Jayashree Kishore

Classics Inspirational Others

4  

Jayashree Kishore

Classics Inspirational Others

ನಿನ್ನ ನೀನು ಮರೆತರೇನು ಸುಖವಿದೆ

ನಿನ್ನ ನೀನು ಮರೆತರೇನು ಸುಖವಿದೆ

2 mins
264



ಯಾಕೋ ಮೈ ಕೈ ಎಲ್ಲಾ ನೋವು ಏಳಾಲಾರದಷ್ಟು ಆಲಸ್ಯ....

ಅಯ್ಯೋ ರಾಮ ಈ ಅಲಾರಾಂ ಬೇರೆ ಬಡಕೋತಾ ಇದೆ‌ , ಬಿಟ್ಟರೆ ಊರಿನವರನ್ನೆಲ್ಲಾ ಎಬ್ಬಿಸುತ್ತೆ ಎಂದು ಒಂದು ತಲೆ ಮೇಲೆ ಬಡಿದು ಸುಮ್ಮನಾಗಿಸಿದಳು ಶಾಕುಂತಲ.


ಪಕ್ಕದಲ್ಲೇ ಮಲಗಿದ್ದ ಪತಿರಾಯ ಗೊರಕೆ ಹೊಡೆಯುವದರಲ್ಲಿ ಮಗ್ನ....

ಹಾಗೂ ಹೀಗೂ ಸುಧಾರಿಸಿಕೊಂಡು ನಿಧಾನವಾಗಿ ಬಚ್ಚಲು ಮನೆಗೆ ನಡೆದು ಮುಖ ತೊಳೆಯಲು ಹೋದಾಗ ಮೈಯೆಲ್ಲಾ ಚಳಿಗುಳ್ಳೆಗಳು.


ಮುಖ ತೊಳೆದು ಅಡುಗೆ ಮನೆಗೆ ಬಂದು ಕಾಫಿ ಡಿಕಾಕ್ಷನ್ ಹಾಕಲು ಹೊರಟವಳಿಗೆ... ಕಾಫಿ ಪುಡಿ ಖಾಲಿ ಎಂದು ಗೊತ್ತಾಯಿತು...


ಅಯ್ಯೋ ದೇವ್ರೆ ಒಳ್ಳೆ ಕೆಲಸ ಆಯಿತಲ್ಲ...ಇನ್ನೂ ಆಯ್ತು ನನ್ನ ಕಥೆ....ಇವರು ಎದ್ದರೆ.... ಕಾಫಿ ಕುಡೀದೆ ....ಮುಂದಿನ ಕೆಲಸ ಮಾಡೋದೇ‌ ಇಲ್ಲ ಇವರು....


ಇನ್ನು ಮಗ ಶಂಭುವಿಗೆ ಬ್ಲಾಕ್ ಕಾಫಿ ಬೇಕೇ ಬೇಕು ಎದ್ದ ಕೂಡಲೇ..... ಅಯ್ಯೋ ಇವತ್ತು ಬೇರೆ ನನ್ನ ಕೈಲಿ ಆಗ್ತಾ ಇಲ್ಲ.... ಇವತ್ತೇ ಇದೆಲ್ಲ ಆಗಬೇಕಾ??? ಏನು ಮಾಡುವುದು ಎಂದು....


ರೀ ಪಂಕಜಾ ಎಂದು ಪಕ್ಕದ ಮನೆಯವರನ್ನು ಕರೆದಾಗ ರಂಗೋಲಿ ಹಾಕುತ್ತಿದ್ದ ಪಂಕಜಾ....

ಏನ್ರೀ ಬೆಳಿಗ್ಗೆ ನನ್ನ ನೆನೆಸಿಕೊಂಡ್ಡರ್ರೀ... ಏನು ಸಮಾಚಾರ ಎಂದು ನಕ್ಕರು.


ರೀ ಸಲ್ಪ ಕಾಫಿ ಪುಡಿ ಬೇಕಿತ್ತು.... ಎಂದು ಕಪ್ ಮುಂದೆ ಹಿಡಿದಾಗ... ಪಂಕಜಾ.... ಶಾಕುಂತಲ ಮುಖ ನೋಡಿ....ರೀ ಶಕ್ಕು ಯಾಕ್ರೀ ಮುಖ ಬಾಡಿದೇ‌ ಹುಷಾರಿಲ್ಲವಾ????

ಎಂದರು ಹತ್ತಿರ ಬಂದು...


ಹೂ ಕಣ್ರೀ ತುಂಬಾ ಸುಸ್ತು ಯಾಕೋ ಜ್ವರ ಬಂದ ಹಾಗೆ ಇದೆ... ಎಂದಳು...

ರೀ ಶಕ್ಕು ಒಂದು ಮಾತು ಹೇಳ್ತೀನಿ ಬೇಜಾರು ಮಾಡ್ಕೋಬೇಡಿ.... ಒಂದು ಸಾರಿ ನಿಮ್ಮ ಮುಖ ಕನ್ನಡಿ ಮುಂದೆ ನಿಂತು ನೋಡಿಕೊಂಡು ಇದ್ದೀರಾ... ಹೆಚ್ಚು ಕಡಿಮೆ ನಾನು ನೀವು ಒಂದೇ ವಾರಿಗೆಯವರೇ.... ನೋಡಿ ಹೇಗೆ ಆಗಿದ್ದೀರಾ..... ಕೂದಲು ಬೆಳ್ಳಗಾಗಿದೇ....ಮುಖ ನಿಮ್ಮ ವಯಸ್ಸಿಗಿಂತ ಹೆಚ್ಚು ಹೇಳುತ್ತಿದೆ ಎಂದಾಗ ಶಾಕುಂತಲಳಿಗೆ‌ ಅಳುವೇ ಬಂತು.


ರೀ ಬೇಜಾರು ಮಾಡ್ಕೋಬೇಡಿ ನಾನು ಹೇಳೋದು ಕೇಳಿ....ಗಂಡ ಮನೆ ಮಕ್ಕಳು....ಸಂಸಾರ ಕೆಲಸ ಎಲ್ಲವೂ ಇರಲಿ....


ಆದರೆ ಅದರ ಜೊತೆ ಜೊತೆಗೆ ನಿಮ್ಮ ಆರೋಗ್ಯ, ನಿಮ್ಮ ಸಂತೋಷ, ನಿಮ್ಮ ಇಷ್ಟ ಕಷ್ಟಗಳು ಅವುಗಳಿಗೆ ಸಲ್ಪ ಸಮಯ ಮತ್ತು ಜಾಗ ಕೊಡಿ ಎಂದು ಹೇಳಿದ ಪಂಕಜಾರ ಮಾತಿಗೆ ಹೌದು ನನ್ನ ನಾನು ಮರೆಯುವುದೇ.....???


ಇನ್ನು ಮುಂದೆ ಮನೆಯವರೆಲ್ಲರ ಜವಾಬ್ದಾರಿ ಜೊತೆ ಜೊತೆಗೆ ನನ್ನ ನಾನು ನೋಡಿಕೊಳ್ಳಬೇಕು ಎಂದುಕೊಂಡು....


ರೀ ನೀವು ಹೇಳಿದ್ದು ಸರಿ ಕಣ್ರೀ......ಎಂದು ಕಾಫಿ ಪುಡಿ... ಎಂದಳು.... ಪಂಕಜಾ ನಕ್ಕು ಒಳನಡೆದರು ಕಪ್ನೋನೊಂದಿಗೆ ಕಾಫಿ ಪುಡಿ ತರಲು.


Rate this content
Log in

Similar kannada story from Classics