ಮನಮಿಡಿವ ಘಟನೆ
ಮನಮಿಡಿವ ಘಟನೆ


ಒಂದು ನಾಯಿ ದಿನಸಿ ಅಂಗಡಿ ಬಾಗಿಲು ಹಾಕುವ ಸಮಯಕ್ಕೆ ವೇಗವಾಗಿ ಓಡಿಬಂತು. ಅದರ ಬಾಯಲ್ಲಿ ಒಂದು ಬ್ಯಾಗು ಅದರಲ್ಲಿ ಒಂದು ಚೀಟಿ ಮತ್ತು ಹಣ ಇತ್ತು. ಅಂಗಡಿಯವ ಆ ನಾಯಿಗೆ ಇಷ್ಟು ಲೇಟಾಗಿ ಬಂದರೆ ಹೇಗೆ ನಾನು ಬಾಗಿಲು ಹಾಕೋದರಲ್ಲಿದ್ದೆ ಅಂತ ಹೇಳಿ ಆ ಬ್ಯಾಗನ್ನ ತೆಗೆದುಕೊಂಡು ಆ ಚೀಟಿಯಲ್ಲಿದ್ದ ದಿನಸಿ ಸಾಮಾನುಗಳನ್ನ ಕೊಟ್ಟು ಬಾಕಿ ಚಿಲ್ಲರೆಯನ್ನೂ ಅದರಲ್ಲಿ ಹಾಕಿಕೊಟ್ಟ ಇದನ್ನೆಲ್ಲಾ ಕುತೂಹಲದಿಂದ ನೋಡುತ್ತಿದ್ದ ವ್ಯಕ್ತಿಯೊಬ್ಬ ಅದರ ಹಿಂದೆಯೇ ಸ್ಕೂಟರ್ ನಲ್ಲಿ ಹಿಂಬಾಲಿಸಿದ. ನಾಯಿ ರಸ್ತೆ ದಾಟಿ ಸುಮಾರು ದೂರ ಹೋಗಿ ಒಂದು ವೈನ್ ಶಾಪ್ ಗೆ ಹೋದೊಡನೆ ಅಂಗಡಿಯವನು ಒಂದು ಬಾಟಲ್ ಅದರಲ್ಲಿಟ್ಟು ಜೊತೆಗೆ ಒಂದು ಪುಟ್ಟ ಪುಸ್ತಕವನ್ನು ಇಟ್ಟ . ಕೊನೆಗೆ ಒಂದು ಮನೆ ಕಾಂಪೌಂಡ್ ಬಳಿ ಬಂದು ಬ್ಯಾಗ್ ಕೆಳಗಿಟ್ಟು ಬೊಗಳಿತು . ಗೇಟ್ ಬೀಗ ಹಾಕಿತ್ತು. ಯಾರಾದರೂ ಬಂದು ತೆಗೆಯಬಹುದು ಎಂದು ಇವನೂ ನೋಡಿದ ಯಾರೂ ಬರಲಿಲ್ಲ. ನಾಯಿ ಕಾಂಪೌಂಡ್ ಹಾರಿ ಬಾಗಿಲ ಬಳಿ ಬಂತು.ಎರಡು ಕಾಲು ಮೇಲಿಟ್ಟು
ಬೆಲ್ ಒತ್ತಿತು. ಒಳಗಿಂದ ಸಿಗರೇಟ್ ಸೇದುತ್ತಾ ಕೈಯ್ಯಲ್ಲಿ ಬಾಟಲ್ ಹಿಡಿದ ಒಬ್ಬ ವ್ಯಕ್ತಿ ಬಂದು ಪಾಪ ಅಷ್ಟು ಕೆಲಸ ಮಾಡಿದ ಆ ನಾಯಿಗೆ ಬೈಯ್ಯುತ್ತ (ತಮಿಳಿನಲ್ಲಿ)ನಿನಗೆ ಎಷ್ಟು ಸಲ ಹೇಳೋದು ಸುಮ್ಮನೆ ನನಗೆ ತೊಂದರೆ ಕೊಡಬೇಡ ನೀನೇ key ತೆಗೆದುಕೊಂಡು ಹೋಗಿ ಬರೋವಾಗ ನಾನು ಹೇಳಿಕೊಟ್ಟಿರೋ ಹಾಗೆ ತೆಗಿ ಅಂತ. ಹಾಗೆ ಪಕ್ಕದಲ್ಲಿದ್ದ ಕೋಲು ತೊಗೊಂಡು ಎರಡುಕೊಟ್ಟ. ಬಾಲ ಮುದುರಿಕೊಂಡು ಅಲ್ಲೇ ಇದ್ದ ಹರಕಲು ಗೋಣಿಚೀಲ ಮೇಲೆ ಮಲಗಿಕೊಂಡು ಕುಯ್ ಕುಯ್ ಅಂತಿತ್ತು . ಒಳಗಿನಿಂದ ಅವನು ಬಾಗಿಲು ಹಾಕಿಕೊಂಡ. ಹಿಂಬಾಲಿಸಿಕೊಂಡು ಬಂದಿದ್ದವನಿಗೆ ಕಣ್ಣೀರು ತಾನಾಗೇ ಸುರಿಯಿತು.ಮಾರನೇ ದಿನ ಪ್ರಾಣಿದಯಾ ಸಂಘಕ್ಕೆ ಹೋಗಿ ವಿಷಯ ತಿಳಿಸಿದ. ನಂತರ ಏನಾಯ್ತೋ ತಿಳಿಯಲಿಲ್ಲ. (ಇದೊಂದು ಸುಮಾರು ಹತ್ತು ವರ್ಷಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದ ಘಟನೆ . ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಲವಾರು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು ಅಂತ ಮಾಹಿತಿ.)