿಂದು ಓದು, ಕೆಲಸ ಎಲ್ಲಾ ಆಯ್ತು....ನಮಗೂ ವಯಸ್ಸಾಯಿತು.... ಜವಾಬ್ದಾರಿ ಕಳೆದುಕೊಳ್ಳೋಣಾ ಅಂತಾ ನಾನು ನಿಮ್ಮ ಅಮ್ಮ ಯೋಚನೆ ಮಾಡಿ ನಿರ್ಧಾರಕ್ಕೆ ಬಂದಿದ್ದೇವೆ....
ನೀನು ಒಪ್ಪಿದರೆ ಮಾತ್ರ ಎಂದಾಗ.. ಅಣ್ಣಾ ಅದು ಇಷ್ಟು ಬೇಗ ನಾ??? ಎಂದವಳು....ಏನೋ ಯೋಚಿಸುತ್ತ....
ಸರಿ ಅಣ್ಣಾ ನಿಮ್ಮಿಷ್ಟ.. ಎಂದಳು.
ನಂಗೆ ಗೊತ್ತು ಮಗಳೇ ನೀನು ನನ್ನ ಮಾತು ಮೀರಲ್ಲಾ ಅಂತ... ಅದೇ ನಮ್ಮ ಅನಂತು ಇದ್ದಾನಲ್ಲ ಅವನ ಬಗ್ಗೆ ನಿನ್ನ ಅಭಿಪ್ರಾಯ ಎನ್ನಲು...
ಅನಂತು....
ಅದೇಮಾ ನನ್ನ ಗೆಳೆಯ ಪರಮೇಶನ ಮಗ, ನಿನ್ನ ಬಾಲ್ಯದ ಗೆಳೆಯ ಅನಂತು ಎನ್ನಲು... ಅವಳಲ್ಲಿ ನವಿರಾದ ಭಾವನೆ ಸುಳಿದಾಡಿತು...
ಒಂದು ದಿನ ಸಂಜೆ... ಮನೆಯ ಮುಂದೆ ಕಾರು ನಿಂತಾಗ... ಸುಂದರವಾದ ಮೈಕಟ್ಟು ಹೊಂದಿರುವ ಹರೆಯದ ತರುಣನನ ನೋಡಿ... ರಕ್ಷಿತಾ... ಅಮ್ಮ ನೋಡು ಯಾರೋ ಬಂದ ಹಾಗಾಯಿತು ಎನ್ನಲು...
ರೀ ಬನ್ನಿ ಇಲ್ಲಿ ನೋಡಿ ಎನ್ನಲು... ಅಶೋಕ್ ತಮ್ಮ ಕನ್ನಡಕ ಸರಿಮಾಡಿಕೊಂಡು... ಯಾರು ನೀವು ಎನ್ನಲು ಅಂಕಲ್ ನಾನು ಅನಂತು ಎಂದಾಗ...
ಬಾರಯ್ಯ... ಎಲ್ಲಿ ನಿಮ್ಮ ತಂದೆ..... ಎನ್ನಲು ಅಪ್ಪನಿಗೆ ಸಲ್ಪ ಆರಾಮು ಇಲ್ಲಾ.... ಎಂದನು.
ಬಾ ಬಾ ... ಒಳಗೆ...ಲೇ..... ಇವನು ನಮ್ಮ ಅನಂತು.... ಪರಮೇಶನ ಮಗ ಎಂದು..
ಅನಂತು ಇವಳು ನೆನಪಿಲ್ವಾ ರಕ್ಷಿತಾ... ಎಂದಾಗ..
ನಮಸ್ಕಾರ ....ಎನ್ನಲು ಸಾಕು ಕಣೊ ನಿನ್ನ ನಾಟಕ ಎಂದು... ರಕ್ಷಿತಾ ಅವನ ಕಿವಿ ಹಿಂಡಿದಳು ಸಲುಗೆಯಿಂದ..
ಲೇ ರಚ್ಚು ....ಬಿಡೇ ನಾಳೆ ನಿನ್ನ ಮದುವೆಯಾಗುವವನ ಕಿವಿ ಹಿಡಿಯೋದೇ ಎಂದು ನಕ್ಕರು...
ನಾಚಿಕೆಯಿಂದ ಕೆನ್ನೆ ಕೆಂಪಾಗಿ ಒಳಗೆ ಓಡಿದಾಗ....ಮನ ಹಾಡೊಂದು ಗುನುಗಿತು.... ಏನೆಂದು ಹೆಸರಿಡಲಿ ಈ ಚೆಂದ ಅನುಭವಕೆ.....
